ಇಮ್ಯುನಿಟಿ ಕಡಿಮೆ ಇರುವವರು ಎಚ್ಚರಿಕೆಯಿಂದ ಇರಿ.. ಆರೋಗ್ಯ ಸಚಿವರು ಹೇಳಿದ್ದು ಏನು?

author-image
Bheemappa
Updated On
ಇಮ್ಯುನಿಟಿ ಕಡಿಮೆ ಇರುವವರು ಎಚ್ಚರಿಕೆಯಿಂದ ಇರಿ.. ಆರೋಗ್ಯ ಸಚಿವರು ಹೇಳಿದ್ದು ಏನು?
Advertisment
  • ಮಕ್ಕಳು ಸಂಪೂರ್ಣವಾಗಿ ಗುಣಮುಖರಾದ ಮೇಲೆ ಶಾಲೆಗೆ ಕಳುಹಿಸಿ
  • ಸದ್ಯ ದೇಶದಲ್ಲಿ ಎಷ್ಟು ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ?
  • ರೋಗಲಕ್ಷಣಗಳು ಇದ್ದರೇ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು

ರಾಜ್ಯದಲ್ಲಿ ಮಳೆ ನಡುವೆ ಕೊರೊನಾ ಕ್ರಿಮಿಯ ಅಬ್ಬರ ಮುಂದುವರೆಯುತ್ತ ಹೊರಟಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಮಧ್ಯೆ ಇನ್ಫ್ಲುಯೆನ್ಜಾ​​, SARI ಕೇಸ್​​ಗಳು ಜಾಸ್ತಿ ಆಗುತ್ತಿದ್ದು ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿ ಹೊರಡಿಸಲಾಗಿದೆ.

ರಾಜ್ಯದಲ್ಲಿ ಮಳೆಯ ನಡುವೆ ಕೊರೊನಾ ಹರಡುವ ವೇಗ ಕೂಡ ಬಿರುಸು ಪಡೆದಿದೆ. ಜನರ ಜೀವದೊಳಕ್ಕೆ ನಿಧಾನವಾಗಿ ಸೇರುತ್ತಿರೋ ಕೊರೊನಾ ಕ್ರಿಮಿ.. ನಿಧಾನವೇ ಪ್ರದಾನ ಅಂತ ಎಲ್ಲೆಡೆ ಹರಡುತ್ತಿದೆ. ಮಾಸ್ಕ್​, ಸ್ಯಾನಿಟೈಸರ್ ಅಂತ ಹಳೇ ದಿನಗಳನ್ನ ಮತ್ತೆ ನೆನಪು ಮಾಡುತ್ತಿದೆ.

publive-image

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ!

ರಾಜ್ಯದಲ್ಲಿ ಸದ್ದಿಲ್ಲದೆ ಹೊಸ ಇನ್ನಿಂಗ್ಸ್​ ಆರಂಭಿಸಿರೋ ಹೆಮ್ಮಾರಿ ಕೋವಿಡ್​ ನಾಲ್ವರನ್ನ ಬಲಿ ಪಡೆದಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಕೂಡ ಹೆಚ್ಚು ಆಗುತ್ತಿದ್ದಾರೆ. ಜನರಲ್ಲೂ ಆತಂಕ ಜಾಸ್ತಿಯಾಗ್ತಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ಹೆಚ್ಚಾಗ್ತಿದ್ದು, ಕಳೆದ 24 ಗಂಟೆಗಳಲ್ಲಿ 17 ಹೊಸ ಕೋವಿಡ್​​ ಕೇಸ್​ ದಾಖಲಾಗಿದೆ.

ಕೊರೊನಾ ಕಂಟಕ!

  • ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 253ಕ್ಕೆ ಏರಿಕೆ
  • ಕಳೆದ 24 ಗಂಟೆಗಳಲ್ಲಿ 17 ಕೊರೊನಾ ಕೇಸ್ ದಾಖಲು
  • 24 ಗಂಟೆಯಲ್ಲಿ 2 ಮಂದಿ ಸೋಂಕಿನಿಂದ ಗುಣಮುಖ
  • ಕಳೆದ 24 ಗಂಟೆಯಲ್ಲಿ 276 ಮಂದಿಗೆ ಕೊರೊನಾ ಟೆಸ್ಟ್
  • ಸೋಂಕಿತರ ಪೈಕಿ 250 ಮಂದಿ ಹೋಮ್ ಐಸೋಲೇಷನ್
  • ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.6.1ರಷ್ಟು

‘ಕೋಮಾರ್ಬಿಟಿಸ್ ಇದ್ದವರು ಹುಷಾರ್​’

ಕೊರೊನಾ ಸಂಬಂಧ ಕೆಲವು ಸೂಚನೆಗಳನ್ನು ಕೊಡಲಾಗಿದೆ. ಈ ಕೊರೊನಾ ಹೆಚ್ಚು ಅಪಾಯಕಾರಿ ಅಲ್ಲ ಎಂದು ಕೇಂದ್ರ ಸರ್ಕಾರ ಕೂಡ ಹೇಳಿದೆ. ಸಣ್ಣ ಪ್ರಮಾಣದಲ್ಲಿ ಕೆಲವು ಜನರಿಗೆ ತೊಂದರೆ ಆಗಬಹುದು ಅಷ್ಟೇ. ಇಮ್ಯುನಿಟಿ (ರೋಗನಿರೋಧಕ ಶಕ್ತಿ) ಕಡಿಮೆ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ರೋಗಗಳು ಆ ವ್ಯಕ್ತಿ ಅಲ್ಲಿ ಇದ್ದಾಗ ಈ ಕೊರೊನಾ ಕೂಡ ಸಮಸ್ಯೆ ಆಗುತ್ತದೆ. ಕೋಮಾರ್ಬಿಟಿಸ್ ಇದ್ದವರು ಹುಷಾರ್​ ಆಗಿ ಇರಬೇಕು.

ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಕೊರೊನಾ ಮಧ್ಯೆ ಇನ್ಫ್ಲುಯೆನ್ಜಾ​​, SARI ಕೇಸ್​​ಗಳು ಹೆಚ್ಚಳ

ಕೊರೊನಾ ರೂಪಾಂತರ ತಳಿ ಜೆಎನ್​​​.1 ವೈರಸ್​​​​ ರಾಜ್ಯಕ್ಕೆ ವಕ್ಕರಿಸಿದೆ. ಈ ನಡುವೆ ರಾಜ್ಯದಲ್ಲಿ ಜನವರಿಯಿಂದ ಈವರೆಗೆ 4,536 ಸರಿ ಹಾಗೂ ಇನ್ಫ್ಲುಯೆನ್ಜಾ ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆ ಕೆಡಿಸಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾರಿ ಹಾಗೂ ಇನ್ಫ್ಲುಯೆನ್ಜಾ​ ಪ್ರಕರಣಗಳು ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:RCB ಜೊತೆ ಪಂಜಾಬ್ ಫೈನಲ್​.. Qualifier- 2, ಮುಂಬೈಗೆ ಬಿಗ್ ಶಾಕ್ ಕೊಟ್ಟ ಶ್ರೇಯಸ್ ಅಯ್ಯರ್!

publive-image

ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ ಕೋವಿಡ್ ಗೈಡ್​ಲೈನ್ಸ್

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಇತರೆ ಗುಣಲಕ್ಷಣಗಳು ಕಂಡು ಬಂದ್ರೆ ಶಾಲೆಗೆ ಕಳುಹಿಸಬಾರದು, ರೋಗಲಕ್ಷಣಗಳು ಇದ್ರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಬೇಕು ಮತ್ತು ಸಂಪೂರ್ಣವಾಗಿ ಗುಣಮುಖರಾದ ಮೇಲೆ ಶಾಲೆಗಳಿಗೆ ಕಳುಹಿಸಬೇಕು ಎಂದು ಶಿಕ್ಷಣ ಇಲಾಖೆ ಗೈಡ್​​ಲೈನ್ಸ್​​ ಬಿಡುಗಡೆ ಮಾಡಿದೆ.

ದೇಶಾದ್ಯಂತ 3,700 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 24 ಗಂಟೆಯಲ್ಲಿ 360 ಹೊಸ ಕೇಸ್​ ದಾಖಲಾಗಿವೆ. ಸದ್ದಿಲ್ಲದೆ ಮತ್ತೆ ಎಂಟ್ರಿ ಕೊಟ್ಟಿರೋ ಕೊರೊನಾ ತನ್ನ ಉಪಟಳ ಮುಂದುವರಿಸಿದೆ. ತಜ್ಞರು ಎಲ್ಲ ಅಂತ ಅಪಾಯಕಾರಿ ಏನೂ ಅಲ್ಲ ಅಂತಿದ್ದಾರೆ. ಅದು ಏನೆ ಇರ್ಲಿ ಉಸಿರಾಟ ಮತ್ತು ಆರೋಗ್ಯ ಸಮಸ್ಯೆ ಇರೋರು ಮಾತ್ರ ಮುನ್ನೇಚರಿಕಾ ಕ್ರಮಗಳನ್ನ ಈಗ್ಲಿನಿಂದಲೇ ತೆಗೆದುಕೊಳ್ಳಿ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment