/newsfirstlive-kannada/media/post_attachments/wp-content/uploads/2025/01/SHEESH-MAHAL.jpg)
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭವ್ಯ ಮನೆಯ ಬಗ್ಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಸದಾ ಶೀಶ್ ಮಹಲ್ ಎಂದು ವ್ಯಂಗ್ಯ ಮಾಡುತ್ತಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಱಲಿಯಲ್ಲಿಯೂ ಕೂಡ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅದೇ ಭಾಷೆಯಲ್ಲಿ ಮಾತನಾಡಿದ್ದರು. ಕೇಜ್ರಿವಾಲ್ ಬೇಕು ಎನಿಸಿದರೆ ಶೀಶ್ ಮಹಲ್ ಕಟ್ಟಿಸಬಲ್ಲರು ಎಂದು ಟಾಂಗ್ ಕೊಟ್ಟಿದ್ದರು. ಸದ್ಯ ದೆಹಲಿಯ ರಾಜಕಾರಣದಲ್ಲಿ ಶೀಶ್ ಮಹಲ್ ಪ್ರಮುಖ ಶಬ್ಧವಾಗಿ ಬಳಕೆಯಾಗುತ್ತದೆ. ಮೋದಿ ಬಳಸುವ ಈ ಶೀಶ್ ಮಹಲ್ ಯಾವುದು. ಅಸಲಿಗೆ ಅದರ ಹಿಂದಿರುವ ಇತಿಹಾಸವೇನು ಅಂತ ನೋಡುವುದಾದ್ರೆ. ಜೈಪುರದ ಅಂಬರ್ ಕೋಟೆಯ ಇತಿಹಾಸವನ್ನು ನಾವು ನೋಡಬೇಕಾಗುತ್ತದೆ.
ಶೀಶ್ ಮಹಲ್ ಎಂಬುದು ಜೈಪುರದ ಅಂಬರ್ ಕೋಟೆಯಲ್ಲಿದೆ. ಇದನ್ನು ರಾಜಾ ಮಾನ್ ಸಿಂಗ್ ಕಾಲವಧಿಯಲ್ಲಿ ನಿರ್ಮಾಣ ಮಾಡಲಾಯ್ತು 1623ರಲ್ಲಿ ಕಟ್ಟಲು ಆರಂಭಿಸಿ 1727ರಲ್ಲಿ ಮುಗಿಸಲಾಯ್ತು. ಇದನ್ನು ಕಟ್ಟಿ ಮುಗಿಸಿದ ವರ್ಷವೇ ಮಹಾರಾಜಾ ಎರಡನೇ ಸವಾಯ್ ಜೈ ಸಿಂಗ್ ಜೈಪುರ ನಗರವನ್ನು ಸ್ಥಾಪಿಸಿದದ್ದರು. ಈ ಒಂದು ಭವ್ಯ ಮಹಲ್ನ್ನು ಗಾಜುಗಳಿಂದ, ಮುತ್ತು ಹಾಗೂ ವಿಶಷ್ಟ ಹರಳುಗಳಿಂದ ಅಲಂಕರಿಸಿ ಕಟ್ಟಲಾಗಿದೆ. ರಾಜಾ ಮಾನ್ ಸಿಂಗ್ ಈ ಕೋಟೆಯಲ್ಲಿ ಶೀಶ್ ಮಹಲ್ನ್ನು ಕಟ್ಟಿಸಿದ ಪ್ರಮುಖ ಕಾರಣ ತನ್ನ ಪ್ರೀತಿಯ ರಾಣಿಯು ನಕ್ಷತ್ರಗಳನ್ನು ನೋಡುವ ಆಸೆಯನ್ನು ಪೂರೈಸಲು. ಮಾನ್ಸಿಂಗ್ ಅವರ ಪ್ರೀತಿಯ ರಾಣಿ ನಕ್ಷತ್ರಗಳನ್ನು ನೋಡುತ್ತಲೇ ಮಲಗಿಕೊಳ್ಳಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:₹7 ಲಕ್ಷಕ್ಕೆ ತಾಜ್ ಮಹಲ್ ಮಾರಾಟಕ್ಕೆ ಮುಂದಾಗಿದ್ದ ಬ್ರಿಟೀಷರು; ಕೊನೆಗೆ ಹಿಂದೆ ಸರಿದಿದ್ದಕ್ಕೆ ಕಾರಣ ಇಲ್ಲಿದೆ!
ರಾಣಿಯ ಆಸೆಯನ್ನು ಪೂರೈಸಲು ರಾಜಾ ಮಾನ್ ಸಿಂಗ್ ಈ ರೀತಿಯ ಒಂದು ಶೀಶ್ ಮಹಲ್ನ್ನು ಕಟ್ಟಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಶೀಶ್ ಮಹಲ್ ಕೇವಲ ಒಂದು ಪ್ರೇಮ ಸಂಕೇತವಾಗಿ ಹೆಸರುವಾಸಿಯಾಗಿಲ್ಲ. ಅದರ ಕಲೆ ಹಾಗೂ ರಾಜಸ್ಥಾನದ ಸಾಂಸ್ಕೃತಿಕ ಪರಂಪರೆಯ ಗುರುತಾಗಿ ನಿಂತಿದೆ. ಮೊಘಲ್ ಹಾಗೂ ಹಿಂದೂ ಮಿಶ್ರಿತ ವಿನ್ಯಾಸದಲ್ಲಿ ಕಟ್ಟಲಾಗಿರುವ ಈ ಕೋಟೆಯನ್ನು ಸಿಂಗರಿಸಲು ಬೆಜ್ಜಿಯಂನಿಂದ ಗಾಜುಗಳನ್ನು ಹಾಗೂ ಕನ್ನಡಿಗಳನ್ನು ತರಿಸಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಬರೋಬ್ಬರಿ 24000 ಕೋಟಿ; 170 ರೂಮ್, ಗಾಲ್ಫ್ ಕೋರ್ಸ್, ದರ್ಬಾರ್ ಹಾಲ್… ಇದು ವಿಶ್ವದ ಅತ್ಯಂತ ದೊಡ್ಡ ಮನೆ!
ಈ ಶೀಶ್ ಮಹಲ್ ಅತಿಹೆಚ್ಚು ಪ್ರಸಿದ್ಧಿಗೆ ಬಂದಿದ್ದು 60ರ ದಶಕದಲ್ಲಿ ಬಂದ ಮೊಘಲ್ ಇ ಆಜಂ ಸಿನಿಮಾದಿಂದ. ಇದೇ ಶೀಶ್ ಮಹಲ್ನಲ್ಲಿಯೇ ಅಂದಿನ ಜನಪ್ರಿಯ ಹಾಡಾದ ಜಬ್ ಪ್ಯಾರ್ ಕಿಯಾ ತೋ ಡರನಾ ಕ್ಯಾ ಅನ್ನೋ ಹಾಡು ಶೂಟಿಂಗ್ ಮಾಡಲಾಗಿತ್ತು.
ಈ ಶೀಶ್ ಮಹಲ್ನ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ಒಂದೇ ಒಂದು ಮೇಣದಬತ್ತಿಯನ್ನು ಹಚ್ಚಿದರೆ ಸಾಕು ಅಲ್ಲಿ ಅಲಂಕರಿಸಿದ ಕನ್ನಡಿಯಲ್ಲಿ ಅದರ ಪ್ರತಿಫಲನ ಬಿದ್ದು ಇಡೀ ಶೀಶ್ ಮಹಲ್ ಝಗಮಗಿಸುತ್ತದೆ. ಒಂದು ಮೇಣದ ಬತ್ತಿ, ಲಕ್ಷಾಂತರ ಮೇಣದಬತ್ತಿ ನೀಡುವ ಬೆಳಕನ್ನು ನೀಡುತ್ತದೆ. ಇದು ರಾಜಸ್ಥಾನದಲ್ಲಿ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳದಲ್ಲೊಂದು. ಪ್ರತಿ ವರ್ಷ ಲಕ್ಷಾಂತರ ಜನರು ಬಂದು ಈ ಮಹಲ್ ನೋಡಿ ಸಂಭ್ರಮಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ