ಫ್ರೀ.. ಫ್ರೀ.. ಫ್ರೀ.. ಜನರಿಗೆ ಉಚಿತ ಸೌಲಭ್ಯ ಕೊಟ್ಟು ಶ್ರೀಮಂತ ದೇಶವೊಂದು ದಿವಾಳಿಯಾದ ಕಥೆ ಇದು!

author-image
Harshith AS
Updated On
ಫ್ರೀ.. ಫ್ರೀ.. ಫ್ರೀ.. ಜನರಿಗೆ ಉಚಿತ ಸೌಲಭ್ಯ ಕೊಟ್ಟು ಶ್ರೀಮಂತ ದೇಶವೊಂದು ದಿವಾಳಿಯಾದ ಕಥೆ ಇದು!
Advertisment
  • ವಿಶ್ವದ ಶ್ರೀಮಂತ ರಾಷ್ಟ್ರ ದಿವಾಳಿ ಆಗಿದ್ದು ಹೇಗೆ?
  • ಅಕ್ಷರಶಃ ಆರ್ಥಿಕ ಸಂಕಷ್ಟದಲ್ಲಿದೆ ಈ ದೇಶ
  • ಉಚಿತ ಸೇವೆಗಳಿಂದ ದೇಶವೇ ಫುಲ್ ಬರ್ಬಾದ್!

ಸರಿಯಾದ ಅಧಿಕಾರದಿಂದ ದೇಶ ಮುನ್ನಡೆಯಲು ಸಾಧ್ಯ. ಸರಿಯಾದ ನಿರ್ಣಯದಿಂದ ನಾಳಿನ ಬದುಕು ನಿರ್ಮಿಸಲು ಸಾಧ್ಯ. ಆದರೆ ಅಧಿಕಾರ ಎಂಬ ಮಹದಾಸೆಯಿಂದ ಯಾವುದೋ ಒಂದು ನಿರ್ಣಯ ದೇಶವನ್ನೇ ದಿವಾಳಿಯನ್ನಾಗಿಸಬಹುದಾದ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲ, ಉಚಿತ ಸೌಲಭ್ಯಗಳನ್ನು ನೀಡಿದ ದೇಶವೊಂದು ನಿರ್ಗತಿಕವಾಗಿ ಕತ್ತಲೆಯಲ್ಲಿ ಬದುಕುತ್ತಿದೆ. ಅಂತಹ ದೇಶವೊಂದರ ನಿಜಸಂಗತಿ ಇಲ್ಲಿದೆ.

ದೇಶವನ್ನು ಕಟ್ಟೋದು ಸುಲಭದ ಕೆಲಸವೇ?. ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ದೇಶವೊಂದು ಆರ್ಥಿಕ ಸಂಕಷ್ಟದಿಂದ ದಿವಾಳಿಯಾದರೆ ನಂಬಲು ಅಸಾಧ್ಯದ ಮಾತು. ಒಂದು ಹೊತ್ತಿನ ಊಟಕ್ಕೆ ಇಂದು ಪರದಾಡುವ ಸ್ಥಿತಿ ನಿರ್ಮಾಣವಾದರೆ ನಾಳಿನ ದಿನಗಳ ಕಥೆ ಏನು?.

publive-image

ಯಾವುದು ಗೊತ್ತಾ ಆ ದೇಶ?

ಭಾರತ ದೇಶದಿಂದ 15 ಸಾವಿರ ಕಿಲೋ ಮೀಟರ್​ ದೂರದಲ್ಲಿರುವ ದೇಶ, ಲ್ಯಾಟಿನ್​ ಅಮೆರಿಕಕ್ಕೆ ಸಂಬಂಧಿಸಿದ ದೇಶ, ಅಷ್ಟೇ ಏಕೆ ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ಒಳಗೊಂಡ ದೇಶ ವೆನಿಜುವೆಲಾ ಕಥೆ ಇಂದು ಕೇಳಲೇಬೇಕು. ಯಾಕಂದರೆ ಈ ದೇಶವಿಂದು ಅರ್ಥಿಕತೆಯ ಹೊಡೆತಕ್ಕೆ ಸಿಲುಕಿ ಚದುರಿಹೋಗಿದೆ.

publive-image

ವಕ್ಕರಿಸಿತು ಶನಿ

ವೆನಿಜುವೆಲಾದ ಪ್ರಮುಖ ಆರ್ಥಿಕ ಮೂಲವೇ ಪೆಟ್ರೋಲಿಯಂ. ಭಾರತದ ಮತ್ತು ಅಮೆರಿಕಾದಂತಹ ದೇಶಗಳಿಗೆ ಪೆಟ್ರೋಲ್​ ರಫ್ತು ಮಾಡುತ್ತಿದ್ದ ಈ ದೇಶ 1970ರ ವೇಳೆಗೆ ಪ್ರಪಂಚದ 20 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿತ್ತು. ಆದರೆ ಮಾರಿ ಕಣ್ಣು, ಹೋರಿಕಣ್ಣು, ದುಷ್ಟರ ಕಣ್ಣು ಎಂಬಂತೆ ಆ ದೇಶಕ್ಕೆ ಶನಿಯ ಹಾಗೆಯೇ ವಕ್ಕರಿಸಿದ್ದು ಆ ದೇಶದ ರಾಜಕೀಯ, ರಾಜಕಾರಣಿಗಳು ಮತ್ತು ರಾಜನೀತಿ.

ಶ್ರೀಮಂತ ದೇಶ

ಹಿಂದೊಮ್ಮೆ ಆರ್ಥಿಕತೆಯಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ವೆನಿಜುವೆಲಾ ದೇಶ. ಹಣವನ್ನ ಸರಿಯಾಗಿ ಬಳಸದೆ ಅಲ್ಲಿನ ರಾಜಕೀಯ ಪಕ್ಷಗಳು ಅದನ್ನು ವೋಟ್​ ಬ್ಯಾಂಕ್​ ರಾಜಕಾರಣಕ್ಕಾಗಿ ಬಳಸಿಕೊಂಡು ಜನರಿಗೆ ಉಚಿತ ಯೋಜನೆಗಳನ್ನು ಜಾರಿಗೆಗೊಳಿಸಿದರು.

publive-image

ಉಚಿತ.. ಉಚಿತ!

ಅಲ್ಲಿನ ಜನರಿಗೆ ಸರ್ಕಾರದ ವತಿಯಿಂದ ಮನೆ ಕಟ್ಟಿಕೊಡಲಾಯಿತು. ಆಹಾರ ಧಾನ್ಯ, ಗ್ಯಾಸ್​, ಪೆಟ್ರೋಲ್​, ಔಷಧಿ ಹೀಗೆ ಉಚಿತ ನೀಡಲಾಯಿತು. ಸರ್ಕಾರದಿಂದ ಉಚಿತವನ್ನು ಪಡೆದುಕೊಳ್ಳುತ್ತಾ ಜನರು ಕೊನೆಗೆ ಸೋಮಾರಿಯಾದರು.

ಜನರು ಕೆಲಸ ಮಾಡದೆ ಸೋಮಾರಿಯಾದರು ಸರ್ಕಾರ ಅವರಿಗೆ ನಿರುದ್ಯೋಗ ಭತ್ಯೆ ನೀಡಿತು. ಅಷ್ಟು ಮಾತ್ರವಲ್ಲ, ಆಡಳಿತಕ್ಕೆ ಬಂದ ಹೊಸ ಪಕ್ಷವೊಂದು ಮತ್ತೆ ಹೊಸ ಯೋಜನೆಗಳೊಂದಿಗೆ ಉಚಿತ ಸೌಲಭ್ಯವನ್ನು ನೀಡಿತು. ಅಲ್ಲಿದ್ದ ಸರ್ಕಾರಿ ನೌಕರರಿಗಂತೂ 5 ಪಟ್ಟು ವೇತನವನ್ನು ನೀಡಲಾಯಿತು. ಕೊನೆ ಕೊನೆಗೆ ಇದುವೇ ಸರ್ಕಾರಕ್ಕೆ ಮುಳುವಾಗಿದ್ದಲ್ಲದೆ ಆರ್ಥಿಕ ಹೊರೆಯಾಗಿತು.

ಬದುಕು ಬೀದಿ ಪಾಲು

ಆಹಾರ ಉತತ್ಪನ್ನಗಳಿಗೆ ಸರ್ಕಾರವೇ ಬೆಲೆ ನಿಗದಿ ಮಾಡಲು ಮುಂದಾಯಿತು. ಇದರಿಂದ ವ್ಯಾಪಾರ, ವ್ಯವಹಾರ ನಡೆಸುತ್ತಿದ್ದ ವ್ಯಾಪಾರಿಗಳ ಬದುಕು ಬೀದಿ ಪಾಲಾಯಿತು. ಕೊನೆಗೆ ದೈನಂದಿನ ಉತ್ಪನ್ನಗಳ ಬಳಕೆಗೆ ಬೇಕಾದ ವಸ್ತುಗಳಿಗಾಗಿ ಬೇರೆ ದೇಶಗಳಿಗೆ ಕೈಚಾಚುವ ಪರಿಸ್ಥಿತಿ ಬಂತು.

publive-image

ಒಂದೆಡೆ ಜನರು ಉಚಿತ ಸೌಲಭ್ಯ ಬಳಸಿಕೊಂಡರೆ, ಅತ್ತ ವೆನಿಜುವೆಲಾ ಮಾತ್ರ ವಿದೇಶದಿಂದ ಸಾಲ ಪಡೆಯುತ್ತಲೇ ಬಂತು. ಇಂಥಾ ಹೊಡೆತಕ್ಕೆ ಮುಗ್ಗರಿಸಿದ್ದ ವೆನಿಜುವೆಲಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಆರ್ಥಿಕ ಹೊಡೆತಕ್ಕೆ ಸಿಲುಕಿತು. ಕಾರಣ ಪೆಟ್ರೋಲಿಯಂ ಬೆಲೆ ಗಣನೀಯವಾಗಿ ಇಳಿಕೆಯಾಯಿತು.

ಹಣದುಬ್ಬರ

ಒಂದು ಕಾಲದಲ್ಲಿ ಪೆಟ್ರೋಲಿಯಂ ಮೂಲದ ಶ್ರೀಮಂತ ದೇಶವೆನಿಸಿಕೊಂಡಿದ್ದ ವೆನಿಜುವೆಲಾ ಇದರಿಂದ ಪಾರಾಗಲು ಮತ್ತೊಂದು ಐಡಿಯಾ ಮಾಡಿತು. ಅದೇನೆಂದರೆ ನೋಟು ಮುದ್ರಣದತ್ತ ತನ್ನ ಚಿತ್ತ ಹರಿಸಿತು. ಆದರೆ ಇಲ್ಲೂ ಹೊಡೆತ ತಿಂದ ವೆನಿಜುವೆಲಾ ನೋಟು ಮುದ್ರಿಸಿ ಚಲಾವಣೆ ಮಾಡಿದ ಕಾರಣ ಹಣದುಬ್ಬರ ಬಂತು. ಕೊನೆಗೆ ಹಣದ ಮೌಲ್ಯ ತೀರಾ ಕಡಿಮೆಯಾಯಿತು.

ಅಚ್ಚರಿಯ ಸಂಗತಿ ಎಂದರೆ ಭಾರತದ 20 ರೂಪಾಯಿ ಅಲ್ಲಿನ 1 ಲಕ್ಷಕ್ಕೆ ಸಮವಾಯಿತು. ಇವೆಲ್ಲಾ ಕಷ್ಟಗಳನ್ನು ಅನುಭವಿಸಿದ್ದ ಜನರು ಕೊನೆಗೆ ದೇಶಬಿಟ್ಟು ವಲಸೆ ಹೋಗಲು ಶುರು ಮಾಡಿದರು. ಆದರೆ ಇಷ್ಟೆಲ್ಲಾ ದುರ್ಗತಿಗೆ ಕಾರಣವಾಗಿದ್ದು ಮತ್ಯಾವುದು ಅಲ್ಲ ರಾಜಕೀಯ, ರಾಜಕಾರಣಿ ಮತ್ತು ರಾಜನೀತಿ.

publive-image

ಅಂದು ಶ್ರೀಮಂತ್ರ ದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ವೆನಿಜುವೆಲಾ ಇಂದು ಬಡರಾಷ್ಟ್ರಗಳ ಸಾಲಿನಲ್ಲಿದೆ. ಅಂದು ತಿಂದ ಹೊಡೆತವನ್ನು ಇಂದು ಸರಿಪಡಿಸಲು ಶ್ರಮಿಸುತ್ತಿದೆ. ಆದರೆ ಉಚಿತ ಸೌಲಭ್ಯದಿಂದ ದೇಶವೇ ದಿವಾಳಿಯಾದ ನೈಜ ಘಟನೆಯೇ ಕಣ್ಣ ಮುಂದಿದೆ. ಇಂದು ಕರ್ನಾಟಕವನ್ನು ಗಮನಿಸಿದರೆ ಉಚಿತ ಯೋಜನೆಗಳ ಮೂಲಕ ಕಾಂಗ್ರೆಸ್​ ಸರ್ಕಾರ ಸುಪರ್ದಿಗೆ ಬಂದಿದೆ. ಆದರೆ ಇದು ಜನರನ್ನು ಸೋಮಾರಿನ್ನಾಗಿಸುತ್ತದೆಯಾ? ಎಂಬ ಅನುಮಾನ ಕಾಡುತ್ತಿದೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment