/newsfirstlive-kannada/media/post_attachments/wp-content/uploads/2025/06/BGK-OX-1.jpg)
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಬುದ್ನಿ ಗ್ರಾಮದ ಎತ್ತು ಬರೋಬ್ಬರಿ 5.11 ಲಕ್ಷಕ್ಕೆ ಮಾರಾಟವಾಗಿದೆ. ಗ್ರಾಮದ ಮಹಾದೇವಪ್ಪ ಕೊಲೂರ ಎಂಬುವವರಿಗೆ ಎತ್ತು ಸೇರಿದೆ.
5 ಲಕ್ಷ 11 ಸಾವಿರ ರೂಪಾಯಿ ನೀಡಿ ಪುಣೆ ಮೂಲದ ವಿರಾಟ್ ಕಾಟೇದಾರ್ ಅನ್ನೋರು ಎತ್ತನ್ನು ಖರೀದಿ ಮಾಡಿದ್ದಾರೆ. ಅಪರೂಪದ ಈ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಮತ್ತೆ ಕರ್ನಾಟಕಕ್ಕೆ ಮಳೆಯ ಮುನ್ಸೂಚನೆ.. ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ..!
ಇನ್ನು ಈ ಎತ್ತಿನ ವಿಶೇಷತೆ ಏನು ಅಂತಾ ನೋಡೋದಾದರೆ, ಕರ್ನಾಟಕದ ತುಂಬೆಲ್ಲಾ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದುಕೊಂಡಿದೆ. ನೋಡಲು ದಷ್ಟಪುಷ್ಟ, ಕಟ್ಟುಮಸ್ತಾದ ದೇಹ, ಎತ್ತರದ ನಿಲುವು ಹೊಂದಿದೆ.
ಮಾರಾಟಕ್ಕೂ ಮುನ್ನ ಮನೆಯವರಿಂದ ಆರತಿ ಬೆಳಗಿ, ಪೂಜೆ ಸಲ್ಲಿಸಿ, ಗುಲಾಲ್ ಎರಚಿ, ಪಟಾಕಿ ಸಿಡಿಸಿದರು. ನಂತರ ಭಾರದ ಮನಸ್ಸಿನಿಂದ ಕಣ್ಣೀರು ಇಡುತ್ತ ಬೀಳ್ಕೊಟ್ಟಿದ್ದಾರೆ.
ಇದನ್ನೂ ಓದಿ: ಇವತ್ತು ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ನಿಶ್ಚಿತಾರ್ಥ.. ಹುಡುಗಿ ಯಾರು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ