/newsfirstlive-kannada/media/post_attachments/wp-content/uploads/2024/11/IPL2025_1-1.jpg)
ಐಪಿಎಲ್​ 2025ರ ಮೆಗಾ ಆಕ್ಷನ್​ಗೆ ಎಲ್ಲ 10 ಫ್ರಾಂಚೈಸಿಗಳು ಭರ್ಜರಿ ಪ್ಲಾನ್ ನಡೆಸುತ್ತಿವೆ. ಈಗಾಗಲೇ ಆಟಗಾರರನ್ನ ರಿಟೈನ್ ಮಾಡಿಕೊಂಡಿರುವ ಫ್ರಾಂಚೈಸಿಗಳು ಯಾರನ್ನ ಖರೀದಿ ಮಾಡಬೇಕು ಎಂದು ಬಿಡ್ ಮಾಡಲು ನೂರಾರು ಲೆಕ್ಕಾಚಾರ ಮಾಡುತ್ತಿವೆ. ಇದರ ನಡುವೆ ಇಟಲಿ ದೇಶದಿಂದ ಇದೇ ಮೊಟ್ಟ ಮೊದಲ ಬಾರಿಗೆ ಪೇಸ್ ಬೌಲರ್​ರೊಬ್ಬರು ಮೆಗಾ ಆಕ್ಷನ್​ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಇಟಲಿಯ ವೇಗದ ಬೌಲರ್ ಥಾಮಸ್ ಡ್ರಾಕಾ ತಮ್ಮ ಹೆಸರನ್ನು ಐಪಿಎಲ್​ 2025 ಮೆಗಾ ಆಕ್ಷನ್​ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಇಟಲಿ ದೇಶದ ಆಟಗಾರರೊಬ್ಬರು ಇದೇ ಮೊದಲ ಬಾರಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಸದ್ಯ ಇದೀಗ ಈ ಯುವ ಪ್ಲೇಯರ್​ಗೆ 24 ವರ್ಷಗಳು ತುಂಬಿದ್ದು ಮೈದಾನದಲ್ಲೂ ಅಷ್ಟೇ ಆಕರ್ಷಕವಾಗಿ ಬೌಲಿಂಗ್ ಮಾಡುತ್ತಾರೆ. ಇವರ ಬೆಸ್ಟ್​ ಪರ್ಫಾಮೆನ್ಸ್ ಎಂದರೆ ಇತ್ತೀಚೆಗೆ ಗ್ಲೋಬಲ್ ಟಿ20 ಕೆನಡಾ-2024 ರಲ್ಲಿ ಬ್ರಾಂಪ್ಟನ್ ವುಲ್ವ್ಸ್ ತಂಡದ ಪರ 11 ವಿಕೆಟ್​ ಕಬಳಿಸಿದ್ದರು. ಅಲ್ಲದೇ ಈ ಟೂರ್ನಿಯಲ್ಲಿ 2ನೇ ಹೆಚ್ಚು ವಿಕೆಟ್​ ಟೇಕರ್ ಆಗಿದ್ದರು.
/newsfirstlive-kannada/media/post_attachments/wp-content/uploads/2024/11/Thomas_Draca.jpg)
ಥಾಮಸ್ ಡ್ರಾಕಾ ತಮ್ಮ ಹೆಸರನ್ನು ಆಲ್‌ರೌಂಡರ್‌ಗಳ ವಿಭಾಗದಲ್ಲಿ ಆಕ್ಷನ್​ ಪಟ್ಟಿಯಲ್ಲಿ 30 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ರಿಜಿಸ್ಟರ್ ಮಾಡಿದ್ದಾರೆ. ಮೆಗಾ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿಗಳು ಅವರನ್ನು ಖರೀದಿ ಮಾಡುತ್ತಾವೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಥಾಮಸ್ ಇದೇ ವರ್ಷವೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಪಂದ್ಯದಲ್ಲಿ 4 ಓವರ್ ಮಾಡಿ 15 ರನ್​ಗೆ 2 ವಿಕೆಟ್​ ಕಬಳಿಸಿ ಸಂಭ್ರಮಿಸಿದ್ದರು.
ಈ ಬಾರಿಯ ಐಪಿಎಲ್​ ಮೆಗಾ ಆಕ್ಷನ್​ ಅನ್ನು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇದೇ ತಿಂಗಳು 24 ಮತ್ತು 25 ರಂದು ಗ್ರ್ಯಾಂಡ್​ ಆಗಿ ನಡೆಯಲಿದೆ. ಈಗಾಗಲೇ ಹರಾಜಿನಲ್ಲಿ ಭಾಗವಹಿಸಲು ವಿಶ್ವದ್ಯಾಂತದ ಒಟ್ಟು 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 1165 ಆಟಗಾರರು ಭಾರತದವರು ಆಗಿದ್ದರೇ ಉಳಿದ 409 ಜನರು ವಿದೇಶಿ ಪ್ಲೇಯರ್ಸ್ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us