ಇದು ನನ್ನ ಮೈದಾನ, ನನ್ನ ಮನೆ -ಆರ್​ಸಿಬಿ ಸೋಲಿಸಿ KL ರಾಹುಲ್ ಸ್ಫೋಟಕ ಹೇಳಿಕೆ..!

author-image
Ganesh
Updated On
ಇದು ನನ್ನ ಮೈದಾನ, ನನ್ನ ಮನೆ -ಆರ್​ಸಿಬಿ ಸೋಲಿಸಿ KL ರಾಹುಲ್ ಸ್ಫೋಟಕ ಹೇಳಿಕೆ..!
Advertisment
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಆರ್​ಸಿಬಿ ತಂಡ
  • 6 ವಿಕೆಟ್​ಗಳ ಭರ್ಜರಿ ಜಯಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್
  • 53 ಬಾಲ್​ನಲ್ಲಿ 93 ರನ್​ ಬಾರಿಸಿದ ಕನ್ನಡಿಗ ರಾಹುಲ್

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​, ಆರ್​ಸಿಬಿ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟ್ ಮಾಡಿದ್ದ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 163 ರನ್​ಗಳನ್ನು ಕಲೆ ಹಾಕಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, 17.5 ಓವರ್​ನಲ್ಲಿ ನಿಗಧಿತ ಗುರಿ ಮುಟ್ಟಿತು.

ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕನ್ನಡಿಗ ಕೆಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದರು. 53 ಬಾಲ್​​ನಲ್ಲಿ 93 ರನ್​​ಗಳನ್ನ ಚಚ್ಚಿ ತಂಡವನ್ನು ಗೆಲ್ಲಿಸಿಕೊಟ್ಟರು. ಬಳಿಕ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ವಿಕೆಟ್ ಸ್ವಲ್ಪ ಟ್ರಿಕಿ ಆಗಿತ್ತು. 20 ಓವರ್‌ಗಳ ಕಾಲ ಸ್ಟಂಪ್‌ಗಳ ಹಿಂದೆ ನಾನಿದ್ದೆ. ಪಿಚ್ ಹೇಗೆ ವರ್ತಿಸುತ್ತಿದೆ ಅಂತಾ ತಿಳಿದುಕೊಂಡಿದ್ದೆ. ಇದು ನನಗೆ ಸಹಾಯ ಆಯಿತು.

ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ 26/11 ಮಾಸ್ಟರ್ ಮೈಂಡ್‌ ತಹವ್ವೂರ್​ ರಾಣಾ NIA ವಶಕ್ಕೆ; ಮುಂದೇನು?

publive-image

ಅದರ ಆಧಾರದ ಮೇಲೆಯೇ ಆಟ ಹೇಗಿರಬೇಕು ಅಂತಾ ನಿರ್ಧರಿಸಿದೇವು. ತಂಡಕ್ಕಾಗಿ ಉತ್ತಮ ಆರಂಭ ಪಡೆಯಲು, ಆರಂಭದಲ್ಲೇ ಆಕ್ರಮಣಕಾರಿಯಾಗಿ ಆಡಲು ನಿರ್ಧರಿಸಿದ್ದೆ. ಬಿಗ್​ ಶಾಟ್​ಗಳನ್ನು ಮೈದಾನದ ಯಾವ ಭಾಗದಲ್ಲಿ ಟಾರ್ಗೆಟ್ ಮಾಡಬೇಕು ಎಂದು ತಿಳಿಯಿತು. ವಿಕೆಟ್ ಕೀಪಿಂಗ್ ಮಾಡಿದ್ದರಿಂದ ಯಾವ ಬ್ಯಾಟ್ಸಮನ್​ ಎಲ್ಲಿ ಆಡಿದರು ಮತ್ತು ಎಲ್ಲಿ ಔಟ್ ಆಗಿದ್ದಾರೆ ಎಂಬ ಕಲ್ಪನೆ ನನ್ನಲ್ಲಿತ್ತು. ಡ್ರಾಪ್ ಕ್ಯಾಚ್‌ನೊಂದಿಗೆ ನಾನು ಅದೃಷ್ಟಶಾಲಿಯಾದೆ. ಇದು ನನ್ನ ಮೈದಾನ, ಇದು ನನ್ನ ಮನೆ. ಬೇರೆಯವರಿಗಿಂತ ನನಗೆ ಚೆನ್ನಾಗಿ ಗೊತ್ತಿದೆ. ಇಲ್ಲಿ ಆಡುವುದನ್ನು ಆನಂದಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ತವರಲ್ಲಿ ಕೆ.ಎಲ್ ರಾಹುಲ್ ಬ್ಯಾಟಿಂಗ್​ ಆರ್ಭಟ.. ಕನ್ನಡಿಗನಿಂದ RCBಗೆ ಭಾರೀ ಮುಖಭಂಗ, ಸೋಲು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment