newsfirstkannada.com

ವಿಜಯಪುರದಲ್ಲಿ ಘೋರ ದುರಂತ.. ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ; ಅಸಲಿಗೆ ಆಗಿದ್ದೇನು?

Share :

Published May 13, 2024 at 2:28pm

    ಮಕ್ಕಳ ಚಲನವಲನವೆಲ್ಲ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು

    ನಾಪತ್ತೆ ಆಗಿದ್ದಗಿಂದ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದ ಪೋಷಕರು

    ನೀರು ಶುದ್ಧೀಕರಣ ಘಟಕದ ಮುಖ್ಯ ಗೇಟ್​ಗೆ ಸೆಕ್ಯೂರಿಟಿ ಇರಲಿಲ್ಲ

ವಿಜಯಪುರ: ನಾಪತ್ತೆಯಾಗಿದ್ದ ಮೂವರು ಮಕ್ಕಳು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗದಗ ಮೂಲದ ಅನುಷ್ಕಾ (10), ವಿಜಯ್ (8), ಮಿಹರ್ (7) ಶವವಾಗಿ ಪತ್ತೆಯಾದ ಮಕ್ಕಳು. ಶಾಲೆ ರಜೆ ಹಿನ್ನೆಲೆಯಲ್ಲಿ ವಿಜಯಪುರದ ಸಂಬಂಧಿಕರ ಮನೆಗೆ ಮಕ್ಕಳು ಬಂದಿದ್ದರು. ಆದರೆ ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಮಕ್ಕಳು ನಾಪತ್ತೆಯಾಗಿದ್ದರು. ಮಕ್ಕಳು ನಾಪತ್ತೆ ಹಿನ್ನೆಲೆಯಲ್ಲಿ ದಿನ ಪೂರ್ತಿ ಪೋಷಕರು, ಸಂಬಂಧಿಕರು ಹುಡುಕಾಟ ನಡೆಸಿದ್ರೂ ಎಲ್ಲಿಯು ಅವರು ಪತ್ತೆ ಆಗಿರಲಿಲ್ಲ. ಆದರೆ ಮಕ್ಕಳ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿ ರಾಜ್ಯದಲ್ಲಿ ಭಾರೀ ಮಳೆ.. 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.. ಎಲ್ಲೆಲ್ಲಿ, ಏನೇನು ಆಗಿದೆ?

ಆದರೆ ಇಂದು ವಿಜಯಪುರ ನಗರದ ಶಾಂತಿ ನಿಕೇತನ ಶಾಲೆಯ ಬಳಿಯಿರುವ ನೀರು ಶುದ್ಧೀಕರಣ ಘಟಕದಲ್ಲಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಇದು ಮಹಾನಗರ ಪಾಲಿಕೆಯ ನೀರು ಶುದ್ಧೀಕರಣ ಘಟಕವಾಗಿದೆ. ನೀರು ಶುದ್ಧೀಕರಣ ಘಟಕದ ಮುಖ್ಯ ಗೇಟ್​ಗೆ ಸೆಕ್ಯೂರಿಟಿ ಗಾರ್ಡ್ ಇರದಿದ್ದಕ್ಕೆ ಈ ಅವಘಡ ನಡೆದಿದೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನೀರು ಶುದ್ಧೀಕರಣ ಘಟಕದಲ್ಲಿದ್ದ ಮಕ್ಕಳ ಮೃತದೇಹಗಳನ್ನ ಪೊಲೀಸರು ಹೊರಕ್ಕೆ ತೆಗೆದಿದ್ದಾರೆ. ಈ ವೇಳೆ ಪೋಷಕರ, ಸಂಬಂಧಿಕ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯಪುರದಲ್ಲಿ ಘೋರ ದುರಂತ.. ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/VIJ_CHILDREN.jpg

Load More