/newsfirstlive-kannada/media/post_attachments/wp-content/uploads/2025/03/HIGHEST-TEA-CONSUMING-STATE.jpg)
ವಿಶ್ವದಲ್ಲಿ ಅತಿಹೆಚ್ಚು ಟೀಯನ್ನು ಉತ್ಪಾದನೆ ಮಾಡುವ ದೇಶಗಳಲ್ಲಿ ಭಾರತವೂ ಕೂಡ ಒಂದು. ಅದು ಮಾತ್ರವಲ್ಲ ಅತೀಹೆಚ್ಚು ಟೀ ಕುಡಿಯುವವರ ಸಂಖ್ಯೆಯೂ ಕೂಡ ಭಾರತದಲ್ಲಿ ಜಾಸ್ತಿ ಇದೆ. ಮನೆಗೆ ಬಂದ ಅತಿಥಿಗಳನ್ನು ಮೊದಲು ಟೀ ನೀಡಿಯೇ ಸ್ವಾಗತಿಸುವ ಪ್ರತೀತಿ ನಮ್ಮಲ್ಲಿ ಶತಮಾನಗಳಿಂದಲೂ ಕೂಡ ರೂಢಿಯಿದೆ. ಭಾರತೀಯರ ಅತ್ಯಂತ ಪ್ರಿಯವಾದ ಪಾನೀಯದಲ್ಲಿ ಚಹಾ ಕೂಡ ಒಂದು. ಈಗ ನಾವಿಲ್ಲಿ ನಿಮಗೆ ಇಡೀ ದೇಶದಲ್ಲಿಯೇ ಅತಿಹೆಚ್ಚು ಚಹಾ ಸೇವಿಸುವ ಜನರು ಯಾವ ರಾಜ್ಯದಲ್ಲಿದ್ದಾರೆ ಎಂಬುದರ ಬಗ್ಗೆ ಹೇಳಲಿದ್ದೇವೆ.
ಇರುವ ಇಷ್ಟು ರಾಜ್ಯಗಳಲ್ಲಿ ಅತಿಹೆಚ್ಚು ಚಹಾ ಸೇವಿಸುವ ಜನರು ಇರುವುದು ಹರಿಯಾಣ ಪಂಜಾಬ್ ಹಾಗೂ ಗೋವಾ, ಕೇಂದ್ರಾಡಳಿತ ಪ್ರದೇಶವೆಂದರೆ ಅದು ಜಮ್ಮು-ಕಾಶ್ಮೀರ. ಆದ್ರೆ ಈ ರಾಜ್ಯಗಳನ್ನು ಮೀರಿ ಅತಿಹೆಚ್ಚು ಚಹಾ ಸೇವಿಸುವ ಜನರು ಇರುವ ರಾಜ್ಯವೆಂದು ಕಿರೀಟವನ್ನಿಟ್ಟುಕೊಂಡಿರುವುದು ಅದು ಗುಜರಾತ್.
ಭಾರತೀಯ ಟೀ ಬೋರ್ಡ್ ಕಮಿಷನ್ ಮಾಡಿರುವ ಅಧ್ಯಯನದ ಪ್ರಕಾರ ಗುಜರಾತ್ ಭಾರತದಲ್ಲಿಯೇ ಅತಿಹೆಚ್ಚು ಟೀ ಕುಡಿಯುವವರ ಸಂಖ್ಯೆಯನ್ನು ಹೊಂದಿದೆ ಅಂತ ಹೇಳಲಾಗಿದೆ. ಈ ರಾಜ್ಯದ ಟೀ ಸೇವಿಸುವವರ ತಲಾ ಸಂಖ್ಯೆ ದೇಶದ ಉಳಿದ ರಾಜ್ಯಗಳಿಗಿಂತ ಹೆಚ್ಚು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಟೀ ಬೋರ್ಡ್ ಆಫ್ ಇಂಡಿಯಾದ ಹೇಳುವ ಪ್ರಕಾರ ಹರಿಯಾಣ ಪಂಜಾಬ್ನಲ್ಲಿಯೂ ಕೂಡ ಅತಿಹೆಚ್ಚು ಟೀ ಕುಡಿಯುವವರ ಸಂಖ್ಯೆಇದೆ ಆದ್ರೆ ಅವು ನಂಬರ್ 1 ಪಟ್ಟದಲ್ಲಿ ಇಲ್ಲ ಎಂದು ಹೇಳೀದೆ.
ಇದನ್ನೂ ಓದಿ:ಹುಲಿಯಿಂದ ಮಾಲೀಕನ ಕಾಪಾಡಿದ ಜರ್ಮನ್ ಶೆಪರ್ಡ್ ನಾಯಿ.. ಆದ್ರೆ ಆ ಮೇಲೆ ಆಗಿದ್ದೆ ದುಃಖಕರ
ಇನ್ನು ಕರಾವಳಿ ರಾಜ್ಯವಾದ ಗೋವಾದಲ್ಲಿಯೂ ಟೀ ಸೇವಿಸುವವರ ಸಂಖ್ಯೆ ವಿಪರೀತವಿದೆ. ಟೀ ಸೇವಿಸುವವರನ್ನು ಅತಿಹೆಚ್ಚು ಹೊಂದಿದದ ರಾಜ್ಯದಲ್ಲಿ ಗೋವಾ ಕೂಡ ಇದೆ ಎಂದು ಭಾರತೀಯ ಟೀ ಬೋರ್ಡ್ ಕಮಿಷನ್ ಹೇಳಿದೆ. ಇನ್ನು ಪಂಜಾಬ್ ಅಂತ ಬಂದ್ರೆ ಅಲ್ಲಿಯ ಲಸ್ಸಿ ಅತ್ಯಂತ ಪ್ರಿಯವಾದ ಪಾನೀಯ ಆದ್ರೆ, ಅದೇ ಮಟ್ಟದಲ್ಲಿ ಅಲ್ಲಿಯ ಜನರು ಟೀಯನ್ನು ಕೂಡ ಸೇವಿಸುತ್ತಾರೆ. ಟೀ ಸೇವಿಸುವ ಟಾಪ್ ರಾಜ್ಯಗಳಲ್ಲಿ ಪಂಜಾಬ್ ಕೂಡ ಇದೆ. ಆದ್ರೆ ನಂಬರ್ 1 ಪಟ್ಟದಲ್ಲಿ ಅದು ಇಲ್ಲ.
ಇದನ್ನೂ ಓದಿ: ಸೂಟ್ಕೇಸ್ನಲ್ಲಿ ಕಾಂಗ್ರೆಸ್ ನಾಯಕಿಯ ಶವ ಪತ್ತೆ; ದೇಶದಲ್ಲಿ ಸಂಚಲನ ಮೂಡಿಸಿದ ಕೇಸ್
ಇನ್ನೂ ಭಾರತೀಯ ಕಿರೀಟ ಎಂದೆ ಕರೆಯಲ್ಪಡುವ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ, ದೇಶದಲ್ಲಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿಯೇ ಅತಿಹೆಚ್ಚು ಟೀ ಸೇವಿಸುವವರ ಜನರನ್ನು ಹೊಂದಿದೆ.ಇದೆಲ್ಲದರ ನಡುವೆ ಗುಜರಾತ್ ಅತಿಹೆಚ್ಚು ಸೇವಿಸುವವರ ಜನರನ್ನು ಹೊಂದಿರುವಲ್ಲಿ ದೊಡ್ಡ ರಾಜ್ಯ ಎಂದು ಪರಿಗಣಿಸಲಾಗಿದೆ. ಕಾರಣ ಗುಜರಾತ್ ಹಾಲು ಉತ್ಪಾನೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಲ್ಲಿ ದೊರಕುವ ಸಮೃದ್ಧ ಹಾಲಿನಿಂದ ಅಲ್ಲಿನ ಟೀಗೆ ವಿಶೇಷ ಸ್ವಾದವಿದೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ