/newsfirstlive-kannada/media/post_attachments/wp-content/uploads/2024/11/RCB.jpg)
ಮುಂದಿನ ಮಾರ್ಚ್​ 14 ರಿಂದ ಐಪಿಎಲ್​ ಹಬ್ಬ ಶುರುವಾಗಲಿದೆ. ಅದಕ್ಕಾಗಿ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ನಡೆಸ್ತಿವೆ. ಮೆಗಾ ಹರಾಜು ಮುಗಿದಿದ್ದು, ಇನ್ನೇನಿದ್ದರೂ ಅಖಾಡಕ್ಕೆ ಇಳಿಯೋದು ಒಂದೇ ಬಾಕಿಯಿದೆ. ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್ ಕಿಂಗ್ಸ್​ ಹೆಚ್ಚು ಬಾರಿ ಟ್ರೋಫಿಯನ್ನು ಗೆದ್ದುಕೊಂಡಿವೆ. ಕೆಲವು ತಂಡಗಳು ಐಪಿಎಲ್ ಇತಿಹಾಸದಲ್ಲೇ ಅತೀ ಕೆಟ್ಟ ದಾಖಲೆಗಳನ್ನು ಬರೆದಿವೆ.
2008 ರಿಂದ ಆರ್​ಸಿಬಿ ಐಪಿಎಲ್ ಆಡ್ತಿದೆ. ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ ಒಮ್ಮೆ ರನ್ನರ್​ ಅಪ್​​​ ಆಗಿದೆ. 2016ರಲ್ಲಿ ಫೈನಲ್​​ನಲ್ಲಿ ಹೈದರಾಬಾದ್​ ವಿರುದ್ಧ ಆರ್​ಸಿಬಿ ಸೋಲನ್ನು ಕಂಡಿತು. ಆರ್​ಸಿಬಿ ಇಲ್ಲಿವರೆಗೆ ಕಪ್ ಗೆಲ್ಲದಿರಬಹುದು. ಆದರೆ ಪ್ರದರ್ಶನ ಉತ್ತಮವಾಗಿಯೇ ಇದೆ. ಐಪಿಎಲ್ ತಿಹಾಸದಲ್ಲೇ ಅತೀ ವರ್ಸ್ಟ್​​ ತಂಡ ಅಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್.
ಜಿಎಂಆರ್ ಗ್ರೂಪ್ ಮತ್ತು ಜೆಎಸ್​ಡಬ್ಲ್ಯೂ ಸ್ಪೋರ್ಟ್​ ಮಾಲೀಕತ್ವದ ಈ ಫ್ರಾಂಚೈಸಿ ಕೂಡ 2008ರಿಂದ ಐಪಿಎಲ್ ಆಡ್ತಿದೆ. ಡೆಲ್ಲಿ ಕ್ಯಾಪಿಟಲ್ಸ್​ 2020ರಲ್ಲಿ ಫೈನಲ್ ಪ್ರವೇಶ ಮಾಡಿತ್ತು. ಮುಂಬೈ ಇಂಡಿಯನ್ಸ್​ ವಿರುದ್ಧ ಸೋಲನ್ನು ಕಂಡಿತು. ಅಂದ್ಹಾಗೆ ಅತೀ ಕಳಪೆ ಪ್ರದರ್ಶ ನೀಡಿರುವ ತಂಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಮೊದಲ ಸ್ಥಾನ. ಇಲ್ಲಿಯವರೆಗೆ ಐಪಿಎಲ್ ಟ್ರೋಫಿಯನ್ನು ಒಮ್ಮೆಯೂ ಗೆದ್ದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಪ್ಲೇಆಫ್​ ಪ್ರವೇಶ ಮಾಡಿಲ್ಲ.
ಅತೀ ಹೆಚ್ಚು ಪಂದ್ಯಗಳನ್ನು ಸೋತ ತಂಡ
2020ರಲ್ಲಿ ಫೈನಲ್ ಪ್ರವೇಶ ಸೇರಿ ನಾಲ್ಕು ಬಾರಿ ಮಾತ್ರ ಪ್ಲೇ-ಆಫ್ ಪವೇಶ ಮಾಡಿದೆ. ಮೊದಲ ಎರಡು ಸೀಸನ್​​ಗಳಲ್ಲಿ ಪ್ಲೇ-ಆಫ್ ಪ್ರವೇಶ ಮಾಡಿತ್ತು. 2009, 2009ರಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಜೊತೆಗೆ 2012 ಹಾಗೂ 2019ರಲ್ಲಿ ಪ್ಲೇ-ಆಫ್​​ ಪ್ರವೇಶ ಮಾಡಿತ್ತು. ಇನ್ನು ಸೋಲೋದ್ರಲ್ಲೂ ಕೂಡ ಡೆಲ್ಲಿ ಕ್ಯಾಪಿಟಲ್ಸ್​ ಮುಂದಿದೆ. ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್​ ತಂಡವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.
ಇಲ್ಲಿಯವರೆಗೆ 252 ಐಪಿಎಲ್ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 134 ಪಂದ್ಯಗಳಲ್ಲಿ ಸೋತು 112ರಲ್ಲಿ ಗೆದ್ದುಕೊಂಡಿದೆ. ವಿನ್ನಿಂಗ್​​ ಪರ್ಸಂಟೇಜ್ 44.44 ಇದೆ. ಪಂಜಾಬ್ ಕಿಂಗ್ಸ್​ 246 ಪಂದ್ಯಗಳಲ್ಲಿ 133 ರಲ್ಲಿ ಸೋತಿದೆ. 109 ಪಂದ್ಯಗಳನ್ನು ಗೆದ್ದುಕೊಂಡಿದ್ದು, ವಿನ್ನಿಂಗ್​ ಪರ್ಸಂಟೇಜ್ 44.3 ಇದೆ. ಪಿಬಿಕೆಎಸ್​ ಕಳೆದ 9 ವರ್ಷಗಳಿಂದ ಪ್ಲೇ-ಆಫ್​ ಪ್ರವೇಶ ಮಾಡಿಲ್ಲ. ಆರ್​ಸಿಬಿ 256 ಪಂದ್ಯಗಳನ್ನು ಆಡಿದ್ದು, 121 ಗೇಮ್​​ನಲ್ಲಿ ಗೆಲುವು ಸಾಧಿಸಿದೆ. 128ರಲ್ಲಿ ಸೋಲನ್ನು ಅನುಭವಿಸಿದೆ. ವಿನ್ನಿಂಗ್ ಪರ್ಸಂಟೇಜ್ 47.26 ಇದೆ. ಧೋನಿ ತಂಡ ಸಿಎಸ್​ಕೆ 239 ಒಂದ್ಯಗಳಲ್ಲಿ 138ರಲ್ಲಿ ಗೆಲುವು ಸಾಧಿಸಿ, 98 ಪಂದ್ಯಗಳಲ್ಲಿ ಸೋತಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್