newsfirstkannada.com

ಇದು ಪ್ರೇಮಿಗಳ ದಿನಾಚರಣೆಗೆ ಬಂದ ಪ್ರಿಯತಮ ಕಳ್ಳನಾದ ಕತೆ! ಆತನ ಮಾತು ಕೇಳಿ ಮಹಿಳಾ ಪೇದೆ ಶಾಕ್​

Share :

Published February 16, 2024 at 1:55pm

Update February 16, 2024 at 2:29pm

  ವ್ಯಾಲೆಂಟೈನ್ಸ್​ ಡೇಗೆ ಪ್ರೇಯಸಿಯನ್ನು ಕಾಣಲು ಬಂದ ಯುವಕ

  ಬೇರೊಬ್ಬನೊಂದಿಗೆ ಯುವತಿಯನ್ನು ಕಂಡು ಶಾಕ್​ ಆದ ಪ್ರಿಯಕರ

  ಅಸಲಿ ವಿಚಾರ ಏನು ಗೊತ್ತಾ? ಪೊಲೀಸರ ಬಳಿ ಆತ ಹೇಳಿದ್ದೇನು?

ಪ್ರೇಮಿಗಳ ದಿನಾಚರಣೆಗೆ ಬಂದ ಪ್ರಿಯತಮನೋರ್ವ ಕಳ್ಳನಾದ ಕತೆ ಅಶೋಕ ನಗರದಲ್ಲಿ ಬೆಳಕಿಗೆ ಬಂದಿದೆ. ರಾಯಚೂರಿನಿಂದ ಪ್ರೇಯಸಿಯನ್ನ ನೋಡಲು ಬಂದಿದ್ದ ಯುವಕ ಸಂಚಾರಿ ಮಹಿಳಾ ಕಾನ್ಸ್ಟೇಬಲ್ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದರೆ ಕಳ್ಳನ ಕತೆ ಕೇಳಿದ ಬಳಿಕ ಆತನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಅಂದಹಾಗೆಯೇ ಕಳ್ಳ ಪೊಲೀಸರ ಬಳಿ ಏನು ಹೇಳಿದ್ದಾನೆ ಗೊತ್ತಾ?

ಪ್ರೇಮಿಯೋರ್ವ ರಾಯಚೂರಿನಿಂದ ಅಶೋಕ್ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಪ್ರಿಯತಮೆಯನ್ನು ನೋಡಲು ಬಂದಿದ್ದಾನೆ. ವ್ಯಾಲೆಂಟೈನ್ಸ್​ ಡೇಗೆ ಒಂದು ದಿನ ಮುಂಚಿತವಾಗಿ ಯುವತಿಗೆ ಸರ್ಪ್ರೈಸ್ ನೀಡಲು ಕಾಲೇಜು ಬಳಿ ಆಗಮಿಸಿದ್ದಾನೆ. ಈ ವೇಳೆ ಯುವತಿ ಜೊತೆ ಬೇರೊಂದು ಯುವಕನನ್ನ ಕಂಡು ಆತ ಶಾಕ್ ಆಗಿದ್ದಾನೆ.

ಪ್ರಿಯತಮೆ ಮತ್ತೊಬ್ಬ ಯುವಕನೊಂದಿಗೆ ಆತ್ಮೀಯವಾಗಿ ಇದ್ದದ್ದು ಕಂಡು ರೊಚ್ಚಿಗೆದ್ದಿದ್ದಾನೆ. ಮಾತ್ರವಲ್ಲದೆ ಪ್ರೇಯಸಿ ಬಳಿ ಸ್ಥಳದಲ್ಲೇ ಪ್ರಶ್ನೆ ಮಾಡಿ ಜಗಳ ಮಾಡಿದ್ದಾನೆ. ನಂತರ ಆ ಯುವಕ ನನ್ನ ಪ್ರಿಯಕರ ಅಲ್ಲ ಎಂದು ಯುವತಿ ಹೇಳಿದ್ದಾಳೆ. ಈ ವೇಳೆ ಪ್ರಿಯಕರ ಹಾಗಾದ್ರೆ ನಿನ್ನ ಮೊಬೈಲ್ ಕೊಡು ಚೆಕ್ ಮಾಡ್ತೀನಿ ಎಂದು ಹೇಳಿದ್ದಾನೆ. ಪ್ರಿಯತಮೆಯ ಮೊಬೈಲ್ ಕಸಿದು ಚೆಕ್ ಮಾಡಲು ಮುಂದಾಗಿದ್ದಾನೆ.

ಮೊಬೈಲ್​ ಕಿತ್ತುಕೊಂಡು ಓಡಿದ

ಈ ವೇಳೆ ಪ್ರಿಯತಮೆ ಮೊಬೈಲ್ ವಾಪಸ್ ಕೊಡುವಂತೆ ಜೋರಾಗಿ ಚೀರಿದ್ದಾಳೆ. ಆಕೆ ಚೀರುತ್ತಿದ್ದಂತೆ ಮೊಬೈಲ್ ನೊಂದಿಗೆ ಅಲ್ಲಿಂದ ಆತ ಓಡಿದ್ದಾನೆ. ಪ್ರಿಯಕರನ ಹಿಂದೆ ಯುವತಿಯ ಮತ್ತೊಬ್ಬ ಗೆಳೆಯನು ಓಡಿದ್ದಾನೆ.

ಆತನನ್ನು ಚೇಸ್​ ಮಾಡಿದ ಮಹಿಳಾ ಪೇದೆ

ಈ ವೇಳೆ ಅಲ್ಲೇ ಇದ್ದ ಅಶೋಕ್ ನಗರ ಸಂಚಾರಿ ಮಹಿಳಾ ಕಾನ್ಸ್ಟೇಬಲ್ ಷಾಜಿಯಾ ತಬಸುಂ ನೋಡಿದ್ದಾರೆ. ಕೂಡಲೇ ಅಶೋಕ್ ನಗರ ಠಾಣಾ ವ್ಯಾಪ್ತಿಯ ಕ್ಯಾಷ್ ಫಾರ್ಮಾಸಿ ಜಂಕ್ಷನ್ ಬಳಿ ಪ್ರಿಯಕರನ ಬೆನ್ನು ಹತ್ತಿದ್ದಾರೆ. ಆತನನ್ನು ಕಳ್ಳ ಎಂದು ತಿಳಿದು ಚೇಸ್ ಮಾಡಿ ಹಿಡಿದಿದ್ದಾರೆ. ಬಳಿಕ ಅಶೋಕ್ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಂತರ ಯುವಕನನ್ನ ವಿಚಾರಣೆ ಮಾಡಿದ ಬಳಿಕ ಅಸಲಿ ವಿಚಾರ ಬಯಲಿಗೆ ಬಂದಿದೆ. ನಂತರ ಅಶೋಕ್ ನಗರ ಪೊಲೀಸರು ಯುವತಿ ಹಾಗೂ ಪ್ರಿಯಕರನಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಪ್ರೇಮಿಗಳ ದಿನಾಚರಣೆಗೆ ಬಂದ ಪ್ರಿಯತಮ ಕಳ್ಳನಾದ ಕತೆ! ಆತನ ಮಾತು ಕೇಳಿ ಮಹಿಳಾ ಪೇದೆ ಶಾಕ್​

https://newsfirstlive.com/wp-content/uploads/2024/02/Lover-1.jpg

Load More