newsfirstkannada.com

3 ವರ್ಷಗಳಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಪೋಕ್ಸೋ ಕಾಯ್ದೆಯಡಿ ಮೂವರ ಬಂಧನ

Share :

01-08-2023

    ಅಪ್ರಾಪ್ತ ಬಾಲಕಿ ಮೇಲೆ 3 ವರ್ಷ ಅತ್ಯಾಚಾರ ನಡೆಸಿರೋ ಆರೋಪ

    ಲಾರಿ ಚಾಲಕನ ಪ್ರೀತಿ ಬಲೆಗೆ ಬಿದ್ದ ಅಪ್ರಾಪ್ತ ಬಾಲಕಿಯಿಂದ ದೂರು

    ಬಾಲಕಿಯ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಕೇಸ್

ಮಂಗಳೂರು: ಪ್ರೀತಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ 3 ವರ್ಷ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಪ್ರಕರಣವೊಂದು ವಿಟ್ಲದಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಮೂರು ವರ್ಷಗಳಿಂದ 16ರ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ತಿರುಗಾಡಿಸುತ್ತಿದ್ದ. ಅಪ್ರಾಪ್ತ ಬಾಲಕಿಯನ್ನು ಇತರರಿಗೂ ಒಪ್ಪಿಸಿದ್ದ ಅನ್ನೋ ಗಂಭೀರ ಆರೋಪ ಮಾಡಲಾಗಿದೆ. ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಟ್ಲ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸುಕುಮಾರ ಬೆಳ್ಚಡ, ಅಕ್ಷಯ್ ದೇವಾಡಿಗ ಮತ್ತು ಕಮಲಾಕ್ಷ ಬೆಳ್ಚಡ ಬಂಧಿತರು.

ಪ್ರಕರಣದ ಆರೋಪಿ ಸುಕುಮಾರ ಮೂರು ವರ್ಷಗಳಿಂದ 16 ರ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ತಿರುಗಾಡಿಸುತ್ತಿದ್ದ. ಲಾರಿ ಚಾಲಕನಾಗಿದ್ದ ಆರೋಪಿಯು ಪ್ರೀತಿಯ ನೆಪದಲ್ಲಿ ಬಾಲಕಿಯ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಬಂಧಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ವಿಟ್ಲ ಪೊಲೀಸರಿಂದ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ವರ್ಷಗಳಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಪೋಕ್ಸೋ ಕಾಯ್ದೆಯಡಿ ಮೂವರ ಬಂಧನ

https://newsfirstlive.com/wp-content/uploads/2023/08/Mangalore-Accused.jpg

Load More