newsfirstkannada.com

ರಾಮನಿಗಾಗಿ ಪ್ರಾಣ ತ್ಯಾಗ ಮಾಡಿದ ಲಕ್ಷ್ಮಣ; ಸರಯೂ ನದಿ ತಟದಲ್ಲಿದೆ ಈ ಪುಣ್ಯಕ್ಷೇತ್ರ; ವಿಶೇಷತೆಗಳೇನು?

Share :

Published January 14, 2024 at 9:06pm

  ಹೇಗಿದೆ ಗೊತ್ತಾ ಸೊಸೆ ಸೀತಾದೇವಿಗೆ ಕೈಕೆ ನೀಡಿದ ಅರಮನೆ?

  ರಾಮ ದರ್ಶನಕ್ಕೂ ಮುನ್ನ ಮಾರುತಿ ದರ್ಶನ ಮಾಡೋದ್ಯಾಕೆ?

  ರಾಮನಿಗೂ ಮುಂಚೆ ಇಲ್ಲಿ ಆಂಜನೇಯನಿಗೆ ನಡೆಯುತ್ತೆ ಪೂಜೆ!

ದಶರಥ ಸುತ. ಪ್ರಭು ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಝಗಮಗಿಸಿ ಸಜ್ಜಾಗ್ತಿದೆ. ಇಡೀ ಅಯೋಧ್ಯೆಗೆ ಅಯೋಧ್ಯೆಯೇ ಅಕ್ಷರಶಃ ಮದುವಣಗಿತ್ತಿಯಂತೆ ಪಳಪಳನೆ ಹೊಳೆಯುತ್ತಿದೆ. ಆದ್ರೆ, ಅಯೋಧ್ಯೆ ಅಂದ್ರೆ ಅದು ಬರೀ ಶ್ರೀರಾಮನ ಮಂದಿರವಲ್ಲ. ಅಲ್ಲಿ ಅಣ್ಣನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಲಕ್ಷ್ಮಣನ ಕೋಟೆ ಇದೆ. ಪತಿಯೇ ಪರದೈವ ಅಂತಾ ಗಂಡನಿಗಾಗಿ ಜೀವಬಿಡಲೂ ಸಿದ್ಧವಾಗಿದ್ದ ಸೀತಾಮಾತೆಯ ಅರಮನೆ ಇದೆ. ರಾಮನೇ ಎಲ್ಲ.. ರಾಮನಿಲ್ಲದೇ ಏನಿಲ್ಲ.. ಎಂದಿದ್ದ ರಾಮಬಂಟ ಆಂಜನೇಯ ಇಡೀ ಅಯೋಧ್ಯೆಗೆ ಕಾವಲಾಗಿ ನಿಂತಿದ್ದಾನೆ.

ಬಹುಕೋಟಿ ಹಿಂದೂಗಳ ಧಾರ್ಮಿಕ ಭಾವನೆಯ ಸಂಕೇತ. ಗತವೈಭವ ಮರುಕಳಿಸುವ ಐತಿಹಾಸಿಕ ಕ್ಷಣ. ಮರ್ಯಾದಾ ಪುರುಷೋತ್ತಮನ ದರ್ಶನ ಮಾಡಲು ಕಾದಿದೆ ಅಸಂಖ್ಯ ಭಕ್ತಗಣ. ಮೂರೂವರೆ ವರ್ಷಗಳ ಹಿಂದಿನ ತೀರ್ಪಿನ ಬಳಿಕ ಭಕ್ತರಿಗೆ ಸಿಗಲಿದೆ ಶ್ರೀರಾಮನ ದರ್ಶನ. ಶತ ಶತಮಾನಗಳಿಂದ ನಡೆದ ಸಂಘರ್ಷ. ನೂರಾರು ಹೋರಾಟಗಳು.. ಕದನಗಳು.. ಆದ್ರೀಗ, ಈ ಸಂಘರ್ಷಕ್ಕೆ ಈ ಹೋರಾಟಕ್ಕೆ ಒಂದು ಸಾರ್ಥಕ ಫಲ ಸಿಕ್ಕಿದೆ. ಹಿಂದೂಗಳ ಹೃದಯದಲ್ಲಿ ಸದಾ ವಿರಾಜಮಾನರಾಗಿರುವ ಅಯ್ಯೋಧ್ಯೆಯ ಶ್ರೀರಾಮನ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ.

ನೂರಾರು ವರ್ಷಗಳ ಬಳಿಕ ಬಾಲ ರಾಮ ಮತ್ತೊಮ್ಮೆ ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗುವ ಕಾಲ ಕೂಡಿ ಬಂದಿದೆ. ಜನವರಿ 22ನೇ ತಾರೀಖು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕಾಗಿ ಭರದಿಂದ ಸಿದ್ಧತೆಗಳೂ ನಡೆದಿದೆ. ಒಂದ್ಕಡೆ ರಾಮಲಲ್ಲಾನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳುಸಾಗಿದ್ದು, ಮತ್ತೊಂದ್ಕಡೆ ದೇಶಾದ್ಯಂತ ಭಕ್ತರು ಪುಳಕಿತರಾಗಿದ್ದಾರೆ. ಮತ್ತೊಮ್ಮೆ ತ್ರೇತಾಯುಗದ ಗತ ವೈಭವವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾದು ಕೂತಿದೆ. ಅಯೋಧ್ಯೆ ಅಂದ್ರೆ ತಕ್ಷಣಕ್ಕೆ ನೆನಪಿಗೆ ಬರೋದು ಶ್ರೀರಾಮ ಮಂದಿರ. ಆದ್ರೆ, ಇಲ್ಲಿ ಶ್ರೀರಾಮಮಂದಿರ ಮಾತ್ರವಲ್ಲ. ಅಣ್ಣನಿಗಾಗಿ ರಾಜ್ಯ, ಸಂಪತ್ತು, ಅಧಿಕಾರ ಎಲ್ಲವನ್ನೂ ಬಿಟ್ಟು ಅಣ್ಣನೇ ಸರ್ವಸ್ವ ಅಂತ ರಾಮನ ಹೆಜ್ಜೆಗೆ ಹೆಜ್ಜೆಯಾಗಿ ಕಷ್ಟದಲ್ಲೂ ಸುಖದಲ್ಲೂ ಜೊತೆಯಾಗಿ ನಿಂತಿದ್ದ ಲಕ್ಷ್ಮಣನ ಕೋಟೆ ಇಂದಿಗೂ ಜನರ ಮನಸೊರೆಗಿಳಿಸುತ್ತೆ. ಇದಷ್ಟೇ ಅಲ್ಲ, ಪತಿಯ ಕಷ್ಟದಲ್ಲಿ ಜೊತೆಯಾಗಿ ನಿಂತು ಸತಿಧರ್ಮ ಪಾಲಿಸಿದ ಮಹಾ ಪತಿವೃತೆ ಸೀತಾದೇವಿ ಅರಮನೆಯಂತೂ ನೀವು ನೋಡಬೇಕು. ಇನ್ನು ಶ್ರೀರಾಮನನ್ನ ತನ್ನೆದೆಯಲ್ಲಿಟ್ಟು ಆರಾಧಿಸುವ ಪವನಸುತ ಆಂಜನೇಯ ಅಯೋಧ್ಯೆಯ ಮಧ್ಯ ಭಾಗದಲ್ಲಿ ವಿರಾಜಮಾನರಾಗಿದ್ದಾರೆ.

ಸರಯೂ ನದಿ ತಟದಲ್ಲಿದೆ ಲಕ್ಷ್ಮಣ ಖಿಲಾ.. ವಿಶೇಷತೆಗಳೇನು?
ಸರಯೂ ನದಿ ದಡದಲ್ಲಿ ಪ್ರಾಣ ತ್ಯಾಗ ಮಾಡಿದ ಲಕ್ಷ್ಮಣ !

ಸಹೋದರರು ಅಂದ್ರೆ ಅದು ರಾಮ ಲಕ್ಷ್ಮಣ ಅನ್ನೋ ಮಾತಿದೆ. ತಮ್ಮ ಅಂತ ಇದ್ರೆ ಅದು ಲಕ್ಷ್ಮಣನಂತ ತಮ್ಮನಿರಬೇಕು ಅನ್ನೋದ ಪ್ರತಿಯೊಬ್ಬರ ಆಸೆ. ರಾಮನಿಲ್ಲದೇ ಲಕ್ಷ್ಮಣನಿಲ್ಲ. ಲಕ್ಷ್ಮಣನಿಲ್ಲದೇ ರಾಮನಿಲ್ಲ. ಅಯೋಧ್ಯೆಯನ್ನ ತೊರೆದು ರಾಮ ವನವಾಸಕ್ಕೆ ಹೊರಟು ನಿಂತಾಗ ಹಿಂದೂ, ಮುಂದು ನೋಡದೇ ಲಕ್ಷ್ಮಣ ಶ್ರೀರಾಮನ ಹಿಂದೆಯೇ ಹೊರಟು ಬಿಟ್ಟಿದ್ದ. ಇಂತಹ ಸಹೋದರನಿಗಾಗಿಯೇ ಅಯ್ಯೋಧ್ಯೆಯಲ್ಲಿ ಭವ್ಯ ಕೋಟೆಯೊಂದನ್ನ ಕಟ್ಟಲಾಗಿದೆ. ಈ ಕೋಟೆಯನ್ನ ಲಕ್ಷ್ಮಣನ ಖಿಲಾ ಅಥವಾ ಲಕ್ಷ್ಮಣನ ಅರಮನೆ ಅಂತಲೇ ಕರೆಯಲಾಗುತ್ತೆ.

ಇಲ್ಲಿ ಸುಳ್ಳುಗಳನ್ನು ಮರೆಮಾಚಲು ಸಾಧ್ಯವೇ ಇಲ್ಲ!
ಹಲವು ಅದ್ಭುತಗಳಿಗೆ ಸಾಕ್ಷಿಯಾಗಿದೆ ಲಕ್ಷ್ಮಣ ಖಿಲಾ!

ವಿಶೇಷ ಏನಂದ್ರೆ, ಈ ಲಕ್ಷ್ಮಣ ಖಿಲಾದಲ್ಲಿ, ಶ್ರೀರಾಮ ಸೀತಾದೇವಿ ಜೊತೆ ವಿರಾಜಮಾನರಾಗಿದ್ದಾರೆ. ಈ ಕೋಟೆ ಅದೆಷ್ಟು ಶ್ರೇಷ್ಠ ಅಂದ್ರೆ ಈ ಪುಣ್ಯ ತಾಣದಲ್ಲಿ ಯಾರೊಬ್ಬರು ಸುಳ್ಳು ಹೇಳಿದ್ರೆ ಅದು ಹೆಚ್ಚೊತ್ತು ಉಳಿಯಲ್ಲ. ಇಲ್ಲಿ ಸುಳ್ಳನ್ನ ಮರೆ ಮಾಚೋದಕ್ಕೆ ಸಾಧ್ಯವೇ ಇಲ್ಲ. ಇದ್ರ ಜೊತೆಗೆ ಹಲವು ಅದ್ಭುತಗಳಿಗೆ ಈ ಲಕ್ಷ್ಮಣ ಖಿಲಾ ಸಾಕ್ಷಿಯಾಗಿದೆ. ಇಲ್ಲಿ ವಿರಾಜಮಾನನಾಗಿರುವ ಶ್ರೀರಾಮನಿಗೆ ಮೂರೂ ಹೊತ್ತು ತಪ್ಪದೇ ಪೂಜೆ ನೆರವೇರಿಸಲಾಗುತ್ತೆ. ಒಂದು ವಿಚಾರ ಏನಂದ್ರೆ ಲಕ್ಷ್ಮಣ ಖಿಲಾದಲ್ಲಿರುವ ಕೋಟೆಯಲ್ಲಿರುವ ಪ್ರಭು ಶ್ರೀರಾಮನ ಮೂರ್ತಿಗೆ ಶೃಂಗಾರ ಮಾಡಿದ ಬಳಿಕ ಕನ್ನಡಿಯಲ್ಲಿ ಆ ಶೃಂಗಾರವನ್ನು ರಾಮನಿಗೆ ತೋರಿಸಲಾಗುತ್ತೆ. ಭಜನೆ, ಸ್ತ್ರೋತ್ರಗಳ ಪಠಣೆ ಇಲ್ಲಿ ನಿತ್ಯ ನಿರಂತರ.

ಈ ಕೋಟೆಯ ಪಕ್ಕದಲ್ಲಿರುವ ಸರಯೂ ನದಿ ದಡದಲ್ಲೇ ರಾಮನ ಪರಮಾಪ್ತ ಸಹೋದರ ಲಕ್ಷ್ಮಣ ಪ್ರಾಣತ್ಯಾಗ ಮಾಡಿದ್ದ ಅನ್ನೋದು ನಂಬಿಕೆ. ಅದಕ್ಕೆ ಒಂದು ಪೌರಾಣಿಕ ಹಿನ್ನೆಲೆಯೂ ಇದೆ. ಅದೇನಂದ್ರೆ ಒಂದೊಮ್ಮೆ ಈ ಕೋಟೆಯಲ್ಲಿ ಶ್ರೀರಾಮ, ಕಾಲದೇವರು ಅಂದ್ರೆ ಯಮನ ಜೊತೆ ಸಭೆ ಮಾಡ್ತಿರ್ತಾನೆ. ಆ ಟೈಮಲ್ಲಿ ಯಾರನ್ನೂ ಕೋಟೆಯೊಳಗೆ ಬಿಡದಂತೆ ರಾಮ ಸಹೋದರ ಲಕ್ಷ್ಮಣನಿಗೆ ಹೇಳಿರ್ತಾನೆ. ಆದ್ರೆ, ಶ್ರೀರಾಮ ಕಾಲದೇವರ ಜೊತೆ ಚರ್ಚೆ ನಡೆಸ್ತಿರಬೇಕಾದ್ರೆ ದುರ್ವಾಸಮುನಿಗಳು ಶ್ರೀರಾಮನನ್ನ ನೋಡ್ಬೇಕು ಅಂತ ಹಠ ಹಿಡೀತಾರೆ. ಲಕ್ಷ್ಮಣ ಮಾತ್ರ ಕೋಟೆಯೊಳಗೆ ದುರ್ವಾಸ ಮುನಿಯನ್ನ ಬಿಡೋದಿಲ್ಲ. ಹೀಗೆ ಬಿಡದಿದ್ದಾಗ, ದುರ್ವಾಸಮುನಿ ಅಯೋಧ್ಯೆಯನ್ನ ಶಪಿಸೋದಕ್ಕೆ ಮುಂದಾಗ್ತಾರೆ. ಆಗ ವಿಧಿಯಿಲ್ಲದೇ ಲಕ್ಷ್ಮಣ ದುರ್ವಾಸಮುನಿಯನ್ನ ಒಳಗೆ ಬಿಡ್ತಾರೆ. ಆ ಬಳಿಕ, ಅಣ್ಣನ ಮಾತಿಗೆ ತಪ್ಪಾಗಿ ನಡೆದುಕೊಂಡುಬಿಟ್ಟೆ ಅಂತಾ ಲಕ್ಷ್ಮಣ ಸರಯೂ ನದಿಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದ್ರು ಅನ್ನೋದು ರಾಮಭಕ್ತರ ನಂಬಿಕೆ.

ಅಯೋಧ್ಯೆಯನ್ನ ನಾಶ ಮಾಡ್ತೀನಿ ಅಂತಾ ಶಾಪ ಕೊಡ್ತಾರೆ. ಕೊನೆಗೆ ದುರ್ವಾಸ ಮುನಿ ಕೋಟೆಯೊಳಗೆ ಹೋಗಿಬಿಡ್ತಾರೆ.. ಹೀಗಾಗಿ ಲಕ್ಷ್ಮಣ ಸರಯೂ ನದಿ ದಡದಲ್ಲಿ ಪ್ರಾಣ ತ್ಯಾಗ ಮಾಡಬೇಕಾಯ್ತು.

– ಪಂಡಿತ್ ರಾಮ್​ಕುಮಾರ್ ಶಾಸ್ತ್ರಿ

ಹೇಗಿದೆ ಗೊತ್ತಾ ಸೊಸೆ ಸೀತಾಗೆ ಕೈಕೆ ನೀಡಿದ ಅರಮನೆ?

ಏಕ ಪತ್ನಿ ವೃತಸ್ಥ ಶ್ರೀರಾಮಸತಿ ಸೀತಾದೇವಿ ಅದೆಂಥಾ ತ್ಯಾಗಮಯಿ ಅಂದ್ರೆ ಅಯೋಧ್ಯೆಯ ರಾಜನನ್ನ ಮದುವೆಯಾದರೂ ಯಾವುದೇ ವೈಭೋಗಗಳನ್ನ ಸೀತೆ ಅನುಭವಿಸಲಿಲ್ಲ. ಪತಿಯೇ ಪರದೈವ ಅಂದುಕೊಂಡಿದ್ದ ಸೀತೆ, ಶ್ರೀರಾಮ ವನವಾಸಕ್ಕೆ ಹೊರಟು ನಿಂತಾಗ ಪತಿಯ ಹಿಂದೆಯೇ ಹೊರಟು ಬಿಟ್ಟಿದ್ಳು. ಶ್ರೀರಾಮನಿಗಾಗಿ ಸರ್ವಸ್ವವನ್ನ ತ್ಯಾಗ ಮಾಡಿದ್ದ ಮಹಾತಾಯಿ ಸೀತಾದೇವಿ. ಹೀಗಾಗಿ, ಈ ಸೀತಾದೇವಿಗಾಗಿಗೂ ಅಯೋಧ್ಯೆಯಲ್ಲಿ ಒಂದು ಅರಮನೆ ನಿರ್ಮಿಸಲಾಗಿದೆ. ಈ ಅರಮನೆಯನ್ನ ಕನಕ ಅರಮನೆ ಅಂತಲೂ ಕರೆಯಲಾಗುತ್ತೆ. ಈ ಅರಮನೆಯನ್ನ ದಶರಥ ಮಹಾರಾಜ ರಾಣಿ ಕೈಕೆಗಾಗಿ ಕಟ್ಟಿಸಿದ್ರು, ಕೈಕೆ ತನ್ನ ಸೊಸೆ ಸೀತಾದೇವಿಗೆ ಈ ಅರಮನೆಯನ್ನ ಉಡುಗೊರೆಯಾಗಿ ನೀಡಿದ್ರು. ಹೀಗಾಗಿ ರಾಮ ಮಂದಿರ ಉದ್ಘಾಟನೆಯಾದ್ಮೇಲೆ ಶ್ರೀರಾಮ ಮತ್ತು ಸೀತಾದೇವಿ ವಾಸವಿದ್ದ ಕನಕಭವನ್ನ ಕೂಡ ಜನರು ದರ್ಶನ ಮಾಡಬಹುದಾಗಿದೆ.

ಈ ಅರಮನೆಯನ್ನ ಕೈಕೆ ಸೀತಾದೇವಿಗೆ ಉಡುಗೊರೆಯಾಗಿ ನೀಡಿದ್ರು, ಕನಕ ಅಂದ್ರೆ ಬಂಗಾರ ಈ ಬಂಗಾರದ ಅರಮನೆಯನ್ನ ಕೈಕೆ ಸೀತೆಗೆ ಕೊಟ್ಟಿದ್ರು. ಮನೆಗೆ ಬಂದ ಸೊಸೆಗೆ ಏನಾದ್ರೂ ಉಡುಗೊರೆ ಕೊಡ್ಬೇಕಾಗುತ್ತೆ.. ಅದಕ್ಕೆ ಕೈಕೆ ಈ ಬಂಗಾರದ ಅರಮನೆಯನ್ನ ನೀಡಿದ್ರು.

– ಅಂಕೂರ್ ಶರ್ಮಾ, ಅಯೋಧ್ಯೆ ನಿವಾಸಿ

ಆದ್ರೆ, ಇವೆಲ್ಲಕ್ಕಿಂತ ತುಂಬಾ ವಿಶೇಷ ಅಂದ್ರೆ ಅದು ಶ್ರೀರಾಮಬಂಟ, ಪವನ ಸುತ, ಆಂಜನೇಯನ ಬೃಹತ್ ದೇವಸ್ಥಾನ.. ಇದು ಅಯೋಧ್ಯೆಯಲ್ಲಿ ಹನುಮಾನ್ ಗಡಿ ಅಂತಲೇ ಫೇಮಸ್​. ಅಯೋಧ್ಯೆಯ ನಟ್ಟ ನಡುವಲ್ಲಿ ವಿರಾಜಮಾನನಾಗಿರುವ ಆಂಜನೇಯನನ್ನ ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನಿಗಾಗಿ ಪ್ರಾಣ ತ್ಯಾಗ ಮಾಡಿದ ಲಕ್ಷ್ಮಣ; ಸರಯೂ ನದಿ ತಟದಲ್ಲಿದೆ ಈ ಪುಣ್ಯಕ್ಷೇತ್ರ; ವಿಶೇಷತೆಗಳೇನು?

https://newsfirstlive.com/wp-content/uploads/2024/01/shri-rama-10.jpg

Load More