/newsfirstlive-kannada/media/post_attachments/wp-content/uploads/2024/12/BEGGERS-1.jpg)
ದಾನ ಅನ್ನೋದು ಭಾರತದಲ್ಲಿ ಪುಣ್ಯದ ಕೆಲಸ. ದೇಹಿ ಅಂದವರಿಗೆ ಈ ದೇಶ ಎಂದು ಬೆನ್ನು ತೋರಿಸಿಲ್ಲ. ಅವರನ್ನು ಬರೀಗೈಯಲ್ಲಿ ಕಳುಹಿಸಿಲ್ಲ. ಪರೋಪಕಾರವೇ ಜೀವನದ ಪರಮಗುರಿ ಎಂಬುದನ್ನು ಪುರಾಣ ಕಾಲದಿಂದಲೂ ನಂಬಿಕೊಂಡು ಬಂದಂತಹ ನೆಲ ಇದು. ಬೇಡುವ ನಾಲಿಗೆಯಲ್ಲಿ ನಿಯತ್ತಿದ್ದರೆ ಕೊಡುವ ಕೈಗಳಿಗೆ ಕೊರತೆಯಿಲ್ಲ ಎಂಬ ನಾಣ್ಣುಡಿಗಳು ಕೂಡ ಇವೆ ಇಲ್ಲಿ. ಆದರೆ ನಾವು ಮಾಡುವ ದಾನ ಇನ್ನೊಬ್ಬರನ್ನು ಆಲಸಿಯನ್ನಾಗಿಯೇ, ದುಡಿಯದವರನ್ನಾಗಿಯೋ ಮಾಡುತ್ತದೆ ಎಂಬುದು ಕೂಡ ಅಷ್ಟೇ ಸತ್ಯ. ಭಿಕ್ಷುಕರು ಅಂತ ಇಲ್ಲದ ದೇಶವೇ ಇಲ್ಲ. ಆದರೆ, ಮಧ್ಯಪ್ರದೇಶದ ಇಂದೋರ್ನಲ್ಲಿ ಮಾತ್ರ ಇನ್ನೂ ಈ ನಗರದಲ್ಲಿ ಭಿಕ್ಷಕರು ಇರುವಂತಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಜಿಲ್ಲಾಡಳಿತ.
ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರಿ ಎಂದು ಹೆಸರು ಗಳಿಸಿರುವ ಮಧ್ಯಪ್ರದೇಶದ ರಾಜಧಾನಿ. ಕಸಮುಕ್ತ ನಗರವಾಗಿರುವ ಈ ನಗರವನ್ನು ಭಿಕ್ಷುಕರ ಮುಕ್ತ ನಗರ ಮಾಡುವುದಕ್ಕೆ ಇಲ್ಲಿನ ಜಿಲ್ಲಾಡಳಿತ ಮುಂದೆ ಬಂದಿದೆ. ಹೀಗಾಗಿ ಇಲ್ಲಿ ಜನವರಿ 1ನೇ ತಾರೀಖಿನಿಂದ ಯಾರೂ ಕೂಡ ಭಿಕ್ಷುಕರಿಗೆ ದುಡ್ಡು ನೀಡುವಂತಿಲ್ಲ. ಒಂದು ವೇಳೆ ಭಿಕ್ಷುಕರಿಗೆ ದುಡ್ಡು ನೀಡುವವರು ಕಂಡರೆ ಅವರ ಮೇಲೆ ಕೇಸ್ ದಾಖಲಿಸಿ ಎಫ್ಐಆರ್ ಹಾಕುವುದಾಗಿ ಜಿಲ್ಲಾಡಳಿತ ನೋಟಿಸ್ ಹೊರಡಿಸಿದೆ.
ಇದನ್ನೂ ಓದಿ:ಎಡ್ವಿನಾ ಮೌಂಟ್ ಬ್ಯಾಟನ್ಗೆ ಪತ್ರ ಬರೆದಿದ್ರಾ ನೆಹರು? ಸೋನಿಯಾ ಗಾಂಧಿ ಮಾಡಿದ್ದೇನು? ರಾಹುಲ್ ಗಾಂಧಿಗೆ PMML ಪತ್ರ!
ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ನಾವು ಈಗಾಗಲೇ ಇಂದೋರ್ನಲ್ಲಿ ಭಿಕ್ಷಾಟನೆಯನ್ನು ನಿಷೇಧಗೊಳಿಸಿದ್ದೇವೆ. ಭಿಕ್ಷಾಟನೆಯ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಪ್ರಚಾರ ಮಾಡುವುದು ಈ ತಿಂಗಳ ಅಂತ್ಯದವರೆಗೆ ನಡೆಯಲಿದೆ. ಮುಂದಿನ ವರ್ಷ ಜನವರಿ 1 ರಿಂದ ಯಾರೇ ಆಗಲಿ ಭಿಕ್ಷುಕರಿಗೆ ದಾನ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು. ಹೀಗಾಗಿ ಇಂದೋರ್ ನಿವಾಸಿಗಳಿಗೆ ನಾನು ಕೇಳಿಕೊಳ್ಳುವುದು ಇದೊಂದೇ, ಈ ಒಂದು ಕಾರ್ಯಕ್ರಮದಲ್ಲಿ ನೀವು ನಮ್ಮ ಭಾಗಿಗಳಾಗಿ ಇಂದೋರ್ನ್ನು ಭಿಕ್ಷುಕರ ಮುಕ್ತ ನಗರವನ್ನಾಗಿಸಲು ಕೈ ಜೋಡಿಸಿ ಎಂದು ಹೇಳಿದ್ದಾರೆ.
ಭಿಕ್ಷಾಟನೆಯ ಮುಕ್ತ ನಗರಿ ಎಂಬುದು ಕೂಡ ಕೇಂದ್ರ ಸರ್ಕಾರದ ಯೋಜನೆಯ ಒಂದು ಭಾಗ. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಬೇಕು ದೇಶದ ಪ್ರಮುಖ 10 ಸಿಟಿಗಳಾದ ದೆಹಲಿ, ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಇಂದೋರ್, ಲಖನೌ, ಮುಂಬೈ, ನಾಗ್ಪುರ, ಪಾಟ್ನಾ ಮತ್ತು ಅಹ್ಮದಾಬಾದ್ಗಳನ್ನು ಭಿಕ್ಷಾಟನೆ ಮತ್ತು ಭಿಕ್ಷುಕರ ಮುಕ್ತ ನಗರ ಮಾಡಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.
ಇದನ್ನೂ ಓದಿ:ಶಾಲೆಗೆ ಹೊರಟಿದ್ದ ಶಿಕ್ಷಕನ ಅಪಹರಣ.. ಕೊನೆಯಲ್ಲಿ ಆಗಿದ್ದು ನೀವು ನಿರೀಕ್ಷೆಗೂ ಮೀರಿದ್ದು..!
ಅದರ ಮೊದಲ ಹೆಜ್ಜೆಯಾಗಿ ಈಗ ಮಧ್ಯಪ್ರದೇಶದ ರಾಜಧಾನಿಯಲ್ಲಿ ಈ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಒಂದು ಯೋಜನೆಯ ಪ್ರೊಜೆಕ್ಟ್ ಆಫೀಸರ್ ನಾವು ಈ ಒಂದು ವರದಿನ್ನು ಸಿದ್ಧಪಡಿಸುವಾಗ ನಮಗೆ ಅನೇಕ ಭಿಕ್ಷಕರು ಐಷಾರಾಮಿ ಮನೆಯನ್ನು ಹೊಂದಿರುವುದು, ಇನ್ನು ಕೆಲವರ ಮಕ್ಕಳು ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸದ್ಯ ಇಂದೋರ್ನಲ್ಲಿ 29 ಸಾವಿರ ಜನ ಭಿಕ್ಷುಕರಿದ್ದಾರೆ. ಒಬ್ಬ ಭಿಕ್ಷುಕ ಜನರಿಗೆ ಸಾಲ ಕೊಟ್ಟು ಅದರಿಂದ ಬಡ್ಡಿಯನ್ನು ಪಡೆಯುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಇನ್ನು ಒಂದು ಗ್ಯಾಂಗ್ ರಾಜಸ್ಥಾನದಿಂದ ಬಂದು ಇಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಅವರು ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾಗ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಮಧ್ಯಪ್ರದೇಶದ ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣ ಸಿಂಗ್ ಕುಶ್ವಾ, ಸರ್ಕಾರದ ಈ ಒಂದು ಪ್ರಯತ್ನಕ್ಕೆ ಇಂದೋರ್ನ ಸಂಸ್ಥೆಯೊಂದು ಕೈಜೋಡಿಸುತ್ತಿದೆ. ಆ ಸಂಸ್ಥೆ ಎಲ್ಲಾ ಭಿಕ್ಷುಕರಿಗೆ ವಸತಿಯ ವ್ಯವಸ್ಥೆ ಮಾಡಲಿದೆ ಹಾಗೂ ಆರು ತಿಂಗಳಲ್ಲಿ ಅವರ ಉಪಜೀವನಕ್ಕೆ ಯಾವುದಾದರೂ ಕೆಲಸ ಹುಡುಕಿ ಕೊಡಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ