/newsfirstlive-kannada/media/post_attachments/wp-content/uploads/2024/09/cyned-killers.jpg)
ಹೈದ್ರಾಬಾದ್: ಅದು 2007ನೇ ಇಸ್ವಿ, ಹೆಚ್ಚು ಕಡಿಮೆ ಅರ್ಧ ವರ್ಷ ಕಳೆದಿತ್ತು. ಇದೇ ಸಮಯದಲ್ಲಿ ಬೆಂಗಳೂರಿನ ಪೊಲೀಸರಿಗೆ ದೊಡ್ಡ ತಲೆನೋವೊಂದು ಶುರುವಾಗಿತ್ತು. ಬೆಂಗಳೂರಿನ ಹೊರವಲಯದಲ್ಲಿ ಹಲವು ಮಹಿಳೆಯರ ಶವಗಳು ಒಂದಾದ ನಂತರ ಒಂದು ಪತ್ತೆಯಾಗ ತೊಡಗಿದವು. ಇಡೀ ದೇಹ ಹುಡುಕಿ ನೋಡಿದರು ಒಂದು ಗಾಯದ ಗುರುತು ಕೂಡ ಕಾಣುತ್ತಿರಲಿಲ್ಲ.
ಅದೆಷ್ಟೋ ಪ್ರಕರಣಗಳು ಅಸಹಜ ಸಾವು ಎಂಬ ಶರಾದೊಂದಿಗೆ ಕೊನೆಗೊಂಡವು. ಆದ್ರೆ ಕೊನೆಗೆ ದಶಕಗಳ ಬಳಿಕ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದು ಕೆ.ಡಿ. ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾ. ಈ ಸೈನೈಡ್ ಮಲ್ಲಿಕಾ ಸೈನೈಡ್ ನೀಡಿ 13ಕ್ಕೂ ಹೆಚ್ಚು ಮಂದಿಗೆ ಹತ್ಯೆ ಮಾಡಿದ್ದಳು. ಈ ಸೈನೈಡ್ ಮಲ್ಲಿಕಾ ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಎಂಬ ಕುಖ್ಯಾತಿ ಪಡೆದಿದ್ದಳು. ಈಗ ಆಂಧ್ರಪ್ರದೇಶದಲ್ಲೂ ಕೂಡ ಸೈನೈಡ್ ಮಲ್ಲಿಕಾಳ ಸರಣಿ ಹತ್ಯೆವನ್ನೇ ನೆನಪಿಸುವಂತಹ ಘಟನೆ ನಡೆದಿದೆ.
ಇದನ್ನೂ ಓದಿ:₹20 ಲಂಚ.. ನಿವೃತ್ತ ಕಾನ್ಸ್ಟೇಬಲ್ ಬಂಧನಕ್ಕೆ ಸೂಚನೆ; 34 ವರ್ಷದ ನಂತ್ರ ಕೇಸ್ ಬೆಳಕಿಗೆ ಬಂದಿದ್ದೇ ರೋಚಕ!
ಅಪರಿಚಿತರ ಜೊತೆಗೆ ಸ್ನೇಹ ಮಾಡಿಕೊಂಡು ಡ್ರಿಂಕ್ಸ್ ಜೊತೆಗೆ ಸೈನೈಡ್ ಮಿಕ್ಸ್ ಮಾಡಿ ಹತ್ಯೆ ಮಾಡುತ್ತಿದ್ದ ಮೂವರು ಮಹಿಳಾ ಗ್ಯಾಂಗ್ನ್ನು ಆಂಧ್ರಪ್ರದೇಶದ ತೆನಾಲಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಇದೇ ವರ್ಷ ಜೂನ್ನಿಂದ ಇಲ್ಲಿಯವರೆಗೂ ಮೂವರು ಮಹಿಳೆಯರು ಹಾಗೂ ಓರ್ವ ಪುರುಷನನ್ನು ಸೇರಿ ಒಟ್ಟು ನಾಲ್ಕು ಹತ್ಯೆಗಳನ್ನು ಮಾಡಿದೆ ಈ ಖತರ್ನಾಕ್ ಲೇಡಿ ಗ್ಯಾಂಗ್
ಡ್ರಿಂಕ್ಸ್ನಲ್ಲಿ ಸೈನೈಡ್ ನೀಡಿ ಹತ್ಯೆ ಮಾಡಿ ಅವರಿಂದ ಹಣ, ಚಿನ್ನಾಭರಣ ದೋಚುತ್ತಿತ್ತು ಈ ಗ್ಯಾಂಗ್ ಎಂಬ ಬೆಚ್ಚಿ ಬೀಳಿಸುವ ಮಾಹಿತಿ ಪೊಲೀಸರು ಹೊರಹಾಕಿದ್ದಾರೆ.
ಬಂಧಿತರನ್ನು ಮುಂಗಪ್ಪ ರಜನಿ, ಮಡಿಯಾಲ ವೆಂಕಟೇಶ್ವರಿ ಹಾಗೂ ಗುಲರಾ ರಮಣ್ಣಮ್ಮ ಎಂದು ಗುರುತಿಸಲಾಗಿದೆ. ಈ ಆರೋಪಿಗಳಲ್ಲಿ ಮಡಿಯಾಲ ವೆಂಕಟೇಶ್ವರಿ ಕಾಂಬೋಡಿಯಾಗಿ ಹೋಗಿ ಅಲ್ಲಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಗಣೇಶ ಚತುರ್ಥಿಯಂದೇ ರೈಲು ಅಪಘಾತ.. ಹಳಿ ತಪ್ಪಿದ ಪ್ರಯಾಣಿಕರಿದ್ದ ಎರಡು ಬೋಗಿಗಳು
ಸದ್ಯ ಆರೋಪಿಗಳಿಂದ ಸೈನೈಡ್ ವಶಪಡಿಸಿಕೊಂಡಿರುವ ಪೊಲೀಸರು, ಈ ಗ್ಯಾಂಗ್ಗೆ ಸೈನೈಡ್ ಪೂರೈಸಿದ್ದ ಓರ್ವನನ್ನು ಬಂಧಿಸಿದ್ದಾರೆ. ಆರೋಪಿಗಳು ಈಗಾಗಲೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ, ನಮ್ಮ ವಿಚಾರಣೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ಕೇರಳದಲ್ಲಿಯೂ ಕೂಡ ಜೋಲಿ ಜೋಸೆಫ್ ಎಂಬ ಮಹಿಳೆ ಸೈನೈಡ್ ನೀಡಿ 14 ವರ್ಷದಲ್ಲಿ 6 ಮಂದಿಯ ಹತ್ಯೆ ಮಾಡಿದ್ದಳು. ಆಂಧ್ರಪ್ರದೇಶದಲ್ಲಿ ನಡೆದ ಈ ಒಂದು ಘಟನೆ ಇದೇ ಮಾದರಿಯಲ್ಲಿ ನಡೆದ ಹಳೆಯ ಘಟನೆಗಳನ್ನು ನೆನಪಿಸುತ್ತಿವೆ. ಯಾವುದೇ ಅಪರಿಚಿತರು ಅನಾವಶ್ಯಕವಾಗಿ ನಿಮ್ಮೊಂದಿಗೆ ಆತ್ಮಿಯತೆಯನ್ನು ಬೆಳೆಸಲು ಮುಂದಾದಾಗ ಅವರ ಬಗ್ಗೆ ಎಚ್ಚರಿಕೆಯಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ