ಅಯೋಧ್ಯೆ ರಾಮ ಮಂದಿರದಲ್ಲಿ ಆತಂಕದ ವಾತಾವರಣ.. ಏನಾಯ್ತು..?

author-image
Ganesh
Updated On
ಮೆಕ್ಕಾ ಮಸೀದಿ, ವ್ಯಾಟಿಕನ್ ಸಿಟಿ ಚರ್ಚ್​ ಅನ್ನೇ ಮೀರಿಸುತ್ತಾ ಅಯೋಧ್ಯೆ? ಏನಿದು ‘ವಿಶ್ವ’ ದಾಖಲೆ!
Advertisment
  • ರಾಮ ಜನ್ಮಭೂಮಿ ಟ್ರಸ್ಟ್‌ಗೆ ಬಂತು ಇ-ಮೇಲ್‌
  • ಅಯೋಧ್ಯೆಯ ರಾಮಮಂದಿರಕ್ಕೆ ಭದ್ರತೆ ಹೆಚ್ಚಳ
  • ರಾಮ ಮಂದಿರದ ಸುತ್ತ ಭದ್ರತಾ ಗೋಡೆ ನಿರ್ಮಾಣ

ಅಯೋಧ್ಯೆಯ ರಾಮಮಂದಿರ.. ನಿತ್ಯ ಲಕ್ಷಾಂತರ ಮಂದಿ ಭಕ್ತರು ಭೇಟಿ ಕೊಡೋ ಜಾಗ.. ಬಾಲ ರಾಮನ ದರ್ಶನ ಪಡೆದು ಪುನೀತರಾಗಲು ಬಂದವರಿಗೆ ಶಾಕ್ ಒಂದು ಎದುರಾಗಿತ್ತು. ಆಡಳಿತ ಮಂಡಳಿಯೂ ಬೆಚ್ಚಿಬಿದ್ದಿತ್ತು. ಅದಕ್ಕೆ ಕಾರಣ ರಾಮಮಂದಿರದಲ್ಲಿ ಸ್ಫೋಟಿಸೋದಾಗಿ ಬಂದಿದ್ದ ಅದೊಂದು ಬೆದರಿಕೆ ಇ-ಮೇಲ್.

ರಾಮ ಜನ್ಮಭೂಮಿ ಟ್ರಸ್ಟ್‌ಗೆ ಬಂತು ಇ-ಮೇಲ್‌

ಅಯೋಧ್ಯೆಯ ರಾಮ ಮಂದಿರ ಭಕ್ತ ನೆಲೆಬೀಡು ಮಾತ್ರವಲ್ಲದೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವೂ ಹೌದು. ಹೀಗೆ ರಾಮಮಂದಿರ ನೋಡಲು ಬಂದಿದ ಸಾವಿರಾರು ಮಂದಿಗೆ ಯಾರೂ ಊಹಿಸದ ಶಾಕ್ ಎದುರಾಗಿತ್ತು. ಯಾಕಂದ್ರೆ ರಾಮ ಜನ್ಮಭೂಮಿ ಟ್ರಸ್ಟ್‌ನ ಮೇಲ್‌ಗೆ ಬೆದರಿಕೆ ಪತ್ರವೊಂದು ಬಂದಿತ್ತು.

ಇದನ್ನೂ ಓದಿ: ಜಾತಿ ಜಿದ್ದಾಜಿದ್ದಿ ನಡೀತಿರುವಾಗಲೇ ತೆಲಂಗಾಣದಲ್ಲಿ ಹೊಸ ಕ್ರಾಂತಿ; ಸಿಎಂ ರೇವಂತ್‌ ರೆಡ್ಡಿ ಪ್ಲಾನ್ ಏನು?

publive-image

ರಾಮ ಜನ್ಮಭೂಮಿ ಟ್ರಸ್ಟ್‌ನ ಮೇಲ್‌ಗೆ ಬೆದರಿಕೆ ಪತ್ರ ಬರ್ತಿದ್ದಂತೆ ತಕ್ಷಣ ಸೈಬರ್ ಸೆಲ್ ಹಾಗೂ ಪೊಲೀಸರು ಅಲರ್ಟ್ ಆದ್ರು. ಪೊಲೀಸರ ತಂಡ ದೇವಾಲಯದ ಭದ್ರತೆ ಹೆಚ್ಚಿಸೋ ನಿಟ್ಟಿನಲ್ಲಿ ಕಾರ್ಯೋನ್ಮುಖವಾಯ್ತು. ಪ್ರತಿಯೊಂದು ಚಲನವಲನಗಳ ಮೇಲೂ ನಿಗಾವಹಿಸಲಾಯ್ತು. ಅಯೋಧ್ಯೆ ಜೊತೆಜೊತೆಗೆ ಅಕ್ಕಪಕ್ಕದ ಬಾರಾಬಂಕಿ ಮತ್ತು ಇತರ ನೆರೆಹೊರೆ ಜಿಲ್ಲೆಗಳನ್ನೂ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಇನ್ನೊಂದೆಡೆ ಮೇಲ್ ಕಳಿಸಿದ್ದು ಯಾರು? ಎಲ್ಲಿಂದ ಬಂತು? ಅನ್ನೋದಕ್ಕೆ ಸಂಬಂಧಿಸಿದಂತೆ, ಸೈಬರ್ ಸೆಲ್ ಪರಿಶೀಲನೆ ನಡೆಸ್ತಿದೆ.

ಅಯೋಧ್ಯೆಯ ರಾಮಮಂದಿರಕ್ಕೆ ಭದ್ರತೆ ಹೆಚ್ಚಳ

ದಿನಕಳೆದಂತೆ ರಾಮಮಂದಿರಕ್ಕೆ ಬರೋ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಿದೆ. ಈ ಹಿನ್ನೆಲೆ ರಾಮ ಮಂದಿರದ ಸುತ್ತಲೂ ಸುಮಾರು 4 ಕಿಲೋಮೀಟರ್ ಉದ್ದದ ಭದ್ರತಾ ಗೋಡೆಯ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ಈ ಗೋಡೆಯನ್ನ ಪೂರ್ಣಗೊಳಿಸೋ ನಿರೀಕ್ಷೆ ಇದೆ.

ಒಟ್ನಲ್ಲಿ ಅಯೋಧ್ಯೆಯಲ್ಲಿ ಸ್ಫೋಟಿಸೋ ಬೆದರಿಕೆ ಹಾಕಿರೋದು ಯಾರು ಅನ್ನೋ ಬಗ್ಗೆ ಹುಡುಕಾಟ ಶುರುವಾಗಿದೆ. ಇನ್ನೊಂದೆಡೆ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಸದ್ಯಕ್ಕಂತೂ ರಾಮಮಂದಿರದ ಸುತ್ತಲೂ ಹೈ ಅಲರ್ಟ್​ನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ದಿಢೀರ್ ಸಭೆ ನಡೆಸಿದ್ರೂ ಸಂಧಾನ ವಿಫಲ.. ಲಾರಿ ಮಾಲೀಕರ ಎಲ್ಲಾ ಡಿಮ್ಯಾಂಡ್ ಪೂರೈಸಲು ಒಪ್ಪದ ಸರ್ಕಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment