newsfirstkannada.com

ದರ್ಶನ್ ಸೇರಿ ನಾಲ್ವರ ಮೇಲೆ ಮೂರು FIR; ಜೈಲ್ ಗ್ಯಾಂಗ್​ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್..!

Share :

Published August 27, 2024 at 7:19am

    ಪರಪ್ಪನ ಅಗ್ರಹಾರ ದರ್ಶನ್‌ಗೆ ಸೆರೆಮನೆಯಲ್ಲ, ಅರಮನೆ..!

    ಮೂರು ಪ್ರಕರಣಗಳ ಪೈಕಿ ಎರಡರಲ್ಲಿ ನಟ ದರ್ಶನ್‌ ಎ1

    ಜೈಲಿನಲ್ಲಿ ಬಿಂದಾಸ್ ಜೀವನ ಮಾಡುತ್ತಿದ್ದಾರೆ ನಟ ದರ್ಶನ್

ಪರಪ್ಪನ ಅಗ್ರಹಾರದಲ್ಲಿ ಆರಾಮದಾಯಕವಾಗಿ ಲೈಫ್‌ ಲೀಡ್ ಮಾಡ್ತಿರೋ ದರ್ಶನ್‌ಗೆ ಮತ್ತಷ್ಟು ಎದುರಾಗಿದೆ. ಈಗಾಗಲೇ ಫೋಟೋಗಳು, ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಮೂರು ಎಫ್‌ಐಆರ್ ದಾಖಲಾಗಿದೆ. ಅದಷ್ಟೇ ಅದಲ್ಲೇ ಕೇಸ್‌ನ ಸಿಸಿಬಿ ಇಲ್ಲ ಸಿಐಡಿಗೆ ವರ್ಗಾವಣೆ ಸಾಧ್ಯತೆ ಇದ್ದು, ಆರೋಪಿ ದರ್ಶನ್ ವಿರುದ್ಧ ರೌಡಿಶೀಟ್‌ ಓಪನ್ ಮಾಡೋದು ಬಹುತೇಕ ಫಿಕ್ಸ್ ಆಗಿದೆ.

ಇದನ್ನೂ ಓದಿ: ರೌಡಿಶೀಟರ್​ ಸತ್ಯ, ಧರ್ಮ ಹಿನ್ನೆಲೆಯೇ ಬೇರೆ ಇದೆ.. ಜೈಲಿನಿಂದ ವಿಡಿಯೋ ಕಾಲ್​ನಲ್ಲಿ​​ ದರ್ಶನ್​ ಏನು ಹೇಳಿದ್ರು ಗೊತ್ತಾ?

ದರ್ಶನ್ ಪಾಲಿಗೆ ಪರಪ್ಪನ ಅಗ್ರಹಾರ ಸೆರೆಮನೆಯಲ್ಲ. ಬದಲಿಗೆ ಅರಮನೆ ಆಗಿಬಿಟ್ಟಿದೆ. ಪರಪ್ಪನ ಅಗ್ರಹಾರದಲ್ಲಿ ಇಷ್ಟೆಲ್ಲಾ ಸೌಲಭ್ಯ ಸಿಗಬೇಕಾದ್ರೆ ಸರ್ಕಾರದ ಕಡೆ ಬೊಟ್ಟು ಮಾಡದೇ ಇರೋಕಾಗುತ್ತಾ.. ದುಡ್ಡು ಇದ್ರೆ ಜೈಲು ಒಂಥರಾ ರೆಸಾರ್ಟ್‌ ಆಗುತ್ತೋ ಏನೋ.. ದರ್ಶನ್‌ ಫೋಟೋಗಳು.. ವಿಡಿಯೋ ಹಲ್‌ಚಲ್‌ ಎಬ್ಬಿಸುತ್ತಿದ್ದಂತೆ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣ್ತಿದೆ.

ಟೀ ಕುಡಿದುಕೊಂಡು, ಸಿಗರೇಟ್ ಸೇದುತ್ತಾ, ವಿಡಿಯೋ ಕಾಲ್‌ನಲ್ಲಿ ಮಾತಾಡ್ತಾ ಜೈಲಿನಲ್ಲಿ ಹೀಗೆ ಬಿಂದಾಸ್ ಜೀವನ ಮಾಡಿದ್ರೆ ಅಧಿಕಾರಿಗಳು ಸುಮ್ನೆ ಇರ್ತಾರಾ? ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಸಿಕ್ತಿರೋ ವಿಚಾರವಾಗಿ ಮೂರು ಎಫ್‌ಐಆರ್ ದಾಖಲಾಗಿದೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ.ಸೋಮಶೇಖರ್‌ರಿಂದ ದೂರು ದಾಖಲಾಗಿದ್ದು, ಮೂರು ಪ್ರಕರಣಗಳ ಪೈಕಿ ಎರಡರಲ್ಲಿ ಎ1 ದರ್ಶನ್‌.. ದರ್ಶನ್ ಮಾತ್ರವಲ್ಲದೇ ಜೈಲು ಅಧಿಕಾರಿಗಳ ವಿರುದ್ದ ಕೂಡ ಕೇಸ್ ದಾಖಲಾಗಿದೆ.

ಮೊದಲ ಪ್ರಕರಣ

  • ದರ್ಶನ್ A1
  • ನಾಗರಾಜ್ A2
  • ವಿಲ್ಸನ್ ಗಾರ್ಡನ್ ನಾಗ A3
  • ಕುಳ್ಳ ಸೀನಾ A4

ಎರಡನೇ ಪ್ರಕರಣ ವಿಡಿಯೋ ಕಾಲ್

  • ದರ್ಶನ್ A1
  • ಧರ್ಮ A2
  • ಸತ್ಯ A3

ಜೈಲಾಧಿಕಾರಿಗಳ ವಿರುದ್ಧ FIR

  • ಸುದರ್ಶನ್​ A1
  • ಮುಜೀಬ್​ A2
  • ಪರಮೇಶ್ವರ್​ ನಾಯಕ್​ A3
  • K.B ರಾಯಮನೆ A4

ಕೇವಲ ದರ್ಶನ್‌ ವಿರುದ್ಧ ಎಫ್‌ಐಆರ್ ದಾಖಲಾಗಿರೋ ಮಾತ್ರವಲ್ಲ, ಈ ಮೂರು ಕೇಸ್‌ಗಳನ್ನ ಸಿಸಿಬಿ ಅಥವಾ ಸಿಐಡಿಗೆ ವರ್ಗಾವಣೆ ಮಾಡೋ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ, ದರ್ಶನ್ ವಿರುದ್ಧ ರೌಡಿಶೀಟ್ ತೆಗೆಯೋದು ಫಿಕ್ಸ್‌ ಎನ್ನಲಾಗ್ತಿದೆ. ಏಕೆಂದರೆ, ರೇಣುಕಾಸ್ವಾಮಿ ಕೊಲೆ ಕೇಸ್ ಬಳಿಕ ದರ್ಶನ್ ಮೂರು ಪ್ರಕರಣದ ಆರೋಪಿ. ಹೀಗಾಗಿ ದರ್ಶನ್‌ಗೆ ಒಂದು ವೇಳೆ ಜಾಮೀನು ಸಿಕ್ಕಿದ್ರೆ, ನಂತರ ರೌಡಿಶೀಟರ್ ಓಪನ್ ಮಾಡೋದು ಫಿಕ್ಸ್ ಆಗಿದೆ. ಇನ್ನೊಂಡ್ಕಡೆ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಜೈಲಲ್ಲಿ ರಾಯಲ್ ಲೈಫ್ ಎಂಜಾಯ್ ಮಾಡ್ತಿದ್ದಾನೆ. ಬ್ರಾಂಡೆಡ್ ಬಟ್ಟೆ, ಬ್ರ್ಯಾಂಡೆಡ್ ಶೂ, ರುಚಿಯಾದ ಊಟ, ಕೈಯಲ್ಲಿ ಮೊಬೈಲ್ ಒಂದಾ.. ಎರಡಾ ಹೀಗೆ ನಾಗ ಧರಿಸಿದ್ದ ಬಾಲ್ಮೈನ್ ಟಿ ಶರ್ಟ್ ಬೆಲೆಯೆ 15ರಿಂದ 20 ಸಾವಿರ ರೂಪಾಯಿ. ಇದಲ್ಲದೆ ಬ್ಯಾರಕ್​ನಲ್ಲಿ ಐದಾರು ಜೊತೆ ಬ್ರ್ಯಾಂಡೆಡ್ ಶೂ, ಕೆಜಿಗಟ್ಟಲೆ ಡ್ರೈ ಫ್ರೂಟ್ಸ್ , ಫ್ರೂಟ್ಸ್ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಪತ್ನಿಗಾಗಿ ಏನೆಲ್ಲಾ ಮಾಡ್ತಾರೆ ಚಂದನ್​ ಗೌಡ; ಕವಿತಾ ಗೌಡ ಆಸೆ ಈಡೇರಿಸಿದ್ರು ನೋಡಿ​

ಫೋಟೋಗಳು, ವಿಡಿಯೋ ಹೊರ ಬರ್ತಿದ್ದಂತೆ ಅಧಿಕಾರಿ ಖುದ್ದು ವಿಚಾರಣೆ ನಡೆಸಿದ್ರು. ಆದ್ರೆ ದರ್ಶನ್ ಹಾಗೂ ಮ್ಯಾನೇಜರ್ ನಾಗರಾಜು ಸಿಗರೇಟ್ ಕೊಟ್ಟಿದ್ಯಾರು ಎಂಬ ಬಾಯ್ಬಿಟ್ಟಿಲ್ಲ. ಅಲ್ಲದೇ ಮಾರ್ಕೆಟ್ ಧರ್ಮನ ವಿಚಾರಣೆ ನಡೆಸಿದಾಗಲೂ ವಿಡಿಯೋ ಕಾಲ್ ಮಾಡಿದ್ದ ಮೊಬೈಲ್‌ನ ಕುಟ್ಟಿ ಟಾಯ್ಲೆಟ್‌ಗೆ ಬಿಸಾಡಿಯೋ ಶಂಕೆ ವ್ಯಕ್ತವಾಗಿದೆ. ಧರ್ಮನಿಗೆ ವಿಡಿಯೋ ಕಾಲ್‌ ಮಾಡಿ ದರ್ಶನ್ ಜೊತೆ ಮಾತಾಡಿದ್ದ ಸತ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ದರ್ಶನ್ ವಿರುದ್ಧ ದಾಖಲಾಗಿರೋ ಕೇಸ್‌ನ ಸಿಸಿಬಿ ಸರ್ಕಾರ ಕೊಡುತ್ತೋ ಇಲ್ವೋ ಸಿಐಡಿ ಕೊಡುತ್ತೋ ಗೊತ್ತಿಲ್ಲ. ಆದ್ರೆ ಸಂಕಷ್ಟ ಮತ್ತಷ್ಟು ಸಂಕಷ್ಟ ತಪ್ಪಿದ್ದಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಸೇರಿ ನಾಲ್ವರ ಮೇಲೆ ಮೂರು FIR; ಜೈಲ್ ಗ್ಯಾಂಗ್​ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್..!

https://newsfirstlive.com/wp-content/uploads/2024/08/darshan1-2.jpg

Load More