ಕನ್ನಡಿಗರ ನೆತ್ತರು ಚೆಲ್ಲಿದ ನೆಲದಲ್ಲಿಯೇ‌ ಈ ವರ್ಷ ಕನ್ನಡ ರಾಜ್ಯೋತ್ಸವ ಆಚರಣೆ

author-image
Veena Gangani
Updated On
ಕನ್ನಡಿಗರ ನೆತ್ತರು ಚೆಲ್ಲಿದ ನೆಲದಲ್ಲಿಯೇ‌ ಈ ವರ್ಷ ಕನ್ನಡ ರಾಜ್ಯೋತ್ಸವ ಆಚರಣೆ
Advertisment
  • ಉಗ್ರ ಕೃತ್ಯ ನಡೆದ ಪಹಲ್ಗಾಮ್​​ನಲ್ಲಿ ಕನ್ನಡ ರಾಜ್ಯೋತ್ಸವ
  • ಈಗಾಗಲೇ ಬುಕ್ಕಿಂಗ್ ಶುರು, 700 ಜನರು ಭಾಗಿ ಸಾಧ್ಯತೆ
  • ಈ ಹಿಂದೆ ನೇಪಾಳ, ಕಾಶಿಯಲ್ಲಿ ರಾಜ್ಯೋತ್ಸವ ಆಚರಣೆ

ಕಳೆದ ಏಪ್ರಿಲ್ 22ರಂದು ಮಿನಿ ಸ್ವಿಜರ್ಲೆಂಡ್ ಎಂದೇ ಖ್ಯಾತವಾಗಿದ್ದ ಪಹಲ್ಗಾಮ್​ನ ಸುಂದರವಾದ ಕಣಿವೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗಳು ಬಂದಿದ್ದರು. ಅದೇ ಸಮಯ ನೋಡಿಕೊಂಡು ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ಇದನ್ನೂ ಓದಿ:ಕೋಲ್ಕತ್ತ ಹೋಟೆಲ್​​ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ

publive-image

ಈ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಅದರಲ್ಲೂ ಹೆಂಡತಿ, ಮಕ್ಕಳ ಮುಂದೆಯೇ ಪತಿಯನ್ನು ಹತ್ಯೆ ಮಾಡಿದ್ದು, ಇಡೀ ದೇಶವೇ ಉಗ್ರರ ವಿರುದ್ಧ ಕೆಂಡ ಕಾರುತ್ತಿದೆ. ಮತ್ತೊಂದು ಕಡೆ ಉಗ್ರರನ್ನು ಸದೆಬಡಿಯಲು ಹಾಗೂ ಪಾಕ್​ ಮೇಲೆ ಹಗೆ ತೀರಿಸಿಕೊಳ್ಳಲು ಮುಂದಾಗಿದೆ. ಯಾವ ಸಮಯದಲ್ಲಾದರೂ ಪಾಕ್​ ಮೇಲೆ ಭಾರತೀಯ ಸೇನೆ ಯುದ್ಧ ಮಾಡಬಹುದಾಗಿದೆ.

publive-image

ಇದರ ಮಧ್ಯೆ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರು ನೆತ್ತರು ಚೆಲ್ಲಿದ ನೆಲದಲ್ಲಿಯೇ ಆಚರಿಸಬೇಕು ಅಂತ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭೀವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಹೇಳಿದ್ದಾರೆ. ಉಗ್ರ ಕೃತ್ಯ ನಡೆದ ಪಹಲ್ಗಾಮ್​ನಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 22ರಂದು ಆಚರಣೆ ಮಾಡಬೇಕು ಅಂತ ಈಗಾಗಲೇ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ 700 ಜನರು ಭಾಗಿ ಸಾಧ್ಯತೆ ಇದೆ.

ಈ ಹಿಂದೆ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವವನ್ನ ನೇಪಾಳ, ಕಾಶಿಯಲ್ಲಿ ಆಚರಣೆ ಮಾಡಲಾಗಿತ್ತು. ಹೀಗಾಗಿ ಈ ವರ್ಷ ಪಹಲ್ಗಾಮ್​ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮಾಡೋದಕ್ಕೆ ತಯಾರಿ ನಡೆಸಲಾಗುತ್ತಿದೆ. ಈ ವೇಳೆ ನಿವೃತಿ ಹೊಂದಿರುವ ಕಾಶ್ಮೀರದ ಯೋಧರಿಗೆ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಇಷ್ಟೇ ಅಲ್ಲದೇ ಮೃತರ ಕುಟುಂಬಸ್ಥರಿಗೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment