/newsfirstlive-kannada/media/post_attachments/wp-content/uploads/2025/02/GOLD-INVESTMENT.jpg)
ಸದ್ಯ ನಿರ್ಮಲಾ ಸೀತಾರಾಮನ್ 2025-26ರ ಬಜೆಟ್ಗೆ ತುಂಬಾ ಪಾಸಿಟಿವ್ ಆಗಿ ಪ್ರತಿಕ್ರಿಯೆಗಳು ಬರುತ್ತಿವೆ. ಅದರಲ್ಲೂ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷದ ವರೆಗೆ ಏರಿಸಿದ್ದು ಮಧ್ಯಮವರ್ಗ ನಿಟ್ಟುಸಿರುಬಿಟ್ಟಂತಾಗಿದೆ. ಇದೇ ವಿಚಾರವಾಗಿ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಹೂಡಿಕೆ ತಜ್ಞ ರುದ್ರಮೂರ್ತಿಯರವರು ಡೈರೆಕ್ಟ್ ಟ್ಯಾಕ್ಸ್ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಜನರಿಗೆ ನೀಡಿದೆ ಎಂದು ಹೇಳಿದ್ದಾರೆ. ಇಂಡೈರೆಕ್ಟ್ ಟ್ಯಾಕ್ಸ್ನಲ್ಲಿ ಅಷ್ಟೊಂದು ಪ್ರಯೋಜನಗಳಿಲ್ಲದಿದದ್ದರು ಡೈರೆಕ್ಟ್ ಟ್ಯಾಕ್ಸ್ನಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ ಎಂದಿದ್ದಾರೆ
ಕೇಂದ್ರ ಸರ್ಕಾರ ದೇಶದ ಜಿಡಿಪಿಯನ್ನು ಶೇಕಡಾ 8ಕ್ಕೆ ತೆಗೆದುಕೊಂಡು ಹೋಗುವ ಗುರಿಗೆ ಇದು ತುಂಬಾ ಪೂರಕವಾಗಿ ಬೆಂಬಲ ನೀಡಲಿದೆ. 12.75 ಲಕ್ಷ ರೂಪಾಯಿ ಆದಾಯ ಹೊಂದಿದವರಿಗೂ ಕೂಡ 75 ಸಾವಿರ ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡುವ ಮೂಲಕ ಇನ್ನೂ ಸರಳ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೋದಿ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಗುಡ್‌ನ್ಯೂಸ್.. ಹೇಗಿದೆ ಹೊಸ ತೆರಿಗೆ ನೀತಿ? ಯಾರಿಗೆ ಎಷ್ಟು ಟ್ಯಾಕ್ಸ್?
ಇನ್ನು ಉಳಿತಾಯದ ವಿಚಾರದಲ್ಲಿ ಮಾತನಾಡಿರುವ ರುದ್ರಮೂರ್ತಿಯವರು ಮಧ್ಯಮವರ್ಗದವರು ಖರ್ಚಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಉಳಿತಾಯ ಮಾಡಿದರೂ ಕೂಡ ಅದು ಬ್ಯಾಂಕ್ನಲ್ಲಿ ಡಿಪಾಸಿಟ್ ಹಾಗೂ ಮ್ಯೂಚವಲ್ ಫಂಡ್ ಮೂಲಕವೇ ಉಳಿತಾಯ ಮಾಡುತ್ತಾರೆ. ಇದು ವಾಪಸ್ ದೇಶದ ಆರ್ಥಿಕ ವ್ಯವಸ್ಥೆಯ ಪರಿಧಿಯಲ್ಲಿಯೇ ಬರುತ್ತದೆ ಎಂದು ಹೇಳಿದ್ದಾರೆ.
ಇನ್ನು ಕಳೆದ ಎರಡು ಮೂರು ವರ್ಷಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಮೇಲೆ ಹೂಡಿಕೆ ಮಾಡಿದವರು ಸುಮಾರು ಶೇಕಡಾ 40 ರಷ್ಟು ರಿಟರ್ನ್ಸ್ ಪಡೆದುಕೊಂಡಿದ್ದಾರೆ. ಆದ್ರೆ ಇನ್ನು ಮುಂದೆ ಅಂದ್ರೆ ಬರುವ ಎರಡು ವರ್ಷಗಳ ವರೆಗೆ ನೀವು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಿದಲ್ಲಿ ನಿಮಗೆ ಅಷ್ಟು ಮಟ್ಟದ ರಿಟರ್ನ್ ಬರಲ್ಲ. ಅಬ್ಬಬ್ಬಾ ಅಂದ್ರೆ 10 ರಿಂದ 15 ಪರ್ಸೆಂಟ್ ಲಾಭ ಬರಬಹುದು ಎಂದಿದ್ದಾರೆ. ಯಾಕಂದ್ರೆ ಈಗಾಗಲೇ ಚಿನ್ನದ ಬೆಲೆ ಅದರಲ್ಲೂ ಅಪರಂಜಿ ಚಿನ್ನದ ಬೆಲೆ ಗ್ರಾಂಗೆ 8500 ರೂಪಾಯಿಗೆ ತಲುಪಿದೆ, 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 7750 ತಲುಪಿದೆ. ಇನ್ನು ಬೆಳ್ಳಿಯ ಬೆಲೆ ಕೆಜಿ 1 ಲಕ್ಷ ರೂಪಾಯಿಯವರೆಗೂ ತಲುಪಿದೆ ಹೀಗಾಗಿ ಇದು ಚಿನ್ನದ ಮೇಲೆ ಹೂಡಿಕೆ ಮಾಡುವ ಕಾಲವಲ್ಲ ಎಂದು ರುದ್ರಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ:ಬಜೆಟ್‌ನಲ್ಲಿ ಮೊಬೈಲ್ ಪ್ರಿಯರಿಗೆ ಬಂಪರ್ ಗಿಫ್ಟ್; ಯಾವೆಲ್ಲಾ ವಸ್ತುಗಳ ಬೆಲೆಯಲ್ಲಿ ಇಳಿಕೆ!
ಇನ್ನು ಷೇರು ಮಾರುಕಟ್ಟೆ ಹೂಡಿಕೆಯ ವಿಚಾರದಲ್ಲಿ ಮಾತನಾಡಿದ ಹೂಡಿಕೆ ತಜ್ಞರು, ಕಳೆದ ನಾಲ್ಕು ತಿಂಗಳಿಂದ ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಅದಕ್ಕೆ ಕಂಪನಿಗಳ ಪರ್ಫಾರ್ಮನ್ಸ್, ವಿದೇಶಗಳಲ್ಲಾಗುತ್ತಿರುವ ಹಾಗೂ ಸ್ವದೇಶಗಳಲ್ಲಾಗುತ್ತಿರುವ ಸಮಸ್ಯೆಗಳು ಕಾರಣ ಏಪ್ರಿಲ್ ನಂತರ ಮತ್ತೆ ಷೇರು ಮಾರುಕಟ್ಟೆ ಏರಿಕೆ ಗತಿಯಲ್ಲಿ ಸಾಗುವ ಎಲ್ಲಾ ಸೂಚನೆಗಳು ಇವೆ
ಯಾರೆಲ್ಲಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಅವರು ಮುಂದಿನ ಎರಡು ಮೂರು ವರ್ಷಗಳಲ್ಲಿ ಅತಿಹೆಚ್ಚು ಲಾಭ ಪಡೆಯಲಿದ್ದಾರೆ. ಆದ್ರೆ ಷೇರು ಮಾರುಕಟ್ಟೆ ಇನ್ನೂ ಎರಡು ತಿಂಗಳು ಇದೇ ಇಳಿಕೆ ಸ್ಥಿತಿಯಲ್ಲಿ ಇರುತ್ತದೆ. ದೀರ್ಘಕಾಲದ ಲಾಭದ ಯೋಜನೆಯಲ್ಲಿ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇ ಆದಲ್ಲಿ. ಬರುವ ದಿನಗಳಲ್ಲಿ ತುಂಬಾ ಲಾಭವಿದೆ ಎಂದು ಹೇಳಿದ್ದಾರೆ.
ಇನ್ನು ಷೇರು ಮಾರುಕಟ್ಟೆ ಹಾಗೂ ಚಿನ್ನ ಬೆಳ್ಳಿ ಹೂಡಿಕೆ ಮೇಲೆ ಅಷ್ಟೊಂದು ಜ್ಞಾನ ಇಲ್ಲದವರು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ