ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೀವನ ಶೈಲಿ ನಿಮ್ಮದಾಗಿಸಿಕೊಳ್ಳಿ; ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಿರಿ

author-image
Gopal Kulkarni
Updated On
ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೀವನ ಶೈಲಿ ನಿಮ್ಮದಾಗಿಸಿಕೊಳ್ಳಿ; ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಿರಿ
Advertisment
  • ನಟ ಅಕ್ಷಯ್ ಕುಮಾರ್​ ಜೀವನ ಕ್ರಮ ಎಲ್ಲರಿಗೂ ಪ್ರೇರಣೆ ಹೇಗೆ ಗೊತ್ತಾ?
  • ಬೆಳಗ್ಗೆ 4 ಗಂಟೆಗೆ ಎದ್ದೇಳುವುದರಿಂದ ಇವೆ ಹಲವು ಆರೋಗ್ಯದ ಲಾಭಗಳು
  • ಮುಂಜಾನೆ ಬೇಗ ಏಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢ

ಅಕ್ಷಯ್ ಕುಮಾರ್ ಎನ್ನುವ ಹೆಸರೇ ಫಿಟ್​ನೆಸ್​ಗೆ ಮತ್ತೊಂದು ಹೆಸರು. ಶಿಸ್ತಿನ ಮೂರ್ತರೂಪ, ತಮಾಷೆ ಹರಟೆ, ಸಾಹಸಗಳ ಪ್ರತಿರೂಪ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಲವು ರೀತಿಯಲ್ಲಿ ಹಲವರಿಗೆ ಮಾದರಿ. ಅವರ ಜೀವನಕ್ರಮ ಹಾಗೂ ಅವರ ದಿನನಿತ್ಯದ ಅಭ್ಯಾಸಗಳನ್ನು ನಾವು ಅವರ ಬಾಯಿಂದಲೇ ಕೇಳಬೇಕು. ಅದು ಎಂತವರನ್ನೂ ಕೂಡ ಅಚ್ಚರಿಗೆ ತಳ್ಳಿ ಬಿಡುತ್ತದೆ.

57 ವರ್ಷದ ಅಕ್ಷಯ್ ಕುಮಾರ್ ಹದಿಹರೆಯದ ಯುವಕರನ್ನು ಕೂಡ ನಾಚಿಸುವಷ್ಟು ಆ್ಯಕ್ಟಿವ್ ಆಗಿ ಇರುತ್ತಾರೆ. ಅವರ ಆಪ್ತ ಸ್ನೇಹಿತ, ಮತ್ತೊಬ್ಬ ಬಾಲಿವುಡ್ ನಟ ಅಜಯ್​ ದೇವಗನ್​ ಅವರನ್ನು ದೂದ್​ವಾಲಾ (ಹಾಲು ಮಾರುವವ) ಎಂದೇ ಕರೆಯುತ್ತಾರೆ. ಕಾರಣ ಅವರು ನಟನಾಗುವುದಕ್ಕೂ ಮೊದಲು ಹಾಲು ಮಾರುತ್ತಿದ್ದರು. ಅಂದಿನ ಶಿಸ್ತಿನ ಹಾಗೂ ಬೇಗ ಏಳುವ ಜೀವನ ಪದ್ಧತಿ ಇಂದಿಗೂ ಜಾರಿಯಲ್ಲಿಟ್ಟಿದ್ದಾರೆ ಅಕ್ಷಯ್ ಕುಮಾರ್.

publive-image

ಅಜಯ್ ದೇವಗನ್ ಹೇಳುವ ಪ್ರಕಾರ ಅವರು ಈ ಮೊದಲು ಹಾಲು ಮಾರುತ್ತಿದ್ದರು. ಈಗಲೂ ಕೂಡ ಅವರು ಬೆಳಗ್ಗೆ ನಾಲ್ಕು ಗಂಟೆಗೆ ಅಂದ್ರೆ ಎದ್ದು ಬಿಡುತ್ತಾರಂತೆ. ಅಜಯ್ ಹೇಳುವ ಮಾತು ಅಕ್ಷರಶಃ ಸತ್ಯ. ಅಕ್ಷಯ್ ಕುಮಾರ್ ದೇವರ ಮೇಲೆ ಹೂ ತಪ್ಪಿದರು ಅವರು ಬೆಳಗ್ಗೆ 4 ಗಂಟೆಗೆ ಏಳುವುದು ತಪ್ಪಿಸುವುದಿಲ್ಲ. ಬೆಳಗ್ಗೆ ನಾಲ್ಕು ಗಂಟೆಗೆ ಏಳುವ ಅಕ್ಷಯ್ ಕುಮಾರ್ ಜಾಗಿಂಗ್, ರನ್ನಿಂಗ್ ಮಾಡುತ್ತಾರೆ. ನಂತರ ಜಿಮ್​ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ. ಇನ್ನು ಒಂದು ನೆನಪಿರಲಿ ಅಕ್ಷಯ್ ಲೇಟ್​ನೈಟ್ ಪಾರ್ಟಿ, ಫ್ರೆಂಡ್ಸ್​ ಗ್ಯಾದರಿಂಗ್​ನಿಂದ ದೂರ. ಧೂಮಪಾನ, ಮದ್ಯಪಾನದಿಂದಲೂ ಕೂಡ ಅವರ ತುಂಬಾ ಅಂತರವನ್ನು ಕಾಯ್ದುಕೊಂಡಿದ್ದಾರೆ. ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗನೆ ಏಳುವುದನ್ನು ದಶಕಗಳಿಂದಲೂ ರೂಢಿಯಲ್ಲಿಟ್ಟುಕೊಂಡು ಬಂದಿದ್ದಾರೆ. ಇದು ಹಲವರಿಗೆ ಪ್ರೇರಣೆ ಅಷ್ಟು ಮಾತ್ರವಲ್ಲ ಅದರಿಂದ ಹಲವು ಆರೋಗ್ಯಕರ ಪ್ರಯೋಜನಗಳು ಕೂಡ ಇವೆ.

ಇದನ್ನೂ ಓದಿ:ಏನಿದು ಕ್ಲಿನಿಕಲ್ ಡಿಪ್ರೆಶನ್​? ಈ ಖಿನ್ನತೆ ಆವರಿಸಿಕೊಳ್ಳುವುದು ಏಕೆ? ಈ ಬಗ್ಗೆ ತಜ್ಞ ವೈದ್ಯರು ಏನು ಹೇಳುತ್ತಾರೆ?

publive-image

ಬೆಳಗ್ಗೆ ಬೇಗ ಏಳುವುದರಿಂದ ಆಗುವ ಪ್ರಯೋಜನಗಳು ಏನು? 

ಬೆಳಗ್ಗೆ ಬೇಗ ಏಳುವುದರಿಂದ ಹಲವು ಪ್ರಯೋಜನಗಳಿವೆ. ಮಾನಸಿಕ ಹಾಗೂ ದೈಹಿಕವಾಗಿ ಒಟ್ಟಾರೆ ಆರೋಗ್ಯ ಪ್ರಯೋಜನಗಳು ನಮಗೆ ಬೆಳಗ್ಗೆ 4 ಗಂಟೆಗೆ ಏಳುವುದರಿಂದ ಸಿಗುತ್ತದೆ. ಈ ಸಮಯದಲ್ಲಿ ವಾತಾವರಣವೂ ಕೂಡ ತುಂಬಾ ಆಹ್ಲಾದಕರವಾಗಿ, ಶಾಂತವಾಗಿ ಹಾಗೂ ಚಿತ್ತ ಚಾಂಚಲ್ಯಗೊಳ್ಳದ ರೀತಿ ಪ್ರಶಾಂತವಾಗಿರುತ್ತದೆ. ಈ ಸಮಯದಲ್ಲಿ ನಾವು ಯಾವುದೇ ಅಡ್ಡಿ ಆತಂಕಗಳಿಲ್ಲದೇ ನಮ್ಮ ಕೆಲಸವನ್ನು ಮಾಡಬಹುದು. ಓದಬಹುದು, ವ್ಯಾಯಾಮ ಮಾಡಬಹುದು. ಈ ಸಮಯದಲ್ಲಿ ಮಾಡುವ ಯಾವುದೇ ಚಟುವಟಿಕೆಗಳು ದಕ್ಷತೆಯಿಂದ ಹಾಗೂ ಗುಣಮಟ್ಟದಿಂದ ಕೂಡಿರುತ್ತವೆ ಹಾಗೆಯೇ ಅತ್ಯುತ್ತಮ ಫಲಿತಾಂಶವನ್ನು ಕೂಡ ನೀಡುತ್ತವೆ.
ಇನ್ನು ಒಂದು ಅನುಕೂಲವೆಂದರೆ ಬೆಳಗ್ಗೆ ಬೇಗ ಏಳುವುದರಿಂದ ನಾವು ನಮ್ಮ ದಿನದ ಯೋಜನೆಯನ್ನು ಸರಿಯಾಗಿ ಪ್ಲ್ಯಾನ್ ಮಾಡಿಕೊಳ್ಳಬಹುದು. ಯಾವುದೇ ಗಡಿಬಿಡಿಯಿಲ್ಲದೇ ನಿಧಾನವಾಗಿ ಹಾಗೂ ಅಷ್ಟೇ ಅಚ್ಚುಕಟ್ಟಾಗಿ ನಮ್ಮ ಕೆಲಸಗಳನ್ನು ಪ್ಲಾನ್ ಮಾಡಿಕೊಂಡು ಅದನ್ನು ಸರಿಯಾಗಿ ನಿರ್ವಹಿಸಬಹುದು ಕೂಡ. ತಜ್ಞರು ಹೇಳುವ ಪ್ರಕಾರ ಬೇಗ ಎಳುವುದು ಮಾನಸಿಕ ನೆಮ್ಮದಿಯನ್ನು ನೀಡುತ್ತದೆಯಂತೆ.

ಇದನ್ನೂ ಓದಿ:ನಿಮ್ಮ ಮನೆಯ ಹಿತ್ತಲಲ್ಲಿ ವೀಳ್ಯದೆಲೆ ಬಳ್ಳಿ ಇದ್ಯಾ? ಹಾಗಾದ್ರೆ ನೀವು ಪಾಲಿಸಲೇಬೇಕಾದ ನಿಯಮಗಳಿವು ಇಲ್ಲಿವೆ ನೋಡಿ

ಬೇಗ ಎಳುವ ರೂಢಿಯಿಂದಾಗಿ ನಾವು ಅತ್ಯಂತ ಶಿಸ್ತಿನ ಜೀವನಕ್ರಮವನ್ನು ನಮ್ಮದಾಗಿಸಿಕೊಳ್ಳಬಹುದು.ಬೆಳಗ್ಗೆ ಬೇಗ 4 ಗಂಟೆಗೆ ಏಳುವ ರೂಢಿಯನ್ನಿಟ್ಟುಕೊಂಡವರು ಸರಿಯಾದ ಸಮಯಕ್ಕೆ ಮಲಗುವ ರೂಢಿಯನ್ನು ಕೂಡ ಬೆಳೆಸಿಕೊಳ್ಳುತ್ತಾರೆ. ಒಳ್ಳೆಯ ರೆಸ್ಟ್ ಕೂಡ ಮಾಡಿದಂತಾಗುತ್ತದೆ. ಅದರ ಜೊತೆಗೆ ಒಳ್ಳೆಯ ನಿದ್ದೆ ಕೂಡ. ಈ ಒಂದು ರೂಢಿ ನಮ್ಮನ್ನು ಸಮಯದ ನಿರ್ವಹಣೆ, ಸ್ವಯಂ ನಿಯಂತ್ರಣ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕವಾಗಿ ನಿಲ್ಲುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment