/newsfirstlive-kannada/media/post_attachments/wp-content/uploads/2025/01/MEHANDIPUR-BALAJI-3.jpg)
ನಾವೆಲ್ಲರೂ ಕೂಡ ಭೂತ ಪ್ರೇತದ ಕಥೆಗಳನ್ನು ಕೇಳಿಕೊಂಡು ಬೆಳೆದವರು. ನಮ್ಮ ದೇಶದಲ್ಲಿ ದೇವರನ್ನು ಎಷ್ಟು ನಂಬಲಾಗುತ್ತದೆಯೋ, ದುಷ್ಟಶಕ್ತಿಗಳನ್ನು ಕೂಡ ಅಷ್ಟೇ ನಂಬಲಾಗುತ್ತದೆ. ಹೀಗಾಗಿ ಭೂತ, ಆತ್ಮಗಳ ಬಗ್ಗೆ ಒಂದು ಕುತೂಹಲ ಹಾಗೂ ಒಂದು ಹೆಪ್ಪುಗಟ್ಟಿದ ಭಯ ನಮ್ಮಲ್ಲಿ ಇದ್ದೆ ಇದೆ. ಅದು ಕೂಡ ಅಲೌಕಿಕ ಶಕ್ತಿಯನ್ನು ನಂಬುವ ಹಾಗೂ ತಳ್ಳಿಹಾಕುವವರ ಮೇಲೆ ಈ ಒಂದು ಕುತೂಹಲ ಹಾಗೂ ಭಯ ನಿರ್ಧಾರವಾಗುತ್ತದೆ. ಇದೇ ವಿಚಾರವಾಗಿಯೇ ಭಾರತದಲ್ಲಿ ಒಂದು ಮಂದಿರ ಸುಮಾರು ದಶಕಗಳಿಂದಲೂ ಜನಪ್ರಿಯಗೊಂಡಿದೆ. ಈ ಮಂದಿರವನ್ನು ದೇಶದ ಅತ್ಯಂತ ನಿಗೂಢ ಹಾಗೂ ಶಕ್ತಿಶಾಲಿ ಮಂದಿರವೆಂದು ಕರೆಯಲಾಗುತ್ತದೆ. ಹಾಗಾದರೆ ಆ ಮಂದಿರ ಯಾವುದು? ಎಲ್ಲಿ ಇದೆ ಎಂಬುದರ ಸಂಪೂರ್ಣ ವಿವರವನ್ನು ನಾವು ನಿಮಗೆ ನೀಡುತ್ತೇವೆ .
/newsfirstlive-kannada/media/post_attachments/wp-content/uploads/2025/01/MEHANDIPUR-BALAJI-2.jpg)
ರಾಜಸ್ಥಾನದ ಭೂಮಿಯಲ್ಲಿ ಒಂದು ಸಣ್ಣ ಹಳ್ಳಿಯಾದ ಮೆಹಂದಿಪುರದಲ್ಲಿ ಇರುವ ಈ ಮಂದಿರ ಅತ್ಯಂತ ನಿಗೂಢ ಹಾಗೂ ಶಕ್ತಿಶಾಲಿ ಮಂದಿರ ಎಂದು ಕರೆಸಿಕೊಳ್ಳುತ್ತದೆ. ಮೆಹಂದಿಪುರ ಬಾಲಾಜಿ ಎಂದು ಕರೆಯಲ್ಪಡುವ ಈ ಗುಡಿ ಶ್ರೀ ಆಂಜನೇಯ ಸ್ವಾಮಿ ನೆಲೆಸಿರುವ ಮಂದಿರ. ಇಲ್ಲಿ ಆತ್ಮಶಕ್ತಿಗಳ ಓಡಾಟ ಹಾಗೂ ಭೂತೋಚ್ಚಾಟನೆಗೆ ಈ ದೇಗುಲ ಹೆಸರುವಾಸಿ. ಇದು ಕರಾಳ ಮುಖಗಳಿಂದ ಪೀಡಸ್ಪಟ್ಟಿರುವ, ಭಾನಾಮತಿಯಂತಹ ಹೊಡೆದೊಡಿಸುವಂತ ವಿವರಿಸಲಾಗದಂಹ ಅನೇಕ ವೈಚಿತ್ರ್ಯಗಳು ಇಲ್ಲಿ ನಡೆಯುತ್ತವೆ.
ಮೆಹಂದಿಪುರ ಬಾಲಾಜಿ ಮಂದಿರದ ದೇಶದ ಉಳಿದ ದೇವಾಲಯಗಳಂತೆ ಅಲ್ಲ. ಇಲ್ಲಿ ಕಾಲಿಟ್ಟ ಕೂಡಲೇ ಯಾವುದೋ ಒಂದು ಅತೀಂದ್ರಿಯ ಶಕ್ತಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಈ ಒಂದು ಮಂದಿರಕ್ಕೆ ದುರ್ಬಲ ಹೃದಯದವರು ಕಾಲು ಇಡಕೂಡದು ಎಂಬ ಅಲಿಖಿತ ನಿಯಮವು ಇದೆ. ಈ ಒಂದು ಮಂದಿರ ದೇಶದ ನಾನಾ ಭಾಗಗಳಿಂದ ಭಕ್ತರನ್ನು ತನ್ನ ಚುಂಬಕ ಶಕ್ತಿಯಿಂದಲೇ ಸೆಳೆಯುತ್ತದೆ. ಅನೇಕರಿಗೆ ಈ ಮಂದಿರದ ಅತೀಂದ್ರಿಯ ಶಕ್ತಿಯ ಅರಿವಾಗಿದೆ. ಇದು ಕೇವಲ ವಿಶಿಷ್ಟ ಪದ್ಧತಿಗಳಿಂದ ಅಲ್ಲ ತನ್ನ ಅಸಾಧಾರಣ ಶಕ್ತಿಯಿಂದಲೇ ಭಕ್ತರನ್ನು ಸೆಳೆಯುತ್ತದೆ.
/newsfirstlive-kannada/media/post_attachments/wp-content/uploads/2025/01/MEHANDIPUR-BALAJI.jpg)
ನೀವು ಮೆಹಂದಿರುಪುರದ ಈ ಬಾಲಾಜಿ ದೇವಸ್ಥಾನಕ್ಕೆ ಕಾಲಿಟ್ಟ ಕೂಡಲೇ ಅಲ್ಲಿ ಜೈ ಬಲಾ ಎಂಬ ಉದ್ಘೋಷಗಳು ಕೇಳಲು ಆರಂಭಿಸುತ್ತದೆ. ಅಲ್ಲಿ ಸೇರಿರುವ ಎಲ್ಲ ಭಕ್ತಾದಿಗಳು ಒಂದೇ ಶೃತಿಯಲ್ಲಿ ಈ ಜಯಘೋಷವನ್ನು ಕೂಗುತ್ತಾರೆ. ನೀವು ಒಳಗೆ ಪ್ರವೇಶ ಪಡೆದ ಮೇಲೆ ನೀವು ಕೂಡ ಆ ಉದ್ಘೋಷವನ್ನು ಕೂಗದೇ ಇರಲು ಸಾಧ್ಯವೇ ಇಲ್ಲ, ಆ ಮಟ್ಟಿಗೆ ಆ ಉದ್ಘೋಷದ ಶಕ್ತಿ ನಮ್ಮನ್ನು ಚುಂಬಕ ಶಕ್ತಿಯಂತೆ ಸೆಳೆಯುತ್ತದೆ.
ಇಲ್ಲಿ ಬರುವ ಬಹುತೇಕ ಭಕ್ತರು ದೇವರ ಆಶೀರ್ವಾದಕ್ಕಿಂತ ಹೆಚ್ಚು ತಮ್ಮೊಳಗಿರುವ ದುಷ್ಟ ಶಕ್ತಿಗಳ ಕಾಟದಿಂದ ವಿಮೋಚನೆ ಪಡೆಯಲು ಬರುತ್ತಾರೆ. ಈ ಒಂದು ಮಂದಿರದಲ್ಲಿ ಒಂದು ಬಾರಿ ಪ್ರವೇಶ ಪಡೆದರೆ ಯಾವುದೇ ವ್ಯಕ್ತಿಯಲ್ಲಿ ಆತ್ಮಗಳ ಹಾಗೂ ದುಷ್ಟಶಕ್ತಿಗಳ ವಿಪರೀತ ಕಾಟಗಳಿದ್ದರೆ ಅವೆಲ್ಲವೂ ಸ್ವಚ್ಛವಾಗಿ ಹೋಗುತ್ತವೆ ಎಂಬ ನಂಬಿಕೆಯಿದೆ.
/newsfirstlive-kannada/media/post_attachments/wp-content/uploads/2025/01/MEHANDIPUR-BALAJI-1.jpg)
ಮೆಹಂದಿಪುರ ಬಾಲಾಜಿ ಮಂದಿರವನ್ನು ಧಾರ್ಮಿಕ ಚಿಕಿತ್ಸಾ ಹಾಗೂ ಭೂತೋಚ್ಚಾಟನೆಯ ಕೇಂದ್ರ ಎಂದೇ ಕರೆಯಲಾಗುತ್ತದೆ. ಭಗವಂತ ಬಾಲಾಜಿ ಇಲ್ಲಿ ಹನುಮಂತನ ಅವತಾರದಲ್ಲಿ ಇರುವುದರಿಂದ ಆತ ಇಲ್ಲಿಗೆ ಬರುವ ತನ್ನೆಲ್ಲಾ ಭಕ್ತರನ್ನು ಭೂತಶಕ್ತಿಗಳಿಂದ ಕಾಪಾಡುತ್ತಾನೆ ಎಂಬ ನಂಬಿಕೆಯಿದೆ. ಇಲ್ಲಿ ನಡೆಯುವ ಜಾಡಿಯಿ ಚಿಕಿತ್ಸೆ ಅಂದ್ರೆ ಧಾರ್ಮಿಕ ಚಿಕಿತ್ಸೆ ಹಲವು ಮಂತ್ರಗಳನ್ನು ಉಚ್ಛಾರಣೆ ಮಾಡುವ ಮೂಲಕ ನಡೆಯುತ್ತದೆ. ಯಾರೆಲ್ಲಾ ದುಷ್ಟಶಕ್ತಿಯ ಆಟಕ್ಕೆ ನಲುಗಿರುತ್ತಾರೋ ಅವರೆಲ್ಲರೂ ಈ ಮಂದಿರಕ್ಕೆ ಬಂದು ಒಮ್ಮೆ ಭೇಟಿ ನೀಡಿದರೆ ಜೀವನಪೂರ್ತಿ ಆ ಶಕ್ತಿಗಳಿಂದ ಮುಕ್ತಿ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಇಂತಹ ಅನುಭವವನ್ನು ಪ್ರತಿವರ್ಷ ಲಕ್ಷಾಂತರ ಮಂದಿ ಪಡೆಯುತ್ತಾರೆ.
ಇಲ್ಲಿ ದುಷ್ಟಶಕ್ತಿಗಳಿಂದ ಬಳಲುತ್ತಿರುವವರನ್ನು ಕಬ್ಬಿಣದ ಚೈನ್​ನಿಂದ ಕಟ್ಟುತ್ತಾರೆ. ಮಂತ್ರೋಚ್ಛಾರಣೆ ವೇಳೆ ಅವುಗಳು ಓಡಿ ಹೋಗಬಾರದು ಎಂಬ ಉದ್ದೇಶದಿಂದ ಅವರನ್ನು ಹೀಗೆ ಕಟ್ಟಿ ನಿರಂತರ ಮಂತ್ರಪಠಣದೊಂದಿಗೆ ಭೂತೋಚ್ಚಾಟನೆಯ ಕಾರ್ಯ ನಡೆಯುತ್ತದೆ. ದೇವಸ್ಥಾನದ ಎಲ್ಲ ಅರ್ಚಕರು ಈ ಭೂತೋಚ್ಚಾಟನೆಯ ಮರ್ಮವನ್ನು ಕಲಿತವರಿರುತ್ತಾರೆ. ಅವರು ನಿರಂತರ ಈ ಭೂತೋಚ್ಚಾಟನೆ ಕಾರ್ಯದಲ್ಲಿ ನಿರತರಾಗಿರುತ್ತಾರೆ.
ಇದನ್ನೂ ಓದಿ:ಗಂಗೂಲಿ ಪುತ್ರಿ ಕಾರು ಅಪಘಾತ; ಡಿಕ್ಕಿ ಹೊಡೆದ ಬಸ್​ ಡ್ರೈವರ್ ಪರಾರಿ
ಇಲ್ಲಿ ಹೋಗಬೇಕೆಂದು ಆಸೆಪಟ್ಟವರು ಹಲವು ವಿಧಿ ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲಿಗೆ ಭೇಟಿ ಕೊಡುವ ಒಂದು ವಾರಕ್ಕೂ ಮುನ್ನ ಅವರು ಕೇವಲ ಸಸ್ಯಾಹಾರವನ್ನು ಮಾತ್ರ ಸೇವಿಸಬೇಕು. ಆಮೇಲೆ ಇನ್ನೊಂದು ವಿಶಿಷ್ಟವೆಂದರೆ ಇಲ್ಲಿಯ ಪ್ರಸಾದ. ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತಾದಿಗಳಿಗೆ ಇಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ. ಆದ್ರೆ ಅದನ್ನು ಅಲ್ಲಿಯೇ ಸೇವಿಸುವಂತಿಲ್ಲ. ಒಂದು ಮನೆಗೆ ತೆಗೆದುಕೊಂಡು ಹೋಗಬೇಕು. ಇಲ್ಲವೇ ಬೇರೆಯವರಿಗೆ ಪ್ರಸಾದವನ್ನು ಹಂಚಬೇಕು. ಇನ್ನು ಎಲ್ಲಾ ಕಾರ್ಯಗಳು ಮುಗಿದ ನಂತರ ಎದ್ದು ಹೋಗುವ ಭಕ್ತಾದಿಗಳು ಯಾವುದೇ ಕಾರಣಕ್ಕೂ ದೇವಸ್ಥಾನವನ್ನು ಹಿಂತಿರುಗಿ ನೋಡುವಂತಿಲ್ಲ. ಹೀಗೆ ಹತ್ತು ಹಲವು ನಿಯಮಗಳ ಅನ್ವಯ ಇಲ್ಲಿ ದೇವರ ದರ್ಶನ ನಡೆಯುತ್ತದೆ ಹಾಗೂ ದುಷ್ಟ ಶಕ್ತಿಗಳ ಉಚ್ಚಾಟನೆ ನಡೆಯುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us