Advertisment

ಅತಿಹೆಚ್ಚು ಆದಾಯ ತರುವ ಟ್ರೈನ್ ಯಾವುದು? ವಂದೇ ಭಾರತ್ ಅಲ್ಲ, ಶತಾಬ್ದಿಯೂ ಅಲ್ಲ!

author-image
Gopal Kulkarni
Updated On
ಅತಿಹೆಚ್ಚು ಆದಾಯ ತರುವ ಟ್ರೈನ್ ಯಾವುದು? ವಂದೇ ಭಾರತ್ ಅಲ್ಲ, ಶತಾಬ್ದಿಯೂ ಅಲ್ಲ!
Advertisment
  • ಭಾರತೀಯ ರೈಲ್ವೆಗೆ ಅತಿಹೆಚ್ಚು ಆದಾಯ ತಂದುಕೊಡುವ ಟ್ರೈನ್ ಯಾವುದು?
  • ಅತಿವೇಗವಾಗಿ ಓಡುವ ವಂದೇ ಭಾರತ್, ಶತಾಬ್ದಿಗಳಿಗೂ ಇಷ್ಟು ಆದಾಯವಿಲ್ಲ
  • ಭಾರತದ ಪ್ರಮುಖ ನಗರಗಳ ನಡುವೆ ಓಡುವ ಈ ರೈಲುಗಳಿಂದ ಹೆಚ್ಚು ಆದಾಯ

ಭಾರತೀಯ ರೈಲ್ವೆ ಸ್ಥಾಪನೆಗೊಂಡಿದ್ದು 1853ರಲ್ಲಿ. ನಮ್ಮ ರೈಲ್ವೆಗೆ ಸುಮಾರು 170 ವರ್ಷಗಳ ಇತಿಹಾಸವಿದೆ. ಒಂದೂವರೆ ಶತಮಾನದಿಂದ ಈ ದೇಶದ ಜನರನ್ನು ಹೊತ್ತು ಹಳಿಗಳ ಮೇಲೆ ಓಡುತ್ತಿರುವ ರೈಲು ಹೊಸ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸಿದೆ. ಭಾರತೀಯ ರೈಲ್ವೆ ಈಗ ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್​ವರ್ಕ್ ಎಂದು ಗುರುತಿಸಿಕೊಂಡಿದೆ. ಪ್ರತಿ ವರ್ಷ ಕೋಟ್ಯಾಂತರ ಜನರು ರೈಲು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರು ಹಾಗೂ ಸರುಕು ಇವೆರಡನ್ನು ಸಾಗಣೆ ಮಾಡುವಲ್ಲಿ ರೈಲ್ವೆ ಇಲಾಖೆ ಮಹತ್ತರ ಹೆಜ್ಜೆಯನ್ನಿಟ್ಟಿದೆ. ವಿಶೇಷವೆಂದರೆ ರಾಜಧಾನಿ, ಶತಾಬ್ದಿ, ಡ್ಯುರೊಂಟೊ ಹಾಗೂ ವಂದೇ ಭಾರತ್​ದಂತಹ ರೈಲುಗಳು ಸೇವೆಗೆ ಮತ್ತುಷ್ಟು ವೇಗವನ್ನು ತಂದಿಟ್ಟಿವೆ.

Advertisment

ಭಾರತೀಯ ರೈಲ್ವೆಗೆ ಅತಿಹೆಚ್ಚು ಆದಾಯ ಹರಿದು ಬರೋದು ಟಿಕೆಟ್​ ಸೇಲ್​ಗಳ ಮೂಲಕ. ಹಲವು ಡಿಸ್ಕೌಂಟ್​ ಹಾಗೂ ಸಬ್ಸಿಡಿಗಳ ನಡುವೆಯೂ ಕೂಡ ಭಾರತೀಯ ರೈಲ್ವೆ ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿ ಹಣವನ್ನು ಈ ಸೇವೆಯಿಂದ ಪಡೆಯುತ್ತದೆ. ಇನ್ನು ಪ್ರಯಾಣಿಕರಿಗೆ ನೀಡುವ ಸೇವೆ, ಸರಕು ಸಾಗಣೆ ಈ ಆದಾಯ ಬೇರೆಯ ರೀತಿಯಲ್ಲಿ ನೋಡಲಾಗುತ್ತದೆ.

ಇದನ್ನೂ ಓದಿ:ಭೂಗತ ದೊರೆ ಛೋಟಾ ರಾಜನ್ ದಿಢೀರ್ ಆಸ್ಪತ್ರೆಗೆ ದಾಖಲು; ಡಾನ್​ಗೆ ಆಗಿದ್ದೇನು?

ಈ ಎಲ್ಲದರ ಮಧ್ಯೆ ಭಾರತೀಯ ರೈಲ್ವೆಗೆ ಅತಿಹೆಚ್ಚು ಆದಾಯ ತಂದು ಕೊಡುವ ರೈಲು ಯಾವುದು ಅಂತ ನೋಡಿದಾಗ ನಮ್ಮ ತಲೆಗೆ ಮೊದಲು ಬರೋದು ವಂದೇ ಭಾರತ್ ಹಾಗೂ ಜನಶತಾಬ್ದಿ ಅಂತ. ಯಾಕೆಂದರೆ ಅವು ನೀಡುವ ವೇಗದ ಸೇವೆ ಹಾಗೂ ಅವುಗಳ ಟಿಕೆಟ್ ದರ. ಆದ್ರೆ ಇದು ತಪ್ಪು ಭಾರತೀಯ ರೈಲ್ವೆಗೆ ಅತಿಹೆಚ್ಚು ಆದಾಯ ತಂದುಕೊಂಡುವ ರೈಲುಗಳಲ್ಲಿ ಮೊದಲು ನಿಲ್ಲುವುದು ರಾಜಧಾನಿ ಎಕ್ಸ್​ಪ್ರೆಸ್​. ಅದರಲ್ಲೂ ಕೆಎಸ್​ಆರ್ ರಾಜಧಾನಿ ಎಕ್ಸ್​ಪ್ರೆಸ್. ಇದು ಅತ್ಯಂತ ಲಾಭದಾಯಕ ಸೇವೆಯನ್ನು ನೀಡುತ್ತಾ ಬಂದಿರುವ ರೈಲು. ನವದೆಹಲಿ ಹಾಗೂ ಬೆಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ಈ ರೈಲು ಅತಿ ಹೆಚ್ಚು ಆದಾಯವನ್ನು ಪಡೆಯುತ್ತದೆ. 2022-2023ರ ನಡುವೆ ಹಜರತ್ ನಿಜಾಮುದ್ಧಿನ್ ಸ್ಟೇಷನ್ ದೆಹಲಿಯಿಂಂದ ಕೆಎಸ್​ಆರ್ ಬೆಂಗಳೂರು ಸಿಟಿ ಜಂಕ್ಷನ್​ಗೆ ಈ ಟ್ರೈನ್ ಒಟ್ಟು 5,09,510 ಪ್ರಯಾಣಿಕರನ್ನು ಸಾಗಿಸಿದೆ. ಈ ವರ್ಷದಲ್ಲಿ ಈ ಒಂದು ಟ್ರೈನ್​ನಿಂದ ಬಂದ ಆದಾಯ ಬರೋಬ್ಬರಿ 1760.67 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು.

Advertisment

ಇದನ್ನೂ ಓದಿ:ತಮಿಳುನಾಡಿನಲ್ಲಿ KSRTC ಭೀಕರ ಅಪಘಾತ.. ಜೀವ ಕಳೆದುಕೊಂಡ ಕರ್ನಾಟಕದ ನಾಲ್ವರು

ದೆಹಲಿ ಮತ್ತು ಕೊಲ್ಕತ್ತಾ ನಡುವೆ ಸಂಚರಿಸುವ ಸೀಯಲ್​ದಾಹ್​ ರಾಜಧಾನಿ ಎಕ್ಸ್​ಪ್ರೆಸ್​ 2022-23ರಲ್ಲಿ ಒಟ್ಟು 5,09,164 ಪ್ರಯಾಣಿಕರಿಗೆ ಸೇವೆ ನೀಡಿದೆ. ಈ ವರ್ಷದ ಸಾಲಿನಲ್ಲಿ ಗಳಿಸಿದ ಒಟ್ಟು ಆದಾಯ 1288.17 ಕೋಟಿ ರೂಪಾಯಿ. ಇನ್ನು ದೆಹಲಿಯಿಂದ ಅಸ್ಸಾಂ ದಿಬ್ರಗರ್​​ಗೆ ಸಂಪರ್ಕ ಕಲ್ಪಿಸುವ ರಾಜಧಾನಿ ಎಕ್ಸ್​ಪ್ರೆಸ್​ 2022-23ರಲ್ಲಿ ಒಟ್ಟು 4,74,605 ಪ್ರಯಾಣಿಕರಿಗೆ ಸೇವೆ ನೀಡಿದೆ. ಗಳಿಸಿದ ಒಟ್ಟು ಆದಾಯ 1262.91 ಕೊಟಿ ರೂಪಾಯಿ ಎಂದು ಹೇಳಲಾಗಿದೆ

ಭಾರತೀಯ ರೈಲ್ವೆಯಲ್ಲಿ ಈ ರೈಲುಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರಯಾಣದಲ್ಲಿ ಸತತವಾಗಿ ಇವು ಕಾಯ್ದುಕೊಂಡು ಬಂದಿರುವ ಸಮಯಪ್ರಜ್ಞೆ ಮತ್ತು ಅಲ್ಲಿ ಸಿಗುವ ಕ್ಯಾಟರಿಂಗ್ ಸರ್ವಿಸ್ ಮತ್ತು ಪ್ರಯಾಣಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಬಂದಿವೆ. ಹೀಗಾಗಿ ಈ ರೈಲುಗಳ ಬಗ್ಗೆ ಜನರಿಗೆ ಒಲವು ಜಾಸ್ತಿ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment