newsfirstkannada.com

ತಾನೇ ಸಾಕಿದ ಗಿಣಿ ರೋಹಿತ್ ಶರ್ಮಾಗೆ ಮುಳ್ಳಾಯ್ತಾ.. ಅಂದು ಹಿಟ್‌ಮ್ಯಾನ್‌​ ಇಲ್ಲದಿದ್ರೆ ಏನಾಗ್ತಿತ್ತು ಗೊತ್ತಾ?

Share :

Published March 17, 2024 at 2:31pm

    ಮುಂಬೈ ತಂಡದಿಂದ ಪಾಂಡ್ಯನನ್ನ ಕಾಪಾಡಿದ್ದ ರೋಹಿತ್ ಶರ್ಮಾ!

    ಐಪಿಎಲ್​​​ನಲ್ಲಿ ಮುಂಬೈ ಇಂಡಿಯನ್ಸ್​ನ ಸಾರಥಿ ಹಾರ್ದಿಕ್ ಪಾಂಡ್ಯ

    ರೋಹಿತ್​ ಇಲ್ಲದಿದ್ದರೇ ಪಾಂಡ್ಯ​ ಕ್ರಿಕೆಟ್​ ಲೋಕದಲ್ಲೇ ಇರುತ್ತಿರಲಿಲ್ಲ

ಅಂದು ರೋಹಿತ್​ ಒಂದು ಮಾತು ಯೆಸ್​ ಅಂದಿದ್ರೆ ಸಾಕಿತ್ತು. ಹಾರ್ದಿಕ್​ ಪಾಂಡ್ಯ ಖೇಲ್​ ಖತಂ ಆಗ್ತಿತ್ತು. ಆದ್ರೆ, ರೋಹಿತ್​ ಬೆಳೆಸಿದ್ರು. ಈಗ ನೋಡಿದ್ರೆ ತಾನೇ ಸಾಕಿದ ಗಿಣಿ ರೋಹಿತ್​ ಪಾಲಿಗೆ ಮುಳ್ಳಾಗಿದೆ. ಅಂದು ಹಾರ್ದಿಕ್​ ಕರಿಯರ್​ನ ರೋಹಿತ್​ ಬಚಾವ್​ ಮಾಡಿದ್ದೇಗೆ?

ಹಾರ್ದಿಕ್​ ಪಾಂಡ್ಯ ಈ ಬಾರಿಯ ಐಪಿಎಲ್​​​ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್​ನ ಸಾರಥಿ. 10 ಲಕ್ಷದಿಂದ ಕರಿಯರ್​ ಆರಂಭಿಸಿದ ಫ್ರಾಂಚೈಸಿಗೇ ಮತ್ತೆ ಬರೋಬ್ಬರಿ 15 ಕೋಟಿಗೆ ಮರಳಿದ್ದಾರೆ. ಆರಂಭದಲ್ಲಿ ಸೋತು, ಬಳಿಕ ಸಕ್ಸಸ್​ ಕಂಡ ಹಾರ್ದಿಕ್ ಇದೀಗ ನಾಯಕನ ಪಟ್ಟ ಅಲಂಕರಿಸಿದ್ದಾರೆ.

ಈ ಸೀಸನ್​ ಐಪಿಎಲ್​ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್​ನ ನಾಯಕತ್ವ ಬದಲಾವಣೆ ಇಡೀ ಕ್ರಿಕೆಟ್​ ಲೋಕಕ್ಕೆ ಶಾಕ್​ ನೀಡಿತ್ತು. ಸಕ್ಸಸ್​​ಫುಲ್​ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಕೊಕ್​ ಕೊಟ್ಟ ಮುಂಬೈ ಫ್ರಾಂಚೈಸಿ, ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟಿ ಬಿಡ್ತು. ಒಂದು ಮಾತು ಕೇಳದೆ ಕೊಕ್​ ಕೊಟ್ಟಾಗ ತಂಡಕ್ಕಾಗಿ ಎಲ್ಲವನ್ನೂ ಮಾಡಿದ ರೋಹಿತ್​​ಗೆ ಹೇಗಾಗಿರಬೇಡ.

ತಾನೇ ಸಾಕಿದ ಗಿಣಿ.. ರೋಹಿತ್​ಗೆ ಮುಳ್ಳಾಯ್ತು.!

ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್​ ಕಂಡ ಶ್ರೇಷ್ಟ ಕ್ಯಾಪ್ಟನ್​. 5 ಬಾರಿ ಟ್ರೋಫಿ ಗೆದ್ದು ಕೊಟ್ಟ ನಾಯಕ. ಭವಿಷ್ಯದ ಸೂಪರ್​ ಸ್ಟಾರ್​​ಗಳನ್ನ ರೂಪಿಸಿದ ಹೀರೋ. ಇಂತಾ ಸಾರಥಿಯನ್ನ ಏಕಾಏಕಿ ಪಟ್ಟದಿಂದ ಕೆಳಗಿಳಿಸಿತು. ಇಲ್ಲಿ ರೋಹಿತ್​ಗೆ ಮುಳ್ಳಾಗಿದ್ದು, ತಾನೇ ಸಾಕಿದ ಗಿಣಿ. ಪಾಂಡ್ಯರ ಟ್ಯಾಲೆಂಟ್​ ಗುರುತಿಸಿ, ಅವಕಾಶ ಕೊಟ್ಟು, ಐಪಿಎಲ್​ ಲೋಕಕ್ಕೆ ಅಂಬೆಗಾಲಿಟ್ಟಾಗ ತಿದ್ದಿ ತೀಡಿ ಬೆಳೆಸಿದ್ದು ಇದೇ ರೋಹಿತ್​.

ನಾಯಕತ್ವದ ಷರತ್ತು ಹಾಕಿದ್ದ ಹಾರ್ದಿಕ್​ ಪಾಂಡ್ಯ.!

ಈ ಬಾರಿಯ ಐಪಿಎಲ್​ಗೂ ಮುನ್ನ ಗುಜರಾತ್​ನಿಂದ ಹಾರ್ದಿಕ್​ನ ವಾಪಾಸ್ಸು ಕರೆ ತರಲು ಮುಂಬೈ ಫ್ರಾಂಚೈಸಿ ಮುಂದಾದಾಗ ರೋಹಿತ್ ಒಪ್ಪಿರಲಿಲ್ಲ. ಆದ್ರೂ, ಹಾರ್ದಿಕ್​ಗೆ ಮುಂಬೈ ಮಣೆ ಹಾಕಿತು. ಇದೇ ಸಂದರ್ಭದಲ್ಲಿ ಹಾರ್ದಿಕ್​ ಕೂಡ ಒಂದು ಷರತ್ತನ್ನ ಹಾಕಿದ್ರಂತೆ. ನಾಯಕತ್ವ ಕೊಟ್ಟರೆ ಮಾತ್ರ ಬರೋದು ಅಂತಾ. ಹಾರ್ದಿಕ್​ ಷರತ್ತಿಗೆ ಮಣಿದ ಫ್ರಾಂಚೈಸಿ ಕ್ಯಾಪ್ಟನ್ಸಿ ಪಟ್ಟ ಕೊಟ್ಟಿದ್ದು.

ಅಂದು ರೋಹಿತ್​ ಇಲ್ಲದಿದ್ರೆ ಹಾರ್ದಿಕ್​ ಕಥೆ ಖಲ್ಲಾಸ್​.!

ಇಂದು ರೋಹಿತ್​ ಶರ್ಮಾ ನಾಯಕತ್ವದಡಿ ಆಡಲು ಇಷ್ಟ ಪಡದ ಹಾರ್ದಿಕ್​ ಕೊನೆಗೂ ತಾನು ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಬಹುಷಃ ಹಾರ್ದಿಕ್​ ಮರೆತಿರಬಹುದು. ಸತ್ಯ ಏನಪ್ಪಾ ಅಂದ್ರೆ ಈ ರೋಹಿತ್​ ಇಲ್ಲದಿದ್ದಿದ್ರೆ, ಹಾರ್ದಿಕ್​ ಇಷ್ಟು ದೊಡ್ಡ ಕ್ರಿಕೆಟರ್​ ಆಗ್ತಾನೆ ಇರಲಿಲ್ಲ. ಇಂದು ರೆಡ್​ ಕಾರ್ಪೆಟ್​ ಹಾಸಿ ಸ್ವಾಗತಿಸಿರೋ ಫ್ರಾಂಚೈಸಿ ಹಿಂದೊಮ್ಮೆ ಕಿಕೌಟ್​ ಮಾಡಲು ಚಿಂತಿಸಿತ್ತು. ಆಗ ತಡೆದಿದ್ದು ಇದೇ ರೋಹಿತ್​ ಶರ್ಮಾ.

‘ಆಗ ರೋಹಿತ್​ ಬಿಟ್ಟು ಕೊಡಲಿಲ್ಲ’

‘ಹಾರ್ದಿಕ್​ ಪಾಂಡ್ಯ 2015ರಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನ ಸೇರಿಕೊಂಡರು. 2016ರಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಫೇಲ್​ ಆದ ಅನ್​​ಕ್ಯಾಪ್ಡ್​​ ಆಟಗಾರರನ್ನ ಫ್ರಾಂಚೈಸಿಗಳು ಕೇವಲ 10 ಲಕ್ಷ ಅಲ್ವಾ ಅಂತಾ ರಿಲೀಸ್​ ಮಾಡ್ತವೆ. ರಣಜಿ ಹಾಗೂ ಡೊಮೆಸ್ಟಿಕ್​ ಕ್ರಿಕೆಟ್​ನ ಪ್ರದರ್ಶನ ನೋಡಿ, ಚನ್ನಾಗಿ ಆಡಿದ್ರೆ ಮತ್ತೆ ಚಾನ್ಸ್​ ನೀಡುತ್ತವೆ. ಆದ್ರೆ, ಆಗ ನಾಯಕ ರೋಹಿತ್​ ಶರ್ಮಾ, ಪಾಂಡ್ಯರನ್ನ ಬಿಟ್ಟುಕೊಡಲಿಲ್ಲ’

ಪಾರ್ಥಿವ್​ ಪಟೇಲ್​, MI ಮಾಜಿ ಕ್ರಿಕೆಟಿಗ

ಕೇವಲ 10 ಲಕ್ಷಕ್ಕೆ ತಂಡ ಸೇರಿದ್ದ ಹಾರ್ದಿಕ್​, ಇಂದು ಕೋಟಿಗಟ್ಟಲೇ ಸಂಪಾದಿಸ್ತಿದ್ದಾರೆ. ಈಗ ಹಣ, ಹೆಸರು ಎಲ್ಲ ಗಳಿಸಿರೋ ಹಾರ್ದಿಕ್​, ರೋಹಿತ್ ಶರ್ಮಾ​ಗೆ ಚಿರುಖುಣಿ ಆಗರಲೇಬೇಕು. ನಾಯಕತ್ವದ ಕಥೆ ಈಗ ಮುಗಿದ ಅಧ್ಯಾಯ. ರೋಹಿತ್​ರನ್ನ ಅಟ್ಲೀಸ್ಟ್​ ಗೌರವದಿಂದಾದ್ರೂ ಹಾರ್ದಿಕ್​ ನಡೆಸಿಕೊಳ್ತಾರಾ ಅನ್ನೋದಷ್ಟೇ ಸದ್ಯ ಎಲ್ಲರಲ್ಲೂ ಇರೋ ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ತಾನೇ ಸಾಕಿದ ಗಿಣಿ ರೋಹಿತ್ ಶರ್ಮಾಗೆ ಮುಳ್ಳಾಯ್ತಾ.. ಅಂದು ಹಿಟ್‌ಮ್ಯಾನ್‌​ ಇಲ್ಲದಿದ್ರೆ ಏನಾಗ್ತಿತ್ತು ಗೊತ್ತಾ?

https://newsfirstlive.com/wp-content/uploads/2024/03/Hardik_Rohit_IPL.bmp

Load More