30, 40 ಸಾವಿರ ಕೋಟಿ.. ವ್ಯಾಲೆಂಟೈನ್ ವೀಕ್​ನಲ್ಲಿ ಯಾವುದಕ್ಕೆ ಹೆಚ್ಚು ಖರ್ಚು? ಪ್ರೇಮಿಗಳು ಓದಲೇಬೇಕಾದ ಸ್ಟೋರಿ!

author-image
Veena Gangani
Updated On
30, 40 ಸಾವಿರ ಕೋಟಿ.. ವ್ಯಾಲೆಂಟೈನ್ ವೀಕ್​ನಲ್ಲಿ ಯಾವುದಕ್ಕೆ ಹೆಚ್ಚು ಖರ್ಚು? ಪ್ರೇಮಿಗಳು ಓದಲೇಬೇಕಾದ ಸ್ಟೋರಿ!
Advertisment
  • ವ್ಯಾಲೆಂಟೈನ್ಸ್ ಡೇಗೆ ಬಿಲಿಯನ್ ಡಾಲರ್ ಬ್ಯುಸಿನೆಸ್ ಆಗುತ್ತಾ?
  • ಹಲವು ಉದ್ಯಮಿಗಳಿಗೆ ಬೂಸ್ಟ್ ಕೊಡುತ್ತೆ ವ್ಯಾಲೆಂಟೈನ್ಸ್ ಡೇ
  • ವ್ಯಾಲೆಂಟೈನ್ಸ್ ಡೇ, ವ್ಯಾಲೆಂಟೈನ್ ವೀಕ್​ನಲ್ಲಿ ಭರ್ಜರಿ ವ್ಯಾಪಾರ

ಒಬ್ಬರ ಕಣ್ಣಲ್ಲಿ ಮತ್ತೊಬ್ಬರು ಕಣ್ಣಿಟ್ಟು ಗಂಟೆಗಟ್ಟಲೆ ನೋಡ್ತಾ ಕಳ್ದೋಗೋಣ ಅನ್ನೋ ರೊಮ್ಯಾಂಟಿಕ್ ಡೈಲಾಗ್​ಗಳನ್ನ ಹೇಳ್ಕೊಂಡು ಲವ್ ಮಾಡೋ ಜಮಾನ ಸದ್ಯಕ್ಕಿಲ್ಲ. ಈಗೇನಿದ್ರೂ ಗರ್ಲ್​ಫ್ರೆಂಡ್, ಬಾಯ್​ಫ್ರೆಂಡ್​ಗಳು, ಅಷ್ಟೇ ಯಾಕೆ ಮದುವೆ ಆಗಿರೋ ಕಪಲ್ ಕೂಡ ಗಿಫ್ಟ್​ಗಳಿಗೆ ಅಡಿಕ್ಟ್ ಆಗೋಗಿದ್ದಾರೆ.

ಇದನ್ನೂ ಓದಿ: ನಿಮಗೇನಾದ್ರೂ ನಟಿಸೋ ಆಸೆ ಇದ್ಯಾ? ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಂದ ವಿಶೇಷ ಆಹ್ವಾನ!

publive-image

ಅದರಲ್ಲೂ ವ್ಯಾಲೆಂಟೈನ್ಸ್ ಡೇ ಬಂತಂದ್ರೆ ಈ ಗಿಫ್ಟ್​​ ಮೇನಿಯಾ ಇನ್ನೂ ಹೆಚ್ಚಾಗುತ್ತೆ. ಈ ಬಾರಿ ಫೆಬ್ರವರಿ 14ರ ವ್ಯಾಲೆಂಟೈನ್ಸ್​​ ಡೇ ಲವರ್ಸ್​​ಗಷ್ಟೇ ಸ್ಪೆಷಲ್ ಅಲ್ಲ. ಉದ್ಯಮ ವರ್ಗಕ್ಕೂ ಈ ವ್ಯಾಲೆಂಟೈನ್ಸ್ ಡೇ ಸಿಕ್ಕಾಪಟ್ಟೆ ಸ್ಪೆಷಲ್ ಆಗಲಿದೆ. ಕಾಮನ್ ಆಗಿ ವ್ಯಾಲಂಟೈನ್ಸ್ ಡೇನಲ್ಲಿ ಗಿಫ್ಟ್ ಶಾಪ್​ಗಳಲ್ಲಿ, ಗ್ರೀಟಿಂಗ್ ಕಾರ್ಡ್ ಕೊಳ್ಳೋರಿಂದ ಹಿಡಿದು, ತಮ್ಮ ಹುಡುಗನಿಗೂ, ಹುಡುಗಿಗೋ ಕಾಸ್ಟ್​ಲಿ ಗಿಫ್ಟ್, ಚಿನ್ನಾಭರಣಗಳನ್ನ ತಗೊಳ್ಳೋರೆ ತುಂಬಿ ತುಳುಕ್ತಾ ಇರ್ತಾರೆ. ಈ ವರ್ಷ ಡಬಲ್, ಟ್ರಿಪಲ್ ಅಲ್ಲ.. ನೀವು ಊಹಿಸೋಕೂ ಸಾಧ್ಯವಿಲ್ಲ.. ಅಷ್ಟು ದೊಡ್ಡ ಮಟ್ಟಿಗೆ ಅಂಗಡಿಗಳು ರಶ್ ಆಗಲಿವೆ ಅನ್ನೋ ಅಂದಾಜಿದೆ. ಯಾಕಂದ್ರೆ ಈ ಬಾರಿ ವ್ಯಾಲೆಂಟೈನ್ಸ್ ಡೇಗೆ ಬಿಲಿಯನ್ ಡಾಲರ್ ಬ್ಯುಸಿನೆಸ್ ಆಗಲಿದೆ. ಹೌದು, ಜಸ್ಟ್ ಇಂಡಿಯಾದಲ್ಲೇ ಪ್ರೇಮಿಗಳ ದಿನಾಚರಣೆಗೆ ಹಲವು ಬಿಲಿಯನ್ ಡಾಲರ್​ಗಳಷ್ಟು ವಹಿವಾಟು ನಡೆಯಲಿದೆ ಅನ್ನೋ ಅಂದಾಜಿದೆ.

publive-image

ಈ ಬಿಲಿಯನ್ ಡಾಲರ್ ಬ್ಯುಸಿನೆಸ್ ಬರೀ ಫೆಬ್ರವರಿ 14ರ ಒಂದೇ ದಿನ ಆಗೋದಲ್ಲ. ವ್ಯಾಲೆಂಟೈನ್ಸ್​ ಡೇ ಒಂದೇ ದಿನವಾದ್ರೂ, ಅದರ ಆಚರಣೆ ಒಂದು ವಾರ ಮೊದಲೇ ಶುರುವಾಗೋಗುತ್ತೆ. ಪ್ರೀತಿಯಲ್ಲಿ ಮುಳುಗಿದೋರು, ಚಾಕೊಲೇಟ್ ಡೇ, ಪ್ರಪೋಸ್ ಡೇ, ಕಿಸ್ ಡೇ, ಹಗ್ ಡೇ, ರೋಸ್ ಡೇ ಅಂತ ದಿನಕ್ಕೊಂದು ಆಚರಣೆ ಮಾಡ್ತಾ, ಒಂದು ವಾರ ಕಾಲ ವ್ಯಾಲೆಂಟೈನ್ಸ್ ಡೇನ ಆಚರಿಸ್ತಾರೆ. ವಾರಗಟ್ಟಲೇ ಆಚರಣೆ ಮಾಡ್ಬೇಕು ಅಂದ್ರೆ ದಿನಕ್ಕೊಂದು ಗಿಫ್ಟ್ ಕೂಡ ಕೊಡಲೇಬೇಕಲ್ವಾ? ಅದಕ್ಕೆ ಬ್ಯುಸಿನೆಸ್​ಗಳು ಈ ಸಂದರ್ಭದಲ್ಲಿ ಬೂಮ್ ಆಗೋದು. ಕಳೆದ ಕೆಲ ವರ್ಷಗಳಿಂದ ವ್ಯಾಲೆಂಟೈನ್ಸ್​ ಡೇ ಸಂದರ್ಭದಲ್ಲಿ ನೂರಾರು ಕೋಟಿ ವ್ಯವಹಾರ ನಡೀತಾನೆ ಇದೆ. ಆದ್ರೆ ಇದು ಈ ಬಾರಿ ಹೊಸ ದಾಖಲೆಯೇ ಬರೆಯೋ ಲಕ್ಷಣಗಳು ಕಾಣ್ತಿದೆಯಂತೆ.

ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಯಾವ್ಯಾವ ಬ್ಯುಸಿನೆಸ್ ಎಷ್ಟೆಷ್ಟು ಕೋಟಿ ವ್ಯವಹಾರ ಮಾಡಬಹುದು?

publive-image

ಹೂಗಳು ಮತ್ತು ಬೊಕೆಗಳು

ವ್ಯಾಲೆಂಟೈನ್ಸ್​​ ಡೇನಲ್ಲಿ ಹೂಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್. ಅದ್ರಲ್ಲೂ ರೋಸ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತೆ. ಈ ಬಾರಿಯೂ ಗುಲಾಬಿ ಹೂಗಳೇ ಪ್ರೇಮಿಗಳ ದಿನಾಚರಣೆಯ ರಾಣಿಯರು. ಹೂಗಳು ಮತ್ತು ಬೊಕೆಗಳ ವ್ಯಾಪಾರವೇ ಬರೋಬ್ಬರಿ 3,500 ಕೋಟಿ ರೂಪಾಯಿಗೂ ಹೆಚ್ಚಾಗಬಹುದು ಅನ್ನೋ ನಿರೀಕ್ಷೆ ಇದೆ. ಇನ್ನು, ಹಿಂದಿನದಕ್ಕೆ ಹೋಲಿಸಿದ್ರೆ ಈ ಬಾರಿ ಶೇಕಡ 30ರಷ್ಟು ವ್ಯಾಪಾರ, ವ್ಯವಹಾರ ಹೆಚ್ಚಳ ಆಗುತ್ತೆ ಅಂತ ಅಂದಾಜಿಸಲಾಗಿದೆ.

publive-image

ಚಾಕೊಲೇಟ್ಸ್ ಮತ್ತು ಸ್ವೀಟ್ಸ್ 

ಹುಡುಗಿಯರಿಗೆ ಹೂಗಳ ಜೊತೆ ಚಾಕೊಲೇಟ್​ನೂ ಗಿಫ್ಟ್ ಆಗಿ ಕೊಟ್ರೆ ದಿಲ್ ಖುಷ್ ಆಗೋಗ್ತಾರೆ. ಅದಕ್ಕೆ ಚಾಕೊಲೇಟ್, ಸ್ವೀಟ್ಸ್​ಗೂ ಈ ಸಂದರ್ಭದಲ್ಲಿ ಡಿಮ್ಯಾಂಡ್ ಇರುತ್ತೆ, ಅದ್ರಲ್ಲೂ ಪ್ರೀಮಿಯಂ ಚಾಕೊಲೇಟ್​ಗಳಿಗೆ ಬೇಡಿಕೆ ಹೆಚ್ಚು. ಅದೇ ರೀತಿ ಪರ್ಸನಲೈಸ್ಟ್ ಗಿಫ್ಟ್ ಪ್ಯಾಕ್​ಗಳಿಗೂ ಜನ ಮುಗಿ ಬೀಳ್ತಾರೆ. ಈ ಇಂಡಸ್ಟ್ರಿ ಬರೋಬ್ಬರಿ 4 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸಬಹುದು ಎನ್ನಲಾಗ್ತಿದೆ.

publive-image

ಜ್ಯುವೆಲರಿ

ಭಾರತೀಯರು ಚಿನ್ನಾಭರಣ ಪ್ರಿಯರು. ಇದ್ರ ಜೊತೆಗೆ ಇತ್ತೀಚಿಗೆ ಬೇರೆ ಬೇರೆ ಌಕ್ಸಸರಿಗಳ ಮೇಲೂ ಜನರಿಗೆ ಇಂಟ್ರೆಸ್ಟ್ ಹೆಚ್ಚಾಗಿದೆ. ಸ್ಪೆಷಲ್ ದಿನಗಳಲ್ಲಿ ನಮ್ಮ ಲೈಫ್​ನಲ್ಲಿ ಸ್ಪೆಷಲ್ ಅನಿಸಿಕೊಂಡೋರು, ಬ್ಯೂಟಿಫುಲ್ ಆಗಿ, ಹ್ಯಾಂಡ್​ಸಮ್ ಆಗಿ ಕಾಣಲಿ ಅನ್ನೋ ಎಲ್ಲರಿಗೂ ಇದ್ದೇ ಇರುತ್ತೆ. ಅದಕ್ಕೆ ಗಿಫ್ಟ್ ಆಗಿ ಚಿನ್ನಾಭರಣಗಳನ್ನ, ವಾಚ್, ಮುಂತಾದ ಌಕ್ಸಸರಿಗಳನ್ನ ಕೊಳ್ಳೋರೂ ಹೆಚ್ಚಾಗಿದ್ದಾರೆ. ಈ ಉದ್ಯಮದಲ್ಲಿ ಈ ಬಾರಿ 6500 ಕೋಟಿಗೂ ಹೆಚ್ಚು ವಹಿವಾಟು ನಡೆಯಬಹುದು ಅಂತ ಹೇಳಲಾಗ್ತಿದೆ. ಅದ್ರಲ್ಲೂ ಚಿನ್ನ, ವಜ್ರದ ಉಂಗುರಗಳು, ಕಪಲ್ ರಿಂಗ್​ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆಯಂತೆ.

publive-image

ಗ್ಯಾಜೆಟ್ಸ್ ಮತ್ತು ಟೆಕ್ ಗಿಫ್ಟ್​ಗಳು

ಇವತ್ತು ದುನಿಯಾ ನಡೀತಿರೋದೇ ಗ್ಯಾಜೆಟ್ಸ್ ಮೇಲೆ, ಟೆಕ್ನಾಲಜಿ ಮೇಲೆ ಅನ್ನೋ ಹಾಗಾಗೋಗಿದೆ. ಮೊಬೈಲ್, ಕಂಪ್ಯೂಟರ್​ನಿಂದ ಆರ್ಟಿಫಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್ ಎಲ್ಲದ್ರಲ್ಲೂ ದಿನಕ್ಕೊಂದು ಬೆಳವಣಿಗೆ, ದಿನಕ್ಕೊಂದು ಅಪ್​ಡೇಟ್ ಸಿಗ್ತಾನೆ ಇರುತ್ತೆ. ಇಂದಿನ ತಲೆಮಾರಿನ ಯೂಥ್​ನ ಅಟ್ರ್ಯಾಕ್ಟ್ ಮಾಡ್ತಿರೋದು ಕೂಡ ಇದೇ ಗ್ಯಾಜೆಟ್ಸ್ ಮತ್ತ ತಂತ್ರಜ್ಞಾನ. ಹೀಗಾಗಿ ಗ್ಯಾಜೆಟ್ ಮತ್ತು ಟೆಕ್ ಸಂಬಂಧಿ ಗಿಫ್ಟ್​ಗಳಿಗೂ ಡಿಮ್ಯಾಂಡ್ ಇದ್ದು, ಸರಿ ಸುಮಾರು 5 ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಸಬಹುದು. ದೊಡ್ಡ ದೊಡ್ಡ ವಸ್ತುಗಳಿಗಿಂತ, ಸ್ಮಾರ್ಟ್​ ಫೋನ್ಸ್, ಸ್ಮಾರ್ಟ್ ವಾಚಸ್, ಇಯರ್ ಬಡ್​ಗಳಿಗೆ ಭಾರೀ ಡಿಮ್ಯಾಂಡ್ ಹೆಚ್ಚಾಗಿದೆ.

publive-image

ಡೈನಿಂಗ್ ಮತ್ತು ಟ್ರಾವೆಲ್  

ಜೋಡಿಗಳಿಗೆ ವ್ಯಾಲಂಟೈನ್ಸ್ ಡೇ ದಿನ ಒಂದು ರೊಮ್ಯಾಂಟಿಕ್ ಡಿನ್ನರ್​ಗೆ ಹೋದ್ರೆ, ಅಥವಾ ಇನ್ಯಾವುದೋ ರೊಮ್ಯಾಂಟಿಕ್ ಸ್ಥಳಕ್ಕೆ ಟ್ರಿಪ್ ಹೋದ್ರೆ, ಆ ರೋಮಾಂಚನವೇ ಬೇರೆ. ಈಗಂತೂ ಟ್ರಾವೆಲ್ ಕಾನ್ಸೆಪ್ಟ್ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಜೊತೆಗೆ ಕ್ಯಾಂಡಲ್ ಲೈಟ್ ಡಿನ್ನರ್​ನ ಇಷ್ಟೋ ಪಡೋ ಯುವ ಜನರೂ ಹೆಚ್ಚಿದ್ದಾರೆ. ಹೀಗಾಗಿ ಡೈನಿಂಗ್ ಌಂಡ್ ಟ್ರಾವೆಲ್ ಇಂಡಸ್ಟ್ರಿ ಕೂಡ ಬೂಮ್​ನಲ್ಲಿದ್ದು, 7 ಸಾವಿರ ಕೋಟಿ ರೂಪಾಯಿಗು ಹೆಚ್ಚಿನ ವ್ಯವಹಾರ ನಡೆಸುತ್ತೆ ಅಂತ ಹೇಳಲಾಗ್ತಿದೆ.

publive-image

ಗಿಫ್ಟ್ (ಗೊಂಬೆ, ಪರ್ಫ್ಯೂಮ್..) ₹4,500+ ಕೋಟಿ

ಬರೀ ಹೂನೋ, ಚಾಕೊಲೇಟ್​ ಕೊಟ್ರೆ ಸಾಕಾಗುತ್ತಾ? ಜೊತೆಗೆ ಒಂದು ಟೆಡ್ಡಿ ಬೇರ್ ಕೊಟ್ರೆ ನಿಮ್ ಹುಡುಗಿ ಇನ್ನಷ್ಟು ಖುಷಿ ಆಗ್ತಾಳೆ. ಎಫರ್ಟ್ ನೋಡಿ ಇಂಪ್ರೆಸ್ ಆಗ್ತಾಳೆ ಅನ್ನೋರೇನೂ ಕಮ್ಮಿ ಇಲ್ಲ. ಅದಕ್ಕೆ ಗೊಂಬೆಗಳನ್ನ ಅದೇ ರೀತಿ ತರಹೇವಾರಿ ಪರ್ಫ್ಯೂಮ್​ಗಳನ್ನೂ ಗಿಫ್ಟ್ ಆಗಿ ಕೊಡೋ ವಾಡಿಕೆ ಈಗೀಗ ಜೋರಾಗಿದೆ. ಇಲ್ಲೂ ಸಹ ಸುಮಾರು ನಾಲ್ಕೂವರೇ ಸಾವಿರ ಕೋಟಿಯ ವ್ಯವಹಾರ ಆಗಬಹುದಂತೆ.

publive-image

ಆನ್​ಲೈನ್ ಮತ್ತು ಇ-ಕಾಮರ್ಸ್ ಸೇಲ್ಸ್ ₹10,000+ ಕೋಟಿ

ಇನ್ನು, ಆನ್​ಲೈನ್​ನಲ್ಲೇ ಎಲ್ಲವನ್ನೂ ಆರ್ಡರ್ ಮಾಡೋದು ಸುಲಭ. ಹಾಗಾಗಿ ಆನ್​ಲೈನ್ ಗಿಫ್ಟ್​ಗಳಿಗೂ ಡಿಮ್ಯಾಂಡ್ ಇದೆ. ಆನ್​ಲೈನ್ ವ್ಯವಹಾರದಲ್ಲಿ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತೆ ಅಂತ ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ನಡೆಯುವ ವ್ಯಾಪಾರ ವಹಿವಾಟಿನಲ್ಲಿ ಶೇಕಡ 60ರಷ್ಟು ಆನ್​ಲೈನ್​ನಲ್ಲೇ ಆಗುತ್ತೆ ಅಂತ ಮಾರ್ಕೆಟ್ ತಜ್ಞರು ಊಹಿಸುತ್ತಿದ್ದಾರೆ. ಇದೆಲ್ಲವನ್ನೂ ಒಟ್ಟುಗೂಡಿಸಿದ್ರೆ ಸರಿ ಸುಮಾರು 30 ರಿಂದ 40 ಸಾವಿರ ಕೋಟಿಯ ವ್ಯಹಿವಾಟನ್ನ ವ್ಯಾಲಂಟೈನ್ಸ್​ ವಾರದಲ್ಲಿ ಭಾರತ ಕಾಣಲಿದೆ. ಇದರ ಪಕ್ಕಾ ಅಂಕಿ ಅಂಶಗಳು ಮುಂದಿನ ದಿನಗಳಲ್ಲಿ ಸಿಗಬಹುದು. ಆದ್ರೆ ಈಗ ತಜ್ಞರು ಅಂದಾಜಿಸಿರೋದನ್ನ ನೋಡ್ತಿರೋ ವ್ಯಾಪಾರಸ್ಥರಂತೂ ಪ್ರೇಮಿಗಳಿಗಷ್ಟೇ ಅಲ್ಲ, ಇದು ನಮಗೂ ಸಂಭ್ರಮದ ದಿನವೇ. ಹ್ಯಾಪಿ ವ್ಯಾಲೆಂಟೈನ್ಸ್ ಡೇ ಅಂತ ಖುಷ್ ಖುಷಿಯಿಂದ ಹೇಳ್ತಿದ್ದಾರೆ.

ವಿಶೇಷ ವರದಿ: ನವೀನ್ ಕುಮಾರ್ ಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment