/newsfirstlive-kannada/media/post_attachments/wp-content/uploads/2025/03/MADHURI-DIXIT-2.jpg)
ಮಾಧುರಿ ದೀಕ್ಷಿತ್, ಎಂದೂ ಮುಗಿದಯ ಸೌಂದರ್ಯದ ಅಮಲು, ಸುಮಾರು ದಶಕಗಳ ಕಾಲ ತನ್ನ ಸೌಂದರ್ಯ ರಾಶಿ ಹಾಗೂ ನಟನಾ ಕೌಶಲ್ಯದಿಂದಲೇ ಬಾಲಿವುಡ್ನ್ನು ದಶಕಗಳ ಕಾಲ ಆಳಿದ ಅಪರೂಪದ ಸೌಂದರ್ಯದ ಗಣಿ. ಮಾಧುರಿ ದಿಕ್ಷೀತ್ ಎಂದರೆನೇ ಒಂದು ಕ್ರೇಜ್ ಇದ್ದ ಕಾಲವದು. ಈ ನಟಿಯ ಖ್ಯಾತಿ ಅದ್ಯಾವ ಮಟ್ಟಕ್ಕೆ ಹೋಗಿತ್ತು ಅಂದ್ರೆ ನೀವು ನಮಗೆ ಮಾಧುರಿ ದೀಕ್ಷಿತ್ರನ್ನು ಬಿಟ್ಟು ಕೊಡಿ ನಾವು ಆಕ್ರಮಿತ ಕಾಶ್ಮೀರ ಬಿಟ್ಟುಕೊಡುತ್ತೇವೆ ಎಂದು ಪಾಕಿಸ್ತಾನಿಯರು ಹೇಳುವಂತಹ ಕ್ರೇಜ್ನ್ನು ಜಾಗತಿಕವಾಗಿ ಮಾಧುರಿ ಹೊಂದಿದ್ದರು. ಅತ್ಯಂತ ಕಡಿಮೆ ವಿವಾದ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದ ಬಾಲಿವುಡ್ ನಟಿಯರಲ್ಲಿ ಮಾಧುರಿ ಮೊದಲಿನ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ಇಂದಿಗೂ ಕೂಡ ಅವರ ಸೌಂದರ್ಯಕ್ಕೆ ಮುಕ್ಕು ಬಂದಿಲ್ಲ. ಕಣ್ಣಿನ ಮಾದಕತೆಗೆ ಕುಂದು ಬಂದಿಲ್ಲ. ಮೋಹಕ ನಗೆಗೆ ಮಾಸುವಿಕೆ ತಾಗಿಲ್ಲ. ಇಂತಹ ನಟಿಯ ವೃತ್ತಿ ಬದುಕಿನಲ್ಲಿಯೂ ಒಂದು ಕಹಿ ಘಟನೆಯೊಂದು ನಡೆದು ಹೋಗಿತ್ತು.
ಅಂದಿನ ಕಾಲದ ಖ್ಯಾತ ನಟ ಮಾಧುರಿ ಸೌಂದರ್ಯಕ್ಕೆ ಮರುಳಾಗಿ ಸಿನಿಮಾದ ಸೀನ್ ಒಂದರಲ್ಲಿ ತನ್ನನ್ನೇ ತಾನು ಮರೆತು ಮಾಧುರಿಯೆಂಬ ಸೌಂದರ್ಯ ರಾಶಿಯೊಳಗೆ ಉನ್ಮತ್ತನಾಗಿ ಕಳೆದು ಹೋಗಿ ಯಡವಟ್ಟೊಂದನ್ನು ಮಾಡಿಕೊಂಡಿದ್ದರು ಆ ನಟನ ಹೆಸರು ವಿನೋದ್ ಖನ್ನಾ.
1988ರಲ್ಲಿ ನಿರ್ಮಾಣವಾದ ದಯಾವಾನ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಹಾಗೂ ವಿನೋದ ಖನ್ನಾ ನಟಿಸಿದ್ದರು. ಈ ವೇಳೆ ಸಿನಿಮಾದ ಒಂದು ಸೀನ್ನಲ್ಲಿ ನಾಯಕ ಹಾಗೂ ನಾಯಕಿ ಆತ್ಮೀಯವಾಗಿ ಪ್ರಣಯದಲ್ಲಿ ತೊಡಗಬೇಕಿತ್ತು. ವಿನೋದ್ ಖನ್ನಾ ಮಾಧುರಿ ದೀಕ್ಷಿತ್ ಅವರ ತುಟಿಗಳಿಗೆ ದೀರ್ಘವಾಗಿ ಚುಂಬಿಸಬೇಕಿತ್ತು. ಮೊದಲೇ ಸೌಂದರ್ಯದ ರಾಶಿ, ಮೋಹಕ ಮೈಮಾಟ. ಹರೆಯಕ್ಕೆ ಕಳೆದು ಹೋಗಲು ಇನ್ನೇನು ಬೇಕು? ವಿನೋದ ಖನ್ನಾ ಅಕ್ಷರಶಃ ಮಾಧುರಿಯೆಂಬ ಮೋಹಕ ಅಮಲಿನ ಬಾಹುವಿನಲ್ಲಿ ಕರಗಿ ಹೋಗಿದ್ದರು. ತುಟಿಗೆ ತುಟಿ ಬೆರೆಸಿ ನಟಿಸಿದ ಸೀನ್ನಲ್ಲಿ ಅದ್ಯಾವ ಉನ್ಮತ್ತಕ್ಕೆ ಹೋಗಿದ್ದರು ಅಂದ್ರೆ ಡೈರೆಕ್ಟರ್ ಕಟ್ ಎಂದು ಹೇಳಿದ್ದು ಕೂಡ ಅವರಿಗೆ ಕೇಳಿಸಿರಲಿಲ್ಲ. ಮಾಧುರಿ ಕೊಸರಿಕೊಳ್ಳಲು ಸಹ ಅವಕಾಶ ನೀಡದಂತೆ ಅಮಲೊಂದರಲ್ಲಿ ಮುಳುಗಿದ್ದ ವಿನೋದ್ ಖನ್ನಾ ಮಾಧುರಿ ತುಟಿಯಲ್ಲಿ ರಕ್ತ ಸುರಿಯುವ ಹಾಗೆ ಚುಂಬಿಸಿ ಬಿಟ್ಟಿದ್ದರು.
ದಯಾವಾನ್ ಸಿನಿಮಾದ ಈ ಒಂದು ಘಟನೆ ಜಾಗತಿಕವಾಗಿ ಸುದ್ದಿಯಾಗಿತ್ತು. ಮಾಧುರಿ ದೀಕ್ಷಿತ್ ಸಿನಿಮಾ ಕರಿಯರ್ನಲ್ಲಿ ಇದೊಂದು ಕಹಿ ಘಟನೆಯಾಗಿ ಉಳಿದು ಹೋಯಿತು.ಮಾಧುರಿ ಚೆಲುವಿನ ಬಾಹುಬಂಧನದಲ್ಲಿ ಮೈಮರೆತು ಹೋಗಿದ್ದ ವಿನೋದ ಖನ್ನಾಗೆ ನಂತರ ತಮ್ಮ ತಪ್ಪಿನ ಅರಿವಾಗಿದೆ. ಕೊನೆಗೆ ಮಾಧುರಿ ಅವರ ಬಳಿ ಬಂದು ಕ್ಷಮೆಯನ್ನೂ ಕೂಡ ಕೇಳಿದರಂತೆ. ಆದರೆ ಮೋಹಕ ನಟಿ ನೀವು ಮಾಡಿದ್ದು ಕ್ಷಮೆಗೆ ಅರ್ಹವಲ್ಲದಂತದ್ದೂ ಎಂದು ಅಲ್ಲಿಂದ ಎದ್ದು ಹೋದರಂತೆ. ಮಾಧುರಿ ದೀಕ್ಷಿತ್ ಅವರ ಸಿನಿಮಾ ಕರಿಯರ್ನಲ್ಲಿಯೇ ಇದೊಂದು ಎಂದಿಗೂ ಆರದ ಗಾಯವಾಗಿ ಉಳಿದುಕೊಂಡು ಹೋಯಿತು. ಈ ಸಿನಿಮಾದ ಬಗ್ಗೆ ವಿನೋದ್ ಖನ್ನಾ ಅಂದು ನಡೆದುಕೊಂಡ ರೀತಿಯ ಬಗ್ಗೆ ಇಂದಿಗೂ ಕೂಡ ಚರ್ಚೆಯಾಗುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ