newsfirstkannada.com

ಜೈಲಿಂದ ಯುವತಿಯ ನಗ್ನ ಫೋಟೋ ಕಳುಹಿಸಿ ಬೆದರಿಕೆ; 5 ಲಕ್ಷ ಕೊಡುವಂತೆ ರೌಡಿಯಿಂದ ಧಮ್ಕಿ

Share :

Published February 15, 2024 at 2:35pm

Update February 15, 2024 at 2:36pm

    ಬೆತ್ತಲೆ ಫೋಟೊ ತೋರಿಸಿ 40 ಸಾವಿರ ಹಣ ಕಿತ್ತಿದ್ದ ರೌಡಿ

    ವಾಟ್ಸಾಪ್ ಹಾಗೂ ಮೆಸೆಂಜರ್ ಕಾಲ್ ಮಾಡಿ ಬೆದರಿಕೆ

    ಜೈಲಿಂದಲೇ ಕರೆ ಮಾಡಿ ಧಮ್ಕಿ ಹಾಕಿದ ರೌಡಿ

ಜೈಲಿಂದ ಯುವತಿಯ ನಗ್ನ ಫೋಟೊ ಕಳಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ರೌಡಿ ಮನೋಜ್ ಅಲಿಯಾಸ್​ ಕೆಂಚ ಯುವತಿಯ ಬೆತ್ತಲೆ ಫೋಟೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡಿರುವುದಾಗಿ ತಿಳಿದುಬಂದಿದೆ.

ರೌಡಿ ಮನೋಜ್ ಅಂಡ್ ಗ್ಯಾಂಗ್​ ಕಳೆದ ಆಗಸ್ಟ್ ನಲ್ಲಿ ಯುವತಿಯ ತಾಯಿಗೆ ಫೋಟೊ ಕಳಿಸಿ ಹಣ ಕಿತ್ತಿದ್ದನು. ನಿನ್ನ ಮಗಳ ಬೆತ್ತಲೆ ಫೋಟೋ ನಿನ್ನ ಅಳಿಯನಿಗೆ ಕಳಿಸ್ತೀನಿ ಅಂತಾ ಬೆದರಿಕೆ ಹಾಕಿದ್ದನು. ಮಗಳ ಬೆತ್ತಲೆ ಫೋಟೊ ತೋರಿಸಿ ತಾಯಿಯಿಂದ 40 ಸಾವಿರ ಹಣ ಕಿತ್ತಿದ್ದನು.

ಆದರೆ ಫೆಬ್ರವರಿ 9 ರಂದು ಮನು ಅಸೋಸಿಯೇಟ್ ಕಾರ್ತಿಕ್ ನಿಂದ ವಾಟ್ಸಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಮನು ಕಡೆಯ ಹುಡುಗ ನಾನು 5 ಲಕ್ಷ ಕೊಡದಿದ್ರೆ ಫೋಟೋ ನಿನ್ನ ಅಳಿಯನಿಗೆ ಕಳಿಸ್ತೀನಿ ಅಂತಾ ಅವಾಜ್ ಹಾಕಿದ್ದಾನೆ. ಫೆಬ್ರವರಿ 12 ರಂದು ಜೈಲಿಂದಲೇ ಕರೆ ಮಾಡಿ ಧಮ್ಕಿ ಹಾಕಿದ್ದಾನೆ.

ವಾಟ್ಸಾಪ್ ಹಾಗು ಮೆಸೆಂಜರ್ ಕಾಲ್ ಮಾಡಿ ಮನು ಹಾಗು ಕಾರ್ತಿಕ್ ನಿಂದ ಬೆದರಿಕೆ ಹಾಕಿಸಿದ್ದಾನೆ. ಹಣ ನೀಡದಿದ್ರೆ ಫೋಟೋ ರಿವೀಲ್ ಮಾಡ್ತೀನಿ ಅಂತಾ ಬೆದರಿಸಿದ್ದಾನೆ.

ಇತ್ತ ಯುವತಿ ಮನೆಯವರು ಫೋಟೊ ಮಾರ್ಫ್ ಮಾಡಿ ಬೆದರಿಸ್ತಿದ್ದಾರೆ ಅಂತ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ 67 , ಐಪಿಸಿ 34 ಅಂಡ್ 384 ಅಡಿಯಲ್ಲಿದೂರು ದಾಖಲಾಗಿದೆ. ಸದ್ಯ ಮನುವನ್ನ ಜೈಲಿನಿಂದ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪೊಲೀಸರ ಸಿದ್ಧತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿಂದ ಯುವತಿಯ ನಗ್ನ ಫೋಟೋ ಕಳುಹಿಸಿ ಬೆದರಿಕೆ; 5 ಲಕ್ಷ ಕೊಡುವಂತೆ ರೌಡಿಯಿಂದ ಧಮ್ಕಿ

https://newsfirstlive.com/wp-content/uploads/2024/02/Manoj.jpg

Load More