ಭಾರತ ಕಂಡ ಬಕಾಸುರನಂತ ರಾಜ ಈತ.. ಬೆಳಗಾದ್ರೆ 150 ಬಾಳೆಹಣ್ಣು ಬೇಕೇ ಬೇಕು; ತಿಂದು ತಿಂದೇ ಸಾವು ತಂದುಕೊಂಡ!

author-image
Gopal Kulkarni
Updated On
ಭಾರತ ಕಂಡ ಬಕಾಸುರನಂತ ರಾಜ ಈತ.. ಬೆಳಗಾದ್ರೆ 150 ಬಾಳೆಹಣ್ಣು ಬೇಕೇ ಬೇಕು; ತಿಂದು ತಿಂದೇ ಸಾವು ತಂದುಕೊಂಡ!
Advertisment
  • ಇವನಂತ ಬಕಾಸುರನಂತ ರಾಜ ಬೇರೆ ಯಾವ ದೇಶವು ಕಂಡಿಲ್ಲ
  • ತಿಂದು ತಿಂದೇ ಸಾವು ತಂದುಕೊಂಡ ಈ ರಾಜನ ಹೆಸರೇನು ಗೊತ್ತಾ?
  • 150 ಬಾಳೆಹಣ್ಣು ತಿನ್ನದೇ ಈ ರಾಜನ ದಿನವೇ ಆರಂಭವಾಗುತ್ತಿರಲಿಲ್ಲ!

ನಮ್ಮ ದೇಶ ಹಲವು ರಾಜ ಹಾಗೂ ರಾಜಮನೆತಗಳನ್ನು, ಸಾಮ್ರಾಜ್ಯವನ್ನು ಮಹಾರಾಜರ ಆಡಳಿತವನ್ನು ಕಂಡ ದೇಶ. ಇಲ್ಲಿ ಅನೇಕ ರಾಜರು ಶೌರ್ಯ ಪರಕ್ರಾಮಕ್ಕೆ ಹೆಸರಾಗಿದ್ದಾರೆ. ಕ್ರೌರ್ಯ, ಕಿರಾತಕತನ, ಲಂಪಟತದಿಂದಲೂ ಕುಖ್ಯಾತಿಯನ್ನು ಪಡೆದಿದ್ದಾರೆ. ಆದ್ರೆ ಈ ದೇಶ ಕಂಡ ಆ ಒಬ್ಬ ರಾಜನನ್ನನು ಬೇರೆ ಯಾವ ದೇಶವೂ ಕೂಡ ಕಾಣಲಿಕ್ಕೆ ಸಾಧ್ಯವಿಲ್ಲ. ಅವನು ವೀರ ಶೂರತೆಗಾಗಲಿ, ಕ್ರೂರತೆಗಾಗಲಿ ಪ್ರಸಿದ್ಧ ಪಡೆದ ರಾಜನಲ್ಲ. ಇವನು ತಿಂದು ತಿಂದೇ ಸಾವನ್ನು ತಂದುಕೊಂಡು ಕುಖ್ಯಾತಿಗೆ ಒಳಗಾದ ರಾಜ.

ಈ ರಾಜನಿಗೆ ಊಟ ಮಾಡುವ ಚಟ ಎಷ್ಟು ಇತ್ತು ಎಂದರೆ, ಆತನಿಗೆ ಬೆಳಗಾದ ಕೂಡಲೇ 150 ಬಾಳೆಹಣ್ಣನ್ನು ಸೇವಕರು ಸಿದ್ಧಪಡಿಸಿಯೇ ಇಡಬೇಕಿತ್ತು. ಬೆಳಗಾದ ಕೂಡಲೇ ಬರೋಬ್ಬರಿ 150 ಬಾಳೆ ಹಣ್ಣನ್ನು ಈ ರಾಜ ಸೇವಿಸುತ್ತಿದ್ದ. ಪ್ರತಿ ದಿನ ಈತ ಊಟ ಮಾಡುವ ಪ್ರಮಾಣವನ್ನು ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ. ಇವನಿಗೆ ದಿನಕ್ಕೆ ಸರಿಸುಮಾರು 37 ಕೆಜಿ ಆಹಾರ ತಿನ್ನಲು ಬೇಕೆ ಬೇಕಿತ್ತು.

publive-image

ಇದನ್ನೂ ಓದಿ:ಸಿಂಹಾಸನದಿಂದ ಸೂಜಿದಾರದವರೆಗೆ..! ಮೊಘಲ್ ಸಾಮ್ರಾಜ್ಯದ ದೊರೆ ಔರಂಗ್​ಜೇಬ್​​ಗಿತ್ತು ಈ ಅಭ್ಯಾಸ

ಹಾಗಿದ್ರೆ ಯಾರು ಈ ರಾಜ, ಯಾವ ದೇಶವನ್ನು ಆಳುತ್ತಿದ್ದ ಎಂಬ ಕುತೂಹಲ ನಿಮಗೆ ಹುಟ್ಟಿರಬೇಕು. ನಾವು ಮಾತನಾಡುತ್ತಿರುವುದು ಒಂದು ಕಾಲದಲ್ಲಿ ಗುಜರಾತ್​​ನ್ನು ಆಳುತ್ತಿದ್ದ ಸುಲ್ತಾನ್ ಮಹಮ್ಮೂದ್​ ಬೆಗಡಾ ಬಗ್ಗೆ. ಮಹಮ್ಮೂದ್​ ಬೆಗಡಾಗೆ ಊಟ ಮಾಡುವ ಹುಚ್ಚು ಎಷ್ಟು ಇತ್ತು ಎಂದರೆ ಅವನ ಊಟವನ್ನು ತಯಾರಿಸುವ ಪಾಕಪರಿಣತರೇ ಸುಸ್ತಾಗಿ ಹೋಗಿರುತ್ತಿದ್ದರು.
ಕಾರಣ ಕೇಳಿದರೆ ನೀವೇ ಒಮ್ಮೆ ಹೌಹಾರುತ್ತಿರಿ.  ನೀವು ಕುಂಭಕರ್ಣನ ಬಗ್ಗೆ ಕೇಳಿಯೇ ಇರುತ್ತೀರಿ ಇಲ್ಲ ಸಿನಿಮಾ, ಸಿರೀಯಲ್​ಗಳಲ್ಲಿ ನೋಡಿಯೇ ಇರುತ್ತೀರಿ. ಅವನು ತಿಂಗಳಾನುಗಟ್ಟಲೇ ನಿದ್ದೆ ಮಾಡಿ ಎದ್ದಮೇಲೆ ಹೇಗೆ ಊಟಕ್ಕೆ ಹಪಹಪಿಸುತ್ತಿದ್ದನೋ, ಈ ರಾಜನೂ ಕೂಡ ಹಾಗೆಯೇ ಇದ್ದ. ಅವನು ರಾತ್ರಿ ಮಲಗುವಾಗ ಅವನ ಕೋಣೆಯಲ್ಲಿ ವಿವಿಧ ರೀತಿಯ ಆಹಾರಗಳನ್ನು ಸಿದ್ಧಗೊಳಿಸಿ ಇಡಲೇಬೇಕಾಗಿತ್ತು. ನಡುರಾತ್ರಿ ನಿದ್ದೆಯಿಂದ ಅಕಸ್ಮಾತ್ ಎಚ್ಚರವಾದರೇ ಆಗಲು ತನಗೆ ತೃಪ್ತಿಯಾಗುವಷ್ಟು ತಿಂದು ಮತ್ತೆ ಮಲಗುತ್ತಿದ್ದ ಮೊಹಮ್ಮದ್ ಬೆಗಡಾ.

ಇದನ್ನೂ ಓದಿ:ಭಾರತದ ಈ ಒಂದು ಜಾಗದಲ್ಲಿ ನೀವು ಕಾಲಿಟ್ರೆ ಖಲ್ಲಾಸ್​! ಇದು ಜಗತ್ತಿನ ಅತ್ಯಂತ ಖತರ್ನಾಕ್ ದ್ವೀಪ!

ಇನ್ನು ಮುಂಜಾನೆ ನಿದ್ದೆಯಿಂದ ಎದ್ದ ಕೂಡಲೇ ಒಂದು ಕಪ್ ಜೇನುತುಪ್ಪ, ಒಂದು ದೊಡ್ಡ ತಪ್ಪಲೆ ಬೆಣ್ಣೆಯ ಮುದ್ದೆ ಹಾಗೂ ಒಟ್ಟು 150 ಬಾಳೆಹಣ್ಣನ್ನು ತಿನ್ನುತ್ತಿದ್ದ. ಇನ್ನು ಕೆಲವರು ಹೇಳುವ ಪ್ರಕಾರ ಅವನಿಗೆ ಚಿಕ್ಕಂದಿನಿಂದ ವಿಷವನ್ನು ಕೂಡ ಸೇವಿಸುವ ಅಭ್ಯಾಸವಿತ್ತು ಎನ್ನುತ್ತಾರೆ. ಹೀಗೆ ತಿಂದು ತಿಂದು ಇಡೀ ದೇಹವೇ ವಿಷಯಮಯವಾಗಿ ಬೆಗಡಾ ಪ್ರಾಣ ಬಿಟ್ಟ ಎಂಬ ಐತಿಹಾಸಿಕ ಉಲ್ಲೇಖಗಳು ಸಿಗುತ್ತವೆ. 1445ರಲ್ಲಿ ಹುಟ್ಟಿದ್ದ ಈತ, 1511ರಲ್ಲಿ ಅಹ್ಮಾಬಾದ್​ನಲ್ಲಿ ಮರಣಹೊಂದಿದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment