newsfirstkannada.com

‘ಫ್ರೀ’ ಬಸ್ ಹತ್ತೋ ಮಹಿಳೆಯರೇ ಹುಷಾರ್‌! ಫುಲ್ ರಶ್‌ನಲ್ಲಿ ಪ್ರಯಾಣ ಮಾಡೋರೆಲ್ಲಾ ಓದಲೇಬೇಕಾದ ಸ್ಟೋರಿ ಇದು

Share :

Published June 25, 2023 at 2:15pm

  ನೀವೂ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿ ಹೋಗ್ತಿದ್ದೀರಾ?

  ಫ್ರೀ ಸಾರಿಗೆ ಬಸ್‌ನಲ್ಲಿ ಹೊರಟಿರೋ ಮಹಿಳೆಯರು ಫುಲ್ ಹುಷಾರಾಗಿರಬೇಕು

  ಫುಲ್ ರಶ್‌ ಮಧ್ಯೆ ಸಾರಿಗೆ ಬಸ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಕೈ ಕಟ್ ಆಗಿದೆ

ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿ ಹೀಗೆ ರಾಜ್ಯದ ನಾನಾ ಧಾರ್ಮಿಕ ಕೇಂದ್ರಗಳಿಗೆ ಫ್ರೀ ಸಾರಿಗೆ ಬಸ್‌ನಲ್ಲಿ ಹೊರಟಿರುವ ಮಹಿಳೆಯರು ಹುಷಾರಾಗಿರಬೇಕು. ಯಾಕಂದ್ರೆ, ಫುಲ್ ರಶ್‌ನಲ್ಲಿ ಬಸ್ ಹತ್ತುವಾಗ, ನೂಕು ನುಗ್ಗಲಿನಲ್ಲಿ ಪ್ರಯಾಣ ಮಾಡುವಾಗ ಸಾಕಷ್ಟು ಸಮಸ್ಯೆ ಎದುರಾಗ್ತಿದೆ. KSRTC ಬಸ್‌ನ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆಯ ಕೈ ಕಟ್ ಆಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಮಹಿಳೆಯರು ಉಚಿತವಾಗಿ ಸಂಚಾರ ಮಾಡಲಿ ಅಂತಾ ಶಕ್ತಿ ಯೋಜನೆಯನ್ನ ಜಾರಿಗೊಳಿಸಿದೆ. ಆರಂಭದಿಂದಲೇ ಶಕ್ತಿ ಯೋಜನೆಗೆ ಭರಪೂರ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯದ ಮಹಿಳಾಮಣಿಯರು ಉಚಿತ ಸಾರಿಗೆ ಸೇವೆ ನೀಡಿದೆ ಅಂತಾ ಫುಲ್ ರಶ್‌ನಲ್ಲಿ ಎದ್ದುಬಿದ್ದು ಪ್ರಯಾಣ ಮಾಡ್ತಿದ್ದಾರೆ. ಈ ಉಚಿತ ಸಂಚಾರ ಕೆಲವು ಪ್ರಯಾಣಿಕರಿಗೆ ಸಂಕಟವಾಗಿಯೂ ಪರಿಣಮಿಸಿದೆ.

ರಾಜ್ಯ ಸರ್ಕಾರದ ಶಕ್ತಿಯೋಜನೆಯಡಿ ಪ್ರಯಾಣಿಸುತ್ತಿದ್ದ ಮಹಿಳೆ ಕೈ ಕಟ್ ಆಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಬಸವರಾಜಪುರದ ಗೇಟ್ ಬಳಿ ನಡೆದಿದೆ. ಚಾಮರಾಜನಗರದಿಂದ ನಂಜನಗೂಡಿಗೆ ತೆರಳುತ್ತಿದ್ದ ಬಸ್‌ ಮೊದಲೇ ರಶ್ ಆಗಿತ್ತು. ಇದರ ಮಧ್ಯೆ ಕಿಟಕಿ ಪಕ್ಕ ಕುಳಿತಿದ್ದ ಶಾಂತಕುಮಾರಿ ಎಂಬ ಮಹಿಳೆ ಕೈ ಕಳೆದುಕೊಂಡಿದ್ದಾರೆ. ಮತ್ತೊಬ್ಬ ಮಹಿಳೆಯ ಕೈಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: ಫ್ರೀ ಬಸ್..​​ ಫುಲ್ ರಶ್​..! ಅದನ್ನೇ ಬಂಡವಾಳ ಮಾಡ್ಕೊಂಡು ಮಾಂಗಲ್ಯ ಸರಕ್ಕೆ ಕೈಹಾಕಿದ ಲೇಡಿ ಕಳ್ಳಿ..!

ಉಚಿತ ಸಾರಿಗೆ ಸಂಚಾರದಲ್ಲಿ ತೆರಳುತ್ತಿದ್ದ ಬಸ್‌ನಲ್ಲಿ ಕಿಟಕಿಗಳ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯರ ಕೈಗೆ ಪೆಟ್ಟಾಗಿರೋದು ದುರಂತವೇ ಸರಿ. ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಗಾಯಗೊಂಡ ಮಹಿಳೆಯರಿಗೆ ಚಿಕಿತ್ಸೆ ನೀಡಲಾಗ್ತಿದೆ. ಎಚ್‌ಡಿ.ಕೋಟೆ ತಾಲೂಕಿನ ಮಾಗುಡಿಲು ಗ್ರಾಮದ ಶಾಂತಕುಮಾರಿ ಕೈ ಕಳೆದುಕೊಂಡಿರುವ ಮಹಿಳೆ. ಹುಲ್ಲಹಳ್ಳಿ ಗ್ರಾಮದ ರಾಜಮ್ಮ ಎಂಬವರ ಕೈಗೂ ಹಾನಿಯಾಗಿದೆ. ಬಸ್‌ನಲ್ಲಿದ್ದ ಮಹಿಳೆ ಕೈ ಕಳೆದುಕೊಂಡು ಗೋಳಾಡುತ್ತಿರುವ ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಫ್ರೀ’ ಬಸ್ ಹತ್ತೋ ಮಹಿಳೆಯರೇ ಹುಷಾರ್‌! ಫುಲ್ ರಶ್‌ನಲ್ಲಿ ಪ್ರಯಾಣ ಮಾಡೋರೆಲ್ಲಾ ಓದಲೇಬೇಕಾದ ಸ್ಟೋರಿ ಇದು

https://newsfirstlive.com/wp-content/uploads/2023/06/KSRTC-BUS.jpg

Load More