Hands Off! ಟ್ರಂಪ್​ನ ‘ನಾ ಮಾಟೇ ಶಾಸನಂ’ ವಿರುದ್ಧ ತಿರುಗಿಬಿದ್ದ ಜನ.. ಅಮೆರಿಕದಲ್ಲಿ ದೊಡ್ಡ ಬಿರುಗಾಳಿ..!

author-image
Ganesh
Updated On
Hands Off! ಟ್ರಂಪ್​ನ ‘ನಾ ಮಾಟೇ ಶಾಸನಂ’ ವಿರುದ್ಧ ತಿರುಗಿಬಿದ್ದ ಜನ.. ಅಮೆರಿಕದಲ್ಲಿ ದೊಡ್ಡ ಬಿರುಗಾಳಿ..!
Advertisment
  • ಟ್ರಂಪ್‌ ಆರ್ಥಿಕ ನೀತಿ ವಿರುದ್ಧ ಸಿಡಿದೆದ್ದ ಅಮೆರಿಕ ಜನ!
  • 50 ರಾಜ್ಯಗಳ ಲಕ್ಷಾಂತರ ಜನರು ಬೀದಿಗಳಿದು ಹೋರಾಟ!
  • ಅಮೆರಿಕಕ್ಕೆ ರಾಜ ಬೇಡ, ಟ್ರಂಪ್‌ ಹುಚ್ಚ ಎಂದು ಪೋಸ್ಟರ್‌!

ಎರಡನೇ ಬಾರಿ ಅಮೆರಿಕ ಗದ್ದುಗೆ ಏರಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೂರೇ ತಿಂಗಳಿಗೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿವಾದಾತ್ಮಕ ನೀತಿಗಳನ್ನ ವಿರೋಧಿಸಿ ಅಮೆರಿಕದ 50 ರಾಜ್ಯಗಳ ಲಕ್ಷಾಂತರ ಜನರು ಬೀದಿಗಳಿದು ಟ್ರಂಪ್‌ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ.

ಅದ್ಯಾವ ಘಳಿಗೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಮ್ಮ ಸರ್ಕಾರದ ಟಾರಿಫ್ ಅನ್ನ ಘೋಷಣೆ ಮಾಡಿದ್ರೋ.. ನೆಕ್ಸ್ಟ್​ ಮಿನಿಟ್​ನಿಂದ ಶುರುವಾಯ್ತು ನೋಡಿ ಟೀಕೆಯ ದಾಳಿಗಳು.. 20-30-40 ಅಂತ ಆಮದಾಗುವ ಉತ್ಪನ್ನಗಳ ಮೇಲೆ ಯರ್ರಾಬಿರ್ರಿ ಸುಂಕ ಹೆಚ್ಚಿಸಿದ್ದಾರೆ. ಇದು ಈಗಾಗಲೇ ವಿವಿಧ ರಾಷ್ಟ್ರಗಳ ಕೆಂಗಣ್ಣಿಗೆ ತುತ್ತಾಗಿದೆ. ಹೀಗಿರುವಾಗ ಆಕ್ರೋಶದ ಕಿಡಿ ಬೆಂಕಿ ಉಗುಳೋ ಜ್ವಾಲಾಮುಖಿಯಾಗಿ ಮಾರ್ಪಟ್ಟಿದೆ.. ಲಕ್ಷಾಂತರ ಜನ ತಮ್ಮ ದೇಶದ ಅಧ್ಯಕ್ಷನ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಇದನ್ನೂ ಓದಿ: ಟ್ರಂಪ್, ಮಸ್ಕ್​ ವಿರುದ್ಧವೇ ಸಿಡಿದೆದ್ದ ಅಮೆರಿಕಾದ ಜನರು.. ಏನಿದು ಹ್ಯಾಂಡ್ಸ್​ ಅಪ್ ಪ್ರತಿಭಟನೆ? ಕಾರಣವೇನು?

publive-image

ಟ್ರಂಪ್‌ ಆರ್ಥಿಕ ನೀತಿ ವಿರುದ್ಧ ಸಿಡಿದೆದ್ದ ಅಮೆರಿಕ ಜನ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸರ್ಕಾರಿ ಕಾರ್ಯದಕ್ಷತೆ ಇಲಾಖೆ ಮುಖ್ಯ ಸಲಹೆಗಾರ, ಉದ್ಯಮಿ ಎಲಾನ್ ಮಸ್ಕ್ ಕಾರ್ಯನೀತಿಯನ್ನ ವಿರೋಧಿಸಿ ಅಮೆರಿಕ ಜನ ಸಿಡಿದೆದ್ದಿದ್ದಾರೆ. ಸರ್ಕಾರಿ ಸಿಬ್ಬಂದಿ ಪ್ರಮಾಣದಲ್ಲಿ ಕಡಿತ, ಆರ್ಥಿಕ, ಮಾನವ ಹಕ್ಕುಗಳು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿ ಆಡಳಿತದ ಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸ್ತಿದ್ದಾರೆ.

ಅಮೆರಿಕಕ್ಕೆ ರಾಜ ಬೇಡ, ಟ್ರಂಪ್‌ ಹುಚ್ಚ ಎಂದು ಪೋಸ್ಟರ್‌!

ಟ್ರಂಪ್ ಸರ್ಕಾರದ ನೀತಿಗಳನ್ನ ವಿರೋಧಿಸಿ ವಾಷಿಂಗ್ಟನ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ರಾಷ್ಟ್ರೀಯ ಮಾಲ್‌ನಲ್ಲಿ ಜಮಾಯಿಸಿ ಟ್ರಂಪ್ ವಿರುದ್ಧ ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲದೆ ವಾಷಿಂಗ್ಟನ್.. ನ್ಯೂಯಾರ್ಕ್.. ಹೂಸ್ಟನ್.. ಫ್ಲೋರಿಡಾ.. ಕೊಲೊರಾಡೋ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಹಲವು ಕಡೆ ಪ್ರತಿಭಟನೆಯ ಕಾವು ಜೋರಾಗಿದೆ. ಇದೇ ವೇಳೆ ಅಮೆರಿಕಕ್ಕೆ ರಾಜ ಬೇಡ.. ಟ್ರಂಪ್‌ ಹುಚ್ಚ ಎಂಬ ಪೋಸ್ಟರ್​ಗಳು ಕಂಡು ಬಂದ್ವು..

1,200 ಸ್ಥಳಗಳಲ್ಲಿ‌ ಪ್ರತಿಭಟನೆ!

ನ್ಯೂಯಾರ್ಕ್‌ನಿಂದ ಹಿಡಿದು ಲಾಸ್ ಏಂಜಲೀಸ್‌ವರೆಗೂ 50 ರಾಜ್ಯಗಳ 1,200ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ʻಹ್ಯಾಂಡ್ಸ್‌ ಆಫ್‌ʼ ಎಂಬ ಅಭಿಯಾನ ನಡೆಸಿರುವ ಪ್ರತಿಭಟನಾಕಾರರು ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಟ್ರಂಪ್‌ ಹೇರುತ್ತಿರುವ ಸುಂಕಗಳು ನಮ್ಮ ದೇಶವನ್ನು ನಾಶ ಮಾಡುವ ಶಸ್ತ್ರಗಳಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಹಣದ ಸ್ಥಿತಿ ಸುಧಾರಿಸುತ್ತದೆ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ; ಇಲ್ಲಿದೆ ಇಂದಿನ ಭವಿಷ್ಯ!

publive-image

ಹ್ಯಾಂಡ್ಸ್‌ ಆಫ್‌ ಬಿರುಗಾಳಿ..

ಅಮೆರಿಕದಾದ್ಯಂತ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕಡಿತ, ವಿವಿಧ ದೇಶಗಳ ಮೇಲೆ ಪ್ರತಿ ಸುಂಕ ಹೆಚ್ಚಳ ಮತ್ತು ನಾಗರೀಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಟ್ರಂಪ್‌ ಸರ್ಕಾರ ಸಾವಿರಾರು ಫೆಡರಲ್ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕುತ್ತಿದೆ. ಸಾಮಾಜಿಕ ಭದ್ರತಾ ಕಚೇರಿಗಳನ್ನ ಮುಚ್ಚುತ್ತಿದೆ. ವಲಸಿಗರನ್ನ ಗಡೀಪಾರು ಮಾಡಲು ಪ್ರಯತ್ನಿಸುತ್ತಿದೆ. ಜೊತೆಗೆ ತೃತೀಯ ಲಿಂಗಿ ಸಮುದಾಯಕ್ಕೆ ನೀಡುತ್ತಿದ್ದ ರಕ್ಷಣೆಯನ್ನ ಕಡಿಮೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಧಿಕ್ಕಾರ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ನ ನೀತಿಗಳು ಎಂದಿಗೂ ಬದಲಾಗಲ್ಲ-ಟ್ರಂಪ್‌!

ಟ್ರಂಪ್ ಹಾಗೂ ಮಸ್ಕ್ ನೀತಿಗಳನ್ನು ವಿರೋಧಿಸಿ ನಡೆಯುತ್ತಿರುವ ಹ್ಯಾಂಡ್ಸ್ ಆಫ್ ಪ್ರತಿಭಟನೆಯನ್ನು ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲಿಸಿದ್ದಾರೆ. ಈ ಮಧ್ಯೆ ನನ್ನ ನೀತಿಗಳು ಎಂದಿಗೂ ಬದಲಾಗುವುದಿಲ್ಲ ಎಂದು ಟ್ರಂಪ್‌ ಆನೆ ನಡೆದದ್ದೇ ದಾರಿ ಅನ್ನೋ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದಾರೆ. ಮತ್ತೊಂದೆಡೆ ಜನರು ಬೀದಿಗಿಳಿದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಕವಾಗೋದ್ರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ:ಇಂದಿನಿಂದ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ; ಜಿಲ್ಲೆ ಜಿಲ್ಲೆಯಲ್ಲೂ ಪಾದಯಾತ್ರೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment