Angry Kids: ಅತಿಯಾದ ಕೋಪ.. ನಿಮ್ಮ ಮಗುವಿನ ಭಾವನೆ ನಿಭಾಯಿಸಲು ಇಲ್ಲಿದೆ ಉಪಾಯ..!

author-image
Ganesh
Updated On
Angry Kids: ಅತಿಯಾದ ಕೋಪ.. ನಿಮ್ಮ ಮಗುವಿನ ಭಾವನೆ ನಿಭಾಯಿಸಲು ಇಲ್ಲಿದೆ ಉಪಾಯ..!
Advertisment
  • ಮಕ್ಕಳ ಭಾವನೆ ನಿಭಾಯಿಸಲು ಬೇಕಿದೆ ಪರಿಹಾರ
  • ಮಕ್ಕಳು ಹಠಮಾರಿ, ಕೋಪಿಷ್ಟರಾಗುವುದು ಸಹಜ
  • ಕೋಪ ನಿಯಂತ್ರಿಸಿಕೊಳ್ಳಲು ಪೋಷಕರು ಕಲಿಸಬೇಕು

ಮಕ್ಕಳು ಪ್ರತಿಯೊಂದಕ್ಕೂ ಬೇಗ ರಿಯಾಕ್ಟ್ ಆಗುತ್ತಾರೆ. ಮುಗ್ಧತೆ, ಹಠಮಾರಿತನ, ಕೋಪ, ಕಿತಾಪತಿ ಇತ್ಯಾದಿ.. ಕೆಲವು ಮಕ್ಕಳು ವಿಪರೀತ ಹಠಮಾರಿ ಮತ್ತು ಕೋಪಿಷ್ಟರಾಗಿರುತ್ತಾರೆ. ಅಂತಹ ಮಕ್ಕಳನ್ನು ನಿಯಂತ್ರಿಸೋದೇ ತುಂಬಾ ಕಷ್ಟಕರ. ಆದರೆ ಅವರನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಮುಂದೊಂದು ದಿನ ತುಂಬಾನೇ ಅಪಾಯಕಾರಿ ರೀತಿಯಲ್ಲಿ ಬೆಳೆದುಬಿಡುತ್ತಾರೆ. ಅದಕ್ಕಾಗಿ ಮಕ್ಕಳಿಗೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪೋಷಕರು ಗಮನಕೊಡಬೇಕು.

ಮಕ್ಕಳಿಗೆ ಅತಿಯಾದ ಕೋಪ ಒಳ್ಳೆಯದಲ್ಲ. ಕೋಪಕ್ಕೆ ಬುದ್ದಿ ಕೊಡುವುದರಿಂದ ಭವಿಷ್ಯದಲ್ಲಿ ಏನಾಗುತ್ತದೆ ಅನ್ನೋದರ ಬಗ್ಗೆ ಅವರಿಗೆ ಯಾವುದೇ ಅರಿವು ಇರುವುದಿಲ್ಲ. ವಿಪರಿತ ಕೋಪವು ಭಾವನೆಗಳನೆಗಳನ್ನು ನಿಗ್ರಹಿಸಿಬಿಡುತ್ತದೆ. ಅದಕ್ಕಾಗಿ ಪೋಷಕರು ಮಕ್ಕಳಿಗೆ ಭಾವನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ಕಲಿಸಿಕೊಡಬೇಕಿದೆ.

ಇದನ್ನೂ ಓದಿ:Clove water; ಲವಂಗ ನೀರಿನಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗ.. ಚಳಿಗಾಲದಲ್ಲಿ ಹೀಗೆ ಮಾಡಿ!

ಪೋಷಕರು ಏನು ಮಾಡಬೇಕು..?
ಕೋಪ ಬರೋದು ಕೂಡ ಭಾವನೆಗಳಿಂದಲೇ. ನಮ್ಮಂತೆಯೇ ಭಾವನೆಗೆ ಒಳಗಾಗಿಯೇ ಮಕ್ಕಳು ಕೋಪಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ದುಃಖ, ನಿರಾಸೆ, ಹತಾಶೆ ಮೂಡುವುದು ಸಹಜ. ಪೋಷಕರು ಅವರ ಭಾವನೆಗಳಿಗೆ ಗಮನಕೊಡದಿದ್ದರೆ ಅವರು ಕೋಪಿಸಿಕೊಳ್ಳುತ್ತಾರೆ. ಮಕ್ಕಳಲ್ಲಿನ ಭಾವನೆಗಳನ್ನು ಗುರುತಿಸುವುದರಿಂದ ಅವುಗಳನ್ನು ನಿಯಂತ್ರಿಸಬೇಕು. ಇದು ಮಕ್ಕಳಲ್ಲಿನ ಕೋಪ ನಿಯಂತ್ರಣಕ್ಕೆ ಮಾಡಬೇಕಾದ ಮೊದಲ ಹೆಜ್ಜೆಯಾಗಿದೆ.

ಕೋಪದ ಬಗ್ಗೆ ವಿವರಿಸುವಾಗ ಅದರ ಪರಿಣಾಮಗಳನ್ನು ಅವರಿಗೆ ಮನಮುಟ್ಟುವಂತೆ ವಿವರಿಸಬೇಕು. ವಿವಿಧ ಚಿತ್ರಗಳೊಂದಿಗೆ, ಕತೆಯೊಂದಿಗೆ ಪರಿಣಾಮಕಾರಿಯಾಗಿ ಅವರ ಮನಮುಟ್ಟುವಂತೆ ತಿಳಿಸಿಕೊಡಬೇಕು. ಮಕ್ಕಳು ತಮ್ಮ ದುಃಖ, ಸಂತೋಷವನ್ನು ಹಂಚಿಕೊಂಡಾಗ ಅವರಲ್ಲಿ ಆಗುವ ಬದಲಾವಣೆಯನ್ನು ಗಮನಿಸಿಕೊಳ್ಳಬೇಕು. ನೀವು ಖುಸಿಯಲ್ಲಿದ್ದೀರಾ? ದುಃಖದಲ್ಲಿದ್ದೀರಾ ಎಂಬ ಪ್ರಶ್ನೆಗಳ ಮೂಲಕ ಮಕ್ಕಳ ಮನಸ್ಸಿನಲ್ಲಿರುವ ಅಂತಾರಳವನ್ನು ತಿಳಿದುಕೊಳ್ಳಬಹುದಾಗಿದೆ.

ಭಾವನೆಗಳ ನಿರ್ಹವಿಸುವ ಮಾರ್ಗ ಕಲಿಸಿ..

  • ಕೋಪಗೊಂಡಾಗ ಆಳವಾದ ಉಸಿರು ತೆಗೆದುಕೊಳ್ಳುವುದು
  • ದುಃಖದಲ್ಲಿದ್ದಾಗ ಅವರು ಇಷ್ಟಪಡುವ ಆಟಿಕೆ ವಸ್ತುಗಳನ್ನು ನೀಡುವುದು
  • ಪೋಷಕರ ಜೊತೆ ಮುಕ್ತವಾಗಿ ಮಾತನಾಡುವ ವಾತಾವರಣ ನಿರ್ಮಾಣ
  • ತಮ್ಮನ್ನು ತಾವು ಶಾಂತಗೊಳಿಸಿಕೊಳ್ಳುವ ಮಾರ್ಗದ ಬಗ್ಗೆ ಸೂಚನೆ ನೀಡಬೇಕು

ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಶಾಂತಗೊಳಿಸಲು ಮುಂದಾಗಬೇಕು. ಒಂದು ವೇಳೆ ಇದು ಪೋಷಕರಿಗೆ ಸಾಧ್ಯವಾಗದಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏನೆಲ್ಲ ಮಾರ್ಗ ಇದೆ ಅನ್ನೋದನ್ನು ಪೋಷಕರು ಅರಿತುಕೊಳ್ಳಬೇಕು.

ಇದನ್ನೂ ಓದಿ:5 ವರ್ಷದೊಳಗಿನ ಮಕ್ಕಳಿಗೆ ಈ 10 ಆಹಾರಗಳನ್ನು ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ; ಪೋಷಕರು ಓದಲೇಬೇಕಾದ ಸ್ಟೋರಿ!

ಪುಸ್ತಕಗಳನ್ನು ಪರಿಚಯಿಸಿ..
ಮಕ್ಕಳ ವಯಸ್ಸು ಮತ್ತು ಆಸಕ್ತಿಗೆ ಸೂಕ್ತವಾದ ಪುಸ್ತಕಗಳನ್ನು ಪರಿಚಯ ಮಾಡಿಸಬೇಕು. ಕಥೆಗಳಲ್ಲಿನ ಪಾತ್ರಗಳು, ಅಲ್ಲಿ ಎದುರಾಗುವ ಸಮಸ್ಯೆಗಳನ್ನು ಅದು ಹೇಗೆ ಎದುರಿಸಲಾಗಿದೆ ಅನ್ನೋದನ್ನು ಅರ್ಥ ಮಾಡಿಸಬೇಕು. ಮಗು ತನ್ನದೇ ಮಾರ್ಗದ ಮೂಲಕ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದಾಗ ಪೋಷಕರ ಸಹಾಯ ಕೇಳಿವ ವಾತಾವರಣ ನಿರ್ಮಾಣ ಮಾಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment