/newsfirstlive-kannada/media/post_attachments/wp-content/uploads/2025/03/RANA-SANGA.jpg)
ಭಾರತದಲ್ಲಿ ಮೊಘಲರ ವಿರುದ್ಧ ಹೋರಾಡಿದ ರಾಜರಗಳು ಬೇಗ ಸುದ್ಧಿಯಾಗುತ್ತಾರೆ. ಅದು ಛತ್ರಪತಿ ಶಿವಾಜಿ ಇರಬಹುದು. ಛತ್ರಪತಿ ಸಂಭಾಜಿ ಮಹಾರಾಜರು ಇರಬಹುದು. ರಜಪೂತ ರಾಜರಾದ ಪ್ರಥ್ವಿರಾಜ್ ಸಿಂಗ್ ಚವ್ಹಾಣ್, ರಾಣಾ ಪ್ರತಾಪ್ ಸಿಂಗ್ ಹೀಗೆ ಹಲವರ ಹೆಸರು ನಮಗೆ ಕಾಣ ಸಿಗುತ್ತವೆ.ಅಂತಹುದೇ ರಜಪೂತ ರಾಜನೊಬ್ಬನ ಬಗ್ಗೆ ನಿಮಗೆ ನಾವು ಹೇಳಲು ಹೊರಟಿದ್ದೇವೆ.
ಆ ರಜಪೂತ ರಾಜನ ಹೆಸರು ರಾಣಾ ಸಂಗಾ. ಬಾಬರ ಸೇರಿ ಅನೇಕ ಮೊಘಲರೊಂದಿಗೆ ಹೋರಾಡಿದ ವೀರ ರಾಜನೀತ. ಈ ರಾಜನ ಪರಾಕ್ರಮ ಯಾವ ಮಟ್ಟಿಗೆ ಇತ್ತೆಂದರೆ. ಒಂದು ಕೈ ಮತ್ತು ಒಂದು ಕಣ್ಣು ಕಳೆದುಕೊಂಡರು ಕೂಡ ಅವನ ಹೋರಾಟ ರಣರಂಗದಲ್ಲಿ ಸಾಗುತ್ತಲೇ ಇತ್ತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.
ರಾಣಾ ಸಿಂಗ್ನನ್ನು ಮಹಾರಾಣಾ ಸಾಂಗಾ ಅಂತಲೂ ಕರೆಯುತ್ತಿದ್ದರು. ಈತ 1508 ರಿಂದ 1528ರವರೆಗೂ ಮೇವಾಡವನ್ನು ಆಳಿದ ದೊರೆ. ತನ್ನ ಜೀವಿತಾವಧಿಯಲ್ಲಿ ಒಟ್ಟು 100 ಯುದ್ಧಗಳನ್ನು ಮಾಡಿದ ಈ ಪರಾಕ್ರಮಿ ಒಂದು ಕಣ್ಣು ಮತ್ತು ಒಂದು ಕೈಯನ್ನು ಕಳೆದುಕೊಂಡಿದ್ದ. ಒಟ್ಟು 80 ಗಾಯದ ಗುರುತುಗಳು ದೇಹದಲ್ಲಿದ್ದವು. ಆದರೂ ಕೂಡ ಈತನ ಕ್ಷಾತ್ರತೆಗೆ ಯಾವುದೇ ಮುಕ್ಕು ಬಂದಿರಲಿಲ್ಲ.
ಬಾಬರನು ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಮೋದಿಯನ್ನು ಸೋಲಿಸಿದ ನಂತರ ಭಾರತದ ತುಂಬಾ ತನ್ನ ಆಡಳಿತ ವಿಸ್ತರಿಸಲು ಸಿದ್ಧನಾದ. ಇದೇ ವೇಳೆ ನಡೆದ ನಿರ್ಣಾಯ ಯುದ್ಧ ಅಂದ್ರೆ ಅದು 1527ರಲ್ಲಿ ಭರತಪುರದ ಖಾನ್ವಾದಲ್ಲಿ ನಡೆದ ರಣಭೀಕರ ಯುದ್ಧ. ಈ ಯುದ್ಧ ಬಾಬರ್ ಮತ್ತು ಮಹಾರಾಣ ಸಂಗಾ ಸೇನೆಯ ನಡುವೆ ನಡೆಯಿತು.
ಇದನ್ನೂ ಓದಿ:ಮೊಘಲ ಸಾಮ್ರಾಜ್ಯದ ಕೊನೆಯ ದೊರೆಯ ಅತ್ಯಮೂಲ್ಯ ಕಿರೀಟ ಎಲ್ಲಿ ಹೋಯ್ತು? ಈಗ ಅದು ಇರೋದು ಎಲ್ಲಿ ಗೊತ್ತಾ?
ಪರಾಕ್ರಮದಿಂದ ರಾಣಾಸಾಂಗ ಸೇನೆಯು ಬಾಬರ್ ಸೇನೆಯೊಂದಿಗೆ ಹೋರಾಡುತ್ತಿದ್ದಾಗ ಅಚಾನಕ್ಕಾಗಿ ಒಂದು ಬಾಣ ಬಂದು ರಾಣಾ ಸಾಂಗಾನ ಒಂದು ಕಣ್ಣು ಛೇದಿಸಿಕೊಂಡುಹೋಗುತ್ತದೆ. ಒಂದು ಕೈಯನ್ನು ಕೂಡ ಕತ್ತರಿಸಲಾಗುತ್ತದೆ. ಆದರೂ ಕೂಡ ರಾಣಾ ಸಾಂಗಾ ಹೋರಾಟ ಮುಂದುವರಿಸಿದಾಗ ಆತನ ಸೈನಿಕರು ಅವನನ್ನು ಯುದ್ಧಭೂಮಿಯಿಂದ ಕರೆದುಕೊಂಡು ಹೋಗುತ್ತಾರೆ. ಈ ನಿರ್ಣಾಯಕ ಖಾನ್ವಾ ಯುದ್ಧದಲ್ಲಿ ರಜಪೂತ ಸೇನೆ ಬಾಬರ ಸೇನೆಯ ಎದುರು ಸೋತು ಹೋಗುತ್ತದೆ. ಕೊನೆಗೆ ಆತನ ಆಪ್ತರೆ ಮತ್ತೆ ಬಾಬರ್ನೊಂದಿಗೆ ಯುದ್ಧ ಬೇಡವೆಂದು ರಾಣಾ ಸಾಂಗಾಗೆ ವಿಷವಿಕ್ಕಿ ಕೊಂದರು ಎಂದು ರಜಪೂತ ಇತಿಹಾಸಗಳು ಹೇಳುತ್ತವೆ.
ಇದನ್ನೂ ಓದಿ: Ghibli: ಹೊಸ ಫೋಟೋ ಟ್ರೆಂಡ್‌ಗೆ ಫಿದಾ ಆದ ಮೋದಿ; ನೀವೂ ಈ ರೀತಿ ಕಾಣಬೇಕಾ ಹೀಗೆ ಮಾಡಿ!
ಖಾನ್ವಾ ಯುದ್ಧಕ್ಕೂ ಮೊದಲು ರಾಣಾಸಾಂಗಾ ಬಾಬರ್ನನ್ನು ಬಯಾನಾ ಯುದ್ಧ ಸೇರಿ ಹಲವು ಯುದ್ಧಗಳಲ್ಲಿ ಸೋಲಿಸಿ ಓಡಿಸಿದ್ದ. ಆದ್ರೆ ಖಾನ್ವಾ ಯುದ್ಧದಲ್ಲಿ ಬಾಬರ್ ಬಳಿ ಇದ್ದಿದ್ದ ಅತ್ಯುನ್ನತ ಫಿರಂಗಿಗಳು ಹಾಗೂ ಯುದ್ಧತಂತ್ರ ಖಾನ್ವಾ ರಾಣಾ ಸಾಂಗಾ ಸೇನೆಗೆ ಸೋಲನ್ನು ತಂದಿಟ್ಟಿತು. ಈತನ ಈ ವೀರಾಂಗಣ ಹೋರಾಟಕ್ಕೆ ಜನರು ರಾಣಾಸಾಂಗನನ್ನು ಹಿಂದುಪತ್ ಎಂದು ಬಿರುದು ಕೊಟ್ಟು ಗೌರವಿಸಿದರು. ಇಂದಿಗೂ ಕೂಡ ರಾಣಾಸಾಂಗಾನನ್ನು ರಾಜಸ್ಥಾನದಲ್ಲಿ ಹಿಂದುಪತ್ ಅಂತಲೇ ಕರೆಯುತ್ತಾರೆ. ಹೇಗೆ ಮಹಾರಾಷ್ಟ್ರದಲ್ಲಿ ಶಿವಾಜಿ ರಾಜೆ ಎಂದು ಗುರುತಿಸಲ್ಪಡುತ್ತಾನೋ ಹಾಗೆ ರಾಣಾಸಾಂಗಾ ರಾಜಸ್ಥಾಣದಲ್ಲಿ ಹಿಂದುಪತ್ ಎಂದು ಗುರುತಿಸಲ್ಪಡುತ್ತಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ