27 ವರ್ಷದಿಂದ ಉಗುರೇ ಕತ್ತರಿಸಿಲ್ಲ.. 10 ಬೆರಳ 42 ಫೀಟ್ ಉದ್ದದ ಉಗುರಿಗೆ 20 ಬಾಟಲಿ ನೇಲ್​ ಪಾಲಿಶ್​ ಬೇಕಂತೆ!

author-image
AS Harshith
Updated On
27 ವರ್ಷದಿಂದ ಉಗುರೇ ಕತ್ತರಿಸಿಲ್ಲ.. 10 ಬೆರಳ 42 ಫೀಟ್ ಉದ್ದದ ಉಗುರಿಗೆ 20 ಬಾಟಲಿ ನೇಲ್​ ಪಾಲಿಶ್​ ಬೇಕಂತೆ!
Advertisment
  • ಉಗುರು ಬಿಡುವುದು ಪ್ರಸ್ತುತ ಕಾಲದಲ್ಲಿ ಟ್ರೆಂಡ್
  • ಉಗುರು ಬಿಟ್ಟು ಗಿನ್ನೆಸ್​​ ವಿಶ್ವ ದಾಖಲೆ ಬರೆದಿದ್ದಾಳೆ ಈಕೆ
  • ಮಗಳ ಸಾವು ಉಗುರು ಬಿಡುವಂತೆ ಮಾಡಿತು ಎಂದರೆ ನಂಬ್ತೀರಾ!

ಉಗುರು ಬಿಡುವುದು ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ. ಉಗುರಿನ ಸೆರೆಯಲ್ಲಿ ಕೊಳೆ ನಿಲ್ಲುವುದರಿಂದ ವೈದ್ಯರು ಉರುಗು ಕತ್ತರಿಸಲು ಹೇಳುತ್ತಾರೆ. ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಗುರನ್ನು ಕತ್ತರಿಸಿ ಶುಚಿತ್ವಕ್ಕೆ ಒತ್ತುನೀಡುತ್ತಾರೆ. ಇದರಿಂದ ಮಕ್ಕಳಲ್ಲಿ ಕಾಣಿಸುವ ಅನಾರೋಗ್ಯವನ್ನ ತಪ್ಪಿಸುತ್ತಾರೆ. ಆದರೆ ಫ್ಯಾಷನ್​ ಲೋಕದಲ್ಲಿ ಉಗುರು ಬಿಡುವುದೇ ಟ್ರೆಂಡ್​ ಆಗಿದೆ.

ಹೌದು. ಉಗುರು ಬಿಡುವುದು ಪ್ರಸ್ತುತ ಕಾಲದಲ್ಲಿ ಟ್ರೆಂಡ್​ ಆಗಿ ಬಿಟ್ಟಿದೆ. ಯುವತಿಯರು ಮಾತ್ರವಲ್ಲ, ಯುವಕರು ಈಗ ಉಗುರು ಬಿಡುತ್ತಿದ್ದಾರೆ. ಆದರೆ ಉದ್ದನೆಯ ಉಗುರನ್ನು ಜೋಪಾನವಾಗಿ ನೋಡಿ ಕೊಳ್ಳಲು ಕಷ್ಟವೆನಿಸಿದವರು ಫ್ಯಾನ್ಸಿ ಉಗುರನ್ನು ಅಂಟಿಸಿಕೊಳ್ಳುತ್ತಾರೆ. ಆದರೆ ವಿಚಾರ ಅದಲ್ಲ. ಈ ಉಗುರಿನಿಂದಲೇ ಮಹಿಳೆಯೊಬ್ಬಳು ಗಿನ್ನೆಸ್​​ ವಿಶ್ವ ದಾಖಲೆ ಬರೆದ ಕತೆ ಗೊತ್ತಾ? ಈ ಸ್ಟೋರಿ ಓದಿ.

publive-image

ಇದನ್ನೂ ಓದಿ: Modi Laddu: ಮಾರುಕಟ್ಟೆಯಲ್ಲಿದೆ ‘ಮೋದಿ ಲಡ್ಡು’.. ಭಾರೀ ಫೇಮಸ್ಸು! ಇದರಲ್ಲೇನಿದೆ ವಿಶೇಷತೆ?

ಹೆಸರು ಡಯಾನಾ ಆರ್ಮ್​​ಸ್ಟ್ರಾಂಗ್​​. ಈಕೆ ಬರೋಬ್ಬರಿ 27 ವರ್ಷದಿಂದ ಉಗುರನ್ನೇ ಕತ್ತರಿಸಿಲ್ಲವಂತೆ. ಇದೇ ವಿಚಾರವಾಗಿ ಡಯಾನಾ ಗಿನ್ನೆಸ್​​ ವಿಶ್ವ ದಾಖಲೆ ಪುಟ ಸೇರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಮಹಿಳೆಯ 10 ಬೆರಳುಗಳಲ್ಲಿ 42 ಫೀಟ್​​ 10.4 ಉದ್ದದ ಉಗುರನ್ನು ಹೊಂದಿದ್ದಾಳೆ.

publive-image

ಡಯಾನಾ ಆರ್ಮ್​ಸ್ಟ್ರಾಂಗ್​​ 1997ರಿಂದ ಉಗುರನ್ನು ಕತ್ತರಿಸಿಲ್ಲವಂತೆ. ಆಕೆಯ ಮಗಳು ಲತೀಶಾ ಅಸ್ತಮಾದಿಂದ ಸಾವನ್ನಪ್ಪಿದ ಬಳಿಕ ಡಯಾನಾ ಉಗುರು ಕತ್ತರಿಸಲ್ಲ ಎಂಬ ನಿರ್ಧಾರ ಮಾಡಿದಳು. ಅಲ್ಲಿಂದ ಇಲ್ಲಿಯವರೆಗೆ ಅಂದರೆ 27 ವರ್ಷದವರೆಗೆ ಉಗುರು ಕತ್ತರಿಸಿಲ್ಲ.

ಇದನ್ನೂ ಓದಿ: Selfie: ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಹೋಗಿ ಓರ್ವ ಸಾ*ವು.. ಇಬ್ಬರು ಪ್ರಾಣಾಪಾಯದಿಂದ ಪಾರು

ಡಯಾನಾ ತನ್ನ ಉಗುರನ್ನು ಪಾಲಿಶ್​​ ಮಾಡಲು ಹತ್ತು ಗಂಟೆ ತೆಗೆದುಕೊಳ್ಳುತ್ತಾಳಂತೆ. ನಾಲ್ಕೈದು ವರ್ಷಗಳಿಗೊಮ್ಮೆ ತಪಾಸಣೆ ಮಾಡಿಸುತ್ತಾಳೆ. ಈಕೆಯ ಉಗುರಿಗೆ ಹದಿನೈದರಿಂದ ಇಪ್ಪತ್ತು ಬಾಟಲಿ ನೇಲ್​ ಪಾಲಿಶ್​​ (ಬಣ್ಣ) ಖರ್ಚಾಗುತ್ತಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment