/newsfirstlive-kannada/media/post_attachments/wp-content/uploads/2024/10/Raza-Hassan.jpg)
ಅನೇಕ ಪಾಕಿಸ್ತಾನಿ ಕ್ರಿಕೆಟಿಗರು ಭಾರತೀಯ ಯುವತಿಯರನ್ನ ವಿವಾಹವಾಗಿದ್ದಾರೆ. ಇದೀಗ ಮತ್ತೋರ್ವ ಪಾಕ್​ ಮಾಜಿ ಕ್ರಿಕೆಟಿಗ ಭಾರತೀಯ ಯುವತಿಯನ್ನು ವರಿಸಲು ಮುಂದಾಗಿದ್ದಾರೆ. ಅಂದಹಾಗೆಯೇ ಆ ಮಾಜಿ ಆಟಗಾರ ಯಾರು? ತಿಳಿಯೋಣ.
ಪಾಕ್​​ ಮಾಜಿ ನಾಯಕ ಜಹೀರ್​ ಅಬ್ಬಾಸ್​, ಶೋಯೆಬ್​​ ಮಲಿಕ್​, ಮೊಹ್ಸಿನ್​​ ಖಾನ್​ ಮತ್ತು ಹಸನ್​ ಅಲಿ ಭಾರತೀಯರ ಯುವತಿಯನ್ನು ವಿವಾಹವಾಗಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೀಗ ರಝಾ ಹಸನ್​​ ಭಾರತೀಯ ಮೂಲದ ಪೂಜಾ ಬೋಮನ್​ ಎಂಬಾಕೆಯನ್ನು ವರಿಸಲಿದ್ದಾರೆ.
ಈಗಾಗಲೇ ರಝಾ ಹಸನ್​ ಮತ್ತು ಪೂಜಾ ಬೋಮನ್​​ ನಿಶ್ಚಿತಾರ್ಥ ನ್ಯೂಯಾರ್ಕ್​ನಲ್ಲಿ ನಡೆದಿದ್ದು, ಮುಂದಿನ ವರ್ಷ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ. ಪೂಜಾ ಜೊತೆಗಿನ ನಿಶ್ಚಿತಾರ್ಥ ಕುರಿತು ರಝಾ ತನ್ನ ಇನ್​​ಸ್ಟಾದಲ್ಲೂ ಈ ವಿಚಾರ ಹಂಚಿಕೊಂಡಿದ್ದಾರೆ. 32 ವರ್ಷದ ಈ ವ್ಯಕ್ತಿ ಎಡಗೈ ಸ್ಪಿನ್ನರ್​ ಆಗಿದ್ದು, ಪಾಕ್​ ಪರ ಕೇವಲ 1 ODI ಮತ್ತು 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
View this post on Instagram
ಇದನ್ನೂ ಓದಿ: ಧೋನಿ ಮನೆ ಮುಂದೆ ಒಂದು ವಾರ ಟೆಂಟ್ ಹಾಕಿ ವಾಸ.. 1200 KM ದೂರ ಬಂದಿದ್ದವನಿಗೆ ದರ್ಶನವಾಯ್ತಾ?
ರಾಝಾ ಹಸನ್​​ ಏಕದಿನ ಪಂದ್ಯದಲ್ಲಿ ಒಮದು ವಿಕೆಟ್​​ ಕಿತ್ತರೆ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಪಂದ್ಯದಲ್ಲಿ 10 ವಿಕೆಟ್​​ ಪಡೆದಿದ್ದಾರೆ. 2014ರಲ್ಲಿ ಪಾಖ್​​ ಪರವಾಗಿ ಕೊನೆಯ ಅಂತರಾಷ್ಟ್ರೀಯ ಪಂದ್ಯ ಆಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us