10 ವರ್ಷಗಳಿಂದ ಈ ವ್ಯಕ್ತಿ ಬಳಿ ಒಂದು ರೂಪಾಯಿಯೂ ಇಲ್ಲ.. ಆದರೂ ಐಷಾರಾಮಿ ಜೀವನ! ಹೇಗೆ ಸಾಧ್ಯ?

author-image
Gopal Kulkarni
Updated On
10 ವರ್ಷಗಳಿಂದ ಈ ವ್ಯಕ್ತಿ ಬಳಿ ಒಂದು ರೂಪಾಯಿಯೂ ಇಲ್ಲ.. ಆದರೂ ಐಷಾರಾಮಿ ಜೀವನ! ಹೇಗೆ ಸಾಧ್ಯ?
Advertisment
  • ಜೇಬಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ಈತನದು ಬಿಂದಾಸ್ ಲೈಫ್
  • ಫ್ರೀ ಕೂಪನ್​ಗಳೇ ಈತನ ಜೀವನಾಧಾರ, 10 ವರ್ಷದಿಂದ ವಿಶಿಷ್ಟ ಬದುಕು
  • ದುಡ್ಡಿಲ್ಲದೇ ಬದುಕುವುದನ್ನು ಹೇಳಿಕೊಡುವ ಗುರು ಎಷ್ಟು ಜನರಿಗೆ ಪ್ರೇರಣೆ?

ಡಿಸ್ಕೌಂಟ್, ಕ್ಯಾಶ್​ ಬ್ಯಾಕ್, ವೋಚರ್​ ಮತ್ತು ಕೂಪನ್ಸ್ ಯಾರಿಗೆ ತಾನೇ ಇವುಗಳನ್ನು ಕಂಡರೆ ಇಷ್ಟವಿಲ್ಲ. ಹಣವನ್ನು ಉಳಿಸಲು ಇವು ದೊಡ್ಡ ಹಾದಿ. ಆದ್ರೆ ಕಲ್ಪನೆ ಮಾಡಿಕೊಳ್ಳಿ ಕೇವಲ ಇವುಗಳ ಮೇಲೆಯೇ ಅವಲಂಬನೆಯಿಟ್ಟುಕೊಂಡು ನಿತ್ಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾ? ಅದು ಕೂಡ ಒಂದು ಎರಡು ವರ್ಷವಲ್ಲ 40 ವರ್ಷಗಳವರೆಗೆ. ಇದು ಬೇರೆಯದ್ದೇ ರೀತಿ ಸೌಂಡ್ ಮಾಡ್ತಿದೆ ಅಲ್ವಾ? ಆದ್ರೆ ನಂಬಿ ಜಪಾನ್​ನ ಒಬ್ಬ ವ್ಯಕ್ತಿಯನ್ನ ಕೂಪನ್ ಮ್ಯಾನ್ ಅಂತಲೇ ಕರೆಯಲಾಗತ್ತದೆ. 75 ವರ್ಷದ ಈತ ಕಳೆದ 40 ವರ್ಷಗಳಿಂದ ಕೇವಲ ಕೂಪನ್ ಹಾಗೂ ಡಿಸ್ಕೌಂಟ್​ ಮೇಲೆಯೇ ಜೀವನ ಕಳೆಯುತ್ತಿದ್ದಾನೆ. ಈ ವ್ಯಕ್ತಿಯನ್ನು ಗಾಡ್ ಆಫ್​ ಫ್ರೀಬೀಸ್ ಎಂದೇ ಕರೆಯಲಾಗುತ್ತದೆ. ಈತನ ಜೀವನ ಶೈಲಿಯೇ ಜನರಿಗೆ ಮಾತಾಡಿಕೊಳ್ಳಲು ಹಾಟ್ ಟಾಪಿಕ್ ಆಗಿದೆ.

ಇದನ್ನೂ ಓದಿ:ಮೌಂಟ್ ಎವರೆಸ್ಟ್ ಬಳಿ ಭಾರೀ ಭೂಕಂಪ; 95 ಮಂದಿ ಬಲಿ.. ಕಂಪಿಸಿದ ಭಾರತದ ಹಲವು ಭಾಗಗಳು!

ಈ ವ್ಯಕ್ತಿಯ ಹೆಸರು ಹಿರೊಟೊ ಕಿರಿತಾನಿ. ಈತ ಜಪಾನ್​ನ ಹೆಸರಾಂತ ಹೂಡಿಕೆದಾರ. ಒಂದು ಸಾವಿರ ಕಂಪನಿಯಲ್ಲಿ ಈತ ಷೇರುಗಳ ಮೇಲೆ ಮಾಲೀಕತ್ವ ಹೊಂದಿದ್ದಾನೆ. ಈತನ ಹೆಸರಿನಲ್ಲಿರುವ ಷೇರುಗಳ ಮೌಲ್ಯವೇ ಐದು ಕೋಟಿ ರೂಪಾಯಿಯಷ್ಟು. ಆದರೂ ಕೂಡ ಈತ ತನ್ನ ನಿತ್ಯ ಜೀವನದ ಖರ್ಚಿಗಾಗಿ ಒಂದೇ ಒಂದು ರೂಪಾಯಿ ತನ್ನ ಜೇಬಿನಿಂದ ಖರ್ಚು ಮಾಡುವುದಿಲ್ಲ. ಪ್ರತಿ ಫ್ರೀ ಆಫರ್​ಗಳನ್ನು ಸಮರ್ಥವಾಗಿ ಬಳಿಸಿಕೊಳ್ಳುವ ಜಗತ್ತಿನ ಏಕೈಕ ವ್ಯಕ್ತಿ ಅಂದರೆ ಈತನೇ ಎಂದು ಜಪಾನಿನ ಜನರು ಮಾತನಾಡಿಕೊಳ್ಳುತ್ತಾರೆ.

ಹಿರೊಟೊ ಕಿರಿತಾನಿ ತಮ್ಮ ಬದುಕನ್ನು ಆರಂಭಿಸಿದ್ದು ಶೋಗಿ ಆಟಗಾರನಾಗಿ. ಇದನ್ನು ಜಪಾನ್​ನ ಚೆಸ್ ಎಂದು ಕರೆಯುತ್ತಾರೆ. ಈ ಆಟವನ್ನು ಕಲಿಸುವಂತೆ ಅನೇಕ ಕಂಪನಿಗಳು ಈತನಿಗೆ ಆಹ್ವಾನ ನೀಡಿದವು. ಇದೇ ಸಮಯದಲ್ಲಿ ಈತ ಸ್ಟಾಕ್ ಮಾರ್ಕೆಟ್​ಗಳ ನಾಡಿಮಿಡಿತವನ್ನು ಕಂಡುಕೊಂಡ. ಹೂಡಿಕೆಯಲ್ಲಿ 10 ಕೋಟಿ ಯೆನ್ ಗಳಿಸಿಕೊಂಡ ಈತ ನಂತರ 20 ಕೋಟಿ ಕಳೆದುಕೊಂಡ ನಂತರ ತನ್ನದೇ ಆದ ವಿಚಿತ್ರ ಜೀವನ ಶೈಲಿ ಆರಂಭಿಸಿದ.

ಇದನ್ನೂ ಓದಿ:ವಿಶ್ವವೇ ಕಂಡ ಅತ್ಯಂತ ಶ್ರೀಮಂತ, ಕ್ರೂರ ಮಹಾರಾಣಿ ಈಕೆ.. ಸ್ವಂತ ಮಗಳ ಕಥೆಯನ್ನೇ ಮುಗಿಸಿದ್ದು ಯಾಕೆ!

2008ರಲ್ಲಿ ಈತ ಸ್ಟಾಕ್ ಮಾರ್ಕೆಟ್​ನಲ್ಲಿ 20 ಕೋಟಿ ಯೆನ್ ಕಳೆದುಕೊಂಡ ಮೇಲೆ ದೇಶದ ವಿವಿಧ ಸಾವಿರ ಇಂಡಸ್ಟ್ರಿ ಕಂಪನಿಗಳ ಮೇಲಿನ ಶೇರ್​ ಹೋಲ್ಡರ್​ಗಳಿಗೆ ನೀಡುವ ಕೂಪನ್​ಗಳನ್ನು ಕಲೆಕ್ಟ್​ ಮಾಡಲು ಆರಂಭಿಸಿದ. ಆಯಾ ಕಂಪನಿಗಳು ತನ್ನ ಶೇರ್​ ಹೋಲ್ಡರ್​ಗಳಿಗೆ ನೀಡುವ ಕೂಪನ್​ಗಳನ್ನ ಫ್ರೀಬೀಸ್​ಗಳನ್ನ ಎನ್​ಕ್ಯಾಶ್ ಮಾಡಿಕೊಳ್ಳಲು ಆರಂಭಿಸಿದ. ನಿತ್ಯ ಫ್ರೀ ಊಟ, ಜಿಮ್ ಮೆಂಬರ್​ಶಿಪ್, ಮೂವಿ ಟಿಕೆಟ್​ ಹೀಗೆ ಎಲ್ಲವನ್ನೂ ಫ್ರೀಬೀಸ್ ಮೂಲಕವೇ ಅನುಭವಿಸತೊಡಗಿದ.

ಪ್ರತಿ ವರ್ಷ ಈ ಕಿರಿನಾತಿ ಸುಮಾರು 300 ಸಿನಿಮಾ ಟಿಕೆಟ್​ಗಳನ್ನು ಫ್ರೀಯಾಗಿ ಪಡೆದುಕೊಳ್ಳುತ್ತಾನೆ ಅವುಗಳಲ್ಲಿ ಪ್ರತಿ ವರ್ಷ ಕನಿಷ್ಠ ಅಂದರೂ 140 ಸಿನಿಮಾ ನೋಡುತ್ತಾನೆ. ಈತನ ಜೀವನ ಶೈಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಅನೇಕರು ಈತನನ್ನು ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಈತ ತನ್ನ ಜೀವನ ಶೈಲಿಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment