newsfirstkannada.com

ನಿನ್ನೆ ಹಾವೇರಿಯಲ್ಲಿ.. ಇವತ್ತು ಶಿಕಾರಿಪುರದಲ್ಲಿ.. ಭೀಕರ ಅಪಘಾತಕ್ಕೆ ಮೂವರು ಯುವಕರು ಸಾವು

Share :

Published June 29, 2024 at 8:49am

  ಪ್ರಸನ್ನ, ಕಾರ್ತಿಕ್, ಅಜಯ್ ಮೃತ ದುರ್ದೈವಿಗಳು

  ಮಧ್ಯರಾತ್ರಿ 12.30ರ ಸುಮಾರಿಗೆ ಭೀಕರ ಅಪಘಾತ

  ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಶಿವಮೊಗ್ಗ: ತಡರಾತ್ರಿ ಜವರಾಯನ ಅಟ್ಟಹಾಸ ಮೆರೆದಿದ್ದು, ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಸನ್ನ, ಕಾರ್ತಿಕ್, ಅಜಯ್ ಮೃತ ದುರ್ದೈವಿಗಳು. ಮೃತ ಯುವಕರು ದಾವಣಗೆರೆ ಜಿಲ್ಲೆಯ ಹೊಸ ಜೋಗ ಗ್ರಾಮದವರು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಬಳಿ ಮಧ್ಯರಾತ್ರಿ 12.30ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಆ್ಯಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಶಿವಮೊಗ್ಗ ಕಡೆಯಿಂದ ಹೊರಟಿದ್ದ ಮಾಸೂರು ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಮತ್ತು ಶಿಕಾರಿಪುರ ಮಾರ್ಗದಿಂದ ಆಗಮಿಸುತ್ತಿದ್ದ ಬೈಕ್ ನಡುವೆ ಮುಖಮುಖಿ ಡಿಕ್ಕಿಯಾಗಿದೆ. ಬೈಕ್ ಸವಾರ ಸೇರಿದಂತೆ ಮೂವರು ಸ್ಥಳದಲ್ಲಿಯೇ ‌ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಇವತ್ತು ವಿಶ್ವಕಪ್​​ ಫೈನಲ್.. ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ವಿರಾಟ್ ಕೊಹ್ಲಿ ಔಟ್​​..?

ಇದನ್ನೂ ಓದಿ:ಮನೆ ದೇವರ ಪೂಜೆಗೆ ಹೊರಟಿದ್ದ 13 ಮಂದಿ ದಾರುಣ ಸಾವು.. ಕರುಳು ಚುರ್ ಎನ್ನುತ್ತೆ ಈ ಘೋರ ದುರಂತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನೆ ಹಾವೇರಿಯಲ್ಲಿ.. ಇವತ್ತು ಶಿಕಾರಿಪುರದಲ್ಲಿ.. ಭೀಕರ ಅಪಘಾತಕ್ಕೆ ಮೂವರು ಯುವಕರು ಸಾವು

https://newsfirstlive.com/wp-content/uploads/2024/06/SMG-ACCIDENT-3.jpg

Load More