/newsfirstlive-kannada/media/post_attachments/wp-content/uploads/2024/10/Gold-Rate.jpg)
ಇದು ಮದುವೆಗಳ ಸೀಸನ್. ಎಲ್ಲರಿಗೂ ಬಂಗಾರ ಖರೀದಿ ಮಾಡಲೇಬೇಕಾದ ಅಗತ್ಯ. ಹಾಗಾಗಿ ಜನ ಚಿನ್ನದ ಅಂಗಡಿಗಳ ಮುಂದೆ ಕ್ಯೂ ಕಟ್ಟಿ ನಿಂತಿದ್ದಾರೆ. ಈ ಹೊತ್ತಲೇ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಇತ್ತು. ಇದರಿಂದ ಜನ ಬೆಚ್ಚಿಬಿದ್ದು ಹೋಗಿದ್ರು. ಈಗ ಚಿನ್ನದ ದರ ದಿಢೀರ್ ಇಳಿಕೆ ಆಗಿದ್ದು, ಬಂಗಾರ ಖರೀದಿ ಮಾಡೋರಿಗೆ ಇದು ಗುಡ್ನ್ಯೂಸ್ ಆಗಿದೆ.
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗಿವೆಯಾ? ಹಾಗಿದ್ರೆ ಈ ನಿಯಮಗಳನ್ನು ಪಾಲಿಸಿ
ಬಂಗಾರದ ದರದಲ್ಲಿ ಸಾಕಷ್ಟು ಕುಸಿತವಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ದರ ಕಡಿಮೆ ಆಗುತ್ತಲೇ ಇದೆ. ಯಾರಿಗಾದ್ರೂ ಚಿನ್ನ ಖರೀದಿ ಮಾಡಬೇಕು ಅನ್ನೋದಾದ್ರೆ ಇದು ಒಳ್ಳೆಯ ಅವಕಾಶ.
ಚಿನ್ನಕ್ಕೆ ಭಾರೀ ಡಿಮ್ಯಾಂಡ್
ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರನ್ನು ಆಕರ್ಷಿಸೋ ಏಕೈಕ ಲೋಹ ಚಿನ್ನ. ಮದುವೆ ಸೀಸನ್ನಲ್ಲಂತೂ ಚಿನ್ನದ ಆಭರಣಗಳಿಗೆ ವಿಶೇಷವಾದ ಡಿಮ್ಯಾಂಡ್ ಇದೆ. ನೀವು ಚಿನ್ನ ಖರೀದಿ ಮಾಡಿದ್ರೆ ಎರಡು ವರ್ಷಗಳಲ್ಲಿ ನಿಮಗೆ ಡಬಲ್ ಇನ್ಕಮ್ ನೀಡಲಿದೆ.
ಹೂಡಿಕೆ ಮಾಡೋಕು ಬೆಸ್ಟ್ ಚಿನ್ನ
ಇಷ್ಟೇ ಅಲ್ಲ ಹೂಡಿಕೆ ಮಾಡಲು ಕೂಡ ಚಿನ್ನ ಯಾವಾಗಲೂ ಬೆಸ್ಟ್. ಆಗಾಗ ಸಣ್ಣಪುಟ್ಟ ಏರಿಳಿತ ಬಿಟ್ಟರೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಯಾವುದೇ ಲಾಸ್ ಅಂತೂ ಇಲ್ಲ. ಬದಲಿಗೆ ಭೂಮಿಯಷ್ಟೇ ಬಂಗಾರ ಗೋಲ್ಡ್.
ಬೆಲೆಯಲ್ಲಿ ಸತತ ಇಳಿಕೆ
ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಎರಡು ಲೋಹಗಳ ದರ ಕಡಿಮೆ ಆಗಿದೆ. ಬೆಳ್ಳಿ ಬೆಲೆ ಕಳೆದ 10 ದಿನಗಳಿಂದ ಗ್ರಾಮ್ಗೆ 4 ರೂ. ಕಡಿಮೆ ಆಗಿದೆ. ಚಿನ್ನದ ಬೆಲೆಯೂ ಗ್ರಾಮ್ಗೆ 155 ರೂ. ಕಡಿಮೆ ಆಗಿದೆ. ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 72,150 ರೂ., 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 78,700 ರೂ. ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,290 ರೂ. ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ