/newsfirstlive-kannada/media/post_attachments/wp-content/uploads/2025/02/MYS_leopard.jpg)
ಮೈಸೂರು: ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಮೈಸೂರಿನ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಇದೇ ಫೆಬ್ರುವರಿ 7 ಮತ್ತು 9 ರಂದು ಮೈಸೂರಿನ ಬುಗತಗಳ್ಳಿ ಸಮೀಪ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ತಾಯಿ ಇಲ್ಲದಿದ್ದರಿಂದ ಮರಿಗಳು ಕೂಗುತ್ತಿದ್ದವು. ಇವುಗಳ ಧ್ವನಿ ಕೇಳಿದ್ದ ಸ್ಥಳೀಯರು ಏನೆಂದು ನೋಡಿದಾಗ ಚಿರತೆಯ ಮರಿಗಳು ಕಾಣಿಸಿದ್ದು ಎಲ್ಲರೂ ಗಾಬರಿಗೊಂಡಿದ್ದರು. ತಕ್ಷಣ ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಚಿರತೆ ಕಾರ್ಯಾಚರಣೆ ಪಡೆ ಚಿರತೆಯ ಮರಿಗಳನ್ನು ಮೊದಲು ರಕ್ಷಣೆ ಮಾಡಿದ್ದಾರೆ. ಆದರೆ ತಾಯಿ ಚಿರತೆ ಎಲ್ಲಿದೆ ಎನ್ನುವುದು ಯಕ್ಷಪ್ರಶ್ನೆ ಆಗಿತ್ತು. ಹೀಗಾಗಿ ಮರಿಗಳಿಗಾಗಿ ತಾಯಿ ಬಂದೇ ಬರುತ್ತದೆಂದು ಬೋನ್ ಇಟ್ಟು ಕಾರ್ಯಾಚರಣೆ ನಡೆಸಿದ್ದರು. ಅದರಂತೆ ತಾಯಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಇಂದು ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:Valentine’s Day; ಪ್ರೇಮಿಗಳಿಗಾಗಿ ಇವತ್ತು ಮೂರು ಸಿನಿಮಾಗಳು ರಿಲೀಸ್..!
ತಾಯಿ ಚಿರತೆಯನ್ನು 6 ದಿನಗಳ ನಂತರ ಹಿಡಿದ ಮೇಲೆ ಮೂರು ಮರಿಗಳನ್ನು ತಂದು ಬಿಟ್ಟಿದ್ದಾರೆ. ಒಂದೇ ಬೋನಿನಲ್ಲಿ ಚಿರತೆಗಳು ಇವೆ. ತಾಯಿ ಜೊತೆ ಮರಿಗಳ ಪುನರ್ಮಿಲನವಾಗಿದೆ. ಈ ಚಿರತೆಗಳನ್ನು ದೂರಾದ ಕಾಡಿನತ್ತ ಬಿಟ್ಟು ಬರಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ