ಕಾಲೇಜು ಉಪನ್ಯಾಸಕರಿಂದ ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್.. ಮೂವರು ಕೀಚಕರು ಅರೆಸ್ಟ್..!

author-image
Ganesh
Updated On
ಕಾಲೇಜು ಉಪನ್ಯಾಸಕರಿಂದ ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್.. ಮೂವರು ಕೀಚಕರು ಅರೆಸ್ಟ್..!
Advertisment
  • ಬ್ಯಾಕ್ ಟು ಬ್ಯಾಕ್ ಬ್ಲ್ಯಾಕ್​​ ಮೇಲ್.. ವಿದ್ಯಾರ್ಥಿನಿ ಕಣ್ಣೀರು
  • ಸಂತ್ರಸ್ತೆಯ ಸಹಾಯಕ್ಕೆ ಬಂದ ರಾಜ್ಯ ಮಹಿಳಾ ಆಯೋಗ
  • ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್

ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳ ಪಾಲಿಗೆ ದೇವರುಗಳಿದ್ದಂತೆ. ಗುರುದೇವೋಭವ ಅಂತ ಗೌರವದಿಂದ ಕರೆಯುತ್ತೇವೆ. ದೇವರಾಗಬೇಕಾದ ಗುರುಗಳೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ಉಪನ್ಯಾಸಕರು ಮತ್ತು ಅವರ ಗೆಳೆಯ ಸೇರಿದಂತೆ ಮೂವರು ಅತ್ಯಾಚಾರ ನಡೆಸಿದ್ದಾರೆ. ತಮ್ಮ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾರೆ. ನೊಂದ ಯುವತಿಯು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಮಹಿಳಾ ಆಯೋಗದ ಸೂಚನೆ ಮೇರೆಗೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿದೆ. ಮೂವರು ಆರೋಪಿಗಳನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಹಾಗೂ ಇವರಿಬ್ಬರ ಗೆಳೆಯ ಅನೂಪ್ ಬಂಧಿತ ಆರೋಪಿಗಳು.

ಇದನ್ನೂ ಓದಿ: ಶುಭಾಂಶು ಶುಕ್ಲಾ ಭೂಮಿಗೆ ವಾಪಸ್.. ನಾಲ್ವರು ಗಗನಯಾತ್ರಿಗಳೂ ಸೇಫ್ ಸ್ಪ್ಲ್ಯಾಶ್​ಡೌನ್..!

publive-image

ಆರೋಪಿಗಳಲ್ಲಿ ಮೊದಲು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ್ದು ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ. ವಿದ್ಯಾರ್ಥಿನಿಗೆ ನೋಟ್ಸ್ ನೀಡುವ ನೆಪದಲ್ಲಿ ನರೇಂದ್ರ, ವಿದ್ಯಾರ್ಥಿನಿಗೆ ಹತ್ತಿರವಾಗಿದ್ದ. ಬಳಿಕ ಹಂತ ಹಂತವಾಗಿ ವಾಟ್ಸ್​​ಆ್ಯಪ್​​ನಲ್ಲಿ ಚಾಟಿಂಗ್ ಮಾಡುತ್ತ, ನೋಟ್ಸ್ ನೀಡುವುದಾಗಿ ಹಾಗೂ ಸಹಾಯ ಮಾಡುವುದಾಗಿ ಗೆಳೆತನ ಬೆಳೆಸಿಕೊಂಡಿದ್ದ. ಬಳಿಕ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಮಾರತ್ ಹಳ್ಳಿಯ ಗೆಳೆಯನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಬೇರೆ ಯಾರಿಗೂ ತಿಳಿಸದಂತೆ ನರೇಂದ್ರ ಬೆದರಿಕೆ ಹಾಕಿದ್ದ.

ಕೆಲವು ದಿನಗಳ ಬಳಿಕ ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಸಹ ವಿದ್ಯಾರ್ಥಿನಿಯ ಮೇಲೆ ರೇಪ್​ಗೆ ಯತ್ನಿಸಿದ್ದ. ವಿದ್ಯಾರ್ಥಿನಿಯು ವಿರೋಧ ವ್ಯಕ್ತಪಡಿಸಿದಾಗ ನರೇಂದ್ರ ಜೊತೆಗಿರುವ ಫೋಟೋ, ವಿಡಿಯೋ ನನ್ನ ಬಳಿಯಿದೆ ಅಂತಾ ಬ್ಲಾಕ್ ಮೇಲ್ ಮಾಡಿದ್ದ. ಫೋಟೋ, ವಿಡಿಯೋಗಳನ್ನು ಕಾಲೇಜಿನಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಬಹಿರಂಗಪಡಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದ. ಹೀಗೆ ಬೆದರಿಸಿ ವಿದ್ಯಾರ್ಥಿನಿಯ ಮೇಲೆ ಸಂದೀಪ್ ಕೂಡ ಅತ್ಯಾಚಾರ ಮಾಡಿದ್ದ. ಅನೂಪ್‌ನ ರೂಮಿನಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್ ಮಾಡಿದ್ದರು. ಬಳಿಕ ಅನೂಪ್​​​ನಿಂದಲೂ ಯುವತಿಯ ಮೇಲೆ ರೇಪ್ ನಡೆದಿತ್ತು. ನೀನು ಬೆಂಗಳೂರಿನ ಮಾರತ್ ಹಳ್ಳಿಯ ರೂಮಿಗೆ ಬಂದಿರುವ ಸಿಸಿ ಟಿವಿ ವಿಡಿಯೋ ಇದೆ. ನನ್ನ ರೂಮಿನಲ್ಲಿ ಸಿಸಿಟಿವಿ ಇದೆ ಎಂದು ಅನೂಪ್ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ. ಹೀಗೆ ಬೆದರಿಸಿ ಅನೂಪ್, ಯುವತಿಯ ಮೇಲೆ ರೇಪ್ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ರಿಂಗ್ ರೋಡ್ ಶುಭಾಗೆ ಜೀವಾವಧಿ ಶಿಕ್ಷೆ ಖಾಯಂ; ಕ್ಷಮಾದಾನ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟ ಸುಪ್ರೀಂ

ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್, ರೇಪ್ ಬಗ್ಗೆ ಯುವತಿ, ತನ್ನ ಪೋಷಕರಿಗೆ ಬೆಂಗಳೂರಿಗೆ ಬಂದ ಬಳಿಕ ಹೇಳಿದ್ದಳು. ಪೋಷಕರು ವಿದ್ಯಾರ್ಥಿನಿಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಹಿಳಾ ಆಯೋಗದಲ್ಲಿ ವಿದ್ಯಾರ್ಥಿನಿಗೆ ಕೌನ್ಸಿಲಿಂಗ್ ಮಾಡಿ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೂವರು ಈ ಹಿಂದೆಯೂ ಇದೇ ರೀತಿ ಕೆಲವು ವಿದ್ಯಾರ್ಥಿನಿಯರಿಗೆ ಅತ್ಯಾಚಾರ ಮಾಡಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವ ಸಾಧ್ಯತೆಯೂ ಇದೆ. ಈ ಬಗ್ಗೆ ಮಾರತ್ ಹಳ್ಳಿ ಠಾಣೆಯ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸ್ತಿದ್ದಾರೆ.

ಈ ತಿಂಗಳ ಐದರಂದು ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿತ್ತು. ಸಂತ್ರಸ್ತೆ ಕೊಟ್ಟ ದೂರಿನ ಆಧಾರದ ಮೇಲೆ ಮೂವರನ್ನು ಬಂಧಿಸಿದ್ದಾರೆ. ರಾಜ್ಯ ಮಹಿಳಾ ಆಯೋಗದಿಂದ ನಮಗೆ ಮಾಹಿತಿ ಬಂದಿತ್ತು ಎಂದು ಪೂರ್ವ ವಲಯ ಜಂಟಿ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.

ಇದನ್ನೂ ಓದಿ: ಈ ಗ್ರಾಮದಲ್ಲಿ ಮಹಿಳೆಯರದ್ದೇ ಕಾರುಭಾರು.. ಪುರುಷರಿಗೆ ‘ನೋ ಎಂಟ್ರಿ’ ಹಿಂದೆ ಒಂದು ಕ್ರೂರ ಕತೆ..!

ಹೆಣ್ಣು ಮಗಳು ಮಹಿಳಾ ಆಯೋಗಕ್ಕೆ ಬಂದು ದೂರು ಕೊಟ್ಟಿದ್ದರು. ಅವರ ಅಂಕಲ್ ಒಬ್ಬರ ಜೊತೆ ಬಂದು ನಮ್ಮ ಬಳಿ ಹೇಳಿಕೊಂಡಿದ್ದರು. ನಾವು ತಕ್ಷಣ ಪೊಲೀಸರಿಗೆ ಪತ್ರ ಬರೆದಿದ್ದೇವು. ಪತ್ರ ಬರೆದು ಘಟನೆ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೇವು. ಈಗ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಉಪನ್ಯಾಸಕರೆ ಭಾಗಿಯಾಗಿ ರೇಪ್ ಮಾಡಿದ್ದಾರೆ. ವಿದ್ಯಾರ್ಥಿನಿಯ ಕಾಲೇಜಿನ ಉಪನ್ಯಾಸಕರೇ ಭಾಗಿಯಾಗಿದ್ದಾರೆ. ವಿದ್ಯಾರ್ಥಿನಿಗೆ ಬ್ಲಾಕ್ ಮೇಲ್ ಮಾಡಿ, ರೇಪ್ ಮಾಡಿದ್ದಾರೆ. ಭಯಪಡಿಸಿ ಅವಳ ಮೇಲೆ ನಿರಂತರವಾಗಿ ರೇಪ್ ಮಾಡಿದ್ದಾರೆ. ಆ ಹುಡುಗಿ ಧೈರ್ಯ ಮಾಡಿ ನಮ್ಮ ಬಳಿ ಬಂದು ದೂರು ನೀಡಿದ್ದಳು. ಈಗ ಹೆಣ್ಣು ಮಗಳು ಆರೋಗ್ಯವಾಗಿದ್ದಾಳೆ. ಅವಳು ಶಿಕ್ಷಣ ಮುಂದುವರಿಸಿದ್ದಾಳೆ. ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ: ಸರೋಜಾದೇವಿಗಾಗಿ ಕಂಬನಿ ಮಿಡಿದ ಚಿತ್ರರಂಗ.. ಇವತ್ತು ಹುಟ್ಟೂರಿನಲ್ಲಿ ಕಲಾದೇವಿಯ ಅಂತ್ಯಕ್ರಿಯೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment