/newsfirstlive-kannada/media/post_attachments/wp-content/uploads/2025/04/VILLAGE-OF-OFFICERS.jpg)
ಭಾರತದ ಅನೇಕ ಹಳ್ಳಿಗಳು ಅನೇಕ ವಿಷಯಗಳಿಗೆ ಪ್ರಸಿದ್ಧಿಯನ್ನು ಪಡೆದಿವೆ. ದೇಶದ ಅತ್ಯಂತ ಸ್ವಚ್ಛತನದಿಂದ ಕೂಡಿದ ಹಳ್ಳಿಗಳ ಪಟ್ಟಿಯಲ್ಲಿ ಕೆಲವು ಗ್ರಾಮಗಳು ಕಾಣಿಸಿಕೊಂಡಿವೆ. ಸಂಸ್ಕೃತವನ್ನು ಮಾತೃಭಾಷೆಯನ್ನಾಗಿ ಅದನ್ನೇ ಆಡು ಭಾಷೆಯನ್ನಾಗಿ ಮಾಡಿಕೊಂಡಿರುವ ಹಳ್ಳಿಗಳು ಇವೆ. ಆದ್ರೆ ಮಧ್ಯಪ್ರದೇಶದಲ್ಲಿರುವ ಬುಡುಕಟ್ಟು ಜನಾಂಗವೇ ಹೆಚ್ಚಿರುವ ಪಡಿಯಾಲ್ ಎಂಬ ಗ್ರಾಮವನ್ನು ‘ವಿಲೇಜ್ ಆಫ್ ಆಫೀಸರ್ಸ್’ ಎಂದೇ ಕರೆಯುತ್ತಾರೆ ಅಂದ್ರೆ ಅಧಿಕಾರಿಗಳ ಗ್ರಾಮ ಅಂತ. ಇಲ್ಲಿರುವ ಪ್ರತಿಯೊಂದು ಮಗುವು ನಾನು ಸಿವಿಲ್ ಸರ್ವೆಂಟ್ ಆಗಬೇಕು ಎಂಬ ಗುರಿಯೊಂದಿಗೆನೇ ಕೈಗೆ ಪುಸ್ತಕ ಎತ್ತಿಕೊಳ್ಳುತ್ತದೆ.
ಇದನ್ನೂ ಓದಿ: 140 ಕಿ.ಮೀ ಪಾದಯಾತ್ರೆ ಆರಂಭಿಸಿದ ಅನಂತ್ ಅಂಬಾನಿ.. ಪ್ರತಿದಿನ ರಾತ್ರಿ ಹೊತ್ತಲ್ಲೇ ನಡಿಗೆ! ಕಾರಣವೇನು?
ಧಾರ್ ಜಿಲ್ಲೆಯ ಮಲ್ವಾ ಪ್ರದೇಶದ ಬಳಿ ಬರುವ ಈ ಗ್ರಾಮದ ಜನಸಂಖ್ಯೆ ಕೇವಲ 5 ಸಾವಿರ ಮಾತ್ರ. ಇಷ್ಟು ಜನಸಂಖ್ಯೆಯಿರುವ ಗ್ರಾಮದಿಂದ ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಸುಮಾರು 100 ಜನರು ಆಡಳಿತ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಗ್ರಾಮದ ಶೇಕಡಾ 90 ರಷ್ಟು ಜನರು ಭಿಲ್ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವರು ಅನ್ನೋದು ಈ ಗ್ರಾಮದ ಇನ್ನೊಂದು ವಿಶೇಷ
ಭಿಲ್ ಸಮುದಾಯವು ಧಾರ್, ಝಬುವಾ ಮತ್ತು ನಿಮರ್ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ವಿಶೇಷ ಬುಡಕಟ್ಟು ಜನಾಂಗ. ಮಧ್ಯಪ್ರದೇಶದ ಸರ್ಕಾರ ಹೇಳುವ ಪ್ರಕಾರ ಈ ಪಡಿಯಾಲ್ ಗ್ರಾಮದ ಸಾಕ್ಷರತೆ ಶೇಕಡಾ 90 ರಷ್ಟಿದೆಯಂತೆ. ಸುಮಾರು 400 ರಷ್ಟು ಜನರು ಸರ್ಕಾರಿ ನೌಕರರಾಗಿ ಹಾಗೂ ಆಡಳಿತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು 2024ರಲ್ಲಿ ವರದಿಯಾಗಿದೆ. ಈ ವರದಿಯನ್ನು www.amarujala.com. ಎಂಬ ವೆಬ್ಸೈಟ್ನಲ್ಲಿ ಬಿಡಗಡೆ ಮಾಡಲಾಗಿತ್ತು. ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರಿಂದ ಹಿಡಿದು ಐಪಿಎಸ್, ಐಎಎಸ್, ಇಂಜಿನಿಯರ್ಗಳು ಡಾಕ್ಟರ್ಗಳು, ಪ್ರಾಸಿಕ್ಯೂಷನ್ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹೀಗೆ ನಾನಾ ವಿಭಾಗಗಳಲ್ಲಿ ಇಲ್ಲಿಯ ಯುವಕರು ನೌಕರಿಯನ್ನು ಪಡೆಯುತ್ತಾರೆ ಮತ್ತು ಇಂದಿಗೂ ಕೂಡ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಭಾರತೀಯ ನಾಣ್ಯಗಳಲ್ಲಿ ನಕ್ಷತ್ರ, ವಜ್ರ ಮತ್ತು ಡಾಟ್ ಗುರುತುಗಳು ಯಾಕೆ? ಇಂಟ್ರೆಸ್ಟಿಂಗ್ ವಿಚಾರ ನೀವೂ ತಿಳಿದುಕೊಳ್ಳಿ!
ಈ ಗ್ರಾಮದಲ್ಲಿ ದೊರಕುವ ಶಿಕ್ಷಣ ಮತ್ತು ಸಾಕ್ಷರತೆಯ ಗುಣಮಟ್ಟ ಬೇರೆಯದ್ದೇ ಹಂತದಲ್ಲಿದೆ ಎಂದು ಹೇಳಲಾಗುತ್ತದೆ. ಈ ಗ್ರಾಮದ ಪ್ರತಿ 7 ಮಕ್ಕಳಲ್ಲಿ 4 ಜನರು ನೀಟ್ ಪರೀಕ್ಷೆಯನ್ನು ಸರಳವಾಗಿ ಪಾಸ್ ಮಾಡುತ್ತಾರೆ. 7 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳ ಸರಳವಾಗಿ ಜೆಇಇ ಮೇನ್ಸ್ ಪರೀಕ್ಷೆಯನ್ನು ಪ್ರತಿವರ್ಷ ಪಾಸಾಗುತ್ತಾರೆ ಅಂದ್ರೆ ಇಲ್ಲಿ ದೊರಕುತ್ತಿರುವ ವಿದ್ಯೆಯ ಗುಣಮಟ್ಟ ಎಂತಹದು ಎಂಬುದು ನಿಮಗೆ ಒಂದು ಅಂದಾಜು ಸಿಗುತ್ತದೆ. ಈ ಗ್ರಾಮದ ಪ್ರತಿ ಮನೆಯಲ್ಲಿಯೋ ಕನಿಷ್ಠ ಒಬ್ಬನಾದರೂ ಸರ್ಕಾರಿ ನೌಕರಿಯಲ್ಲಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ.
ಇನ್ನು ಒಂದು ಪ್ರಮುಖ ಅಂಶವೆಂದರೆ, ಈ ಗ್ರಾಮದಲ್ಲಿನ ಜನರು ಭಾರತ ಸ್ವಾತಂತ್ರ್ಯಗೊಂಡಾಗಿನಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧೆಯೊಡ್ಡುತ್ತಲೇ ಬಂದಿದ್ದಾರೆ ಎಂಬುದು. ಮನೋಜ ದುಬೆ ಎಂಬುವವರು ಇಲ್ಲಿ ಸುದೀರ್ಘ ವರ್ಷಗಳ ಕಾಲ ಬ್ಲ್ಯಾಕ್ ರಿಸೋರ್ಸ್ ಸೆಂಟ್ರಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಗ್ರಾಮದ ಯುವಕರ ಯಶಸ್ಸಿನ ಕಥೆಗೆ ಅವರೇ ಜೀವಂತ ಸಾಕ್ಷಿ. ಈ ಗ್ರಾಮದ ಜನರು ಶಿಕ್ಷಣಕ್ಕೆ ನೀಡುವಷ್ಟು ಒತ್ತು ಮತ್ಯಾವುದಕ್ಕೂ ಕೂಡ ನೀಡುವುದಿಲ್ಲ ಎಂದು ದುಬೇ ಹೇಳುತ್ತಾರೆ. ಶಾಲಾ ಹಂತದಲ್ಲಿಯೇ ಇಲ್ಲಿಯ ಮಕ್ಕಳು ಅಡ್ಮಿನಿಸ್ಟ್ರೇಟಿವ್ ಸರ್ವಿಸ್, ಟೆಕ್ನಾಲಜಿ ಮತ್ತು ಇತರ ಕ್ಷೇತ್ರಗಳು, ಉದಾಹರಣೆಗೆ ಮೆಡಿಕಲ್ ಮತ್ತು ಇಂಜನೀಯರಿಂಗ್ಗೆ ಸಿದ್ಧತೆಯನ್ನು ಮಾಡಿಕೊಳ್ಳಲು ಆರಂಭಿಸುತ್ತಾರೆ ಎಂದು ದುಬೇ ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ