/newsfirstlive-kannada/media/post_attachments/wp-content/uploads/2024/06/darshan-17-2.jpg)
ಸ್ಯಾಂಡಲ್​ವುಡ್​​ ನಟ ದರ್ಶನ್ ಸದ್ಯ 3ನೇ ಬಾರಿಗೆ ಪೊಲೀಸ್​​ ಕಸ್ಟಡಿಯಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದಾರೆ. ಆದರೀಗ ದರ್ಶನ್​ ನಂಬಿ ಹೊಸ ಸಿನಿಮಾಗೆ ಬಂಡವಾಳ ಹಾಕಿದವರು ಕಣ್ಣೀರು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ದರ್ಶನ್​ ಹೊಸ ಚಿತ್ರ ‘ಡೆವಿಲ್’​ಗೆ ಶಾಸಕರು, ಸಚಿವರ ಬಂಡವಾಳ ಹಾಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಈ ಚಿತ್ರಕ್ಕೆ ದೊಡ್ಡ ಮೊತ್ತದಲ್ಲಿ ಬಂಡವಾಳ ಹಾಕಿರುವ ನಾಯಕರು ಕಣ್ಣೀರಿಡುತ್ತಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಅರೆಸ್ಟ್​ ಆಗುತ್ತಿದ್ದಂತೆ ಡೆವಿಲ್ ಸಿನಿಮಾ ಶೂಟಿಂಗ್​​ ನಿಂತಿದೆ. ಡೆವಿಲ್​ ನಾಯಕನನ್ನು ಪೊಲೀಸರು ಮೈಸೂರಿನಲ್ಲೇ ಅರೆಸ್ಟ್​ ಮಾಡಿದ್ದರು. ಆದರೀಗ ಅರ್ಧಕ್ಕೆ ನಿಂತ ಡೆವಿಲ್​ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿರುವವರು ತಲೆಗೆ ಕೈ ಇಟ್ಟು ಕುಳಿತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ
ಇತ್ತೀಚೆಗೆ ಗೃಹ ಸಚಿವರ ನಿವಾಸದಲ್ಲಿ ಸಚಿವರೊಬ್ಬರು ದರ್ಶನ್​ ವಿಚಾರವಾಗಿ ಕಣ್ಣೀರು ಹಾಕಿದ್ದರು. ಆ ಸಚಿವರಿಂದಲೇ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಬೆಂಗಳೂರಿನ ಇನ್ನೊಬ್ಬ ಶಾಸಕರೊಬ್ಬರು ಡೆವಿಲ್​ಗೆ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ.
ಇದಲ್ಲದೆ, ಸಚಿವರೊಬ್ಬರ ಪುತ್ರನಿಂದಲೂ ದರ್ಶನ್ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಎರಡು ಪ್ರಮುಖ ಪಕ್ಷಗಳ ನಾಯಕರಿಂದ ಹಣ ಹೂಡಿಕೆಯ ಬಗ್ಗೆ ಚರ್ಚೆ ನಡೆಯುತ್ತಿವೆ. ಆದರೆ ದರ್ಶನ್ ಬಂಧನದ ಬೆನ್ನಲ್ಲೇ ಹಾಕಿರುವ ಬಂಡವಾಳ ನೆನೆದು ನಾಯಕರು ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ