/newsfirstlive-kannada/media/post_attachments/wp-content/uploads/2025/03/unique-railway-station.jpg)
ಭಾರತದಲ್ಲಿ ಅನೇಕ ರೈಲ್ವೆ ಸ್ಟೇಷನ್ಗಳಿವೆ. ಒಟ್ಟು 7461 ರೈಲ್ವೆ ನಿಲ್ದಾಣಗಳಿವೆ ಎಂದು ಹೇಳಲಾಗುತ್ತದೆ. ಆದ್ರೆ ನಾವು ಕೆಲವೊಂದು ನಗರಗಳಿಗೆ ತೀರ್ಥ ಕ್ಷೇತ್ರಗಳಿಗೆ ಹೋಗಬೇಕಾದರೆ. ಹಲವು ಕಡೆ ಇಳಿದು ಬೇರೆ ರೈಲನ್ನು ಹಿಡಿದುಕೊಂಡು ಹೋಗಬೇಕಾಗುತ್ತದೆ. ಒಂದೇ ರೈಲು ನಿಲ್ದಾಣದಿಂದ ಒಂದೇ ರೈಲಿನಿಂದ ದೇಶದ ಎಲ್ಲಾ ಕಡೆ ಹೋಗಲು ಸಾಧ್ಯವಿಲ್ಲ. ಆದ್ರೆ ಭಾರತದಲ್ಲಿ ಒಂದು ರೈಲು ನಿಲ್ದಾಣವಿದೆ. ಈ ರೈಲು ನಿಲ್ದಾಣದಿಂದ ನೀವು ದೇಶದ ಯಾವುದೇ ಮೂಲೆಗೆ ಹೋಗಲು ಕೂಡ ರೈಲುಗಳ ಸೌಲಭ್ಯವಿದೆ. ಆ ರೈಲು ನಿಲ್ದಾಣದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ
ಈ ಒಂದು ರೈಲ್ವೆ ನಿಲ್ದಾಣದಿಂದ ನಿಮಗೆ ದೇಶದ ಎಲ್ಲಾ ಮೂಲೆ ಮೂಲೆಗಳಿಗೂ ರೈಲು ಪ್ರಯಾಣದ ಸೌಲಭ್ಯ ದೊರಕುತ್ತದೆ. ಆ ವಿಮಾನ ನಿಲ್ದಾಣದ ಹೆಸರು ಮಥುರಾ ಜಂಕ್ಷನ್. ಉತ್ತರಪ್ರದೇಶದಲ್ಲಿರುವ ಕೃಷ್ಣ ನಗರಿ ಮಥುರಾ ಜಂಕ್ಷನ್ನಲ್ಲಿ ದೇಶದ ಯಾವುದೇ ಮೂಲೆಗೂ ನೀವು ಪ್ರಯಾಣ ಮಾಡಬೇಕಾದರು ನಿಮಗೆ ಆ ನಗರಕ್ಕೆ ಹೋಗಲು ಅಥವಾ ಆ ರೈಲು ನಿಲ್ದಾಣಕ್ಕೆ ಹೋಗಲು ರೈಲು ದೊರೆಯುತ್ತವೆ.
ಇದನ್ನೂ ಓದಿ:ಭಾರತದಲ್ಲಿ ಮೊಟ್ಟ ಮೊದಲ ಟ್ರೈನ್ ಹೈಜಾಕ್ ನಡೆದಿದ್ದು ಯಾವಾಗ? ಮಾಡಿದ್ದು ಯಾರು? ಹೇಗಿತ್ತು ಆಪರೇಷನ್?
ದೇಶದ ನಾಲ್ಕು ದಿಕ್ಕುಗಳಿಗೆ ಇಲ್ಲಿಂದ ರೈಲುಗಳು ಹೊರಡುತ್ತವೆ. ಪೂರ್ವ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ ಭಾರತದ ನಾಲ್ಕು ದಿಕ್ಕುಗಳಿಗೆ ಚಲಿಸುವ ರೈಲುಗಳು ಇಲ್ಲಿ ನಮಗೆ ದೊರೆಯುತ್ತವೆ. ಅದು ಮಾತ್ರವಲ್ಲ ಇದು ಉತ್ತರಪ್ರದೇಶದ ಅತಿದೊಡ್ಡ ರೈಲ್ವೆ ನಿಲ್ದಾಣ ಎಂದು ಹೆಸರು ಕೂಡ ಪಡೆದಿದೆ. ಸದಾ ಜನಜಂಗುಳಿಯಿಂದ ಕೂಡಿದ ಸದಾ ಚಟುವಟಿಕೆಯಲ್ಲಿರುವ ರೈಲು ನಿಲ್ದಾಣ ಎಂಬ ಹೆಸರು ಮಥುರಾ ಜಂಕ್ಷನ್ಗೆ ಇದೆ.
ಮಥುರಾ ಬಿಟ್ಟರೇ ಇನ್ನು ಹಲವು ಪ್ರಮುಖ ರೈಲ್ವೆ ನಿಲ್ದಾಣಗಳು ಭಾರತದಲ್ಲಿವೆ. ನವದೆಹಲಿ, ಅಹಮದಾಬಾದ್, ಖರಗಪುರ್, ಕಾನ್ಪುರ್ ಮತ್ತು ವಿಜಯವಾಡ. ಈ ರೈಲು ನಿಲ್ದಾಣಗಳಲ್ಲಿಯೂ ಬಹುತೇಕ ಎಲ್ಲಾ ರಾಜ್ಯಗಳಿಗೂ ಹೋಗುವ ರೈಲುಗಳ ವ್ಯವಸ್ಥೆ ಇದೆ. ಆದ್ರೆ ಮಥುರಾ ಜಂಕ್ಷನ್ಗೆ ಹೋಲಿಸಿದರೆ. ಇವು ದೇಶದ ಎಲ್ಲಾ ಭಾಗಗಳಿಗೆ ತಲುಪಿಸುವ ರೈಲುಗಳ ವ್ಯವಸ್ಥೆಯನ್ನು ಹೊಂದಿಲ್ಲ. ನೀವು ಮಥುರಾ ಜಂಕ್ಷನ್ನಿಂದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ ಅರುಣಾಚಲಪ್ರದೇಶದಿಂದ ಹಿಡಿದು ಗುಜರಾತ್ವರೆಗೂ ನೇರ ರೈಲು ಸೇವೆ ಪಡೆಯಬಹುದಾಗಿದೆ. ಭಾರತದ ಪ್ರತಿ ನಗರಕ್ಕೂ ಇಲ್ಲಿಂದ ನಮಗೆ ರೈಲು ಸಿಗುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ