newsfirstkannada.com

×

ಬಡತನದಲ್ಲೇ ಅರಳಿದ ಪ್ರತಿಭೆಗಳು.. ಪಿಯು ಪರೀಕ್ಷೆಯಲ್ಲಿ ಈ ಬಾರಿ ಟಾಪರ್‌ಗಳ ಸಾಧನೆ, ದಾಖಲೆಯೇ ವಿಶೇಷ!

Share :

Published April 10, 2024 at 9:26pm

    ಸಾಧಿಸೋ ಛಲವೊಂದಿದ್ದರೇ ಸಾಕು, ಬಡತನ, ಕಷ್ಟ ಅನ್ನೋದು ಬರಲ್ಲ

    ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿ‌ -ಧಾರವಾಡದ ವಿದ್ಯಾಲಕ್ಷ್ಮಿಗೆ 598 ಮಾರ್ಕ್ಸ್‌

    ರೆವಿನಾಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  600 ಅಂಕಗಳಿಗೆ 595 ಅಂಕ

ಪಿಯುಸಿ ವಿದ್ಯಾರ್ಥಿಗಳ ಪಾಲಿನ ಮಹತ್ತರ ಘಟ್ಟ. ಮಾರ್ಚ್​ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ರು. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಶೇಕಡ 81.15ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಗದಗಕ್ಕೆ ಕೊನೆಯ ಸ್ಥಾನ
ಕಲಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಟಾಪರ್ಸ್

ಎಂದಿನಂತೆ ಈ ಬಾರಿಯೂ ಹಳೆ ಸಂಪ್ರದಾಯ ಮುಂದುವರೆದಿದೆ. 97.37 %ನಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ರೆ, 96.80%ನಿಂದ ಉಡುಪಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.

ಇದನ್ನೂ ಓದಿ: PUC ರಿಸಲ್ಟ್​ ಪ್ರಕಟ.. ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ

ಪಿಯು ಫಲಿತಾಂಶ!
ಪರೀಕ್ಷೆ ಬರೆದ ವಿದ್ಯಾರ್ಥಿಗಳು – 6,98,378 ಮಂದಿ
ತೇರ್ಗಡೆಯಾದ ವಿದ್ಯಾರ್ಥಿಗಳು – 5,52,690 ಮಂದಿ
ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳು – 17,299 ಮಂದಿ

ಪರೀಕ್ಷೆಯಲ್ಲಿ ಯಾರೆಲ್ಲಾ ಟಾಪರ್ಸ್! 
ವಿದ್ಯಾಲಕ್ಷ್ಮೀ (ವಿಜ್ಞಾನ) 598 ವಿದ್ಯಾನಿಕೇತನ ಪಿಯು ಕಾಲೇಜು, ಹುಬ್ಬಳ್ಳಿ‌ -ಧಾರವಾಡ
ಮೇಧಾ (ಕಲಾ) 596 NMKRV ಪಿಯು ಕಾಲೇಜು ಜಯನಗರ
ವೇದಾಂತ್  (ಕಲಾ) 596 ಎಸ್ ಎಸ್ ಪಿಯು ಕಾಲೇಜು, ವಿಜಯಪುರ
ಕವಿತಾ ಬಿ.ವಿ (ಕಲಾ) 596 ಇಂದು ಪಿಯು ಕಾಲೇಜು, ಬಳ್ಳಾರಿ
ಗಾನವಿ (ಕಾಮರ್ಸ್) 597 ವಿಧ್ಯಾನಿಧಿ IND ಪಿಯು ಕಾಲೇಜು ,ತುಮಕೂರು
ರವೀನಾ  ಲಮಾಣಿ (ವಾಣಿಜ್ಯ) 595 ಕೆಇಬಿ ಪಿಯು ಕಾಲೇಜು, ಧಾರವಾಡ

ಬಡ ಕುಟುಂಬದ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ ಸ್ಥಾನ
600 ಅಂಕಗಳಿಗೆ 595 ಅಂಕ ಪಡೆದ ವಿದ್ಯಾರ್ಥಿನಿ ರೆವಿನಾ

ಕಡುಬಡತನ.. ಕಷ್ಟ.. ಕೂಲಿ ಕೆಲಸವೇ ಇವರಿಗೆ ಆಧಾರ. ಆದ್ರೆ, ಸಾಧಿಸೋ ಛಲವೊಂದಿದ್ದರೇ ಸಾಕು, ಬಡತನ, ಕಷ್ಟ ಅನ್ನೋದು ಬರಲ್ಲ ಅನ್ನೋದಕ್ಕೆ ಈ ವಿದ್ಯಾರ್ಥಿನಿಯೇ ನಿದರ್ಶನ.. ಇವ್ರು.. ರೆವಿನಾ ಸೋಮಪ್ಪ ಲಮಾಣಿ.. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಆದರಹಳ್ಳಿ ಗ್ರಾಮದ ಹುಡುಗಿ.. ಧಾರವಾಡದ ಕೆಇ ಬೋರ್ಡ್‌ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ರೆವಿನಾ ತಂದೆ ತಾಯಿ ಊರು ಊರಿಗೆ ವಲಸೆ ಹೋಗಿ ಕೆಲಸ ಮಾಡ್ತಾರೆ. ಇಷ್ಟಿದ್ರೂ, ರೇವಿನಾ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  600 ಅಂಕಗಳಿಗೆ 595 ಅಂಕ ಪಡೆದಿದ್ದಾಳೆ. ಇನ್ನು, ಮಗಳ ಫಲಿತಾಂಶ ಕಂಡು ರೆವಿನಾ ಮನೆಯಲ್ಲಿ ಸಂಭ್ರಮದ ಹೊನಲು ಮನೆ ಮಾಡಿದೆ. ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಗೃಹಲಕ್ಷ್ಮಿ ಯೋಜನೆಯ ಹಣ ಸಹಾಯ.. ನ್ಯೂಸ್ ಫಸ್ಟ್‌ಗೆ ಟಾಪರ್‌ ವಿದ್ಯಾರ್ಥಿ ಸಂತಸ; ವಿಡಿಯೋ ವೈರಲ್‌!

ಮುಂದೆ ರೆವಿನಾ ಯುಪಿಎಸ್ಸಿ ಭವಿಷ್ಯದ ಕನಸು ಹೊತ್ತಿದ್ದಾಳೆ. ಈ ಬಗ್ಗೆ ಮಾತನಾಡಿದ ರೆವಿನಾ , ತಂದೆ ತಾಯಿ ಪಡ್ತಿರೋ ಕಷ್ಟನೇ ನನಗೆ ಸ್ಪೂರ್ತಿ. ಬಡತನ ಹೋಗಲು ಚೆನ್ನಾಗಿ ಓದಬೇಕು ಎಂಬ ಛಲ ಮೂಡಿತ್ತು ಎಂದಿದ್ದಾರೆ.
ಬೆಂಗಳೂರಿನ ಜನಯನಗರದ NMKRV ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇಧಾ 596 ಅಂಕಗಳಿಸೋ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಹೀಗಾಗಿ, ಮೇಧಾ ಶಿಕ್ಷಕರು ಹಾಗೂ ಪೋಷಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ದಾಖಲೆ ಫಲಿತಾಂಶ ಬಂದಿದೆ. ಇಂದಿನಿಂದಲೇ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಪರೀಕ್ಷಾ ಮಂಡಳಿ ಅವಕಾಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಡತನದಲ್ಲೇ ಅರಳಿದ ಪ್ರತಿಭೆಗಳು.. ಪಿಯು ಪರೀಕ್ಷೆಯಲ್ಲಿ ಈ ಬಾರಿ ಟಾಪರ್‌ಗಳ ಸಾಧನೆ, ದಾಖಲೆಯೇ ವಿಶೇಷ!

https://newsfirstlive.com/wp-content/uploads/2024/04/PUC-Result-1-1.jpg

Load More