/newsfirstlive-kannada/media/post_attachments/wp-content/uploads/2025/04/Dalhousie-Public-School.jpg)
ಭಾರತ ಹಲವು ಪ್ರತಿಷ್ಠಿತ ಶಾಲೆಯ ತವರೂರು. ಇಲ್ಲಿ ಅನೇಕ ಶಾಲೆಗಳು ತಮ್ಮ ಐಷಾರಾಮಿತನ, ವಿದ್ಯಾಭ್ಯಾಸ ನೀಡುವ ರೀತಿ. ದುಬಾರಿ ಫೀಸ್ ಹೀಗೆ ಅನೇಕ ವಿಶೇಷತೆಗಳಿಂದ ತಮ್ಮನ್ನು ತಾವು ಗುರುತಿಸಿಕೊಂಡಿವೆ. ಧೀರುಭಾಯಿ ಅಂಬಾನಿಯವರ ಶಾಲೆ, ಸೆಲೆಬ್ರೆಟಿ ಮಕ್ಕಳು ಕಲಿಯುವ ತಾಣವಾಗಿ, ಐಷಾರಾಮಿ ಶಾಲೆಯ ಗುರುತಾಗಿ ಇಂದಿಗೂ ಕೂಡ ಭಾರತದಲ್ಲಿ ಹೆಸರು ಮಾಡಿದೆ.ಅದರಲ್ಲೂ ಈ ಸಿಬಿಎಸ್ಸಿ ಮತ್ತು ಸಿಐಎಸ್ಸಿಇ ಸ್ಕೂಲ್ಗಳಿಗೆ ಬೇರೆಯದ್ದೇ ಡಿಮ್ಯಾಂಡ್ ಇದೆ. ಆದರೆ ಭಾರತದಲ್ಲಿ ಅತ್ಯಂತ ಬ್ಯೂಟಿಫುಲ್ ಅಂದ್ರೆ ಅತ್ಯಂತ ಸುಂದರ ಶಾಲೆ ಎಂದು ಒಂದು ಸ್ಕೂಲ್ ದೊಡ್ಡ ಹೆಸರು ಪಡೆದುಕೊಂಡಿದೆ. ಅದರ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.
ಡಾಲ್ಹೌಸಿ ಪಬ್ಲಿಕ್ ಸ್ಕೂಲ್, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಶಾಲೆ, ಇದನ್ನು ಭಾರತದ ಅತ್ಯಂತ ಸುಂದರ ಶಾಲೆಗಳಲ್ಲಿ ಒಂದು ಎಂದು ಗುರುತಿಸಲಾಗುತ್ತದೆ. ಈ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಸಮತೋಲಿತ ಆಹಾರ ಹಾಗೂ ಆಹಾರ ಶೈಲಿಯೇ ಈ ಶಾಲೆಯ ಒಂದು ವಿಶೇಷ. ಮಕ್ಕಳಿಗೆ ನ್ಯೂಟ್ರಿಯಂಟ್ಸ್ ಹೆಚ್ಚು ದೊರೆಯುವ ಹಾಗೂ ಅವರ ಆರೋಗ್ಯದಲ್ಲಿ ಶಕ್ತಿ ತುಂಬುವಂತಹ ಆಹಾರ ಇಲ್ಲಿ ನೀಡಲಾಗುತ್ತದೆ.
ಇದನ್ನೂ ಓದಿ: ಮಗಳ ಭಾವಿ ಗಂಡನ ಮೇಲೆ ಅಮ್ಮನಿಗೆ ಲವ್.. ರಾತ್ರೋರಾತ್ರಿ ಅಳಿಯನ ಜೊತೆ ಅತ್ತೆ ಪರಾರಿ..!
ಈ ಶಾಲೆಯಲ್ಲಿ ಜಂಕ್ ಫುಡ್ ಮತ್ತು ಫ್ರೈಡ್ ಫುಡ್ ಬೆಳಗಿನ ಉಪಹಾರದಲ್ಲಿ ಬ್ಯಾನ್ ಇದೆ. ಹಿಮಾಚಲ ಪ್ರದೇಶ ಅಂದ್ರೆನೇ ಚಳಿಗೆ ಮತ್ತೊಂದು ಹೆಸರು. ಹೀಗಾಗಿ ಮಕ್ಕಳನ್ನು ಸದಾಕಾಲ ಬೆಚ್ಚಗಿಡುವ ಉದ್ದೇಶವನ್ನಿಟ್ಟುಕೊಂಡು ಮಕ್ಕಳಿಗೆ ಇಲ್ಲಿ ಆಹಾರ ನೀಡಲಾಗುತ್ತದೆ. ನಿತ್ಯ ಆಹಾರದಲ್ಲಿ ಹಣ್ಣು ಮತ್ತು ಹಾಲು ಕಡ್ಡಾಯವಾಗಿರುತ್ತವೆ. ಅದರೊಂದಿಗೆ ಶಾಲೆಯಲ್ಲಿ ಜಿಮ್ ವ್ಯವಸ್ಥೆ ಕೂಡ ಇದ್ದು ಮಕ್ಕಳ ಶಾರೀರಿಕ ಸದೃಢತೆಯ ಬಗ್ಗೆಯೂ ಈ ಶಾಲೆ ಸಂಪೂರ್ಣ ಕಾಳಜಿಯನ್ನುವಹಿಸುತ್ತದೆ.
ಇದನ್ನೂ ಓದಿ: ಇನ್ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು!
ಹಿಮಾಚಲ ಪ್ರದೇಶವೆಂದರನೇ ಸುಂದರತೆಯೇ ಮೈದುಂಬಿಕೊಂಡು ನಿಂತ ಚೆಲುವೆ. ಕಣ್ಣು ಹಾಯಿಸಿದಲ್ಲೆಲ್ಲಾ ಸುಂದರತೆಯ ಆಚೆ ನಮಗೇನೂ ಕಾಣ ಸಿಗುವುದಿಲ್ಲ. ಅದರಲ್ಲೂ ಚಂಬಾ ಜಿಲ್ಲೆಯಂತೂ ಕಣ್ತುಂಬಿಕೊಂಡಷ್ಟು ಅದರ ಚೆಲುವು ಮುಗಿಯುವುದಿಲ್ಲ. ಇಲ್ಲಿ ನೆಲೆನಿಂತಿರುವ ಡಾಲ್ಹೌಸಿ ಪಬ್ಲಿಕ್ ಶಾಲೆಯನ್ನು ದೇಶದ ಅತ್ಯಂತ ಸುಂದರ ಶಾಲೆ ಮತ್ತು ಪ್ರತಿಷ್ಠಿತ ಶಾಲೆಯಲ್ಲಿ ಒಂದು ಎಂದು ಗುರುತಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ