/newsfirstlive-kannada/media/post_attachments/wp-content/uploads/2024/12/non-vegetarian.jpg)
ಭಾರತವೆಂದರೆ ವಿಶ್ವದ ಅತಿಹೆಚ್ಚು ಸಸ್ಯಾಹಾರಿಗಳನ್ನು ಹೊಂದಿರುವ ದೇಶ ಎಂದೇ ಗುರುತಿಸಲಾಗುತ್ತದೆ. ಆದರೂ ಕೂಡ ಪ್ರತಿವರ್ಷ ಇಲ್ಲಿ ಮಾಂಸಾಹಾರಿಗಳ ಸಂಖ್ಯೆ ಏರಿಕೆಯಲ್ಲಿಯೇ ಹೋಗುತ್ತಿದೆ. ಇತ್ತೀಚಿನ ಸಮಿಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇಕಡಾ 85 ರಷ್ಟ ಜನರು ಮಾಂಸಾಹಾರ ಸೇವನೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಇದೆಲ್ಲದರ ನಡುವೆಯೂ ಕೂಡ ಆಹಾರ ವಿಚಾರದಲ್ಲಿ ಭಾರತ ವೈವಿದ್ಯತೆಯನ್ನು ಹೊಂದಿರುವುದಂತೂ ಸುಳ್ಳಲ್ಲ. ಈ ಎಲ್ಲಾ ಪೀಠಿಕೆಗಳಿಗೆ ಕಾರಣ ಯಾವ ರಾಜ್ಯದಲ್ಲಿ ಅತಿಹೆಚ್ಚು ಮಾಂಸಾಹಾರ ಸೇವನೆ ಮಾಡುವ ಜನರಿದ್ದಾರೆ ಎಂಬ ಮಾಹಿತಿ ಕುರಿತ ಬಗ್ಗೆ.
ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಮಾಂಸಾಹಾರ ಸೇವಿಸುವ ಜನರು ಸಿಕ್ಕೆ ಸಿಗುತ್ತಾರೆ. ಆದ್ರೆ ಈ ರಾಜ್ಯದಲ್ಲಿ ಮಾತ್ರ ಬಹುತೇಕ ಜನರು ಮಾಂಸಾಹಾರಿಗಳು ಬೆರಳೆಣಿಕೆಯಷ್ಟು ಜನರು ಸಸ್ಯಹಾರಿಗಳು. ಆ ರಾಜ್ಯ ಯಾವುದು ಅಂತ ನೋಡಿದ್ರೆ ಅದು ನಾಗಾಲ್ಯಾಂಡ್. ನಾಗಾಲ್ಯಾಂಡ್​ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 99.8ರಷ್ಟು ಜನರು ಮಾಂಸಾಹಾರಿಗಳು. ಭಾರತದಲ್ಲಿ ಅತಿಹೆಚ್ಚು ಮಾಂಸಾಹಾರ ಸೇವಿಸುವ ಜನರು ನಾಗಾಲ್ಯಾಂಡ್​ನಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದೆ, ಪಶ್ಚಿಮ ಬಂಗಾಳದಲ್ಲಿ ಶೇಕಡಾ 99.3 ರಷ್ಟು ಜನರು ಮಾಂಸಾಹಾರಿಗಳು. ಕೇರಳ ಮೂರನೇ ಸ್ಥಾನದಲ್ಲಿದೆ ಇಲ್ಲಿಯ ಶೇಕಡಾ 99.1 ರಷ್ಟು ಜನಸಂಖ್ಯೆ ಮಾಂಸಾಹಾರ ಸೇವನೆ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/12/non-vegetarian-1.jpg)
ಇನ್ನು ನಾಲ್ಕನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ. ಇಲ್ಲಿಯ ಶೇಕಡಾ 98.2 ರಷ್ಟು ಜನಸಂಖ್ಯೆ ಮಾಂಸಾಹಾರ ಪ್ರಿಯರು. ತಮಿಳುನಾಡಿನಲ್ಲಿ 97.65ರಷ್ಟು ಜನರು ಮಾಂಸಾಹಾರ ಪ್ರಿಯರು, ಇದು 5ನೇ ಸ್ಥಾನದಲ್ಲಿದೆ. ಇನ್ನು ಒಡಿಶಾ 6ನೇ ಸ್ಥಾನದಲ್ಲಿದ್ದು ಇಲ್ಲಿನ ಶೇಕಡಾ 97.35 ರಷ್ಟು ಜನರು ಮಾಂಸಾಹಾರಕ್ಕೆ ಪ್ರಾಧಾನ್ಯತೆ ನೀಡುತ್ತಾರೆ.
ಈ ಒಂದು ಅಧ್ಯಯನದಲ್ಲಿ ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಹೆಚ್ಚು ಮಾಂಸಾಹಾರ ಸೇವನೆ ಇದೆ. ಅದೇ ಉತ್ತರ ರಾಜ್ಯಗಳಾದ ಪಂಜಾಬ್​ ಸೇರಿದಂತೆ ಹಲವು ರಾಜ್ಯಗಳಿಗೆ ಹೋಲಿಸಿ ನೋಡಿದರೆ ಈಶಾನ್ಯ ಹಾಗೂ ದಕ್ಷಿಣ ಭಾರತದಲ್ಲಿ ಮಾಂಸಾಹಾರ ಪ್ರಿಯರು ಜಾಸ್ತಿ ಇದ್ದಾರೆ. ಅದರಲ್ಲೂ ಇತ್ತೀಚಿನ ಅಧ್ಯಯನ ಹೇಳಿರುವ ಪ್ರಕಾರ ಈಶಾನ್ಯ ರಾಜ್ಯಗಳಲ್ಲಿ ಚಿಕನ್, ಮಟನ್​ಗಳ ಜಾಗವನ್ನು ಪೋರ್ಕ್ ಮತ್ತು ಬೀಫ್​ ಆಕ್ರಮಿಸಿಕೊಂಡಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಇದು ವಿಶ್ವದ ಅತ್ಯಂತ ದುಬಾರಿ ಸೀರೆ; ಯಾವೆಲ್ಲಾ ಸೆಲೆಬ್ರೆಟಿಸ್​ ಬಳಿ ಈ ಸಾರಿ ಇವೆ ಅಂತ ಗೊತ್ತಾ?
ಇನ್ನು ಭಾರತದಲ್ಲಿ ಸಸ್ಯಹಾರ ಪ್ರಧಾನವಾಗಿಸಿಕೊಂಡಿರುವ ರಾಜ್ಯಗಳು ಯಾವುವು ಅಂತ ನೋಡುವುದಾದ್ರೆ ಅವು ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶ. ಇಲ್ಲಿ ಅತಿಹೆಚ್ಚು ಜನರು ಡೈರಿ ಪ್ರಾಡಕ್ಟ್​ಗಳನ್ನು ಉಪಯೋಗಿಸುತ್ತಾರೆ. ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಯಿಂದ ಪ್ರಭಾವಿತಗೊಂಡಿರುವ ಈ ರಾಜ್ಯಗಳು ಹೆಚ್ಚಾಗಿ ಸಸ್ಯಾಹಾರಕ್ಕೆನೇ ಪ್ರಧಾನ್ಯತೆ ನೀಡುತ್ತಾರೆ.
ಅಂಕಿ ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ 20023-24ರಲ್ಲಿ ವರದಿ ನೀಡಿರುವ ಪ್ರಕಾರ ಭಾರತದಲ್ಲಿರುವ ಆಹಾರ ಕ್ರಮಗಳು ಹೇಗಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆಹಾರ ಪದ್ಧತಿಯಲ್ಲಿ ಅನೇಕ ರೀತಿಯ ಪ್ರಭಾವಗಳು ಇರುತ್ತವೆ. ಹವಾಮಾನದ ಪ್ರಭಾವ, ಸಂಸ್ಕೃತಿ ಹಾಗೂ ಆರ್ಥಿಕ ಅಂಶಗಳು ಆಯಾ ರಾಜ್ಯಗಳ ಆಹಾರ ಕ್ರಮದ ಮೇಲೆ ಪ್ರಭಾವ ಬೀರುತ್ತವೆ. ಇದರ ಪ್ರಕಾರ ದಕ್ಷಿಣ ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳು ಮಾಂಸಾಹಾರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ ಎಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/12/non-vegetarian-2.jpg)
ಈ ದೇಶದಲ್ಲಿ ಸಾಂಸ್ಕೃತಿಕ ವೈವಿದ್ಯತೆಯ ಮೇಲೆ ಆಹಾರ ಪದ್ಧತಿಗಳು ವಿವಿಧತೆಯನ್ನು ಹೊಂದಿವೆ. ಪಶ್ಚಿಮ ಬಂಗಾಳ ಹಾಗೂ ಕೇರಳಗಳಲ್ಲಿ ಇತ್ತೀಚೆಗೆ ಮಾಂಸಾಹಾರ ಪ್ರಿಯರ ಸಂಖ್ಯೆ ಏರಿಕೆಯಾಗುತ್ತಿದೆ. ಇತ್ತ ಉತ್ತರದ ಕೆಲವು ರಾಜ್ಯಗಳಲ್ಲಿ ಸಸ್ಯಾಹಾರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಡೈರಿ ಉತ್ಪನ್ನಗಳ ಸೇವನೆ ಇಲ್ಲಿ ಅಧಿಕವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us