/newsfirstlive-kannada/media/post_attachments/wp-content/uploads/2025/01/Farhatullah-Ghori.jpg)
ಫಲವತ್ತಾದ ಭೂಮಿ, ಸಾಕಷ್ಟು ನದಿ ಮೂಲಗಳು. ಖನಿಜ ಸಂಪತ್ತು. ಬೇಕಾದನ್ನು ಬಿತ್ತಿ, ಬೇಕಾದನ್ನು ಬೆಳೆದು ಸುವರ್ಣಯುಗವನ್ನೇ ಧರೆಗೆ ತರಬಹುದಿತ್ತು ಪಾಕಿಸ್ತಾನ. ಆದ್ರೆ ಅದು ಹುಟ್ಟಿದಾರಭ್ಯದಿಂದ ತನ್ನ ನೆಲದಲ್ಲಿ ಬೆಳೆದದ್ದು ಬರೀ ಭಯೋತ್ಪಾದನೆಯೆಂಬ ವಿಷವನ್ನು. ಗಡಿಯನ್ನು ವಿಸ್ತಾರಗೊಳಿಸುವ ಹುಚ್ಚು ಬುದ್ಧಿಯನ್ನು. ಇವೆರಡನ್ನೂ ಬಿಟ್ಟು ಈ ದೇಶದಲ್ಲಿ ಈ ದೇಶದ ನಾಯಕರ ತಲೆಯಲ್ಲಿ ಬೇರೆನೂ ಬೆಳೆಯಲೇ ಇಲ್ಲ. ಜಗತ್ತಿನ ಚಂಡವ್ಯಾಘ್ರರಂತಹ ಭಯೋತ್ಪಾದಕರು ತಲೆಮರೆಸಿಕೊಳ್ಳಲು, ಅಡಗಿಕೊಳ್ಳಲು ಆಯ್ದುಕೊಳ್ಳುವುದೇ ಪಾಕಿಸ್ತಾನವನ್ನು ಮಸೂದ್ ಅಜರ್ನಿಂದ ಹಿಡಿದು, ಹಫೀಜ್ ಸಯೀದ್ವರೆಗೆ ವಿಶ್ವಕ್ಕೆ ಬೇಕಾಗಿರುವ ಭಯೋತ್ಪಾದಕರೆಲ್ಲರೂ ಇರೋದು ಇದೇ ಪಾಕಿಸ್ತಾನದಲ್ಲಿ.
ಪಾಕಿಸ್ತಾನ ಉಗ್ರರಿಗಾಗಿಯೇ ಸೃಷ್ಟಿಯಾಗಿರುವ ಸ್ವರ್ಗ ಎಂಬುದು ಈಗ ಜಾಗತಿಕ ಸತ್ಯವಾಗಿ ಉಳಿದುಕೊಂಡಿದೆ. ಸದಾ ಭಾರತದತ್ತ ವಿಷಕಾರುವ ಕ್ರಿಮಿಗಳು ಆ ದೇಶದಲ್ಲಿ ಸ್ವಚ್ಛಂದವಾಗಿ ಉಸಿರಾಡಿಕೊಂಡಿವೆ ಅದರ ನಡುವೆ ಮತ್ತೊಂದು ವಿಷಸರ್ಪ ಈಗ ಭಾರತದತ್ತ ಭುಸುಗುಡುತ್ತಿದೆ ಅದರ ಹೆಸರು ಫರಾತ್ಹುಲ್ಲಾ ಘೋರಿ.ಈತ ಈಗ ಸೋಷಿಯಲ್ ಮೀಡಿಯಾಗಳ ಮೂಲಕ ಭಾರತೀಯ ಯುವಕರ ತಲೆಯಲ್ಲಿ ವಿಷವನ್ನು ಬಿತ್ತುತ್ತಿದ್ದಾನೆ. ಹಿಂಸಾಚಾರ ಹರಡುವಂತೆ ಪ್ರಚೋದನೆ ಮಾಡುತ್ತಿದ್ದಾನೆ ಕಾರಣ ಬಾಬ್ರಿ ಮಸೀದಿ.
ಇದನ್ನೂ ಓದಿ:ವಿಶ್ವದ ಅತಿ ದೊಡ್ಡ ಪದಗ್ರಹಣ.. ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಹೇಗೆ ನಡೆಯಲಿದೆ? ಯಾರೆಲ್ಲಾ ಬರಲಿದ್ದಾರೆ?
ಈತ ಯುವಕರನ್ನು ದಾರಿತಪ್ಪಿಸಲು ಅತ್ಯಾಧುನಿಕ ಸೋಷಿಯಲ್ ಮೀಡಿಯಾಗಳ ವೇದಿಕೆಯನ್ನು ಉಪಯೋಗವನ್ನು ಪಡೆಯುತ್ತಿದ್ದಾನೆ. ತನ್ನದೇ ಒಂದು ಪ್ರೈವೇಟ್ ಗ್ರೂಪ್ ಮಾಡಿಕೊಂಡು ಆ ಮೆಸೆಂಜರ್ ಆ್ಯಪ್ ಮೂಲಕ ಯುವಕರಿಗೆ ಮತ್ತೆ ಭಾರತದಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಬೇಕು. ಅದು ಇದ್ದ ಜಾಗದಲ್ಲಿಯೇ ಮರಳಿ ತಲೆಯೆತ್ತಬೇಕು ಎಂಬೆಲ್ಲಾ ವಿಷಯವನ್ನು ಬಿತ್ತುತ್ತಿದ್ದಾನೆ ಎಂದು ತಿಳಿದುಬಂದಿದೆ.
ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ಗಳಲ್ಲಿ ಈತ ಬನ್ನಿ ಮತ್ತೆ ಬಾಬ್ರಿ ಮಸೀದಿ ಕಟ್ಟೋಣ ಎಂಬ ಕರೆಗಳನ್ನು ಕೊಡುತ್ತಿದ್ದಾನೆ. ಈ ಘೋರಿಯನ್ನು ಉಸ್ತಾದ್ ಅಂತಲೂ ಕೂಡ ಕರೆಯುತ್ತಾರೆ. ಬಾಬ್ರಿ ಮಸೀದಿ ಧ್ವಂಸಗೊಂಡ ವಾರ್ಷಿಕೋತ್ಸವ ಅಂದ್ರೆ ಕಳೆದ ಡಿಸೆಂಬರ್ 6 ರಂದು ಈಗ ಒಂದು ವಿಡಿಯೋ ಬಿಡುಗಡೆ ಮಾಡಿದ್ದ. ಮುಸ್ಲಿಂ ಯುವಕರು ಜಿಹಾದ್ಗಾಗಿ ದೇಶ ಪ್ರೇಮವನ್ನು ತೊರೆಯಬೇಕು. ಅಂತಿಮವಾಗಿ ರಾಮಮಂದಿರವನ್ನು ದೈವದ ಶಕ್ತಿಯಿಂದ ಕೆಡುವಬೇಕು ಎಂದು ಸಂದೇಶ ನೀಡಿದ್ದಾರೆ.
ಇದನ್ನೂ ಓದಿ:ವಿಶ್ವದಲ್ಲೇ ಟಾಪ್ 10 ಅತ್ಯಂತ ಅಸಂತುಷ್ಟ ರಾಷ್ಟ್ರಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಇನ್ನು ಈತನ ಇತಿಹಾಸವನ್ನು ಗಮನಿಸುತ್ತಾ ಹೋಗುವುದಾದ್ರೆ, ಈತ ಮೂಲತಃ ಪಾಕಿಸ್ತಾನದ ಹೈದ್ರಾಬಾದ್ ಮೂಲದವನು,. ಲಾಹೋರ್ನಿಂದಲೇ ತನ್ನ ಭಯೋತ್ಪಾದಕ ಸಂಘಟನೆಯನ್ನು ನಡೆಸುತ್ತಾನೆ. ಹಲವು ಹೈ ಪ್ರೊಫೈಲ್ ದಾಳಿಗಳ ಹಿಂದೆ ಈತನ ಕೈವಾಡವಿದೆ, 2002ರಲ್ಲಿ ಗುಜರಾತ್ನ ಅಕ್ಷರಧಾಮ್ ಮಂದಿರದಲ್ಲಾದ ಭಯೋತ್ಪಾದಕ ದಾಳಿ, 2005ರಲ್ಲಿ ಹೈದ್ರಾಬಾದ್ನ ಟಾಸ್ಕ್ ಫೋರ್ಸ್ ಆಫೀಸ್ ಮೇಲೆ ಆದ ದಾಳಿಯ ಹಿಂದೆ ಈ ಫರ್ಹಾತುಲ್ಹಾ ಘೋರಿ ಹೆಸರು ತಳುಕು ಹಾಕಿಕೊಂಡಿದೆ.
ಇನ್ನು 2022ರಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ನಲ್ಲಿಯೂ ಕೂಡ ಈತನ ಕೈವಾಡವಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಐಎಸ್ಐ ಜೊತೆ ಸೇರಿ ಈತ ಸ್ಲೀಪರ್ ಸೆಲ್ ನಡೆಸುತ್ತಾನೆ. ಸದ್ಯ ಭಾರತದ ಮುಸ್ಲಿಂ ಯುವಕರಿಗೆ ನೂತನವಾಗಿ ನಿರ್ಮಾಣಗೊಂಡಿರುವ ರಾಮಮಂದಿರವನ್ನು ಧ್ವಂಸಗೊಳಿಸಿ ಬಾಬ್ರಿ ಮಸೀದಿಯ ಪುನಃಸ್ಥಾಪನೆಗೆ ಕರೆಕೊಡುವ ಹುನ್ನಾರಕ್ಕೆ ಕೈ ಹಾಕಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ