/newsfirstlive-kannada/media/post_attachments/wp-content/uploads/2025/03/HUSBAND-OF-20-WIVES.jpg)
ಇಂದಿನ ಕಾಲದಲ್ಲಿ ಒಂದು ಮದುವೆಯಾಗಿ ಎರಡು ಮಕ್ಕಳು ಇರುವ ಸಂಸಾರವನ್ನೇ ನೀಗಿಸಿಕೊಂಡು ಹೋಗುವುದೇ ದೊಡ್ಡ ಸವಾಲಿನ ಕೆಲಸ. ಅಷ್ಟಕ್ಕೇ ಹೈರಾಣಾಗಿ ಹೋಗಿರುತ್ತಾರೆ ಪೋಷಕರು. ಆದರೆ ಕೆಲವರು ಇಷ್ಟೊಂದು ಧೈರ್ಯವಾಗಿರುತ್ತಾರೆ ಅಂದ್ರೆ ಮಕ್ಕಳಿರಲೆವ್ವಾ ಮನೆತುಂಬ ಎಂಗ ಗಾದೆಯನ್ನೇ, ಪತ್ನಿಯರಿರಲೆವ್ವಾ ಮನೆ ಎಂಬಂತೆ ಬದಲಾಯಿಸಿಕೊಂಡು ಬದುಕುತ್ತಿದ್ದಾರೆನೋ ಎಂಬುವಷ್ಟರ ಮಟ್ಟಿಗೆ ಗಟ್ಟಿ ಗುಂಡಿಗೆಯವರಾಗಿರುತ್ತಾರೆ. ಸುಮಾರು 20 ಪತ್ನಿಯರನ್ನು ಕಟ್ಟಿಕೊಂಡು ಒಂದೇ ಮನೆಯಲ್ಲಿ ಸಂಸಾರ ಹೂಡಿ. ಅದೇ ಮನೆಯಲ್ಲಿ 104 ಮಕ್ಕಳಿಗೆ ತಂದೆಯಾಗುವಷ್ಟು ಮಟ್ಟಿಗೆ ಗಟ್ಟಿಯಾಗಿರುತ್ತಾರೆ. ಈ ಕಾಲದಲ್ಲಿ ಅಂತಹ ಜನರು ಎಲ್ಲಿ ಸಿಗುತ್ತಾರೆ ನಿಮಗೆ ಅಂತ ಲೇವಡಿ ಮಾಡಿಕೊಳ್ಳಬೇಡಿ. ಅಂತಹ ಪ್ರಚಂಡ ಗಂಡನೊಬ್ಬ ಈ ಜಗತ್ತಿನಲ್ಲಿ ಇದ್ದಾನೆ. ಅವನ ಬಗ್ಗಯೇ ನಾವು ಇಲ್ಲಿ ಹೇಳಲು ಹೊರಟಿರುವುದು.
ಇದನ್ನೂ ಓದಿ:14ನೇ ಮಗುವಿಗೆ ತಂದೆಯಾದ ಎಲಾನ್ ಮಸ್ಕ್.. ಯಾರು ಈ ಶಿವೋನ್ ಜಿಲಿಸ್? ತಾಯಿ, ಮಕ್ಕಳ ಮಾಹಿತಿ ಇಲ್ಲಿದೆ!
ನೀವು ಜಗತ್ತಿನಲ್ಲಿ ದೊಡ್ಡ ದೊಡ್ಡ ಕುಟುಂಬಗಳನ್ನು ನೋಡಿರಬಹುದು. 40 ರಿಂದ 50 ಜನರು ಇರುವ ಕೂಡು ಕುಟುಂಬಗಳ ಬಗ್ಗೆ ಗೊತ್ತಿರಬಹುದು. ಆದ್ರೆ ಈ ಆಸಾಮಿ ಅವರೆಲ್ಲರಿಗಿಂತ ಭಿನ್ನ. ಈ ವ್ಯಕ್ತಿಯ ಬಗ್ಗೆಯೇ ನಾವು ಈಗ ನಿಮಗೆ ಹೇಳಲು ಹೊರಡುತ್ತಿದ್ದೇವೆ. ಈತ ಒಟ್ಟು 20 ಮದುವೆಯಾಗಿದ್ದಾನೆ. ಈ 20 ಪತ್ನಿಯರಲ್ಲಿ ಈಗ 4 ಜನ ಪತ್ನಿಯರು ಇಲ್ಲ. ಉಳಿದ 16 ಜನ ಪತ್ನಿಯರು ಹಾಗೂ 104 ಮಕ್ಕಳು ಇಂದಿಗೂ ಕೂಡ ಜೊತೆಯಾಗಿಯೇ ಇದ್ದಾರೆ. ತಮ್ಮ ಮನೆಯನ್ನೇ ಒಂದು ಪುಟ್ಟ ಗ್ರಾಮವನ್ನಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಒಂದಿಷ್ಟು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಪೂರ್ವ ಆಫ್ರಿಕಾದ ದೇಶವಾದ ಟಾಂಜಾನಿಯಾದಲ್ಲಿರುವ ಸಣ್ಣ ಹಳ್ಳಿಯಲ್ಲಿರುವ ಕಪಿಂಗ್ ಎಂಬ ಹೆಸರಿನ ವ್ಯಕ್ತಿ ಈತ. ಇವನು ನಡೆಸುತ್ತಿರುವ ಸಂಸಾರ ಹಾಗೂ ಮನೆಯ ವಿಷಯ ಈಗ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.ಈ ಆಫ್ರಿನ್ ಮನುಷ್ಯ ಈಗ ಒಂದೇ ಮನೆಯಲ್ಲಿ 16 ಪತ್ನಿಯರು ಹಾಗೂ 104 ಮಕ್ಕಳು ಮತ್ತು 144 ಮೊಮ್ಮಕ್ಕಳು ಮರಿಮೊಮ್ಮಕ್ಕಳ ಜೊತೆಯೇ ಇದ್ದಾನೆ. ಮನೆಯೇ ಒಂದು ಸಣ್ಣದಾದ ಗ್ರಾಮವಾಗಿ ಬದಲಾಯಿಸಿದ್ದಾನೆ. ಇವರ ಮನೆಯಲ್ಲಿ ನಿತ್ಯ ನಡೆಯುವ ಅಡುಗೆ, ನಮ್ಮ ದೇಶದಲ್ಲಿ ಪುಟ್ಟ ದೇವಸ್ಥಾನಗಳಲ್ಲಿ ನಡೆಯುವ ಅನ್ನಪ್ರಸಾದ ರೀತಿಯಲ್ಲಿ ಇರುತ್ತದೆ. ಮನೆ ಪ್ರತಿ ಪ್ರತಿದಿನ ಇಲ್ಲಿ ಜಾತ್ರೆ ಏನಾದರೂ ನಡೆಯುತ್ತಿದೆಯಾ ಎನ್ನುವ ರೀತಿ ನಿಮಗೆ ಕಾಣುತ್ತದೆ.
ಪಿತೃವಾಕ್ಯ ಪರಿಪಾಲನೆಗೆ ನಿಂತ ಮಗ!
ಈ ಕಪಿಂಗ ಎಂಬ ಪ್ರಚಂಡ ಗಂಡ 1961ರಲ್ಲಿ ಮೊದಲ ಬಾರಿ ಮದುವೆಯಾದ ಮತ್ತು ಒಂದು ಮಗುವಿಗೆ ತಂದೆಯೂ ಆದ. ಆದ್ರೆ ಇವನ ತಂದೆ ಇವನಿಗೆ ಕುಟುಂಬವನ್ನು ಇನ್ನು ದೊಡ್ಡದು ಮಾಡಿಕೊ ಎಂದು ಹೇಳಿದ್ದರಂತೆ. ಇದರಿಂದ ನಿನಗೆ ವರದಕ್ಷಿಣೆಯೂ ಬರುತ್ತದೆ. ನಮ್ಮ ಕುಟುಂಬ ದೊಡ್ಡದು ಆಗುತ್ತದೆ ಎಂದಿದ್ದರಂತೆ. ಪಿತೃವಾಕ್ಯ ಪರಿಪಾಲಕನಂತೆ ಮೊದಲ ಮದುವೆಯ ನಂತರ ಸಾಲು ಸಾಲು ಮದುವೆಯಾದ.
ಇದನ್ನೂ ಓದಿ:19 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ವಿಮಾನ ನಿಲ್ದಾಣ; ಇಲ್ಲಿ ವಿಮಾನವೂ ಇಲ್ಲ, ಪ್ರಯಾಣಿಕರು ಇಲ್ಲ!
ಕಪಿಂಗನ ಮೊದಲು ಐದು ಮದುವೆಗೆ ಅವರ ತಂದೆಯೇ ಹಣ ಸಹಾಯ ಮಾಡಿದ್ದರು. ಆದ್ರೆ ಉಳಿದ ಮದುವೆಗಳನ್ನು ಈತ ಖುದ್ದು ತಾನಾಗಿಯೇ ಮಾಡಿಕೊಂಡ. ಇವನ 20 ಪತ್ನಿಯರಲ್ಲಿ ಕೆಲವರು ಮೃತಪಟ್ಟಿದ್ದಾರೆ ಇನ್ನೂ ಕೆಲವರು ಇವನನ್ನು ಬಿಟ್ಟು ಹೋಗಿದ್ದಾರೆ. ಆದರೂ ಇಂದಿಗೂ ಕೂಡ ಈತ 16 ಪತ್ನಿಯರ ಜೊತೆ ಇದ್ದಾನೆ. ಅದರಲ್ಲಿ 7 ಜನರು ಒಬ್ಬರಿಗೊಬ್ಬರು ಅಕ್ಕತಂಗಿಯರೇ ಆಗಬೇಕು. ಹೀಗೆ ಒಂದೇ ಕುಟುಂಬದ 7 ಸಹೋದರಿಯರನ್ನು ಈತ ಮದುವೆಯಾಗಿದ್ದಾನೆ. ಎಲ್ಲ ಪತ್ನಿಯರು ಬೇರೆ ಬೇರೆ ಅಡುಗೆ ಮಾಡುತ್ತಾರೆ ಆದ್ರೆ ಊಟಕ್ಕೆ ಮಾತ್ರ ಒಟ್ಟಿಗೆಯೇ ಕುಳಿತುಕೊಳ್ಳುತ್ತಾರೆ. ಜೊತೆಗೆ ಕೃಷಿ ಭೂಮಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಇದು ಮನೆಯಲ್ಲ ಒಂದು ವ್ಯವಸ್ಥೆಯೇನೋ ಎನ್ನುವ ರೀತಿ ಒಬ್ಬರಿಗೊಬ್ಬರು ಕೆಲಸವನ್ನು ಮಾಡುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ