/newsfirstlive-kannada/media/post_attachments/wp-content/uploads/2024/12/BURJ-AL-ARAB.jpg)
ದುಬೈ ಅಂದ ತಕ್ಷಣ ನಮಗೆ ಮೊದಲು ನೆನಪಾಗುವ ಶಬ್ದವೇ ಲ್ಯಾವೀಶ್ ಪ್ರಪಂಚ. ಅಲ್ಲಿನ ಪಟ್ಟಣಗಳಿಗೆ ಬೇರೆಯದ್ದೇ ರಂಗು ಇದೆ. ಅಲ್ಲಿನ ಒಂದೊಂದು ಕಟ್ಟಡವೂ ಒಂದೊಂದು ಇತಿಹಾಸವನ್ನು ಹೇಳುತ್ತೆ. ವೈಭವದ, ಅದ್ಧೂರಿತನದ ಬದುಕನ್ನೇ ಹಾಸಿ ಹೊದ್ದುಕೊಂಡು ಮಲಗಿರುವ ದೇಶ ಅಂದ್ರೆ ಅದು ದುಬೈ. ಮರಳುಗಾಡು, ಅಲ್ಲಿನ ಬುರ್ಜ್ ಖಲೀಫಾ ಕಟ್ಟಡ, ಪಾಲ್ಮಾ ಐಲ್ಯಾಂಡ್ ಹೀಗೆ ದುಬೈಯನ್ನು ವರ್ಣಿಸುವ ವೇಳೆ ಮತ್ತೊಂದು ಹೆಸರು ನೆನಪಿಗೆ ಬರೋದು ಬುರ್ಜ್ ಅಲ್ ಅರಬ್.. ಇದು ವಿಶ್ವದ ಏಕೈಕ ಟೆನ್ ಸ್ಟಾರ್ ಹೋಟೆಲ್. ಬುರ್ಜ್ ಅಲ್ ಅರಬ್ ತನ್ನ ಕಟ್ಟಡದ ವಿನ್ಯಾಸ ಹಾಗೂ ಅದ್ಧೂರಿತನದ ಆತಿಥ್ಯಕ್ಕೆ ವಿಶ್ವದಲ್ಲಿಯೇ ಹೆಸರುವಾಸಿ.
1999ರಲ್ಲಿ ಶುರುವಾದ ಈ ಹೋಟೆಲ್ನ್ನು ಮಾನವ ನಿರ್ಮಿತ ದ್ವೀಪ ಅಂತಲೇ ಇದನ್ನು ಕರೆಯುತ್ತಾರೆ. ಅಂದಿನ ಕಾಲದಲ್ಲಿಯೇ ಇದನ್ನು 100 ಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ದುಬೈನ ಈ ಬುರ್ಜ್ ಅಲ್ ಅರಬ್ ಅದ್ಧೂರಿತನ ಗುರುತು. ಈ ಹೋಟೆಲ್ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು 10 ಲಕ್ಷ ರೂಪಾಯಿ ಬೇಕು. ಈ ಹೋಟೆಲ್ ಬುಕ್ ಮಾಡುವ ಅತಿಥಿಗಳನ್ನು ಹೆಲಿಕಾಪ್ಟರ್ ಇಲ್ಲವೇ ರೋಲ್ಸ್ ರಾಯ್ಸ್ ಕಾರ್ನಲ್ಲಿ ಕರೆದುಕೊಂಡು ಬರಲಾಗುತ್ತದೆ. ಈ ಹೋಟೆಲ್ನ ಇನ್ನೊಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿವೆ.
ಇದನ್ನೂ ಓದಿ:ಜೈಲಿನಿಂದ ಎಸ್ಕೇಪ್ ಆದ್ರೂ ಬರೋಬ್ಬರಿ 6 ಸಾವಿರ ಕೈದಿಗಳು.. ಆಮೇಲೆ ಆಗಿದ್ದೇನು?
ಬುರ್ಜ್ ಅಲ್ ಅರಬ್ನಲ್ಲಿ ಉಳಿದುಕೊಳ್ಳುವುದೇ ಐಷಾರಾಮಿ ಬದುಕಿನ ಒಂದು ಗುರುತು. ಇಲ್ಲಿ ರೂಮ್ ಮಾಡಿ ಉಳಿದುಕೊಂಡವರು ಅರೆಬೀಯನ್ ಸಮುದ್ರವನ್ನು ಕಣ್ತುಂಬಿಕೊಳ್ಳುತ್ತಲೇ ಕೂರಬಹುದು. ಈ ಹೋಟೆಲ್ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿವೆ. ಉದಾಹರಣೆಗೆ ಹೆಚ್ಡಿ ಟಿವಿ ಮತ್ತು ಪ್ರಿಮೀಯಮ್ ಸೌಂಡ್ ಸಿಸ್ಟಮ್. ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಅವರಿಗೆ ಇಲ್ಲಿ ಪ್ರಮುಖ ಎಂಟು ದೇಶದ ಪ್ರಮುಖ ಆಹಾರಗಳು ಸಿಗುತ್ತದೆ. ಐಷಾರಾಮಿ ಸ್ಪಾ ಇದೆ.
ಇದನ್ನೂ ಓದಿ:₹30 ಲಕ್ಷ ಕೋಟಿ ಆಸ್ತಿ, 1000ಕ್ಕೂ ಹೆಚ್ಚು ಕುಟುಂಬ ಸದಸ್ಯರು; ಒಂದು ತೈಲ ರಾಷ್ಟ್ರವನ್ನೇ ಆಳುತ್ತಿದೆ ಈ ಕುಟುಂಬ!
ಈ ಹೋಟೆಲ್ನ ಮತ್ತೊಂದು ವಿಶೇಷವೆಂದರೆ ಅದು ಸ್ಕೈ ವೀವ್ ಬಾರ್. ಈ ಹೋಟೆಲ್ ಸುಮಾರು 656 ಫೀಟ್ ಎತ್ತರವಿದೆ. ಸ್ಕೈ ವೀವ್ ಮಾಡುವಾಗ ಇಲ್ಲಿನ ಗ್ರಾಹಕರು ತಮ್ಮ ನೆಚ್ಚಿನ ಪಾನೀಯವನ್ನು ಸವಿಯುತ್ತಾ ನೋಡಬಹುದು. ಈ ಹೋಟೆಲ್ ಎರಡು ಸ್ವಿಮ್ಮಿಂಗ್ ಫೂಲ್ಗಳನ್ನು ಹೊಂದಿದೆ. ಮತ್ತು ರೂಫ್ಟಾಪ್ ಬಾರ್. ಇಲ್ಲಿ ಗ್ರಾಹಕರಿಗೆ ದೊರಕುವ ಐಷಾರಾಮಿ ವ್ಯವಸ್ಥೆಗಳು, ಹೋಟೆಲ್ನಲ್ಲಿ ದೊರಕುವ ಸೇವೆ, ಹೀಗೆ ಎಲ್ಲವೂ ಇಲ್ಲಿ ಐಷಾರಾಮಿತನದ ಗುರುತು. ನೀವು ವಿಶ್ವದ ಯಾವುದೇ ಮೂಲೆಗೆ ಹೋದರು ಕೂಡ ಇಂತಹದೊಂದು ಐಷಾರಾಮಿ ಹೋಟೆಲ್, ಐಷಾರಾಮಿ ಸೇವೆ ಹಾಗೂ ಗ್ರಾಹಕತೃಪ್ತಿ ಸಿಗುವುದು ಅಪರೂಪವೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ