/newsfirstlive-kannada/media/post_attachments/wp-content/uploads/2024/12/KANJIVARAM-SAREE.jpg)
ಸೀರೆ ಅನ್ನೋದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ಸೀರೆಗೂ ಹಾಗೂಈ ದೇಶದ ನಾರಿಗೂ ಸಹಸ್ರಾರು ವರ್ಷಗಳ ನಂಟು ಇದೆ. ಸೀರೆ ಖರೀದಿಯಿಲ್ಲದೇ ಯಾವು ಹಬ್ಬವನ್ನಾಗಲಿ, ಧಾರ್ಮಿಕ ಕಾರ್ಯಕ್ರಮಗಳಾಗಲಿ, ಮದುವೆ ಮುಂಜಿವೆಗಳಾಗಲಿ ಪರಿಪೂರ್ಣಗೊಳ್ಳುವುದೇ ಇಲ್ಲ. ಭಾರತದಲ್ಲಿ ನಮಗೆ ಅಸಂಖ್ಯಾತ ರೀತಿಯ, ವಿನ್ಯಾಸದ ಹಾಗೂ ದುಬಾರಿ ಸೀರೆಗಳು ಕಾಣಲು ಸಿಗುತ್ತವೆ ಆದ್ರೆ ಈ ಕಾಂಜಿವರಂ ಗೋಲ್ಡ್ ಸಿಲ್ಕ್ ಸೀರೆಯಿದೆಯಲ್ಲ ಇದರ ಎದುರು ಯಾವ ಸೀರೆಯೂ ಕೂಡ ಸ್ಪರ್ಧೆ ಮಾಡುವ ಮಟ್ಟಕ್ಕೆ ಬೆಳೆದಿಲ್ಲ.
ಇದು ಈ ದೇಶದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ಸೀರೆ. ಇದಕ್ಕೆ ಬಳಸುವ ಸಾಮಗ್ರಿಗಳು ಹಾಗೂ ಇದನ್ನು ಸಿದ್ಧಗೊಳಿಸುವ ಕಲೆಗಾರಿಕೆಯಿಂದಲೇ ಈ ಸೀರೆಯು ಐಷಾರಾಮಿಯ ಗುರುತಾಗಿ ಇಂದಿಗೂ ನಿಂತಿದೆ. ಇದರ ಬೆರಗುಗೊಳಿಸುವ ಬಂಗಾರದ ಹೊಳಪು ಹಾಗೂ ಮೈಮೇಲೆ ಇದು ಕಾಣಿಸಿಕೊಳ್ಳುವ ರೀತಿಯಿಂದಾಗಿಯೇ ಅನೇಕ ಸೆಲೆಬ್ರೆಟಿಗಳ ಫೆವರೆಟ್ ಸಾರಿಗಳಲ್ಲಿ ಮೊದಲ ಪಟ್ಟಿಯಲ್ಲಿ ನಿಂತುಕೊಳ್ಳುತ್ತದೆ.
ಇದನ್ನೂ ಓದಿ:VIDEO: ಹಲ್ಲು ಕೀಳಿಸಿ ಚಿನ್ನದ ಹಲ್ಲು ಹಾಕಿಸಿಕೊಂಡ ಭೂಪ; ಭಾರತದಲ್ಲಿ ಈ ರೀತಿ ಇರೋದು ಇವನೊಬ್ಬನೇ!
ಇದು ಕೇವಲ ಐಷಾರಾಮಿ ಗುರುತಾಗಿ ಕಾಣಿಸಿಕೊಂಡಿಲ್ಲ. ವಿಶೇಷ ಸಂದರ್ಭಗಳಲ್ಲಿ ಇದೊಂದು ಘನತೆಯ ಗುರುತಾಗಿಯೂ ಕೂಡ ಕಾಣುತ್ತದೆ. ಅದರಲ್ಲೂ ಐಶ್ವರ್ಯವಂತ ಹೆಣ್ಣು ಮಕ್ಕಳ ಅತ್ಯಂತ ನೆಚ್ಚಿನ ಸೀರೆ ಅಂದ್ರೆ ಅದು ಕಾಂಜಿವರಂ ಸೀರೆಯೇ.
ಇದನ್ನೂ ಓದಿ:ಬೆಂಗಳೂರಿಗೆ ಬಂದು ಸೀರೆ ಖರೀದಿಸಿದ ನೀತಾ ಅಂಬಾನಿ; ಏನಿದರ ವಿಶೇಷ? ವಿಡಿಯೋ ಫುಲ್ ವೈರಲ್!
ಭಾರತದ ಉದ್ಯಮಿ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿಯವರಿಗೆ ಕಾಂಜಿವರಂ ಸೀರೆ ಅಂದ್ರೆ ಬಲು ಅಚ್ಚುಮೆಚ್ಚು. ಇತ್ತೀಚೆಗಷ್ಟೇ ಅವರು ಬೆಂಗಳೂರಿಗೆ ಭೇಟಿ ನೀಡಿ. 600 ವರ್ಷಗಳ ಪರಂಪರೆಯಿರುವ ಸೀರೆ ಅಂಗಡಿಗೆ ಹೋಗಿ ಕಾಂಜಿವರಂ ಸೀರೆಯನ್ನು ಖರೀದಿ ಮಾಡಿ ಬಂದಿದ್ದು ನ್ಯೂಸ್ಫಸ್ಟ್ನಲ್ಲಿ ವರದಿ ಮಾಡಿದ್ದೇವು. ಅನೇಕ ಕಾರ್ಯಕ್ರಮಗಳಲ್ಲಿ, ಇವೆಂಟ್ಗಳಲ್ಲಿ ನೀತಾ ಅಂಬಾನಿ ಈ ಕಾಂಜಿವರಂ ಸೀರೆಯಲ್ಲಿ ಮಿಂಚಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದ್ದು ಇದೆ. ನೀತಾ ಅಂಬಾನಿ ಸೀರೆ ವಿಷಯಕ್ಕೆ ಬಂದಾಗ ಮೊದಲ ಆದ್ಯತೆ ನೀಡುವುದೇ ಕಾಂಜಿವರಂ ಸೀರೆಗೆ.
ಇನ್ನು ಬಾಲಿವುಡ್ನ ಎವಗ್ರೀನ್ ಬ್ಯೂಟಿ ಎಂದು ಕರೆಸಿಕೊಳ್ಳುವ ರೇಖಾ ಅವರಿಗೂ ಕೂಡ ಕಾಂಜಿವರಂ ಸೀರೆ ಎಂದರೆ ಬಲು ಅಚ್ಚುಮೆಚ್ಚು. ಕಾಂಜಿವರಂ ಸೀರೆಯಲ್ಲಿ ರೇಖಾ ಅವರು ಸಾಕಷ್ಟು ಬಾರಿ ಕ್ಯಾಮರಾಗಳ ಎದುರು ಬಂದಿದ್ದಾರೆ. ಅವರ ಸೌಂದರ್ಯದ ಸೊಬಗನ್ನು ಮತ್ತಷ್ಟು ಹೆಚ್ಚಿಸುವ ರೀತಿ ಅವರಿಗೆ ಕಾಂಜಿವರಂ ಸೀರೆ ಒಪ್ಪುತ್ತದೆ. ಕೇವಲ ರೇಖಾ ಮತ್ತು ನೀತಾ ಅಂಬಾನಿ ಮಾತ್ರವಲ್ಲ, ಐಶ್ವರ್ಯ ರೈ ಬಚ್ಚನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಹೀಗೆ ಹಲವು ಬಾಲಿವುಡ್ ನಟಿಯರ ನೆಚ್ಚಿನ ಸೀರೆ ಅಂದ್ರೆ ಅದು ಕಾಂಜಿವರಂ ಗೋಲ್ಡ್ ಸಾರಿ.
ಈ ಒಂದು ಸೀರೆಗೆ ಇಷ್ಟೊಂದು ಡಿಮ್ಯಾಂಡ್ ಹಾಗೂ ಇಷ್ಟೊಂದು ಐಷಾರಾಮಿ ಗುರುತು ಸಿಕ್ಕಿದ್ದೇ ಅದು ತಯಾರಾಗುವ ರೀತಿಯಲ್ಲಿ. ಕಾಂಜಿವರಂ ಸೀರೆಯನ್ನು ಅಕ್ಷರಶಃ ಕೈಯಿಂದಲೇ ಸಿದ್ಧಗೊಳಿಸಲಾಗುತ್ತದೆ. ಇದು ಸಿದ್ಧಗೊಳ್ಳುವ ಪ್ರಕ್ರಿಯೇ ಸಿಕ್ಕಾಪಟ್ಟೆ ನಿಧಾನ. ಇದನ್ನು ತಯಾರಿಸಲು ಕೌಶಲ್ಯವೇ ಪ್ರಧಾನ. ನುರಿತ ನೇಕಾರ ಮಾತ್ರ ಒಂದು ಅದ್ಭುತ ಕಾಂಜಿವರಂ ಸೀರೆಯನ್ನು ಸಿದ್ಧಪಡಿಸಬಲ್ಲ. ಒಂದೊಂದು ಪ್ಯಾಟರ್ನ್ನನ್ನು ಕೂಡ ಬಲು ಎಚ್ಚರಿಕೆಯಿಂದ ನೇಯ್ದು ತಯಾರಿಸಬೇಕಾಗುತ್ತದೆ. ಆಮೇಲೆ ಈ ಒಂದು ಸಾರಿಯನ್ನು ಸಿದ್ಧಗೊಳಿಸಲು ಬಳಸುವ ಸಾಮಗ್ರಿಗಳು ಕೂಡ ಅತ್ಯಂತ ಶ್ರೇಷ್ಠಮಟ್ಟದ್ದವು ಆಗಿರುತ್ತವೆ. ಕಾಂಜಿವರಂ ಗೋಲ್ಡ್ ಸಿಲ್ಕ್ ಸಾರಿಗಳ ಆರಂಭಿಕ ಬೆಲೆಯೇ 15 ಸಾವಿರದಿಂದ ಶುರುವಾಗುತ್ತದೆ.
ಇದನ್ನೂ ಓದಿ: 50 ಸೆಕೆಂಡ್ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿ ಯಾರು? ದೀಪಿಕಾ ಅಲ್ಲ, ಆಲಿಯಾ ಅಲ್ಲ!
ಕಾಂಜಿವರಂ ಸೀರೆಯ ಪ್ರಮುಖ ಗುಣವೇ ಅದರ ಹೊಳಪು. ದೂರದಿಂದ ನೋಡಿದರೆ ಇದು ಅಕ್ಷರಶಃ ಬಂಗಾರದಿಂದಲೇ ಸಿದ್ಧಗೊಂಡಿರುವ ಸೀರೆ ಇರಬೇಕು ಎನ್ನುವಷ್ಟು ಸೊಬಗನ್ನು ಅದು ಹೊತ್ತುಕೊಂಡಿದೆ. ಅದಕ್ಕೆ ಕಾರಣ ಅದನ್ನು ತಯಾರು ಮಾಡುವಾಗ ಉಪಯೋಗಿಸುವ ಕೌಶಲ್ಯ ಹಾಗೂ ಅತ್ಯಂತ ಶ್ರೇಷ್ಠವಾದ ಸಾಮಗ್ರಿಗಳು
ಈಗಾಗಲೇ ಹೇಳಿದಂತೆ ಕಾಂಜಿವರಂ ಸೀರೆಗಳ ಬೆಲೆ ಶುರುವಾಗುವುದೇ 15 ಸಾವಿರ ರೂಪಾಯಿಯಿಂದ. 15 ಸಾವಿರ ರೂಪಾಯಿಂದ 4 ಲಕ್ಷ ರೂಪಾಯಿವರೆಗೂ ಇವೆ. ಡಿಸೈನ್ ಹಾಗೂ ಸೀರೆಯಲ್ಲಿರುವ ಅಂಶಗಳು ಸೀರೆಯ ಬೆಲೆಯನ್ನು ನಿರ್ಧರಿಸುತ್ತವೆ. ಆದರೆ ಮಾರುಕಟ್ಟೆ ಅನ್ನೋದು ಈಗ ಅಗ್ಗದ ಬೆಲೆಯಲ್ಲಿ ಮಾರಿ ಲಾಭ ಮಾಡಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ನಕಲಿ ವರ್ಷನ್ಗಳು ಎಲ್ಲಿ ಬೇಕಾದರು ನಿಮಗೆ ಸಿಗಬಹುದು. ಆದ್ರೆ ಒಂದು ನೆನಪಿರಲಿ, ಕಾಂಜಿವರಂ ಸೀರೆಯನ್ನು ನೀವು ಅದರ ಭಾರದ ಮೇಲೆಯೇ ಕಂಡು ಹಿಡಿಯಬಹುದು. ಶುದ್ಧ ಕಾಂಜಿವರಂ ಸೀರೆ ನೀವು ಆಶ್ಚರ್ಯಗೊಳ್ಳಬೇಕು ಅಷ್ಟು ಹಗುರವಾಗಿ ಇರುತ್ತದೆ. ಅದರ ಗುಣಮಟ್ಟವೇ ಅದರ ಶುದ್ಧತೆಯನ್ನು ಸಾರಿ ಸಾರಿ ಹೇಳುತ್ತದೆ ಹೀಗಾಗಿ, ಕಡಿಮೆ ಬೆಲೆಗೆ ಸಿಗುವ ಕಾಂಜಿವರಂ ಸೀರೆ ಎಂದು ಮೋಸ ಹೋಗಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ