ಫ್ಯಾನ್ಸ್​ಗೆ ಭರ್ಜರಿ ನ್ಯೂಸ್​.. ತ್ರಿವಿಕ್ರಮ್​ಗೆ ದೊಡ್ಡ ಮಟ್ಟದ ಹಿಟ್​​ ಕೊಡುತ್ತಾ ಈ ಸೀರಿಯಲ್!

author-image
Veena Gangani
Updated On
ಫ್ಯಾನ್ಸ್​ಗೆ ಭರ್ಜರಿ ನ್ಯೂಸ್​.. ತ್ರಿವಿಕ್ರಮ್​ಗೆ ದೊಡ್ಡ ಮಟ್ಟದ ಹಿಟ್​​ ಕೊಡುತ್ತಾ ಈ ಸೀರಿಯಲ್!
Advertisment
  • ವೀಕ್ಷಕರಲ್ಲಿ ಮತ್ತಷ್ಟೂ ಕುತೂಹಲ ಹೆಚ್ಚಿಸಿದ ತ್ರಿವಿಕ್ರಮ್ ನಟನೆ
  • ಬಿಗ್​ಬಾಸ್​ ಸೀಸನ್ 11ರ ರನ್ನರ್ ಅಪ್​ ಆಗಿದ್ದ ತ್ರಿವಿಕ್ರಮ್​
  • ಕೆಲವೇ ದಿನಗಳಲ್ಲಿ ತೆರೆಗೆ ಬರೋದಕ್ಕೆ ಸಜ್ಜಾಗ್ತಿದೆ ಮುದ್ದು ಸೊಸೆ

ಹೊಸ ಧಾರಾವಾಹಿ ಬರ್ತಿದೆ ಅಂದ್ರೇ ನಿರೀಕ್ಷೆಗಳು ಸಹಜ. ಅದು ಈಗಾಗಲೇ ಜನಪ್ರಿಯತೆ ಉತ್ತಂಗದಲ್ಲಿರೋರು ಮತ್ತೆ ಸೀರಿಯಲ್​ ಮಾಡ್ತಾರೆ ಅಂದಾಗ, ಎಲ್ಲರ ಚಿತ್ತ ಅವರ ಮೇಲೆ ನೆಟ್ಟಿರುತ್ತೆ. ಬಿಗ್​ಬಾಸ್​ ಸೀಸನ್ 11ರ ರನ್ನರ್ ಅಪ್​ ಆಗಿದ್ದ ತ್ರಿವಿಕ್ರಮ್ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!

publive-image

ಮುದ್ದು ಸೊಸೆ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರೋದಕ್ಕೆ ಸಜ್ಜಾಗ್ತಿದೆ. ರಿಮೇಕ್​ ಸ್ಟೋರಿ ಆದ್ರೂ ಬೆಟ್ಟದಷ್ಟು ನಿರೀಕ್ಷೆ ಇದೆ. ಬಿಗ್​ಬಾಸ್​ನಲ್ಲಿ ಟಾಪ್​ನಲ್ಲಿದ್ದ ತ್ರಿವಿಕ್ರಮ್​ಗೆ ಮತ್ತೊಂದು ದೊಡ್ಡಮಟ್ಟದ ಹಿಟ್​​ ಕೊಡುತ್ತಾ ಸೀರಿಯಲ್​ ಎಂಬ ಕುತೂಹಲ ಸಹಜವಾಗಿಯೇ ವೀಕ್ಷಕರಲ್ಲಿದೆ.

publive-image

ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್​ ಮಾಡಿರೋ ತಂಡಕ್ಕೆ ಉತ್ತಮ ರೆಸ್ಪಾನ್ಸ್​ ಸಿಕ್ತಿದೆ. ಇದೇ ಬೆನ್ನಲ್ಲೇ ಮತ್ತೊಂದು ಹೊಸ ಪ್ರೊಮೋ ಬಿಡುಗಡೆ ಮಾಡಿದೆ. ಓದು ಅರ್ಧಕ್ಕೆ ನಿಲ್ಲುತ್ತೆ ಎಂಬ ಭಯದಲ್ಲಿ ನಾಯಕಿ ತಾನು ಮೈನರ್​ ಅನ್ನೋ ವಿಷ್ಯ ಪೊಲೀಸರಿಗೆ ಮಾಹಿತಿ ನೀಡ್ತಾಳೆ. ಇನ್ನೇನು ನಾಯಕ ತಾಳಿ ಕಟ್ಬೇಕು, ಪೊಲೀಸ್​ ಬಂದು ಮದುವೆಯನ್ನು ನಿಲ್ಲಿಸುತ್ತಾರೆ.

publive-image

ಆದ್ರೇ ಈ ವಿಚಾರ ಯಾರು ಪೊಲೀಸ್​ಗೆ ತಿಳಿಸಿದ್ದು ಅನ್ನೋದೇ ನಾಯಕನಿಗೆ ದೊಡ್ಡ ಪ್ರಶ್ನೆ ಆಗಿರುತ್ತೆ. ಜೊತೆಗೆ ನಾಯಕನ ತಂದೆ ಅರೆಸ್ಟ್​​ ಆಗಿರ್ತಾರೆ. ಈ ಎಲ್ಲಾ ಗೊಂದಲದ ನಡುವೆ ನಾಯಕಿಗೆ 18 ತುಂಬಿದ ತಕ್ಷಣ ಮದುವೆ ಆಗೋ ಶಪತ ಮಾಡ್ತಾನೆ ನಾಯಕ. ಅಲ್ಲಿವರೆಗೂ ಇವರ ಪ್ರೀತಿಯ ಪಯಣ ಸಾಗ್ತಿರುತ್ತೆ.

ಪಕ್ಕಾ ಮಂಡ್ಯ ಸ್ಟೈಲ್​ನಲ್ಲಿ ಕಾಣಿಸಿಕೊಂಡಿರೋ ತ್ರಿವಿಕ್ರಮ್​, ಧಾರಾವಾಹಿಯಲ್ಲಿ ಪಂಚೆ​ ಶರ್ಟ್​ನಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಹೆಸರು ಭದ್ರೇಗೌಡ. ನಾಯಕಿ ಪ್ರತಿಮಾ ವಿದ್ಯಾ ಪಾತ್ರ ಮಾಡ್ತಿದ್ದಾರೆ. ಪ್ರೋಮೋ ಶೂಟಿಂಗ್​ ವೇಳೆ ಧಾರಾವಾಹಿ ಬಗ್ಗೆ ಅನಿಸಿಕೆ ಹಂಚ್ಕೊಂಡಿದ್ದಾರೆ. ಭದ್ರೇಗೌಡ-ವಿದ್ಯಾ ಜರ್ನಿ ಇದೇ ಏಪ್ರಿಲ್​ 14 ರಿಂದ ರಾತ್ರಿ 7.30ಕ್ಕೆ ಶುರುವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment