/newsfirstlive-kannada/media/post_attachments/wp-content/uploads/2025/04/RAJAT_JITESH.jpg)
ಸೀಸನ್-18ರ ಐಪಿಎಲ್ನಲ್ಲಿ ಟೇಬಲ್ ಟಾಪರ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇ ಆಫ್ ಎಂಟ್ರಿಗೆ ತುದಿಗಾಲಲ್ಲಿ ನಿಂತಿದೆ. ಸೀಸನ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡ್ತಿದ್ರೂ ಆರ್ಸಿಬಿ ತಂಡದಲ್ಲಿ ನೆಮ್ಮದಿಯಿಲ್ಲ. ಮ್ಯಾನೇಜ್ಮೆಂಟ್ ವಲಯದಲ್ಲಿ ಟೆನ್ಶನ್ ಹೆಚ್ಚಾಗ್ತಿದೆ.
ರಾಯಲ್ ಚಾಲೆಂಜರ್ಸ್ಗೆ ಟೆನ್ಶನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೀಸನ್-18ರ ಐಪಿಎಲ್ನಲ್ಲಿ ರಾಯಲ್ ಆಟವಾಡ್ತಿದೆ. ಆರ್ಸಿಬಿಯ ಗೆಲುವಿನ ದಂಡಯಾತ್ರೆ ಆರ್ಸಿಬಿ ಕ್ಯಾಂಪ್ನಲ್ಲಿ ಮಾತ್ರವಲ್ಲ.. ಆರ್ಸಿಬಿ ಅಭಿಮಾನಿಗಳ ಜೋಶ್ ಸಹ ಹೆಚ್ಚಿಸಿದೆ. ಇನ್ನೆರಡು ಪಂದ್ಯ ಗೆದ್ದು ಬಿಟ್ರೆ, ಪ್ಲೇ-ಆಫ್ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ಆರ್ಸಿಬಿ ಒಗ್ಗಟ್ಟಿನ ಆಟ ಕಪ್ ಗೆಲುವಿನ ಕನಸನ್ನು ದುಪ್ಪಟ್ಟಾಗಿಸಿದೆ. ಪಾಸಿಟಿವ್ ಅಂಶಗಳೇ ತಂಡದಲ್ಲಿದ್ರೂ, ಡ್ರೆಸ್ಸಿಂಗ್ ರೂಮ್ನಲ್ಲಿ ಒಂದು ಫಿಯರ್ ಸಹ ಕಾಡ್ತಿದೆ. ಆ ಆಟಗಾರರ ಆಟ ಹೊಸ ಚಿಂತೆಯನ್ನು ಹುಟ್ಟಿಹಾಕಿದೆ.
ಇದನ್ನೂ ಓದಿ: ಗಿಲ್ ಭರ್ಜರಿ ಹ್ಯಾಟ್ರಿಕ್ ಅರ್ಧಶತಕ.. 2 ರನ್ ಇಂದ ಸುದರ್ಶನ್ ಹಾಫ್ಸೆಂಚುರಿ ಮಿಸ್
ನಡೀತಿಲ್ಲ ರಜತ್ ಪಟಿದಾರ್ ರೌದ್ರವತಾರ
ಐಪಿಎಲ್ ಆರಂಭದಲ್ಲಿ ನಾಯಕ ರಜತ್ ಪಟಿದಾರ್ 4 ಪಂದ್ಯಗಳಿಂದ 161 ರನ್ ಚಚ್ಚಿ ಅಬ್ಬರಿಸಿದ್ದರು. ಆರ್ಸಿಬಿ ನಾಯಕನ ಆಟ ನೋಡಿದ್ದ ಬಹುತೇಕರು ಬಹುಪರಾಕ್ ಹೇಳಿದ್ರು. 4 ಪಂದ್ಯ ಮುಗಿದಿದ್ದೇ ತಡ ರಜತ್ ರೌದ್ರವತಾರವೇ ಮಾಯವಾಗಿದೆ. ಕಳೆದ 6 ಪಂದ್ಯಗಳಿಂದ ಕೇವಲ 67 ರನ್ ಗಳಿಸಿರುವ ರಜತ್, ಬಿಗ್ ಇನ್ನಿಂಗ್ಸ್ ಕಟ್ಟಲು ಪರದಾಡ್ತಿದ್ದಾರೆ.
ಜಿತೇಶ್ ಶರ್ಮಾ ಫುಲ್ ಸೈಲೆಂಟ್
ವಿಕೆಟ್ ಕೀಪರ್ ಆ್ಯಂಡ್ ಮ್ಯಾಚ್ ಫಿನಿಷರ್ ಆಗಿ ಜಿತೇಶ್, ಟೂರ್ನಿಯ ಆರಂಭದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ರು. ಜಿತೇಶ್ ಆಟ ಈಗ ವಿಕೆಟ್ ಹಿಂಭಾಗಕ್ಕೆ ಮಾತ್ರವೇ ಸೀಮಿತವಾಗ್ತಿದೆ. ವಿಕೆಟ್ ಹಿಂದೆ ಚುರುಕಿನ ಕೀಪಿಂಗ್ ಮಾಡ್ತಿರುವ ಜಿತೇಶ್, ವಿಕೆಟ್ ಮುಂದೆ ಕನ್ಸಿಸ್ಟೆನ್ಸಿ ಕಾಯ್ದುಕೊಳ್ತಿಲ್ಲ. ಕಳೆದ 4 ಇನ್ನಿಂಗ್ಸ್ಗಳಿಂದ ಕೇವಲ 36 ರನ್ ಗಳಿಸಿರುವ ಜಿತೇಶ್, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಫಿನಿಷರ್ ರೋಲ್ನ ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ.
ಇದನ್ನೂ ಓದಿ: ಅಂಪೈರ್ ಜೊತೆ ಆಕ್ರೋಶಗೊಂಡು ಅಭಿಷೇಕ್ ಶರ್ಮಾ ಕಾಲಿಗೆ ಒದ್ದ ಗಿಲ್ VIDEO
ಆರಂಭದ ಯಶಸ್ಸು ಮಾಯ..
ಟೂರ್ನಿಯ ಆರಂಭಕ್ಕಿಂತ ಟೂರ್ನಿ ಸಾಗಿದಂತೆ ಆಟಗಾರರು ಶೈನ್ ಆಗಬೇಕು. ಯಶ್ ದಯಾಳ್ ಸೈಲೆಂಟ್ ಆಗ್ತಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ 8ರ ಏಕಾನಮಿಯಲ್ಲಿ ರನ್ ನೀಡಿದ್ದ ಯಶ್ ದಯಾಳ್, ಚೆನ್ನೈ ಹಾಗೂ ಗುಜರಾತ್ ಟೈಟನ್ಸ್ ಎದುರು 6ರ ಎಕಾನಮಿಯಲ್ಲಿ ಸ್ಪೆಲ್ ಹಾಕಿದ್ರು. ಕಳೆದ 7 ಪಂದ್ಯಗಳಿಂದ ಯಶ್ ದಯಾಳ್ರ ಈ ಮ್ಯಾಜಿಕ್ ಮಾಯವಾಗಿದೆ. 10ರ ಏಕಾನಮಿಯಲ್ಲಿ ರನ್ ನೀಡಿರುವ ದಯಾಳ್ ದುಬಾರಿಯಾಗ್ತಿದ್ದಾರೆ.
ಕಮ್ಬ್ಯಾಕ್ ಮಾಡದಿದ್ದರೆ ಆರ್ಸಿಬಿಗೆ ಕಷ್ಟ.!
ಈಗಾಗಲೇ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಹಾವು ಏಣಿ ಆಟ ನಡೀತಿದೆ. ದಿನದಿಂದ ದಿನಕ್ಕೆ ಲೆಕ್ಕಾಚಾರಗಳು ಬದಲಾಗ್ತಿವೆ. 7 ತಂಡಗಳಿಗೆ ಪ್ಲೇ ಆಫ್ ಪ್ರವೇಶದ ಅವಕಾಶ ಓಪನ್ ಆಗಿದೆ. ಇಂಥ ಟೈಮ್ನಲ್ಲಿ ಪ್ರತಿ ಆಟಗಾರರು ಎಚ್ಚರಿಕೆಯ ಜವಾಬ್ದಾರಿಯುತ ಆಟವಾಡ ಬೇಕಿದೆ. ಅತಿಯಾದ ಆತ್ಮವಿಶ್ವಾಸದಲ್ಲಿ ಮೆರೆದಾಡದೇ ಆರ್ಸಿಬಿ ಕೂಡ ಮಿಸ್ಟೇಕ್ಸ್ ಮೇಲೆ ವರ್ಕೌಟ್ ಮಾಡಬೇಕಿದೆ. ಮುಖ್ಯವಾಗಿ ಈ ಮೂವರು ಇವತ್ತು ಕಮ್ಬ್ಯಾಕ್ ಮಾಡಬೇಕಿದೆ.
ಟಿ20 ಅನ್ನೋದು ಫಾಸ್ಟ್ ಗೇಮ್. ಇಲ್ಲಿ ಒಂದಿಬ್ಬರ ಆಟವೇ ಗೆಲುವನ್ನು ನಿರ್ಣಯಿಸುತ್ತೆ. ಹಾಗೇ ಒಂದಿಬ್ಬರ ಆಟ ಸೋಲಿಗೂ ಕಾರಣವಾಗುತ್ತೆ. ಹೀಗಾಗಿ ಆರ್ಸಿಬಿ ಎಚ್ಚೆತ್ತುಕೊಳ್ಳಬೇಕಿದೆ.
ಇದನ್ನೂ ಓದಿ: IPL ಕದನದಲ್ಲಿ ಅಭಿಮಾನಿಗಳಿಗೆ ಭಾವುಕ ಕ್ಷಣ.. ಕೊಹ್ಲಿ-ಧೋನಿ ಕೊನೆಯ ಬಾರಿಗೆ ಮುಖಾಮುಖಿ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್