newsfirstkannada.com

ಪೂಜಾರಗೆ ಕೊಕ್​.. ಜೈಸ್ವಾಲ್​ಗೆ ಚಾನ್ಸ್​? ಈ ಲೆಕ್ಕಾಚಾರದಲ್ಲಿದೆಯಾ ಟೀಂ ಇಂಡಿಯಾ

Share :

16-06-2023

    ಪೂಜಾರ ಬದಲಿಗೆ ಜೈಸ್ವಾಲ್​ಗೆ ಸಿಗುತ್ತಾ ಚಾನ್ಸ್​?

    ಟೀಂ ಇಂಡಿಯಾಗೆ ಸಿಗುತ್ತಾ ಲೆಫ್ಟ್​ ಹ್ಯಾಂಡರ್​ ಬಲ

    3 ವರ್ಷದಿಂದ ನಡೆಯುತ್ತಿಲ್ಲ ಚೇತೇಶ್ವರ ಪುಜಾರ ಆಟ

2ನೇ ಬಾರಿ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​​ ಕನಸು ನುಚ್ಚು ನೂರಾಗಿದ್ದು ಈಗ ಮುಗಿದ ಅಧ್ಯಾಯ. ಎಷ್ಟೇ ಚರ್ಚೆ ಮಾಡಿದ್ರೂ ಫಲಿತಾಂಶ ಬದಲಾಗಲ್ಲ. ಈಗೇನಿದ್ರೂ ಮುಂಬರೋ ವಿಂಡೀಸ್​​ ಸರಣಿ ಬಗ್ಗೆ ಯೋಚಿಸಬೇಕಿದೆ. ಪ್ರಮುಖವಾಗಿ ಹಿರಿಯ ಆಟಗಾರರ ಅಳಿವು – ಉಳಿವಿನ ವಿಚಾರದಲ್ಲಿ ಟಫ್​ ಕಾಲ್​ ತೆಗೆದುಕೊಳ್ಳಬೇಕಿದೆ. ಸೆಲೆಕ್ಷನ್​​ ಈಗ ತೆಗೆದುಕೊಳ್ಳೋ ನಿರ್ಧಾರದ ಮೇಲೆ ಟೀಮ್​ ಇಂಡಿಯಾದ ಭವಿಷ್ಯ ನಿರ್ಧಾರವಾಗಲಿದೆ.

ಪೂಜಾರಗೆ ಕೊಕ್​ ಕೊಡಲು ಇದೇ ಬೆಸ್ಟ್​ ಚಾನ್ಸ್​..!

ಟೀಮ್​ ಇಂಡಿಯಾದಿಂದ ಹಿರಿಯ ಆಟಗಾರರಿಗೆ ಕೊಕ್​ ಕೊಡೋ ಬಗ್ಗೆ ಚರ್ಚೆ ಜೋರಾಗಿದೆ. ದ್ರಾವಿಡ್​ ಬಳಿಕ ಟೀಮ್​ ಇಂಡಿಯಾ ಸಿಕ್ಕ ಗೋಡೆ ಎಂದೇ ಅನಿಸಿಕೊಂಡಿದ್ದ ಚೇತೇಶ್ವರ್​ ಪೂಜಾರ ತಲೆದಂಡಕ್ಕೆ ಕೌಂಟ್​​ಡೌನ್​ ಸ್ಟಾರ್ಟ್​ ಆಗಿದೆ. ವೆಸ್ಟ್​ ಇಂಡೀಸ್​ ಸರಣಿಯೇ 35 ವರ್ಷದ ಪೂಜಾರಾಗೆ ಕೊಕ್​ ಕೊಡಲು ಬೆಸ್ಟ್​ ಚಾನ್ಸ್​ ಆಗಿದೆ.

ಕಳೆದ 3 ವರ್ಷದಿಂದ ಪೂಜಾರ ಫ್ಲಾಪ್​ ಶೋ.!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಮಾತ್ರವಲ್ಲ. 2020ರಿಂದ ಟೆಸ್ಟ್​ ಸ್ಪೆಷಲಿಸ್ಟ್​ ನೀಡ್ತಾ ಇರೋದು ಅತ್ಯಂತ ಹೀನಾಯ ಪ್ರದರ್ಶನ. ಅನುಭವಿ ಆಟಗಾರನಾಗಿ ತಂಡಕ್ಕೆ ಬಲ ತುಂಬೇಕಾದ ಆಟಗಾರ 2020ರಿಂದ ಆಡಿರೋದು ಬರೋಬ್ಬರಿ 52 ಇನ್ನಿಂಗ್ಸ್​​ಗಳನ್ನ. ಆದ್ರೆ, ರನ್​ ಗಳಿಸಿರೋದು ಕೇವಲ 29.69ರ ಸರಾಸರಿಯಲ್ಲಿ ಮಾತ್ರ​​. ಹೀಗೆ ಫ್ಲಾಪ್​ ಮೇಲೆ ಫ್ಲಾಪ್​ ಶೋ ನೀಡ್ತಾ ಇದ್ರೂ ಬ್ಯಾಕ್​ ಮಾಡೋದ್ರ ಯುವ ಆಟಗಾರರಿಗೆ ಅವಕಾಶ ನೀಡಿ ಪ್ರಯೋಗ ಮಾಡೋದೆ ಬೆಸ್ಟ್​.

ಯಂಗ್​ ಯಶಸ್ವಿ ಜೈಸ್ವಾಲ್​ ಬೆಸ್ಟ್​​ ರಿಪ್ಲೇಸ್​ಮೆಂಟ್​​.

ಚೇತೇಶ್ವರ್ ಪೂಜಾರನ ರಿಪ್ಲೇಸ್​ ಮಾಡೋಕೆ ಸದ್ಯಕ್ಕಿರೋ ಬೆಸ್ಟ್​ ಚಾಯ್ಸ್​ ಯಶಸ್ವಿ ಜೈಸ್ವಾಲ್​. 3ನೇ ಕ್ರಮಾಂಕದಲ್ಲಿ ಪರ್ಫಾಮ್​ ಮಾಡೋ ಸಾಮರ್ಥ್ಯ ಜೈಸ್ವಾಲ್​ಗಿದೆ. ಇಂಟರ್​ ನ್ಯಾಷನಲ್​ ಲೆವೆಲ್​ನಲ್ಲಿ ಪರ್ಫಾಮ್​ ಮಾಡೋ ತಾಕತ್ತು ಜೈಸ್ವಾಲ್​ಗಿದೆ. ಆರಂಭಿಕನಾಗಿ ಕಣಕ್ಕಿಳಿದು ಹೊಸ ಬಾಲ್​ ಡೀಲ್​ ಮಾಡೋ ಜೈಸ್ವಾಲ್​ಗೆ, 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋದು ಕಷ್ಟವಾಗಲ್ಲ.

ಡೊಮೆಸ್ಟಿಕ್​​ ಕ್ರಿಕೆಟ್​​ನಲ್ಲಿ ಜೈಸ್ವಾಲ್​ ಯಶಸ್ವಿ ಬ್ಯಾಟಿಂಗ್​.!

ಐಪಿಎಲ್​ನಲ್ಲಿ ಮಾತ್ರವಲ್ಲ.. ಡೊಮೆಸ್ಟಿಕ್​ ಕ್ರಿಕೆಟ್​ನಲ್ಲೂ ಯಶಸ್ವಿ ಜೈಸ್ವಾಲ್, ಯಶಸ್ವಿನ ಓಟ ಓಡಿದ್ದಾರೆ. ಫಸ್ಟ್​​ಕ್ಲಾಸ್​ ಕ್ರಿಕೆಟ್​ನಲ್ಲಿ 80.21ರ ಸರಾಸರಿ ಹೊಂದಿರೋದು ಕಡಿಮೆ ಸಾಧನೆನಾ.? 2021-22ರ ಸೀಸನ್​ನಲ್ಲಿ ಮುಂಬೈ ತಂಡ ಫೈನಲ್​ಗೆ ಹೋಗಲು ತಿಣುಕಾಡ್ತಿದ್ದಾಗ ಹ್ಯಾಟ್ರಿಕ್​ ಶತಕ ಬಾರಿಸಿದ್ದು ಇದೇ ಯಶಸ್ವಿ ಜೈಸ್ವಾಲ್​. ಒತ್ತಡದ ನಡುವೆ ಬಿಗ್​ಸ್ಟೇಜ್​​ನಲ್ಲಿ ಪರ್ಫಾಮ್​ ಮಾಡಬಲ್ಲ ಬಿಗ್​​ಮ್ಯಾಚ್​​ ಪ್ಲೇಯರ್ ಈ ಯಶಸ್ವಿ​​ ಜೈಸ್ವಾಲ್​.

ಫಸ್ಟ್​ಕ್ಲಾಸ್​ ಕ್ರಿಕೆಟ್​ನಲ್ಲಿ ಯಶಸ್ವಿ

ಇನ್ನಿಂಗ್ಸ್​             26

ರನ್​                  1845

ಸರಾಸರಿ             80.21

100/50            9/2

ಫಸ್ಟ್​​ಕ್ಲಾಸ್​ ಕ್ರಿಕೆಟ್​ನಲ್ಲಿ 26 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿರುವ ಯಶಸ್ವಿ ಜೈಸ್ವಾಲ್​, 1845 ರನ್​ ಸಿಡಿಸಿದ್ದಾರೆ. 80.21ರ ಸರಾಸರಿಯಲ್ಲಿ ರನ್​ಗಳಿಸಿರೋ ಈ ಯುವ ಆಟಗಾರ ಬರೋಬ್ಬರಿ 9 ಶತಕ, 2 ಅರ್ಧಶತಕದ ಸಾಧನೆ ಮಾಡಿದ್ದಾರೆ.

ಜೈಸ್ವಾಲ್​ಗೆ ಚಾನ್ಸ್​ ನೀಡಿದ್ರೆ, ತಂಡಕ್ಕೇ ಅಡ್ವಾಂಟೇಜ್​.!

ಪೂಜಾರ ಫ್ಲಾಪ್​ ಶೋ ನೀಡ್ತಾ ಇದ್ರೆ, ಯಶಸ್ವಿ ಜೈಸ್ವಾಲ್​ ರೆಡ್​ ಹಾಟ್​ ಫಾರ್ಮ್​ನಲ್ಲಿದ್ದಾರೆ. ಇದ್ರ ಜೊತೆಗೆ ಯುವ ಆಟಗಾರ ಲೆಫ್ಟ್​ ಹ್ಯಾಂಡ್​ ಬ್ಯಾಟ್ಸ್​ಮನ್​ ಕೂಡ ಆಗಿರೋದು ತಂಡಕ್ಕೆ ಅಡ್ವಾಂಟೇಜ್​ ಆಗಲಿದೆ. ಟಾಪ್​ ಆರ್ಡರ್​ನಲ್ಲಿ ಲೆಫ್ಟ್​ & ರೈಟ್​ ಕಾಂಬಿನೇಶನ್​ ಇಲ್ಲಿದೇ ಇರೋದು ಈಗಾಗಲೇ ಟೀಮ್​ ಇಂಡಿಯಾಗೆ ಹಲವು ಬಾರಿ ಹಿನ್ನಡೆಯಾಗಿದೆ. ಜೈಸ್ವಾಲ್​ಗೆ ಚಾನ್ಸ್​ ನೀಡಿದ್ರೆ, ಈ ಹಿಂದೆ ಒದ್ದಾಡಿದ ತಂಡಕ್ಕೆ ಬ್ಯಾಲೆನ್ಸ್ ಸಿಗಲಿದೆ.

ಕಳೆದ 3 ವರ್ಷದಿಂದ ಫ್ಲಾಪ್​ ಶೋ ನೋಡಿಯೂ ಕೂಡ ಅನುಭವಿ ಅನ್ನೋ ಕಾರಣಕ್ಕೆ ಮ್ಯಾನೇಜ್​ಮೆಂಟ್​ ಮಣೆ ಹಾಕಿದೆ. ಈಗಲಾದ್ರೂ ಎಚ್ಚೆತ್ತುಕೊಂಡು ಟಫ್​ ಕಾಲ್​ ತೆಗೆದುಕೊಳ್ಳಬೇಕಿದೆ. ಹೇಗಿದ್ರೂ ಪೂಜಾರ ಫ್ಲಾಪ್​ ಶೋ ನೀಡ್ತಿದ್ದಾರೆ.. ಹಿಂದೆ ಒಳ್ಳೆ ಪರ್ಫಾಮೆನ್ಸ್​ ನೀಡಿದ್ದಾರೆ ಅನ್ನೋ ಒಂದು ಕಾರಣಕ್ಕೆ ಬ್ಲೈಂಡ್​ ಆಗಿ ಬ್ಯಾಕ್​ ಮಾಡೋದಕ್ಕಿಂತ ಯುವ ಆಟಗಾರನಿಗೆ ಚಾನ್ಸ್​ ನೀಡಿ ಪ್ರಯೋಗ ನಡೆಸೋದೆ ಬೆಸ್ಟ್​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪೂಜಾರಗೆ ಕೊಕ್​.. ಜೈಸ್ವಾಲ್​ಗೆ ಚಾನ್ಸ್​? ಈ ಲೆಕ್ಕಾಚಾರದಲ್ಲಿದೆಯಾ ಟೀಂ ಇಂಡಿಯಾ

https://newsfirstlive.com/wp-content/uploads/2023/06/Cheteshwara-Pujara.jpg

Load More